12. ಪರಿನಿಬ್ಬಾಣದ ನಂತರ
12.1 ಉಕ್ಕಚೆಲಾ ಸುತ್ತ:
ಆಗ ಭಗವಾನರು ವಜ್ಜಿಗಳ ರಾಜ್ಯದಲ್ಲಿ ವಿಹರಿಸುತ್ತಿದ್ದರು. ಗಂಗಾನದಿಯ ತೀರದ ಉಕ್ಕಚೆಲಾದಲ್ಲಿ ಇದ್ದರು. ಆಗಷ್ಟೇ ಸಾರಿಪುತ್ತ ಹಾಗು ಮೊಗ್ಗಲಾನರೀರ್ವರು ಪರಿನಿಬ್ಬಾಣ ಪಡೆದಿದ್ದರು. ಅದಕ್ಕೆ ಮುಂಚೆಯೇ ಶುದ್ಧೋಧನ, ಯಶೋಧರೆ, ರಾಹುಲ ಇವರೆಲ್ಲರೂ ಪರಿನಿಬ್ಬಾಣ ಪಡೆದಿದ್ದರು. ಆ ಸಮಯದಲ್ಲಿ ಭಗವಾನರು ಭಿಕ್ಷುಗಳೊಡನೆ ತೆರೆದ ಆಕಾಶದಲ್ಲಿ, ನದಿಯ ದಡದಲ್ಲಿ ಕುಳಿತಿದ್ದರು. ಭಗವಾನರು ಭಿಕ್ಖು ಸಮೂಹಕ್ಕೆ ಹೀಗೆ ನುಡಿದರು.
ಭಿಕ್ಷುಗಳೇ, ಈಗ ಸಾರಿಪುತ್ತ ಹಾಗು ಮೊಗ್ಗಲಾನರವರು ಪರಿನಿಬ್ಬಾಣ ಪಡೆದಿರುವುದಕ್ಕಾಗಿ ಈ ಸಭೆಯು ಬರಿದಾದ ಅಥವಾ ಟೊಳ್ಳಾದ ಮನಸ್ಥಿತಿಯನ್ನು ಅನುಭವಿಸುತ್ತಿದೆ. ಆದರೆ ನನಗೆ ಈ ಬಗೆಯ ಬರಿದಾದ ಮನಸ್ಥಿತಿಯಿಲ್ಲ. ಹಾಗೆಯೇ ಸಾರಿಪುತ್ತ ಹಾಗೂ ಮೊಗ್ಗಲಾನರು ಎಲ್ಲಿರುವರು ಎಂಬ ಹಂಬಲಿಕೆಯೂ ಇಲ್ಲ.
ಭಿಕ್ಖುಗಳೇ, ಹಿಂದಿನ ಸಮ್ಮಾಸಂಬುದ್ಧರಿಗೂ ನನಗೆ ಸಾರಿಪುತ್ತ ಹಾಗು ಮೊಗ್ಗಲಾನರ ಜೋಡಿ ಇರುವಂತೆ ಅವರಿಗೂ ಇದ್ದರು. ಹಾಗೆಯೇ ಮುಂದಿನ ಸಮ್ಮಾಸಂಬುದ್ಧರಿಗೂ ಇರುತ್ತಾರೆ.
ಅದ್ಭುತ ಭಿಕ್ಷುಗಳೇ, ಈ ಜೋಡಿಯು ಶಾಸ್ತರ ಬೋಧನೆಗೆ ಅನುಗುಣವಾಗಿಯೇ ಆಚರಿಸಬಲ್ಲ, ಅನುಷ್ಠಾನ ಮಾಡಬಲ್ಲ, ಬುದ್ಧರ ಬುದ್ಧಿವಾದದಂತೆಯೇ ತಿದ್ದಿಕೊಳ್ಳಬಲ್ಲಂತಹ, ಅವರು ನಾಲ್ಕು ಬಗೆಯ ಸಭೆಗಳಿಗೂ ಪ್ರಿಯರಾಗಿದ್ದರು, ಗೌರವಕ್ಕೆ ಪಾತ್ರರಾಗಿದ್ದರು. ಆದರೂ ಭಿಕ್ಷುಗಳೇ, ಆಶ್ಚರ್ಯ, ಅದ್ಭುತ! ತಥಾಗತರಿಗೆ ಇಂತಹ ಅದ್ಭುತ ಅಗ್ರಶ್ರಾವಕರ ಜೋಡಿ ವಿಯೋಗವಾದರೂ ಸಹಾ ನಿರಾಸೆಯಿಲ್ಲ, ಶೋಕವಿಲ್ಲ, ಪ್ರಲಾಪವಿಲ್ಲ. ಏಕೆಂದರೆ ಯಾವುದೆಲ್ಲವೂ ಜನಿಸಿದೆಯೋ, ಅಸ್ತಿತ್ವದಲ್ಲಿದೆಯೋ ಅವೆಲ್ಲವೂ ದೂರವಾಗುತ್ತದೆ (ಎಂಬ ಸ್ಪಷ್ಟ ಜ್ಞಾನವಿರುವುದಕ್ಕಾಗಿ) ವಿಯೋಗವಾಗುವಂತಹುದನ್ನು ಹೇಗೆತಾನೆ ವಿಯೋಗವಾಗಬಾರದು ಎಂದು ಅಳಿಸಲಾಗುತ್ತದೆ?! ನಿಜಕ್ಕೂ ಅಂತಹ ಸ್ಥಿತಿ ಸಾಧ್ಯವಿಲ್ಲ. ಆದ್ದರಿಂದ ಭಿಕ್ಖುಗಳೇ ನಿಮಗೆ ನೀವೇ ದ್ವೀಪಗಳಾಗಿ, ನಿಮಗೆ ನೀವೇ ಶರಣುಹೊಂದಿ. ಬೇರ್ಯಾವ ಆಶ್ರಯವೂ ಬೇಡ, ಧಮ್ಮವೇ (ಜ್ಞಾನವೇ) ನಿಮ್ಮ ಆಶ್ರಯ, ಧಮ್ಮವೇ ನಿಮ್ಮ ಶರಣು, ಬೇರ್ಯಾವ ಶರಣು ಹೋಗದಿರಿ.
ಹೀಗೆ ಭಗವಾನರೇ ಸಾರಿಪುತ್ತರಿಗೆ ಮತ್ತು ಮೊಗ್ಗಲಾನರಿಗೆ ಈ ರೀತಿಯಾಗಿ ಅಂತಿಮ ಪ್ರಶಂಸೆ ಮಾಡಿದರು. ನಂತರ ಅಸ್ಥಿಅವಶೇಷಗಳಿಗೆ ಸ್ತೂಪ ನಿಮರ್ಿಸಲು ಆಜ್ಞೆಯಿತ್ತರು. ನಂತರ ಭಗವಾನರು ರಾಜಗೃಹಕ್ಕೆ ಹೋಗಲು ನಿಶ್ಚಯಿಸಿದರು. ನಂತರ ಬೃಹತ್ ಸಮೂಹದೊಂದಿಗೆ ಅಲ್ಲಿಗೆ ಬಂದರು.
12.2 ಮೊಗ್ಗಲಾನರ ಸ್ತೂಪ
ನಳಂದದ ಸ್ತೂಪದ ಸ್ಥಳವನ್ನು ಸಾರಿಪುತ್ತರ ಹುಟ್ಟಿನ ಹಾಗು ಪರಿನಿಬ್ಬಾಣದ ಸ್ಥಳವೆಂದು ಭಾವಿಸುತ್ತಾರೆ. ಸಾರಿಪುತ್ತರ ಸ್ತೂಪದಲ್ಲಿ ಪ್ರಧಾನವಾಗಿ ಅವರ ಅಸ್ಥಿ ಅವಶೇಷಗಳಿರುತ್ತದೆ. ಅಂತಹ ಸ್ತೂಪವು ಹಿಂದೆ ಬುದ್ಧ ಭಗವಾನರ ಕೋರಿಕೆಯಂತೆ ರಾಜ ಅಜಾತಶತ್ರುವು ಸ್ತೂಪವನ್ನು ನಿಮರ್ಿಸಿದ್ದಾನೆ. ಇತಿಹಾಸದ ಪ್ರಕಾರ ಭಿಕ್ಖು ಚುಂದರು ಸಾರಿಪುತ್ತರ ಅಸ್ಥಿಯನ್ನು ತೆಗೆದುಕೊಂಡು ಆನಂದರವರಿಗೆ ನೀಡುತ್ತಾರೆ, ಆನಂದರವರು ಭಗವಾನರಿಗೆ ನೀಡುತ್ತಾರೆ. ಭಗವಾನರ ಕೋರಿಕೆಯಂತೆ ರಾಜ ಅಜಾತಶತ್ರುವು ಸ್ತೂಪವನ್ನು ಕಟ್ಟಿಸುತ್ತಾನೆ. ಮುಂದೆ ಅಶೋಕ ಚಕ್ರವತರ್ಿಯು ಇದನ್ನು ಇನ್ನೂ ಭವ್ಯವಾಗಿ ನಿಮರ್ಿಸುತ್ತಾನೆ. ಅದು ನಳಂದದಲ್ಲಿ ಇದೆ. ಹಾಗೆಯೇ ಸಾಂಚಿಯಲ್ಲೂ ಮುಂದೆ ಅಶೋಕ ಚಕ್ರವತರ್ಿ ನಿಮರ್ಿಸಿದ್ದಾನೆ. ಸಾಂಚಿಯ ಅಸ್ಥಿ ಅವಶೇಷದ ಪವಿತ್ರ ಕೋಣೆಯು ಎರಡು ಕಲ್ಲಿನ ಕೋಶವಾಗಿ ಕಂಡುಬರುತ್ತದೆ. ಉತ್ತರ ದಿಕ್ಕಿನತ್ತ ಇರುವುದು ಮಹಾಮೊಗ್ಗಲಾನರವರದು ಹಾಗು ದಕ್ಷಿಣ ದಿಕ್ಕಿನತ್ತ ಇರುವುದು ಸಾರಿಪುತ್ತರದು ಎಂದು ಖಚಿತಪಡಿಸಲಾಗಿದೆ. ನೀವು ಶ್ರೀಲಂಕ, ಜಪಾನ್ ಅಥವಾ ಚೀನಾ ದೇಶಗಳಿಗೆ ಹೋದರೆ ಭಗವಾನರ ಪಕ್ಕದಲ್ಲಿ ಬಲಗಡೆ ಹಾಗು ಎಡಗಡೆ ಇಬ್ಬರು ಭಿಕ್ಷುಗಳ ವಿಗ್ರಹಗಳನ್ನು ಕಾಣಬಹುದು. ಅವರೇ ಸಾರಿಪುತ್ತ ಹಾಗು ಮಹಾಮೊಗ್ಗಲಾನ. ಬಲಗಡೆ ಯಾವಾಗಲೂ ಸಾರಿಪುತ್ತರು ಇರುತ್ತಾರೆ ಹಾಗು ಎಡಗಡೆ ಮೊಗ್ಗಲಾನರು ಇರುತ್ತಾರೆ. ಭಗವಾನರೇ ಚುಂದ ಸುತ್ತದಲ್ಲಿ ನುಡಿದಿರುವಂತೆ ಸಾರಿಪುತ್ತರ ಅಸ್ಥಿಯು ಶಂಕುವಿನ ವರ್ಣದ್ದಾಗಿದೆ. ಇದನ್ನು ಈ ಹೀಗೆ ಕಾಣಬಹುದು.
ಮೊಗ್ಗಲಾನರ ಅಸ್ಥಿಗಳು
ಸಾಂಚಿ ಸ್ತೂಪ 3 ರಲ್ಲಿ ಸಾರಿಪುತ್ತ ಹಾಗೂ ಮೊಗ್ಗಲಾನರ ಸ್ತೂಪಗಳೆರಡೂ ಇವೆ. ಇದಕ್ಕೆ ಬ್ರಿಟೀಷರ ಪುರಾತನ ಶಾಸ್ತ್ರಜ್ಞನಾದ ಅಲೆಗ್ಸಾಂಡರ್ ಕನ್ನಿಂಗ್ಹ್ಯಾಮ್ರವರ ಕೊಡುಗೆ ಅಪಾರ ಅವರು ಬೌದ್ಧ ಸ್ತೂಪಗಳ ಅನ್ವೇಷಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಇದರ ಶೋಧನೆಯು ಸಹಾ ಅವರೇ ಮಾಡಿದ್ದರು. ಅವರು ಹೀಗೆ ಹೇಳಿದ್ದಾರೆ :ಆ ಸ್ತೂಪದಲ್ಲಿ ತೋಪಿನಾಕಾರದ ಆಕೃತಿಯೊಳಗೆ ಹಲವು ಗಂಟೆಗಳ ಶ್ರಮದ ನಂತರ 5 ಅಡಿಯ ಉದ್ದದ ಚಪ್ಪಡಿಯು ಕಂಡು ಬಂದಿತು. ಅದನ್ನು ಉತ್ತರ ದಕ್ಷಿಣವಾಗಿ ಮಲಗಿಸಿದ್ದರು. ಆ ಚಪ್ಪಡಿಯನ್ನು ಎತ್ತಿದಾಗ ನಮಗೆ 2 ವಿಶಾಲವಾದ ಪೆಟ್ಟಿಗೆಗಳು ಕಂಡು ಬಂದಿತು. ಅವೇ ಸಾರಿಪುತ್ತ ಹಾಗೂ ಮೊಗ್ಗಲಾನರ ಅಸ್ಥಿಗಳು. ಸಾರಿಪುತ್ತರದು ದಕ್ಷಿಣ ದಿಕ್ಕಿನಲ್ಲಿ ಹಾಗೂ ಮೊಗ್ಗಲಾನರದ್ದು ಉತ್ತರ ದಿಕ್ಕಿನಲ್ಲಿ ಇಟ್ಟಿದ್ದರು. ಅದರ ಮೇಲೆ ಬ್ರಾಹ್ಮಿ ಲಿಪಿಯಲ್ಲಿ ಅಸೋಕನು ಕೆತ್ತಿಸಲಾದಂತಹ ಸಾರಿಪುತ್ತಸ್ಸ ಹಾಗೂ ಮಹಾ ಮೊಗ್ಗಲಾನಸ್ಸ ಎಂದು ವಿವರಣೆಯಿದೆ.
ಸ್ತೂಪದಲ್ಲಿರುವ ಅಸ್ಥಿಯ ವಿವರಣೆ
ಸಾರಿಪುತ್ತರ ಪೆಟ್ಟಿಗೆಯಲ್ಲಿ ಬಿಳಿಯ ನುಣುಪಾದ ಬಳಪದ ಕಲ್ಲಿನ ಭರಣಿಯಾಗಿದ್ದು 6 ಅಂಗುಲ ಅಗಲವಾಗಿದ್ದು 3 ಅಂಗುಲ ಎತ್ತರವಾಗಿದೆ. ಅದರ ಹೊರ ಮೇಲ್ಮೈ ನುಣುಪಾಗಿದ್ದು ಗಟ್ಟಿಯಾಗಿದೆ, ಅದು ಅತ್ಯಂತ ಕುಶಲ ಕಾಮರ್ಿಕರಿಂದ ನಿಮರ್ಿತವಾಗಿದೆ, ಭರಣಿಯಿಂದ ಈಗಲೂ ಶ್ರೀಗಂಧದ ಸುವಾಸನೆಯಿದೆ. ಒಳಗೆ ಅಸ್ಥಿಯ ಜೊತೆಗೆ ಹಲವಾರು ಅತ್ಯಮೂಲ್ಯ ಕಲ್ಲುಗಳಿವೆ(ವಜ್ರ, ರತ್ನ ಇತ್ಯಾದಿ). ಹಾಗೂ ಆ ಭರಣಿಯು ಸಹಾ ಸಾರಿಪತ್ತರ ಒಂದು ಮೂಳೆಯಿಂದ ಕೂಡಿದೆ. ಅದು ಕೇವಲ ಒಂದು ಅಂಗುಲದಷ್ಟಿದೆ.
ಮೊಗ್ಗಲಾನರ ಕಲ್ಲಿನ ಪೆಟ್ಟಿಗೆಯಲ್ಲಿ ಇನ್ನೊಂದು ಬಳಪದ ಕಲ್ಲಿನ ಭರಣಿಯಿದ್ದು ಅದು ಸಾರಿಪುತ್ತರ ಭರಣಿಯ ತರಹವಿದೆ. ಒಂದು ಭರಣಿಯಲ್ಲಿ ಮೊಗ್ಗಲಾನರ ಎರಡು ಮೂಳೆಯ ಅಸ್ಥಿಗಳಿವೆ. ಅವು ಸಾರಿಪುತ್ತರದಕ್ಕಿಂತ ಚಿಕ್ಕಾದಾಗಿದ್ದು ಅದರೆ ಅಗಲ ಹೆಚ್ಚಾಗಿದೆ.
ಪ್ರತಿ ಭರಣಿಯಲ್ಲಿ ಏಕ ಅಕ್ಷರದ ಲಿಪಿಯಿದ್ದು ಸಾರಿಪುತ್ತರ ಭರಣಿಯ ಮೇಲೆ ಸಾ ಎಂಬ ಅಕ್ಷರವಿದೆ ಹಾಗೂ ಮೊಗ್ಗಲಾನರ ಭರಣಿಯ ಮೇಲೆ ಮ ಅಕ್ಷರವಿದೆ. ಸಾರಿಪುತ್ತರ ಭರಣಿಯು ದಕ್ಷಿಣ ದಿಕ್ಕಿನಲ್ಲಿದೆ ಹಾಗೂ ಮೊಗ್ಗಲಾನರ ಭರಣಿಯು ಉತ್ತರ ದಿಕ್ಕಿನಲ್ಲಿದೆ. ಭಗವಾನರ ಕಾಲದಲ್ಲಿಯು ಭಗವಾನರು ಪೂವರ್ಾಭಿಮುಖವಾಗಿ ಕುಳಿತ್ತಿದ್ದರೆ ಸಾರಿಪುತ್ತ ಹಾಗೂ ಮೊಗ್ಗಲಾನರು ದಕ್ಷಿಣ ಹಾಗೂ ಉತ್ತರಾಭಿಮುಖವಾಗಿ ಕುಳಿತುಕೊಳ್ಳುತ್ತಿದ್ದರು.
- ಂ0ಂ

No comments:
Post a Comment