Saturday, November 5, 2022

5. ಮೊಗ್ಗಲಾನರ ಅತಿಮಾನಸ ಶಕ್ತಿಗಳು

 5. ಮೊಗ್ಗಲಾನರ ಅತಿಮಾನಸ ಶಕ್ತಿಗಳು



   ಬುಧ್ಧಭಗವಾನರ ಶಿಷ್ಯಗಣವು ಸಮಾನ್ಯವಾದುದಲ್ಲ ಒಬ್ಬೊಬ್ಬರಿಗೆ ಒಂದೊಂದು ಪ್ರತಿಭೆಯಿತ್ತು. ಉದಾಹರಣೆಗೆ ಅಯುಷ್ಮಂತ ಅನುರುದ್ಧರವರಿಗೆ ಹಾಗೇಯೆ ಭಿಕ್ಖುಣಿ ಸಕುಲರವರಿಗೆ ದಿವ್ಯದೃಷ್ಟಿಯಿತ್ತು, ಅವರು ಮಾನವಾತೀತವಾದ  ಕರ್ಮಫಲಗಳನ್ನು ಅದಕ್ಕೆ ಕಾರಣವಾದ ಹಿಂದಿನ ಜನ್ಮಗಳ ಕರ್ಮಗಳನ್ನು ಅರಿಯುತ್ತಿದ್ದರು, ಹಾಗೆಯೇ  ಭವಿಷ್ಯದ ಆಗುಹೋಗುಗಳನ್ನು ಇತ್ಯಾದಿಗಳನ್ನು ದಿವ್ಯದೃಷ್ಟಿಯಿಂದ ಅರಿಯುತ್ತಿದ್ದರು. ಅದರಂತೆಯೇ ಭಿಕ್ಖು ಶೋಭಿತರವರು ಮತ್ತು ಭಿಕ್ಖುಣಿ ಭದ್ದ ಕಪಿಲಾನಿರವರು ಇಷ್ಟಪಟ್ಟಷ್ಟು ಹಿಂದಿನ ಜನ್ಮಗಳನ್ನು ಅರಿಯುವ ಅತಿಮಾನಸ ಶಕ್ತಿಯನ್ನು ಹೊಂದಿದ್ದರು. ಹಾಗೇಯೇ ಬಿಕ್ಖು ಸಗಾಲೊರವರು ತೇಜೋಕಸಿಣದ ಮೇಲೆ ಅಪಾರವಾದ ಪ್ರಭುತ್ವವನ್ನು ಹೊಂದಿದ್ದರು. ಹಾಗೆಯೇ ಚುಲ್ಲ ಪಂಥಕರವರು ತನ್ನಂತೆ ಇರುವ ಬೇಕಾದಷ್ಟು ಶರೀರಗಳನ್ನು ಸೃಷ್ಟಿಸುತ್ತಿದ್ದರು. ಹಾಗೆಯೇ ಪಿಲಿಂದ ಭಿಕ್ಖುವು ದಿವ್ಯ ಜೀವಿಗಳ ಸಂಪರ್ಕದಲ್ಲಿ ಇರುತ್ತಿದ್ದರು. ಪಿಂಡೋಲ ಭಾರದ್ವಜರು ಗಾಳಿಯಲ್ಲಿ ಹಾರುವ ಶಕ್ತಿಯನ್ನು ಪಡೆದಿದ್ದರು, ಹೀಗೆಯೇ ಅನೇಕ ಭಿಕ್ಖುಗಳು ಅನೇಕಾನೇಕ ಅತಿಮಾನಸ ಶಕ್ತಿಗಳನ್ನು ಪಡೆದಿದ್ದರು. ಅದರೇ ಮಹಾ ಮೊಗ್ಗಲಾನರವರು ಅವರೆಲ್ಲರ ಶಕ್ತಿಗಳನ್ನು ಅಡಕವಾಗಿರಿಸಿಕೊಂಡಿದ್ದರು. ಇದ್ದಿ ಶಕ್ತಿಗಳಲ್ಲಿ ಹಾಗೂ ಅಭಿಜ್ಞಾಶಕ್ತಿಗಳಲ್ಲಿ ಬುದ್ಧರ ನಂತರ ಅವರೇ ದ್ವಿತೀಯರಾಗಿದ್ದರು. ಅವರಂತೆಯೇ ಸ್ತ್ರೀಯರಲ್ಲಿ ಭಿಕ್ಖುಣಿ ಉಪ್ಪಲಾವಣ್ಣರವರು ಇದ್ದಿಗಳಲ್ಲಿ ಅಗ್ರರಾಗಿದ್ದರು. ಇಲ್ಲಿ ಮೊಗ್ಗಲಾನರ ಅತಿಮಾನಸ ಶಕ್ತಿಗಳ ಪರಿಚಯವನ್ನು ನೀಡಲಿದ್ದೇನೆ. ಅವರು ತಾವು ಇಷ್ಟ ಪಟ್ಟ ರೂಪವನ್ನು ಪಡೆಯಬಲ್ಲವರಾಗಿದ್ದರು. ಅನೇಕ ರೂಪಗಳನ್ನು ಏಕ ಕಾಲದಲ್ಲಿ ಪಡೆಯಬಲ್ಲವ ರಾಗಿದ್ದರು. ಅವರು ಸುನೇರು ಪರ್ವತವನ್ನೇ ಹುರುಳಿ ಬೀಜದಂತೆ ಅಪ್ಪಚ್ಚಿ ಮಾಡಬಲ್ಲರು. ಇಡೀ ಪೃಥ್ವಿಯನ್ನು ತಮ್ಮ ಕೈಯಲ್ಲಿ ಬುಗುರಿಯಂತೆ ಆಡಿಸುವವರಾಗಿದ್ದರು. ಹಾಗೆಯೇ ಮಿಗಾರ ಮಾತೆ ಭವನದ ನಿಮರ್ಾಣಕ್ಕೂ ಮೇಲ್ವಿಚಾರಕರಾಗಿಯು ಅವರೇ ಸಾರಥ್ಯವನ್ನು ವಹಿಸಿದ್ದರು. ಸಿಲಾವ ಎಂಬುವವನಿಗೆ ಅಜಾತಶತ್ರುವು ಕೊಲ್ಲಲು ಯೋಜನೆ ಹಾಕಿದಾಗ ಮೊಗ್ಗಲಾನರು ಅದನ್ನು ಆತನಿಗೆ ತಿಳಿಸಿ ಆತನನ್ನು ಕಾಪಾಡುತ್ತಾರೆ. ಹಾಗೇಯೇ ಕೋಲಿಯಪುತ್ತನೆಂಬುವವನು ಮೊಗ್ಗಲಾನರ ಶಿಷ್ಯನಾಗಿದ್ದನು ಆತನು ಅಕಾಲಮರಣಕ್ಕೆ ಗುರಿಯಾಗಿ ನಂತರ ಮನೊಕಾಯಕ ದೇವನಾಗುತ್ತಾನೆ. ಯಾವಾಗ ದೇವದತ್ತನು ಬುದ್ದರ ವಿರುದ್ಧ ಕೊಲ್ಲಲು ಯೋಜನೆಗಳನ್ನು ಹಾಕುತ್ತಾನೋ ಆಗ ಇದು ಮನೋಕಾಯಕ ದೇವನಿಗೆ ಗೊತ್ತಾಗಿ ಆತನು ಮೊಗ್ಗಲಾನರಿಗೆ ತಿಳಿಸುತ್ತಾನೆ. ಅವರು ತಮ್ಮ ದಿವ್ಯ ದೃಷ್ಟಿಯಲ್ಲಿ ಅದನ್ನು ಪರೀಕ್ಷಿಸಿ ಅದನ್ನು ಭಗವಾನರಿಗೆ ತಿಳಿಸುತ್ತಾರೆ. ಅದರೆ ಭಗವಾನರು ಎಲ್ಲವನ್ನು ಬಲ್ಲವರು ಅವರು ತಥಾಗತರನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸುತ್ತಾರೆ.ಬೋದಿಸತ್ವರ ಪುತ್ರ ರಾಹುಲನಿಗೂ ಸಾರಿಪುತ್ತರು ಉಪದೇಶಕರಾಗಿದ್ದರೆ ಮೊಗ್ಗಲಾನರು ಕಮ್ಮವಾಚಾರಿಯ ಅಂದರೆ ಗುರುಗಳಾಗಿದ್ದರು. ಹಾಗೆಯೇ ಸದಾಕಾಲ ಭಿಕ್ಖುಗಳ ಮೇಲೆ ಅವರ ಸಾಧನೆಗಳ ಮೇಲೆ ಅವರು ಸದಾ ಗಮನವನ್ನು ಇಟ್ಟಿರುತ್ತಿದ್ದರು.   ಅವರ ಅತೀಂದ್ರಿಯ ಸಾಧನೆ ಹಾಗೂ ಮಹಾ ಬಿಕ್ಖುಸಂಘದ ನಿರ್ವಹಣೆ ಕುರಿತು ವಂಗೀಸರು ಬುದ್ಧರ ಉಪಸ್ಥಿತಿಯಲ್ಲಿಯೇ ಗಾಥೆಗಳಿಂದ ವಣರ್ಿಸಿದ್ದಾರೆ. 

ವಂಗೀಸ ಥೇರರು ಮೊಗ್ಗಲಾನರಿಗೇ ಹೀಗೆ ಪ್ರಶಂಸಸಿದರು :

ಭಿಕ್ಖುಗಳೆ ತ್ರಿವಿಧದ ಜ್ಞಾನವನ್ನು ಪಡೆದು, 

ಯಾರು ಮೃತ್ಯುವನ್ನೇ ಹಿಂದೆ ಹಾಕಿದರೋ

ಅಂತಹ ಋಷಿಯನ್ನು ಸೇವಿಸಿ,  ಅವರು ಪರ್ವತದ ಬದಿಯಲ್ಲಿಹರು

ಅವರು ತೀರಗಳನ್ನು ದಾಟಿದವರು ದುಃಖಕ್ಕೆ ಅತೀತರು.

ಮೊಗ್ಗಲಾನರು ಇದ್ಧಿಶಕ್ತಿಯುಳ್ಳವರಲ್ಲೆ ಪರಮಶ್ರೇಷ್ಟರು

ಪ್ರತಿಯೊರ್ವರ ಚಿತ್ತಗಳನ್ನು ತಮ್ಮ ಚಿತ್ತದಿಂದ ನೋಡಬಲ್ಲವರು

ಮನಸ್ಸುಗಳನ್ನು ಹುಡುಕುವವರು

ಪೂರ್ಣವಾಗಿ ಮುಕ್ತವಾದವರು, ಅಂಟುವಿಕೆಯಿಂದ ಮುಕ್ತರಾದವರು

ಹೀಗಿದ್ದರೂ ಅವರು ಗೋತಮರನ್ನು ಸೇವೆ ಮಾಡುವರು

ಅವರು ಅನೇಕಾನೇಕ ಸದ್ಗುಣ ಸಂಪನ್ನರು

ಋಷಿಯು ಎಲ್ಲ ಶೀಲಗಳನ್ನು ಹೊಂದಿದ್ದಾರೆ

ಅವರು ತೀರಗಳನ್ನು ದಾಟಿದವರು ದುಃಖಕ್ಕೆ ಅತೀತರು.

5.1 ಭಗವಾನರೇ ಮೊಗ್ಗಲಾನರಿಗೇ ಪ್ರಶಂಸೆ ಮಾಡಿದ ಸುತ್ತ

್ತಪಸಾದ ಕಂಪನ ಸುತ್ತ (ಮೊಗ್ಗಲಾನ ಸುತ್ತ)

    ಒಮ್ಮೆ ಭಗವಾನರು ಶ್ರಾವಸ್ಥಿಯ ಪೂರ್ವ ಆರಾಮದ ವಿಗಾರಪಸಾದದಲ್ಲಿ(ಭವನದಲ್ಲಿ)  ತಂಗಿದ್ದರು. ಆ ಸಮಯದಲ್ಲಿ ಆ ಭವನದ ಕೆಳ ಮಹಡಿಯಲ್ಲಿ ಅಸಂಖ್ಯಾತ ಭಿಕ್ಷುಗಳು ವಾಸಿಸುತ್ತ್ತಿದ್ದರು. ಅವರು ಅಲ್ಲಿ ಅತಿಬಿಗಿಯಾದ ವಾತವರಣ ನಿಮರ್ಿಸಿದ್ದರು, ಅಪಾರ ಗದ್ದಲ, ಜೋರುಧನಿಯಲ್ಲಿ ಮಾತುಗಳು, ಸಡಿಲವಾದ ಮಾತುಗಳು, ಹೊಣೆಗಾರಿಕೆಯಿಲ್ಲದ ಮಾತುಕತೆ,ಎಚ್ಚರವಿಲ್ಲದ ಮನಸ್ಥಿತಿ, ಜಾಗಾರೂಕಹೀನತೆ, ಏಕಾಗ್ರತಾಹೀನತೆ, ಮತ್ತು ಚದುರಿದ ಮನಸ್ಸನ್ನು ಹೊಂದಿ ಇಲ್ಲಿ ಭಿಕ್ಖುಗಳು ಸೇರಿದ್ದರು. ಅವರ ಇಂದ್ರಿಯಗಳು ಸಡಿಲವಾಗಿತ್ತು.

    ಆಗ ಭಗವಾನರು ಮೊಗ್ಗಲಾನರಿಗೆ ಹೀಗೆ ಹೇಳಿದರು, ಮೊಗ್ಗಲಾನ ನಿನ್ನ ಸಹ ಭಿಕ್ಖುಗಳು ಕೆಳ ಮಹಡಿಯಲ್ಲಿ ಅಸಂಖ್ಯಾತ ಭಿಕ್ಷುಗಳು ವಾಸಿಸುತ್ತ್ತಿದ್ದಾರೆ. ಅವರು ಅಲ್ಲಿ ಅತಿಬಿಗಿಯಾದ ವಾತವರಣ ನಿಮರ್ಿಸಿದ್ದರು, ಅಪಾರ ಗದ್ದಲ, ಜೋರುಧನಿಯಲ್ಲಿ ಮಾತುಗಳು, ಸಡಿಲವಾದ ಮಾತುಗಳು, ಹೊಣೆಗಾರಿಕೆಯಿಲ್ಲದ ಮಾತುಕತೆ,ಎಚ್ಚರವಿಲ್ಲದ ಮನಸ್ಥಿತಿ, ಜಾಗಾರೂಕಹೀನತೆ, ಏಕಾಗ್ರತಾಹೀನತೆ, ಮತ್ತು ಚದುರಿದ ಮನಸ್ಸನ್ನು ಹೊಂದಿದ್ದಾರೆ. ಹೋಗು ಮೊಗ್ಗಲಾನ ಅವರಲ್ಲಿ ಭೀತಿಯನ್ನುಂಟು ಮಾಡು.

ಅದಕ್ಕೆ ಪ್ರತಿಕ್ರಿಯೆಸಿದ ಮೊಗ್ಗಲಾನರು, ಸರಿ ಭಗವಾನ್ ಎಂದು ತಮ್ಮ ಪಾದದ ಅಂಗುಷ್ಟದಿಂದ ನೆಲವನ್ನು ಅದುಮಿದರು. ತಕ್ಷಣ ಇಢೀ ಮಿಗಾರ ಭವನವು ನಡುಗಿತು.. ಆಗ ಆ ಭಿಕ್ಖುಗಳೆಲ್ಲಾ ಭಯಭೀತರಾಗಿ ಭವನದ ಒಂದು ಭಾಗದಲ್ಲಿ ನಿಂತರು. ಅವರ ಕೂದಲುಗಳೆಲ್ಲಾ ನಿಂತುಬಿಟ್ಟಿತ್ತು..

  ಆಗ ಭಗವಾನರು ಅವರಿಗೆ ಈ ರೀತಿಯಲ್ಲಿ ಏಕೆ ನಿಂತಿರುವಿರಿ ಎಂದು ಕೇಳಿದರು.. ಅವರು ಭವನದ ಕಂಪನಮಯವೇ ಈ ಭೀತಿಗೆ ಕಾರಣವೆಂದರು. ಆಗ ಭಗವಾನರು ಅವರ ಗದ್ದಲದಿಂದಾಗಿ ಮೊಗ್ಗಲಾನರು ಹೀಗೆ ತಮ್ಮ ಹೆಬ್ಬರುಳಿನಿಂದ ಹೀಗೆ ಮಾಡಿದ್ದಾರೆ ಎಂದರು.. .ನಂತರ ಭಗವಾನರು ಹೀಗೇ ಪ್ರಶ್ನಿಸಿದರು.ಯಾವ ಗುಣಗಳಿಂದಾಗಿ, ಯಾವ ವೃದ್ದಿಕಾರಕ ಅಂಶಗಳಿಂದಾಗಿ ಮೊಗ್ಗಲಾನರಿಗೆ ಇಂತಹ ಶಕ್ತಿಯು ಬಂದಿತು ಎಂಬುದು ತಿಳಿದಿದೆಯೇ ?

  ನಮಗೆ ಭಗವಾನರಿಂದಲೇ ಧಮ್ಮವು ಸಿಕ್ಕಿದೆ, ತಾವೇ ಮೂಲವು, ತಾವೇ ಮಾರ್ಗದಶರ್ಿಯು, ಮತ್ತು ತಾವೇ ನಿಣರ್ಾಯಕರು. ತಾವೇ ತಿಳಿಸಿದರೆ ನಮಗೆಲ್ಲಾ ಒಳಿತಾಗುವುದು.. ಆಗ ನಾವು ನೆನಪಿಡುವೆವು. ಎಂದರು.

ಹಾಗಾದರೇ ಭಿಕ್ಖುಗಳೆ ಗಮನವಿಟ್ಟು ಕೇಳಿರಿ, ನಾಲ್ಕು ಇದ್ಧಿಪಾದಗಳನ್ನು ಮೊಗ್ಗಲಾನರು ಅಭಿವೃದ್ಧಿಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರಿಗೆ ಈ ಬಗೆಯ ಶಕ್ತಿಯು ಸಿಕ್ಕಿದೆ.

ಇಲ್ಲಿ ಮೊಗ್ಗಲಾನರು ಇಚ್ಚೆಯುತ ಸಮಾಧಿಯಿಂದಾದ ಆಧಾರದ ಬಲವನ್ನು ವೃದ್ಧಿಸಿರುತ್ತಾರೆ. ಹಾಗೂ ಈ ರೀತಿ ಯೋಚಿಸುತ್ತಾರೆ.  ಈ ನನ್ನ ಇಚ್ಚೆಯು ಅತಿಯಾಗಿ ಮಂದವಾಗುವುದು ಬೇಡ ಹಾಗೆಯೇ ಅತಿ ಸಂಘರ್ಷಮಯವಾಗುವುದು ಬೇಡ.; ಆಂತರಿಕವಾಗಿ ಸಂಕುಚಿತವಾಗುವುದು ಬೇಡ ಹಾಗೆಯೇ ಬಾಹ್ಯದಲ್ಲಿ ಚದುರುವುದು ಬೇಡ ;ನಂತರ ಆತನು ನಿರಂತರವಾಗಿ ಯಾವುದು ಮುಂದಿದೆಯೋ ಹಾಗೂ ಹಿಂದೆಯಿದೆಯೋ ಅವನೆಲ್ಲಾ ಗ್ರಹಿಸುತ್ತಲೇೆ ಇರುತ್ತಾನೆ. ಅಂದರೇ ಯಾವುದು ಮುಂದೆ ಇದೆಯೋ ಅದೇ ಹಿಂದೆಯು ಇದೆ. ಹಾಗೆಯೇ ಯಾವುದು ಹಿಂದೆ ಇದೆಯೋ  ಅದೇ ಮುಂದೆಯು ಇದೆ. ಹಾಗೆಯೇ  ಯಾವುದು ಕೆಳಗೆ ಇದೆಯೋ  ಅದೇ ಮೇಲೆಯು ಇದೆ. ಹಾಗೇಯೇ ಯಾವುದು ಮೇಲೆ ಇದೆಯೋ ಅದೇ ಕೆಳಗೆಯು ಇದೆ. ಅದೇ ರೀತಿಯಲ್ಲಿ ರಾತ್ರಿಯನ್ನು ಹಗಲಿನಂತೆ ಹಾಗೆಯೇ ಹಗಲನ್ನು ರಾತ್ರಿಯಂತೆ ಗ್ರಹಿಸುತ್ತ ವಿಹರಿಸುತ್ತಾನೆ. ಈ ರೀತಿಯಾದ ತೆರೆದ ಹಾಗೂ ತಡೆಗಳರಹಿತವಾದ ಜಾಗರೂಕತೆಯಿಂದ ಆತನು ಪ್ರಭಾಯುತ ಮನಸ್ಸನ್ನು ವೃದ್ಧಿಸುತ್ತಾನೆ.

   ಇಲ್ಲಿ ಮೊಗ್ಗಲಾನರು ವಿರಿಯಾಯುತ(ಪ್ರಯತ್ನಯುತ) ಸಮಾಧಿಯಿಂದಾದ ಆದಾರದ ಬಲವನ್ನು ವೃದ್ಧಿಸಿರುತ್ತಾರೆ. ಹಾಗೂ ಈ ರೀತಿ ಯೋಚಿಸುತ್ತಾರೆ.  ಈ ನನ್ನ ಪ್ರಯತ್ನವು  ಅತಿಯಾಗಿ ಮಂದವಾಗುವುದು ಬೇಡ ಹಾಗೇಯೇ ಅತಿ ಸಂಘರ್ಷಮಯವಾಗುವುದು ಬೇಡ.; ಅಂತರಿಕವಾಗಿ ಸಂಕುಚಿತವಾಗುವುದು ಬೇಡ ಹಾಗೇಯೇ ಬಾಹ್ಯದಲ್ಲಿ ಚದುರುವುದು ಬೇಡ ;ನಂತರ ಆತನು ನಿರಂತರವಾಗಿ ಯಾವುದು ಮುಂದಿದೆಯೋ ಹಾಗೂ ಹಿಂದೆ ಇದೆಯೋ ಅವನೆಲ್ಲಾ ಗ್ರಹಿಸುತ್ತಲೆ ಇರುತ್ತಾನೆ. ಅಂದರೇ ಯಾವುದು ಮುಂದೆ ಇದೆಯೋ  ಅದೇ ಹಿಂದೆಂಯೂ ಇದೆ. ಹಾಗೇಯೇ ಯಾವುದು ಹಿಂದೆ ಇದೆಯೋ  ಅದೇ ಮುಂದೆಯೂ ಇದೆ. ಹಾಗೆಯೇ  ಯಾವುದು ಕೆಳಗೆ ಇದೆಯೋ  ಅದೇ ಮೇಲೆಯೂ ಇದೆ. ಹಾಗೇಯೇ ಯಾವುದು ಮೇಲೆ ಇದೆಯೋ  ಅದೇ ಕೆಳಗಡೆಯೂ ಇದೆ. ಅದೇ ರೀತಿಯಲ್ಲಿ ರಾತ್ರಿಯನ್ನು ಹಗಲಿನಂತೆ ಹಾಗೆಯೇ ಹಗಲನ್ನು ರಾತ್ರಿಯಂತೆ ಗ್ರಹಿಸುತ್ತ ವಿಹರಿಸುತ್ತಾನೆ. ಈ ರೀತಿಯಾದ ತೆರೆದ ಹಾಗೂ ತಡೆಗಳರಹಿತವಾದ ಜಾಗರೂಕತೆಯಿಂದ ಆತನು ಪ್ರಭಾಯುತ ಮನಸ್ಸನ್ನು ವೃದ್ಧಿಸುತ್ತಾನೆ.

    ಇಲ್ಲಿ ಮೊಗ್ಗಲಾನರು ಚಿತ್ತಯುತ ಸಮಾಧಿಯಿಂದಾದ ಆಧಾರದ ಬಲವನ್ನು ವೃದ್ಧಿಸಿರುತ್ತಾರೆ. ಹಾಗೂ ಈ ರೀತಿ ಯೋಚಿಸುತ್ತಾರೆ.  ಈ ನನ್ನ ಚಿತ್ತವು ಅತಿಯಾಗಿ ಮಂದವಾಗುವುದು ಬೇಡ ಹಾಗೇಯೇ ಅತಿ ಸಂಘರ್ಷಮಯವಾಗುವುದು ಬೇಡ.; ಅಂತರಿಕವಾಗಿ ಸಂಕುಚಿತವಾಗುವುದು ಬೇಡ ಹಾಗೇಯೇ ಬಾಹ್ಯದಲ್ಲಿ ಚದುರುವುದು ಬೇಡ ;ನಂತರ ಆತನು ನಿರಂತರವಾಗಿ ಯಾವುದು ಮುಂದಿದೆಯೋ ಹಾಗೂ ಹಿಂದೆ ಇದೆಯೋ ಅವನೆಲ್ಲಾ ಗ್ರಹಿಸುತ್ತಲೆ ಇರುತ್ತಾನೆ. ಅಂದರೇ ಯಾವುದು ಮುಂದೆ ಇದೆಯೋ  ಅದೇ ಹಿಂದೆಂಯೂ ಇದೆ. ಹಾಗೇಯೇ ಯಾವುದು ಹಿಂದೆ ಇದೆಯೋ  ಅದೇ ಮುಂದೆಯೂ ಇದೆ. ಹಾಗೆಯೇ  ಯಾವುದು ಕೆಳಗೆ ಇದೆಯೋ  ಅದೇ ಮೇಲೆಯೂ ಇದೆ. ಹಾಗೇಯೇ ಯಾವುದು ಮೇಲೆ ಇದೆಯೋ  ಅದೇ ಕೆಳಗಡೆಯೂ ಇದೆ. ಅದೇ ರೀತಿಯಲ್ಲಿ ರಾತ್ರಿಯನ್ನು ಹಗಲಿನಂತೆ ಹಾಗೆಯೇ ಹಗಲನ್ನು ರಾತ್ರಿಯಂತೆ ಗ್ರಹಿಸುತ್ತ ವಿಹರಿಸುತ್ತಾನೆ. ಈ ರೀತಿಯಾದ ತೆರೆದ ಹಾಗೂ ತಡೆಗಳರಹಿತವಾದ ಜಾಗರೂಕತೆಯಿಂದ ಆತನು ಪ್ರಭಾಯುತ ಮನಸ್ಸನ್ನು ವೃದ್ಧಿಸುತ್ತಾನೆ..

  ಇಲ್ಲಿ ಮೊಗ್ಗಲಾನರು ಮಿಮಾಂಸಯುತ ಸಮಾಧಿಯಿಂದಾದ ಆದಾರದ ಬಲವನ್ನು ವೃದ್ಧಿಸಿರುತ್ತಾರೆ. ಹಾಗೂ ಈ ರೀತಿ ಯೋಚಿಸುತ್ತಾರೆ.  ಈ ನನ್ನ ಮಿಮಾಂಸವು  ಅತಿಯಾಗಿ ಮಂದವಾಗುವುದು ಬೇಡ ಹಾಗೇಯೇ ಅತಿ ಸಂಘರ್ಷಮಯವಾಗುವುದು ಬೇಡ.; ಅಂತರಿಕವಾಗಿ ಸಂಕುಚಿತವಾಗುವುದು ಬೇಡ ಹಾಗೇಯೇ ಬಾಹ್ಯದಲ್ಲಿ ಚದುರುವುದು ಬೇಡ ;ನಂತರ ಆತನು ನಿರಂತರವಾಗಿ ಯಾವುದು ಮುಂದಿದೆಯೋ ಹಾಗೂ ಹಿಂದೆ ಇದೆಯೋ ಅವನೆಲ್ಲಾ ಗ್ರಹಿಸುತ್ತಲೆ ಇರುತ್ತಾನೆ. ಅಂದರೇ ಯಾವುದು ಮುಂದೆ ಇದೆಯೋ  ಅದೇ ಹಿಂದೆಂಯೂ ಇದೆ. ಹಾಗೇಯೇ ಯಾವುದು ಹಿಂದೆ ಇದೆಯೋ  ಅದೇ ಮುಂದೆಯೂ ಇದೆ. ಹಾಗೆಯೇ  ಯಾವುದು ಕೆಳಗೆ ಇದೆಯೋ  ಅದೇ ಮೇಲೆಯೂ ಇದೆ. ಹಾಗೇಯೇ ಯಾವುದು ಮೇಲೆ ಇದೆಯೋ  ಅದೇ ಕೆಳಗಡೆಯೂ ಇದೆ. ಅದೇ ರೀತಿಯಲ್ಲಿ ರಾತ್ರಿಯನ್ನು ಹಗಲಿನಂತೆ ಹಾಗೆಯೇ ಹಗಲನ್ನು ರಾತ್ರಿಯಂತೆ ಗ್ರಹಿಸುತ್ತ ವಿಹರಿಸುತ್ತಾನೆ. ಈ ರೀತಿಯಾದ ತೆರೆದ ಹಾಗೂ ತಡೆಗಳರಹಿತವಾದ ಜಾಗರೂಕತೆಯಿಂದ ಆತನು ಪ್ರಭಾಯುತ ಮನಸ್ಸನ್ನು ವೃದ್ಧಿಸುತ್ತಾನೆ.

ಈ ರೀತಿಯಾಗಿ ಮೊಗ್ಗಲಾನರು ನಾಲ್ಕು ಇದ್ದಿಪಾದಗಳನ್ನು ಅಭಿವೃದ್ಧಿ ಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರಿಗೆ ಈ ಬಗೆಯ ಶಕ್ತಿಯು ಸಿಕ್ಕಿದೆ.

  ಈ ರೀತಿಯಾಗಿ ನಾಲ್ಕು ಇದ್ದಿಪಾದಗಳನ್ನು ಅಭಿವೃದ್ಧಿಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರವರು ವಿವಿಧ ಇದ್ಧಿ ಅಥವಾ ಅತಿಮಾನಸ ಶಕ್ತಿಗಳನ್ನು ಪಡೆದಿದ್ದಾರೆ. ಹೇಗೆಂದರೆ ಒಂದು ಶರೀರದಿಂದ ಅನೇಕ ಶರೀರಗಳನ್ನುಂಟು ಮಾಡುವುದು.. ಹಾಗೇಯೇ ಹಲವಾರು ಶರೀರಗಳಿಂದ ಒಂದೇ ಶರೀರದವರಾಗುವುದು. ಹಾಗೇಯೇ ಪ್ರತ್ಯಕ್ಷವಾಗುವುದು ಹಾಗೇಯೇ ಅದೃಷ್ಯವಾಗುವುದು. ಹಾಗೆಯೇ ಗೋಡೆಗಳಲ್ಲಿ ಮತ್ತು ಪರ್ವತಗಳನ್ನು ಅಲ್ಲಿ ಆಕಾಶವಿರುವಂತೆ ತೂರಿ ಹೋಗುವುದು. ಹಾಗೆಯೇ ನೀರಿನಲ್ಲಿ ಮುಳುಗಿ ಪುನಃ ಏಳುವಂತೆ ಆತನು ನೆಲದಲ್ಲಿ ಮುಳಗಿ ಪುನಃ ಏಳುತ್ತಾನೆ. ಹಾಗೇಯೇ ನೆಲದಲ್ಲಿ ನಡೆಯುವಂತೆ ನೀರಿನ ಮೇಲೆ ಮುಳುಗದೇ ನಡೆಯುತ್ತಾನೆ. ಹಾಗೇಯೇ ಪಕ್ಷಿಯು ಆಕಾಶದಲ್ಲಿ ಹಾರಾಡುವಂತೆ ಆತನು ಪದ್ಮಾಸನದಲ್ಲೇ ಆಕಾಶದಲ್ಲಿ ಹಾರಾಡುತ್ತಾನೆ. ಆತನು ಸೂರ್ಯ ಹಾಗೂ ಚಂದಿರರನ್ನು ಸ್ಪಶರ್ಿಸಬಲ್ಲನು. ಅಂತಹ ಶಕ್ತಿಶಾಲಿಯಾಗಿರುತ್ತಾನೆ. ಈ ರೀತಿಯಾಗಿ ಶರೀರದ ಮೂಲಕ ಆತನು ಬ್ರಹ್ಮಲೋಕಗಳವರೆಗೂ ಪ್ರಭಾವ ಬೀರುವಂತೆ ಅಭ್ಯಸಿಸುತ್ತಾನೆ.

ಈ ರೀತಿಯಾಗಿ ನಾಲ್ಕು ಇದ್ದಿಪಾದಗಳನ್ನು ಅಭಿವೃದ್ಧಿಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರವರು ದಿವ್ಯಕರ್ಣವನ್ನು ಪಡೆದಿದ್ದಾರೆ. ಅದರಿಂದಾಗಿ ಅವರು ಮಾನವರ ಹಾಗೂ ದೇವತೆಗಳ ಧ್ವನಿಯನ್ನು ಹತ್ತಿರದಲ್ಲೆ ಆಗಲಿ ಅಥವಾ ದೂರದಲ್ಲೆ ಆಗಲಿ ಆಲಿಸುವವರಾಗುತ್ತಾರೆ.

ಈ ರೀತಿಯಾಗಿ ಮೊಗ್ಗಲಾನರು ನಾಲ್ಕು ಇದ್ದಿಪಾದಗಳನ್ನು ಅಭಿವೃದ್ಧಿ ಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರಿಗೆ ಪರ ಜೀವಿಗಳ ಚಿತ್ತವನ್ನು ಯಾಥಾವತ್ತಾಗಿ ಅರಿಯುತ್ತಾರೆ.(ಅಂದರೆ ಚಿತ್ತಗಳನ್ನು ಓದುವವರಾಗುತ್ತಾರೆ.) ಹೇಗೆಂದರೆ  ಹೇಳುವುದಾದರೆ ರಾಗದಿಂದ ಆವೃತವಾದ ಚಿತ್ತವನ್ನು ಸರಾಗ ಚಿತ್ತವೆಂದು ಹಾಗೆಯೇ ವೀತರಾಗದಿಂದ ಕೂಡಿರುವ ಚಿತ್ತವನ್ನು ವೀತರಾಗ ಚಿತ್ತವೆಂದು ಹಾಗೆಯೇ ದ್ವೇಷದಿಂದ ಆವೃತವಾದ ಚಿತ್ತವನ್ನು ದ್ವೇಷಚಿತ್ತವೆಂದು, ದ್ವೇಷರಹಿತವಾದ ಚಿತ್ತವನ್ನು ಅದ್ವೇಷಚಿತ್ತವೆಂದು, ಮೋಹದಿಂದ ಕೂಡಿರುವ ಚಿತ್ತವನ್ನು ಮೋಹಚಿತ್ತವೆಂದು, ಅಮೋಹದಿಂದ ಇರುವ ಚಿತ್ತವನ್ನು ಅಮೋಹಚಿತ್ತವೆಂದು, ಒತ್ತಡಕ್ಕೆ ಒಳಗಾಗಿ ಕುಗ್ಗಿದ ಚಿತ್ತವನ್ನು ಸಂಕ್ಷಿಪ್ತಚಿತ್ತವೆಂದು ಹಾಗೆಯೇ ಚದುರಿದ ಚಿತ್ತವನ್ನು ವಿಕ್ಷಿಪ್ತ ಚಿತ್ತವೆಂದು, ಉನ್ನತ್ತವಾಗಿರುವ ಚಿತ್ತವನ್ನು ಮಹಗ್ಗತ (ಉನ್ನತ) ಚಿತ್ತವೆಂದು, ಉನ್ನತವಾಗಿಲ್ಲದ ಚಿತ್ತವನ್ನು ಅಮಹಗ್ಗತ ಚಿತ್ತವೆಂದು ಅರಿಯುತ್ತಾರೆ. ಶ್ರೇಷ್ಠ ಚಿತ್ತವನ್ನು ಶ್ರೇಷ್ಠ ಚಿತ್ತವೆಂದು ಹಾಗೆಯೇ ಅನುತ್ತರವಾದ ಚಿತ್ತವನ್ನು ಅನುತ್ತರಚಿತ್ತವೆಂದು ಅರಿಯುತ್ತಾರೆ,. ಸಮಾಹಿತವಾದ ಚಿತ್ತವನ್ನು ಸಮಾಹಿತ ಚಿತ್ತವೆಂದು ಅರಿಯುತ್ತಾರೆ, ಹಾಗೆಯೇ ವಿಮುಕ್ತ ಚಿತ್ತವನ್ನು ವಿಮುಕ್ತಿ ಚಿತ್ತವೆಂದು ಅವಿಮುಕ್ತ ಚಿತ್ತವನ್ನು ಅವಿಮುಕ್ತ ಚಿತ್ತವೆಂದು ಅರಿಯುತ್ತಾರೆೆ. ಹೀಗೆ ಚೇತೋ ಪರಿಜ್ಞಾನವುಳ್ಳ ಭಿಕ್ಷುವು ಸರ್ವ ಪ್ರಕಾರದಲ್ಲಿ ಇದು ಸರಾಗ, ಇದು ವೀತರಾಗ.... ಅವಿಮುಕ್ತ ಚಿತ್ತವೆಂದು ಯಥಾಭೂತವಾಗಿ ಅರಿಯುತ್ತಾರೆ.ೆ.

ಈ ರೀತಿಯಾಗಿ ಮೊಗ್ಗಲಾನರು ನಾಲ್ಕು ಇದ್ದಿಪಾದಗಳನ್ನು ಅಭಿವೃದ್ಧಿ ಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರು  ಪೂರ್ವ ಜನ್ಮಗಳ ಸ್ಮರಣಾ ಜ್ಞಾನಕ್ಕಾಗಿ ಮನಸ್ಸನ್ನು ಆ ಕಡೆಯೇ ನಿದರ್ೆಶಿಸುತ್ತಾರೆ, ವಾಲಿಸುತ್ತಾರೆ, ಆವರು ತಮ್ಮ ಪೂರ್ವಜನ್ಮ ವೃತ್ತಾಂತಗಳನ್ನು ನೆನೆಸಿಕೊಳ್ಳುತ್ತಾರೆ ಹೇಗೆಂದರೆ ಒಂದು ಜನ್ಮ, ಎರಡು ಜನ್ಮ, ಮೂರು ಜನ್ಮ, ನಾಲ್ಕು ಜನ್ಮ, ಐದು ಜನ್ಮಗಳು, ಹತ್ತು ಜನ್ಮಗಳು, ಇಪ್ಪತ್ತು ಜನ್ಮಗಳು, ಮೂವತ್ತು ಜನ್ಮಗಳು, ನಲ್ವತ್ತು ಜನ್ಮಗಳು, ಐವತ್ತು ಜನ್ಮಗಳು, ನೂರು ಜನ್ಮಗಳು, ಸಾವಿರ ಜನ್ಮಗಳು, ಲಕ್ಷ ಜನ್ಮಗಳು, ಕೋಟಿ ಜನ್ಮಗಳು ಅಥವಾ ವಿಶ್ವದ ಕುಗ್ಗುವಿಕೆಯ ಸಂವಟ್ಟಿ ಅನೇಕ ಕಲ್ಪಗಳು ಅಥವಾ ವಿಶ್ವದ ವಿಕಸಿಸುವಿಕೆಯ ಅನೇಕ ಕಲ್ಪಗಳ (ವಿವಟ್ಟಿಗಳು) ವರೆವಿಗೂ ಸ್ಮರಣೆ ಮಾಡಿಕೊಳ್ಳುವರು. ಹೇಗೆಂದರೆ ನನಗೆ ಆಗ ಆ ಹೆಸರಿತ್ತು, ಅಂತಹ ಜನಾಂಗದಲ್ಲಿ ಹುಟ್ಟಿದ್ದೆನು, ಅಂತಹ ರೂಪವಿತ್ತು, ಅಂತಹ ಆಹಾರವನ್ನು ಸೇವಿಸಿದ್ದೆನು, ಅಂತಹ ಸುಖ-ದುಃಖಗಳನ್ನು ಅನುಭವಿಸಿದೆನು. ಆ ರೀತಿಯಲ್ಲಿ ತನ್ನ ಜೀವನವೂ ಆಗ ಕೊನೆಯಾಯಿತು. ನಂತರ ಅಲ್ಲಿಂದ ಬೇರೆಡೆಯಲ್ಲಿ ಹುಟ್ಟಿದೆನು ಮತ್ತು ಅಲ್ಲಿಯೂ ನನಗೆ ಇಂತಹ ಹೆಸರಿತ್ತು, ಇಂತಹ ಜನಾಂಗದಲ್ಲಿ, ಇಂತಹ ರೂಪಪಡೆದು ಇಂತಿಂಥಹ ಆಹಾರ ಸೇವಿಸಿದ್ದೆನು. ಇಂತಿಂಥಹ ಸುಖ-ದುಃಖಗಳನ್ನು ಅನುಭವಿಸಿ ಈ ರೀತಿಯಲ್ಲಿ ಜೀವನ ಕೊನೆಗೊಂಡಿತು. ನಂತರ ಹೀಗೆಯೇ ಜನನ ಮರಣಗಳಲ್ಲಿ ಸಿಲುಕುತ್ತ ಈ ಜನ್ಮದಲ್ಲಿ ಈ ರೀತಿಯಾಗಿ ಹುಟ್ಟಿದ್ದೇನೆ. ಹೀಗೆ ಈ ರೀತಿಯಲ್ಲಿ ಅಪಾರ ಪೂರ್ವಜನ್ಮಗಳನ್ನು  ನೆನಪಿಸಿಕೊಳ್ಳುತ್ತಾರೆ. 

ಈ ರೀತಿಯಾಗಿ ಮೊಗ್ಗಲಾನರು ನಾಲ್ಕು ಇದ್ದಿಪಾದಗಳನ್ನು ಅಭಿವೃದ್ಧಿ ಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರು ಜೀವಿಗಳ ಚ್ಯುತಿ ಹಾಗು ಉತ್ಪತ್ತಿಗಳ ಬಗ್ಗೆ ಜ್ಞಾನವನ್ನು  ಅಂದರೆ ಜೀವಿಗಳ ಸಾವು ಮತ್ತು ಪುನರ್ಜನ್ಮಗಳ ವಿಸ್ತಾರ ಜ್ಞಾನವನ್ನು ಪಡೆಯುತ್ತಾರೆ.. ಇಲ್ಲಿ ಆತನು ತನ್ನ ದಿವ್ಯದೃಷ್ಠಿಯಿಂದ ವಿಶುದ್ಧವಾದ, ಮಾನವಾತೀತವಾದ ದಿವ್ಯದೃಷ್ಟಿಯಿಂದಾಗಿ ಜೀವಿಗಳ ಸಾವು, ಮರುಹುಟ್ಟು ಹಾಗು ಅದಕ್ಕೆ ಇರುವ ಕಾರಣಗಳನ್ನು ಅರಿಯುತ್ತಾನೆ. ಇಲ್ಲಿ ಆತನು ಜೀವಿಗಳ ಉನ್ನತ ಸ್ಥಾನ ಮತ್ತು ನೀಚಸ್ಥಿತಿಗಳಿಗೆ ಹಾಗೆಯೇ ಸುಂದರತೆಗೆ ಹಾಗು ಕುರೂಪತೆ ಸುಖಕ್ಕೆ ಮತ್ತು ದುರ್ಗತಿಗೆ ಇವೆಲ್ಲಕ್ಕೂ ಕಾರಣವು ಅವರ ಕರ್ಮಗಳೇ ಕಾರಣ ಎಂದು ಸ್ಪಷ್ಟವಾಗಿ ಅರಿಯುತ್ತಾನೆ. ಯಾವ ಜೀವಿಗಳು ಶರೀರ, ವಾಚ ಮತ್ತು ಮನಸ್ಸಿನಿಂದ ಕರ್ಮಗಳನ್ನು ಮಾಡಿವೆಯೋ ಆರ್ಯಧಮ್ಮವನ್ನು ನಿಂದಿಸುವರೋ, ಮಿಥ್ಯಾದೃಷ್ಟಿಕೋನಗಳನ್ನು ಹೊಂದಿರುವರೋ ಆ ಮಿಥ್ಯಾದೃಷ್ಟಿಗೆ ಅನುಸಾರವಾಗಿ ಕೆಟ್ಟ ಕರ್ಮಗಳನ್ನು ಮಾಡುತ್ತಾರೋ ಅಂತಹವರೋ ಶರೀರ ವಿಘಟಿತರ ನಂತರ (ಸಾವಿನ ನಂತರ) ದುರ್ಗತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅದು ಸುಖರಹಿತ ಗತಿಯಾಗಿರುತ್ತದೆ, ನಿರಯದಲ್ಲಿ ಹುಟ್ಟುತ್ತಾನೆ. ಅದೇರೀತಿಯಲ್ಲಿ ಯಾವ ಜೀವಿಗಳು ಶರೀರ ಪಾಪ ಮತ್ತು ಮನಸ್ಸಿನಿಂದ ಸುಕರ್ಮಗಳನ್ನು ಮಾಡಿವೆಯೋ, ಆರ್ಯಧಮ್ಮವನ್ನು ನಿಂದಿಸದೆ ಪ್ರಶಂಸಿಸುವರೋ, ಸಮ್ಯಕ್ ದೃಷ್ಟಿಕೋನಗಳನ್ನು ಹೊಂದಿರುವರೋ ಮತ್ತು ಅಂತಹ ಸಮ್ಮಾದೃಷ್ಟಿಯಿಂದಾಗಿ ಸುಕರ್ಮಗಳನ್ನು ಮಾಡುತ್ತಾನೆ. ಅಂತಹವನು ಸಾವಿನ ನಂತರ ಸುಗತಿಯನ್ನು ಹೊಂದುವನು. ಹೀಗೆ ಇಲ್ಲಿ ಆತನು ತನ್ನ ದಿವ್ಯದೃಷ್ಠಿಯಿಂದ ವಿಶುದ್ಧವಾದ, ಮಾನವಾತೀತವಾದ ದಿವ್ಯದೃಷ್ಟಿಯಿಂದಾಗಿ ಜೀವಿಗಳ ಸಾವು, ಮರುಹುಟ್ಟು , ಜೀವಿಗಳ ದುರ್ಗತಿ ಮತ್ತು ಉನ್ನತಿ, ಅವರ ಸುಂದರತೆ, ಮತ್ತು ಕುರೂಪತೆ ಮತ್ತು ಭಾಗ್ಯ ಹಾಗು ದೌಭರ್ಾಗ್ಯಗಳಿಗೆ ಅದಕ್ಕೆ ಇರುವ ಕಮ್ಮಗಳ ಕಾರಣಗಳನ್ನು ಅರಿಯುತ್ತಾನೆ.

ಈ ರೀತಿಯಾಗಿ ಮೊಗ್ಗಲಾನರು ನಾಲ್ಕು ಇದ್ದಿಪಾದಗಳನ್ನು ಅಭಿವೃದ್ಧಿಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರು ಅಸವಗಳ ಅಂತ್ಯವನ್ನು ಸಾಧಿಸಿ, ಅಸವಮುಕ್ತರಾಗಿ, ಮತ್ತು ಅಸವ ಮುಕ್ತ ಜ್ಞಾನದಿಂದಲೂ ಮುಕ್ತರಾಗಿ, ಅಭಿಜ್ಞಾದಿಂದ ನೇರವಾಗಿ ಅರಿತವರಾಗಿ ಇಲ್ಲಿಯೇ ಹಾಗೂ ಈಗಲೇ ತಮಗೆ ತಾವೇ ಅರಿತು ಮುಕ್ತರಾಗಿದ್ದಾರೆ.

ಹಾಗೇಯೇ ಸಚ್ಚವಿಭಂಗ ಸುತ್ತದಲ್ಲಿ ಹೀಗೆ ಪ್ರಶಂಸೆ ಮಾಡುತ್ತರೆ. :

  ಭಿಕ್ಖುಗಳೇ ನೀವುಗಳು ಸಾರಿಪುತ್ರ ಹಾಗೂ ಮೊಗ್ಗಲಾನರ  ಸೇವನೆ(ಮಿತ್ರತ್ವ)ೆ  ಮಾಡಿರಿ, ಅವರ ಒಡನಾಟದಿಂದ ಬೆರೆಯಿರಿ, ಅವರು ಪಂಡಿತ(ಜ್ಞಾನಿ) ಭಿಕ್ಖುಗಳಾಗಿದ್ದಾರೆ, ಅವರು ಬ್ರಹ್ಮಚರಿಯದ ಶ್ರೇಷ್ಟ ಜೀವನಕ್ಕೆ ಅನುಗ್ರಹ ತೋರುತ್ತಾರೆ, ಅದರಲ್ಲಿ ಸಾರಿಪುತ್ತರು  ಜನ್ಮನೀಡಿದ ಮಾತೆಯ ತರಹ, ಹಾಗೆಯೇ ಮೋಗ್ಗಲಾನರು ಮಗುವನ್ನು ಸಲಹುವಂತಹವರ ತರಹ, ಸಾರಿಪುತ್ತರು ಎಲ್ಲರನ್ನು ಸೋತಪತ್ತಿ ಫಲವನ್ನು ಪಡೆಯುವ ಹಾಗೇ ಮಾರ್ಗದಶರ್ಿತರಾಗುವರು. ಮತ್ತು ಮೊಗ್ಗಲಾನರು ಇದ್ಧಿಪಾಟಿಹಾರಿಯದೆಡೆಗೆ ,ಉನ್ನತ ಗುರಿಯೆಡೆಗೆ ಸಾಗಿಸುವಂತಹವರು. ಸಾರಿಪುತ್ರರು ಆರ್ಯಸತ್ಯಗಳನ್ನು ಬೋಧಿಸುವಲ್ಲಿ ಸಮರ್ಥರು ಅವರು ಆರ್ಯಸತ್ಯಗಳನ್ನು ವಿವರಿಸುತ್ತಾರೆ, ಒತ್ತಿಹೇಳುತ್ತಾರೆ, ಸ್ಥಾಪಿಸುತ್ತಾರೆ, ಸ್ಪಷ್ಟಿಕರಿಸುತ್ತಾರೆ, ವಿಶ್ಲೇಷಿಸುತ್ತಾರೆ, ಮತ್ತು ಪ್ರಕಟಪಡಿಸುತ್ತಾರೆ. ಹೀಗೆ ನುಡಿದ ಭಗವಾನರು ತಮ್ಮ ಆಸನದಿಂದ ಎದ್ದು ತಮ್ಮ ವಿಹಾರದೆಡೆಗೆ ವಿಶ್ರಮಿಸಲು ಹೋರಟರು.

5.2 ಪರರ ಮನಸ್ಸನ್ನು ಓದುವಿಕೆ ಅಥವಾ ಅರಿಯುವಿಕೆಯ ಅತಿಮಾನಸ ಶಕ್ತಿ

ಒಮ್ಮೆ ಉಪೋಸಥದ ದಿನದಂದು ಭಗವಾನರು ಇಡೀ ರಾತ್ರಿ ನಿಶಬ್ಧವಾಗಿ ಕುಳಿತಿದ್ದರು.ಯಾವಾಗ ಹಗಲಾಯಿತೋ ಆಗ ಭಗವಾನರು ಸಂಘವು ಅಪರಿಶುದ್ಧವಾಗಿದೆ ಎಂದಷ್ಟೆ ಹೇಳಿದರು. ಆಗ ಮೊಗ್ಗಲಾನರು ತಮ್ಮ ಪರರ ಚಿತ್ತವನ್ನು ಅರಿಯುವ ಸಾಮಾಥ್ರ್ಯದಿಂದ ಆ ಪಾಪಿ ಭಿಕ್ಖುವನ್ನು ಹುಡುಕಿದರು ಹಾಗೂ ಹೊರಹೋಗಲು ಕೇಳಿಕೊಂಡರು. ಆತನು ಒಪ್ಪದಿದ್ದಾಗ 3 ಬಾರಿ ವಿನಂತಿಸಿಕೊಂಡರು. ಆಗಲೂ ಆತನು ಜಗ್ಗದಿದ್ದಾಗ ಆತನನ್ನು ಸಂಘದಿಂದ ಹಾಗೂ ಉಪೋಸಥದ ಸಭಾಂಗಣದಿಂದ ಹೊರಗೆ ಕಳುಹಿಸಿದರು. ನಂತರ ಸಂಘವು ಶುದ್ದಿಯಾಗಿರುವುದನ್ನು ಪುನಃ ಪರೀಕ್ಷಿಸಿ ಭಗವಾನರಲ್ಲಿ ಪಾತಿಮೋಕ್ಖ ಪಠಿಸಲು ಕೇಳಿಕೊಂಡರು. ಇದು ಅವರ ಚಿತ್ತವನ್ನು ಒದುವ ಅತಿಮಾನಸ ಶಕ್ತಿಗೆ ಉದಾಹರಣೆಯಾಗಿದೆ.

*********************

ಒಮ್ಮೆ ಭಗವಾನರು 500 ಭಿಕ್ಖುಗಳೊಡನೆ ಕುಳಿತ್ತಿದ್ದರು ಆಗ ಅಲ್ಲಿ ಮೊಗ್ಗಲಾನರು ಬಂದು ಕುಳಿತರು. ಅವರು ಅಲ್ಲಿ ಕುಳಿತಿದ್ದ ಎಲ್ಲರ ಚಿತ್ತವನ್ನು ವಿಶ್ಲೇಷಿಸಿದರು ಆಗ ಅವರಿಗೆ ಅವರೆಲ್ಲರೂ ಅಸವರಹಿತ ಅರಹಂತರು  ಎಂದು ತಿಳಿಯಿತು. ಇವರ ಈ ಅಸಮಾನ್ಯ ಸಮಾಥ್ರ್ಯ ತಿಳಿದ ಅರಹಂತರೊಬ್ಬರು ತಮ್ಮ ಆಸನದಿಂದ ಎದ್ದು ಅವರಿಗೆ ವಂದಿಸಿ ಹೀಗೆ ನುಡಿದರು.:

ಯಾರು ಪರ್ವತದ ಇಳಿಜಾರಿನಲ್ಲಿ ಪ್ರಶಾಂತವಾಗಿ ಕುಳಿತಿರುವರೊ

ಯಾವ ಋಷಿಯು ಪಾಪ ಧಮ್ಮವನೆಲ್ಲವನ್ನು ದಾಟಿರುವರೊ

ಅಂತಹವರಿಗೆ ತಿಜ್ಞಾನವುಳ್ಳ ಹಾಗೂ ಮೃತ್ಯುಂಜಯರಾದ ಶಿಷ್ಯರು ವಂದಿಸುತ್ತಾರೆ.

ಅವರನ್ನು ತನ್ನ ಅತಿಮಾನಸಶಕ್ತಿಯಿಂದ ಸಂತರನ್ನೇ ಅರಿಯುವನೊ

ಅಂತಹ ಅತಿಮಾನಸತೆಯಲ್ಲಿ ಪ್ರವೀಣರಾದ ಮೊಗ್ಗಲಾನರು 

ಅವರ ಚಿತ್ತಗಳನ್ನು ಪರೀಕ್ಷಿಸಿ ಅವರು ಮುಕ್ತರೆಂದು ಹಾಗೂ ಅಂಟುವಿಕೆಯಿಂದ 

ಪಾರಾಗಿದ್ದಾರೆಂದು ತಿಳಿದರು. ಸಂ.ನಿ.8.10

*************************** 

ಒಮ್ಮೆ ಅಯುಷ್ಮಂತ ಅನುರುದ್ದರವರು ಏಕಾಂತದಲ್ಲಿ ಧ್ಯಾನಿಸುತ್ತಿದ್ದರು ಆಗ ಅವರ ಮನಸ್ಸಿನಲ್ಲಿ ಈ ಬಗೆಯ ಪ್ರಶ್ನೆಯು ಉದಯಿಸಿತು  ನಾಲ್ಕು ಸತಿಪಟ್ಟಾನಗಳ ಉದಾತ್ತ ಮಾರ್ಗದಿಂದ ಯಾವ ರೀತಿ ದುಃಖ ಸಮೂಹವನ್ನು ಅಂತ್ಯಗೊಳಿಸಬಹುದು.. ತಕ್ಷಣ ಅವರ ಮನಸ್ಸಿನ ಈ ವಾಕ್ಯ ಒದಿದ ಮೊಗ್ಗಲಾನರು ನೀವು ಅಭ್ಯಸಿಸುತ್ತಿರುವ ಸಾಧನಾಕ್ರಮವನ್ನು ತಿಳಿಸಿದರೆ ಅದರ ಪೂರ್ಣ ವಿವರ ತಿಳಿಸುವೆ ಎಂದು ತಿಳಿಸುತ್ತಾರೆ. ಸ.ನಿ.52.1-2

5.3 ದಿವ್ಯ ಶ್ರೋತದ ಅತಿಮಾನಸ ಶಕ್ತಿ

ಒಮ್ಮೆ ಮೊಗ್ಗಲಾನರವರು ಸಮಾಧಿಯಿಂದ ಎದ್ದು ಸಾರಿಪುತ್ತರಲ್ಲಿಗೆ ಬಂದರು. ಅವರ ಪ್ರಶಾಂತತೆಯನ್ನು ಮುಖದಲ್ಲಿ ಗಮನಿಸಿದ ಸಾರಿಪುತ್ತರು ಅವರಿಗೆ ಹೀಗೆ ಕೇಳಿದರು :ಚಿತ್ತದ ಪ್ರಶಾಂತತೆಯ ಉನ್ನತ ಸಮಾಧಿಯಲ್ಲಿ ಮುಳುಗಿದ್ದಿರಾ?

ಇಲ್ಲ ಹಾಗೇನೂ ಇಲ್ಲ ಇಂದು ಕೇವಲ ಕಿರಿಯ ಹಂತದ ಸಮಾಧಿಗಳಲ್ಲಿ ಮಾತ್ರ ಮನಸ್ಸನ್ನು ಹರಿಸಿದ್ದೇ ಹಾಗೇಯೇ ಧಮ್ಮ ಚಚರ್ೆಗಳಲ್ಲಿ ತಲ್ಲಿನನಾಗಿದ್ದೆ, 

ಆಗ ಸಾರಿಪುತ್ತರು ಹೀಗೆ ಪ್ರಶ್ನಿಸಿದರು :ಯಾರೊಂದಿಗೆ ಚಚರ್ಿಸಿ ಈ ಉತ್ತರವನ್ನು ಪಡೆದಿರಿ.

ಭಗವಾನರಿಂದಲೇ.

ಅದು ಹೇಗೆ ಸಾಧ್ಯ ! ಈ ಸಮಯದಲ್ಲಿ ಭಗವಾನರು ಶ್ರಾವಸ್ತಿಯಲ್ಲಿದ್ದಾರೆ ಅದರೆ ನಾವು ರಾಜಗೃಹದಲ್ಲಿದ್ದೇವೆ. ನೀವು ಅತಿಮಾನಸ ಶಕ್ತಿಯಿಂದ ಅಲ್ಲಿಗೆ ಹೋಗಿದ್ದಿರಾ ಅಥವಾ ಭಗವಾನರೇ ಇಲ್ಲಿಗೆ ಬಂದಿದ್ದರಾ ?

ಎರಡು ಅಲ್ಲ,  ಕೇವಲ ವಿಶುದ್ಧವಾದ ದಿವ್ಯ ಚಕ್ಷು ಹಾಗೂ ದಿವ್ಯ ಕರ್ಣ ಬಳಸಿ ಭಗವಾನರೊಂದಿಗೆ ಸಂಭಾಷಿಸಿ ಉತ್ತರವನ್ನು ಪಡೆದೆನು.

ಎಂತಹ ಧಮ್ಮಚಚರ್ೆಯನ್ನು ಮಾಡಿದಿರಿ.

ನಾನೂ ಭಗವಾನರೊಂದಿಗೆ ಒಬ್ಬನು ಯಾವ ಮಟ್ಟದಲ್ಲಿ ಪ್ರಯತ್ನಶೀಲತೆಯನ್ನು ವೃದ್ಧಿಸಬಲ್ಲನು ಎಂದು ಕೇಳಿದೆನು ಅದಕ್ಕೆ ಭಗವಾನರು ಹೀಗೆ ನುಡಿದರು ;ಮೊಗ್ಗಲಾನ ಪ್ರಯತ್ನಶಾಲಿಯೊಬ್ಬನು ಹೀಗೆ ತನ್ನ ಚಿಂತನೆಯನ್ನು ಮಾಡಬೇಕು ಹೇಗೆಂದರೆ :ನನ್ನ ಮಾಂಸ ಹಾಗೂ ರಕ್ತಗಳು ಒಣಗಿಹೋದರು ಸರಿಯೇ ಕೇವಲ ಚರ್ಮ, ಮೂಳೆ ಹಾಗೂ ನರಗಳು ಉಳಿದರೂ ಸರಿಯೇ ನಾನೂ ಸಾಧಿಸಬೇಕಾಗಿರುವುದನ್ನು ನನ್ನ ಧೃಡತೆಯಿಂದ ಅವಿಶ್ರಾಂತವಾಗಿ ಸತತ ಯತ್ನಶೀಲನಾಗಿ ಅದನ್ನು ಸಾಧಿಸುವವರೆಗೆ ವಿಶ್ರಮಿಸುವುದಿಲ್ಲ.ಎಂಬಂತಹ ಮನೋಭಾವ ಉಳ್ಳವನೇ ಆ ಮಟ್ಟದಲ್ಲಿ ಪ್ರಯತ್ನಶೀಲವನ್ನು ವಿಕಾಸಿಸಬಲ್ಲನು. ಎಂದರು

ಓಹ್ ಮೊಗ್ಗಲಾನರೇ ನೀವು ಹಿಮಾಲಯದಂತಹವರು, ಇಂತಹ ದಿವ್ಯ ಶಕ್ತಿ ಪಡೆದಿರುವ ನೀವು ಧನ್ಯರು. ಬುದ್ಧರಂತೆ ನಿಮಗೂ ಸಹಾ ಇಚ್ಚಿಸಿದರೇ ಈ ಇಡೀ ಕಲ್ಪವೇ ಜೀವಿಸಬಹುದು.

ೆಓಹ್ ಸಾರಿಪುತ್ತರೇ ಉಪ್ಪಿನ ದೊಡ್ಡ ಘಟದ ಪಕ್ಕದಲ್ಲಿ ಸಣ್ಣ ಉಪ್ಪಿನ ಹರಳಿನಂತೆ ನಾನಿದ್ದೇನೆ, ತಮಗೆ ಭಗವಾನರೇ ಹಲವಾರು ರೀತಿಯಲ್ಲಿ ಪ್ರಶಂಸಿಹರು ......ಎಂದು ಅವರು ಸಹಾ ಸಾರಿಪುತ್ತರನ್ನು ಪ್ರಶಂಸಿಸಿದರು.

ದೇವ ವಾಣಿಗಳ ಆಲಿಸುವಿಕೆ 

ತಮ್ಮ ದಿವ್ಯವಾದ ಕರ್ಣದಿಂದ ಮೊಗ್ಗಾಲಾನರು ಅಮನುಷ್ಯರಾದಂತಹ ದೇವ, ಅಸುರ, ಪ್ರೇತ, ಯಕ್ಷ ಇತ್ಯಾದಿ ಜೀವಿಗಳ ಧ್ವನಿಯನ್ನು ಆಲಿಸಿ ಅವರಿಂದ ಸಂದೇಶಗಳನ್ನು ಪಡೆಯುತ್ತಿದ್ದರು. ಒಮ್ಮೆ ಒಂದು ದೇವ ಮೊಗ್ಗಲಾನರಿಗೆ ಹೀಗೆ ನುಡಿಯಿತು ಅದೇನೆಂದರೆ ದೇವದತ್ತನಿಂದ ಭಗವಾನರಿಗೆ ಆಪಾಯವಿದೆ ಆತನು ಆ ಬಗೆಯ ದುಷ್ಟ ಸಂಕಲ್ಪಗಳಲ್ಲಿ ತೊಡಗಿದ್ದಾನೆ ಎಂದು ತಿಳಿಸಿತು.

   ಈಗಾಗಲೇ ಹಿಂದಿನ ಪುಟದಲ್ಲಿ ದಿವ್ಯ ಕರ್ಣ ಹಾಗೂ ದಿವ್ಯ ಚಕ್ಷು ಬಗ್ಗೆ ತಿಳಿಸಿರುವೆನು (ಸಂ.ನಿ.21.,3)

5.4.1 ಯಕ್ಷನ ನೋಡಿದ್ದು

ಒಮ್ಮೆ ಸಾರಿಪುತ್ತರು ಮೊಗ್ಗಲಾನರೊಡನೆ ಕಪೋತಕಂದಾರದಲ್ಲಿ ಪೂರ್ಣಮಿಯ ದಿನದಂದು ಧ್ಯಾನದಲ್ಲಿ ತಲ್ಲೀನರಾಗಿದ್ದರು. ಅವರ ಶಿರವು ಅಂದೇ ಕ್ಷೌರ ಮಾಡಲ್ಪಟ್ಟು ಪಳಪಳನೆ ಹೊಳೆಯುತ್ತಿತ್ತು. ಆಗ ದುಷ್ಟ ಯಕ್ಷನೊಬ್ಬನು ಅವರ ತಲೆಯ ಮೇಲಿಂದ ಹಾದು ಹೋಗುತ್ತಿದ್ದನು. ಸಾರಿಪುತ್ತರ ಘನತೆಯನ್ನು ಅರಿಯದ ಆ ಯಕ್ಷನು ಹಿಂಸಾತ್ಮಕ ಮೋದದಲ್ಲಿ ಬಂದು ಸಾರಿಪುತ್ತರ ತಲೆಗೆ ಅತ್ಯಂತ ಭೀಕರವಾದ ಹೊಡೆತವನ್ನು ನೀಡಿದನು. ಆದರೆ ಧ್ಯಾನದ ಆಳದಲ್ಲಿ ತಲ್ಲೀನರಾಗಿದ್ದ ಸಾರಿಪುತ್ತರಿಗೆ ಹಾನಿಯೇನು ಆಗಲಿಲ್ಲ. ಆ ದೃಶ್ಯವನ್ನು ಕಣ್ಣಾರೆ ಕಂಡಂತಹ ಮಹಾಮೊಗ್ಗಲಾನರು ತಕ್ಷಣ ಧಾವಿಸಿ ಸಾರಿಪುತ್ತರಿಗೆ  ಹೀಗೆ ಕೇಳಿದರು: ಆಯುಷ್ಮಂತ, ನೀನು ಕ್ಷೇಮವಾಗಿರುವೆಯಾ, ನಿನಗೇನೂ ಹಾನಿಯಾಗಲಿಲ್ಲವಷ್ಟೇ? ನಾನು ಕ್ಷೇಮವಾಗಿರುವೆನು ಮೊಗ್ಗಲಾನ, ಕೇವಲ ಸಣ್ಣ ತಲೆನೋವಿನ ಭಾಸವಾಗುತ್ತಿದೆಯಷ್ಟೆ. ಆಗ ಮೊಗ್ಗಲಾನರು ಹೀಗೆ ಉದ್ಗಾರ ಮಾಡಿದರು: ಇದು ಆಶ್ಚರ್ಯಕರ ಆಯುಷ್ಮಂತ ಸಾರಿಪುತ್ತ, ಅದ್ಭುತವಾದುದು. ತಮ್ಮ ಮಾನಸಿಕ ಶಕ್ತಿಯು ಅತ್ಯಂತ ಮಹೋನ್ನತವಾಗಿದೆ. ಯಕ್ಷನೊಬ್ಬನ ಇಡೀ ಶಕ್ತಿಯಿಂದ ಪ್ರಹರಿಸಲ್ಪಟ್ಟ ಹೊಡೆತ ತಮಗೆ ಬಿದ್ದಿದ್ದರೂ ಸಹಾ ತಾವು ಕೇವಲ ಸಣ್ಣ ತಲೆನೋವಿನ ಭಾಸವೆಂದು ಹೇಳುತ್ತಿರುವಿರಿ. ಆ ಹೊಡೆತಕ್ಕೆ ಆನೆಯೇ ಕೆಳಬಿದ್ದು ವಿಲಿವಿಲಿ ಒದ್ದಾಡುತ್ತಿತ್ತು ಅಥವಾ ಬೃಹತ್ ಬಂಡೆಯೇ ಹೋಳಾಗುತ್ತಿತ್ತು.

ಅದನ್ನು ಆಲಿಸಿದ ಸಾರಿಪುತ್ತರು ಹೀಗೆ ನುಡಿದರು: ಆಶ್ಚರ್ಯ ಮೊಗ್ಗಲಾನ, ಅದ್ಭುತವಾದದು ಮೊಗ್ಗಲಾನರ ಇದ್ದಿಶಕ್ತಿಯು ಅದ್ಭುತವಾದುದು. ತಾವು ಯಕ್ಷಾದಿ ಅನೇಕ ಅಗೋಚರ ಜೀವಿಗಳನ್ನು ಕಾಣುತ್ತಿರುವಿರಿ. ನಾನಂತು ದೆವ್ವವನ್ನು ಸಹಾ ಇದುವರೆವಿಗೆ ಕಾಣಲಿಲ್ಲ.

ಇಡೀ ಘಟನೆಯನ್ನು ತಮ್ಮ ದಿವ್ಯದೃಷ್ಟಿಯಲ್ಲಿ ಕಂಡಂತಹ ಭಗವಾನರು ಹೀಗೆ ಉದಾನವನ್ನು ನುಡಿದರು: ಯಾರ ಚಿತ್ತವು ಶಿಲೆಯಂತೆ ಅಚಲವೋ, ಆಸಕ್ತಿದಾಯಕ ವಿಷಯಗಳಲ್ಲಿ ಅನಾಸಕ್ತನೋ, ಉದ್ದೇಶಕಾರಿ ವಿಷಯಗಳಲ್ಲೂ ಕೋಪಗೊಳ್ಳನೋ, ಅಂತಹವನ ಚಿತ್ತವು ಹೀಗೆ ವಿಕಸಿತವಾದಾಗ ಅಂತಹವನಿಗೆ ದುಃಖವಾದರೂ ಹೇಗೆ ತಾನೆ ಉಂಟಾಗುವುದು. (ಉ.4.4)

***********************

5.4.2 ಹೆಬ್ಬಾವು ಆಕೃತಿಯ ಪ್ರೇತದ ಪ್ರಸಂಗ

ಒಮ್ಮೆ ಪರಮಪೂಜ್ಯ ಮೊಗ್ಗಲ್ಲಾನರವರು, ಪೂಜ್ಯ ಲಕ್ಖಣರೊಂದಿಗೆ ಗೃದ್ಧಕೂಟ ಪರ್ವತದಿಂದ ಇಳಿಯುತ್ತಿದ್ದರು. ಆಗ ಅವರಿಗೆ ತಮ್ಮ ದಿವ್ಯದೃಷ್ಟಿಯಿಂದ 25 ಯೋಜನ ಉದ್ದದ ಹೆಬ್ಬಾವಿನ ಆಕೃತಿಯ ಪ್ರೇತವು ಕಂಡುಬಂದಿತು. ಆ ಹಾವಿನ ಆಕೃತಿಯ ಪ್ರೇತಕ್ಕೆ ಎಲ್ಲಾಕಡೆಗಳಿಂದ ಬೆಂಕಿಯು ಆವೃತವಾಗಿ ಅದು ಅತಿ ಯಾತನೆ ಅನುಭವಿಸುತ್ತಿತ್ತು. ಅದರ ಅವಸ್ಥೆಯನ್ನು ಕಂಡಂತಹ ಮೊಗ್ಗಲ್ಲಾನರವರು ವಿಷಾದದ ನಗೆ ಬೀರಿದರು. ಆಗ ಲಕ್ಖಣರವರು ಆ ವಿಷಾದದ ನಗೆಗೆ ಕಾರಣ ಕೇಲಿದರು. ಆಗ ಮೊಗ್ಗಲ್ಲಾನರು ಹೀಗೆ ಪ್ರತಿಕ್ರಿಯಿಸಿದರು: ಸೋದರ, ಈ ಪ್ರಶ್ನೆಗೆ ಉತ್ತರಿಸಲು ಇದು ಸಕಾಲವಲ್ಲ, ಬುದ್ಧರನ್ನು ಭೇಟಿಯಾಗುವವರೆಗೂ ಸುಮ್ಮನಿದ್ದು ನಂತರ ಪ್ರಶ್ನಿಸುವವನಾಗು.

ನಂತರ ಅವರು ಬುದ್ಧರನ್ನು ಭೇಟಿ ಮಾಡಿದರು. ಆಗ ಪುನಃ ಲಕ್ಖನರವರು ವಿಷಾಧದ ನಗೆಗೆ ಕಾರಣ ಕೇಳಿದರು. ಆಗ ಮೊಗ್ಗಲ್ಲಾನರವರು ಹೀಗೆ ನುಡಿದರು: ಸೋದರನೇ, ಆ ಸ್ಥಳದಲ್ಲಿ ನಾನು ಪ್ರೇತವೊಂದನ್ನು ಕಂಡೆನು, ಅದರ ಸ್ವರೂಪ ಹೀಗಿತ್ತು. ಅಂತಹ ಪ್ರೇತವನ್ನೇ ನಾನು ಕಂಡಿರಲಿಲ್ಲ. ಅದಕ್ಕಾಗಿ ನಾನು ನಗೆ ಬೀರಿದೆನು.

ಆಗ ಭಗವಾನರು ಹೀಗೆ ನುಡಿದರು: ಭಿಕ್ಷುಗಳೇ, ನಿಜಕ್ಕೂ ಮೊಗ್ಗಲ್ಲಾನ ಅಂತಹ ಶಕ್ತಿಯನ್ನು ಹೊಂದಿಹನು. ಅವುಗಳ ಸದ್ಭಳಕೆಯನ್ನು ಸಹಾ ಮಾಡಲು ಬಲ್ಲನು. ಭಿಕ್ಷುಗಳೇ, ಮೊಗ್ಗಲ್ಲಾನನಷ್ಟೇ ಅಲ್ಲ, ನಾನು ಸಹಾ ಆ ಪ್ರೇತವನ್ನು ಕಂಡಿರುವೆನು. ಬೋಧಿವೃಕ್ಷದ ವಜ್ರಾಸನದಲ್ಲಿರುವಾಗ, ಈ ಪ್ರೇತವೇ ಅಲ್ಲಿಗೂ ಬಂದಿತ್ತು. ಅಲೌಕಿಕ ವಿಷಯಗಳಲ್ಲಿ ಶ್ರದ್ಧೆಯಿಲ್ಲದವರಲ್ಲಿ ಹೇಳಿದರೆ ನಂಬುವುದಿಲ್ಲ ಎಂದು ಅರಿತು, ನಾನು ಯಾರಲ್ಲಿಯೂ ಹೇಳಿರಲಿಲ್ಲ. ಈಗ ಮೊಗ್ಗಲ್ಲಾನರು ನೋಡಿರುವುದರಿಂದಾಗಿ ನಾನು ಸಕಾಲವೆಂದು ನಾನು ನುಡಿಯುತ್ತಿರುವೆ.

ಆಗ ಭಿಕ್ಷುಗಳು ಆ ಪ್ರೇತದ ದುಃಸ್ಥಿತಿಗೆ ಕಾರಣ ವಿವರಿಸುವಂತೆ ಕೇಳಿಕೊಂಡರು. ಆಗ ಭಗವಾನರು ಆ ಪ್ರೇತದ ಪೂರ್ವಜನ್ಮದ ವೃತ್ತಾಂತ ತಿಳಿಸಿದರು. ಹಿಂದೆ ಕಸ್ಸಪ ಬುದ್ಧರ ಕಾಲದಲ್ಲಿ ಸುಮಂಗಲನೆಂಬ ಕೋಶಾಧ್ಯಕ್ಷನಿದ್ದನು. ಆತನು ಪರಮ ದಾನಿಯಾಗಿದ್ದನು. ಆತನು 20 ಉಸಭಗಳಷ್ಟು ವಿಶಾಲ ಸ್ಥಳದಲ್ಲಿ ಚಿನ್ನದ ಇಟ್ಟಿಗೆಗಳ ಮೌಲ್ಯದಷ್ಟು ಹಣ ಖಚರ್ು ಮಾಡಿ ವಿಹಾರದ ಭವ್ಯ ಆರಂಭಣೆ ಮಾಡಿಸಿ ಮಹತ್ ದಾನ ಮಾಡಿದನು. ಒಂದುದಿನ ಆತನು ಬುದ್ಧರಿಗೆ ಪೂಜಿಸಲೆಂದು ದಾರಿಯಲ್ಲಿ ಹೋಗುವಾಗ, ಕಳ್ಳನೊಬ್ಬನು ಕೆಸರಾದ ಪಾದಗಳಿಂದ ಹಾಗು ತಲೆಯ ಮೇಲೆ ಬಟ್ಟೆಯನ್ನು ಹೊದ್ದು ಅಡಗಿರುವುದನ್ನು ಕಂಡನು. ಆದರೆ ಆತನನ್ನು ಕಂಡು ಬೇಟೆಗಾರನೆಂದು ಭಾವಿಸಿದನು. ಆದರೆ ಕಳ್ಳನು ದ್ವೇಷಾಸೂಯೆಯಿಂದಾಗಿ ಕೋಶಾಧ್ಯಕ್ಷನ ಹೊಲವನ್ನು ಏಳುಬಾರಿ ಸುಟ್ಟುಹಾಕಿದನು. ಅಷ್ಟೇ ಅಲ್ಲ, ಕೋಶಾಧ್ಯಕ್ಷನ ದನಕರುಗಳ ಕಾಲುಗಳನ್ನು ಏಳುಬಾರಿ ಕತ್ತರಿಸಿದನು. ಅಷ್ಟಕ್ಕೂ ತೃಪ್ತನಾಗದೆ, ಕೋಶಾಧ್ಯಕ್ಷನು ಆನಂದಿಸುವುದು ಭಗವಾನರ ಗಂಧಕುಟೀರದಲ್ಲೇ ಎಂದು ತಿಳಿದು ಭಗವಾನರು ಇಲ್ಲದ ವೇಳೆ ಗಮನಿಸಿ ಅದನ್ನು ಸುಟ್ಟು ಹಾಕಿದನು. ಅಲ್ಲಿದ್ದ ಸಾಮಗ್ರಿಗಳನ್ನು ಒಡೆದು ಎಸೆದಿದ್ದನು. ಗಂಧ ಕುಟೀರವು ಸುಟ್ಟು ಭಸ್ಮವಾಗಿತ್ತು. ಈ ಕರ್ಮಫಲದಿಂದಾಗಿ ಆ ಕಳ್ಳನು ಸತ್ತು ಈ ರೀತಿ ಅಗ್ನಿಯ ಜ್ವಾಲೆಗಳಿಂದ ಆವೃತವಾದ ಪ್ರೇತವಾದನು. ಆ ಕೋಶಾಧ್ಯಕ್ಷನು ಆ ಕಳ್ಳನನ್ನು ಕ್ಷಮಿಸಿ, ಪುನ ಗಂಧಕುಟಿಯನ್ನು ನಿಮರ್ಿಸಿದನು. ಆ ಸಮಯದಲ್ಲಿ ಈ ಗಾಥೆಯನ್ನು ಭಗವಾನರು ನುಡಿದಿದ್ದರು.

ಮೂರ್ಖನು ಪಾಪ ಮಾಡುವಾಗ, ಅವುಗಳ ಭೀಕರ ಪರಿಣಾಮ ಅರಿಯುವುದಿಲ್ಲ, ಅಂತಹ ದುಮರ್ೇಧನು (ದಡ್ಡನು) ಬೆಂಕಿಯಿಂದ ಆಹುತಿಯಾಗುವವನ ರೀತಿ ಯಾತನೆಗೆ ಗುರಿಯಾಗುತ್ತಾನೆ. (ದ.ಪ. 136)

5.4.3ಸ್ವಾರ್ಥದ ಪರಿಣಾಮ

ಒಮ್ಮೆ ಪೂಜ್ಯ ಮೊಗ್ಗಲ್ಲಾನರವರು ಗಿಜ್ಝಕೂಟ ಪರ್ವತದ ಹತ್ತಿರ ನಡೆಯುತ್ತಿರುವಾಗ ಅವರು ದುಃಸ್ಥಿತಿಯಲ್ಲಿದ್ದಂತಹ ಪ್ರೇತವನ್ನು ನೋಡಿದರು. ಆ ಪ್ರೇತದ ಮುಖವು ಹಂದಿಯದ್ದಾಗಿದ್ದರೆ, ಶರೀರವು ಮನುಷ್ಯನಂತೆಯೇ ಇತ್ತು. ಈ ಪ್ರೇತವನ್ನು ನೋಡಿ ಮೊಗ್ಗಲ್ಲಾನರು ವಿಷಾದದ ನಗೆ ಬೀರಿದರು. ನಂತರ ವಿಹಾರಕ್ಕೆ ಮರಳಿದರು, ಭಗವಾನರ ಬಳಿಗೆ ಹೋಗಿ ಕಂಡಂತಹ ವಿಷಯವನ್ನು ನುಡಿದರು: ಭಗವಾನ್, ಈ ಪ್ರೇತದ ಬಾಯಿಯಲ್ಲಿ ಹುಳುಗಳ ಹಿಂಡು ಹರಿದಾಡುತ್ತಿತ್ತು.

ಓ ಮೊಗ್ಗಲ್ಲಾನ ನಾನು ಸಹಾ ಆ ಪ್ರೇತವನ್ನು ಸಮ್ಮಾಸಂಬೋಧಿ ಪ್ರಾಪ್ತಿಯ ಬಳಿಕ ಕಂಡಿದ್ದೆನು. ಆದರೆ ಜನರಿಗೆ ಇದರ ಬಗ್ಗೆ ನಂಬಿಕೆ ಉಂಟಾಗದೆ ನನ್ನನ್ನೇ ತಪ್ಪಾಗಿ ಭಾವಿಸುವ ಸಾಧ್ಯತೆ ಇದ್ದುದರಿಂದಾಗಿ ನಾನು ಈ ಹಿಂದೆ ಯಾರಿಗೂ ತಿಳಿಸಿರಲಿಲ್ಲ.

ಓ ಮೊಗ್ಗಲ್ಲಾನ, ಈ ಹಿಂದಿದ್ದ ಕಸ್ಸಪ ಬುದ್ಧರ ಕಾಲದಲ್ಲಿ ಈ ಪ್ರೇತವು ಕಸ್ಸಪ ಬುದ್ಧರ ಶಾಸನದಲ್ಲಿಯೇ ಭಿಕ್ಷುವಾಗಿದ್ದನು. ಆತನು ಒಂದುದಿನ ಇಬ್ಬರು ಭಿಕ್ಷುಗಳು ವಾಸಿಸುತ್ತಿದ್ದಂತಹ ವಿಹಾರದ ಒಂದು ಭಾಗಕ್ಕೆ ಬಂದನು. ನಂತರ ತಾನು ಸಹಾ ಅವರೊಂದಿಗೆ ವಾಸಿಸತೊಡಗಿದನು, ಈತನ ಪ್ರವಚನ ಶೈಲಿಯನ್ನು ಜನರು ಮೆಚ್ಚತೊಡಗಿದರು. ಆಗ ಆತನಿಗೆ ಸತ್ಕಾರ ಲಾಭಗಳು ಸಿಗುತ್ತಿತ್ತು. ಆಗ ಆತನಿಗೆ ಈ ಇಬ್ಬರು ಭಿಕ್ಷುಗಳು ಇಲ್ಲದಿದ್ದರೆ ತನಗೆ ಇನ್ನೂ ಹೆಚ್ಚು ಲಾಭವಾಗಬಹುದು ಎಂದೆನಿಸಿ, ಅವರಿಬ್ಬರ ನಡುವೆ ಇಲ್ಲಸಲ್ಲದ್ದನ್ನು ಹೇಳಿ ಜಗಳ ತಂದಿಟ್ಟನು. ಪರಿಣಾಮವಾಗಿ ಆ ಇಬ್ಬರು ಭಿಕ್ಷುಗಳು ಜಗಳವಾಡಿ ಆ ವಿಹಾರವನ್ನೇ ತೊರೆದುಬಿಟ್ಟು ಬೇರೆ ಬೇರೆ ಕಡೆ ಹೋಗಿಬಿಟ್ಟರು. 

ಈ ಪಾಪಕೃತ್ಯದ ಪರಿಣಾಮವಾಗಿ ಆತನು ಸತ್ತನಂತರ ಅವೀಚಿ ನರಕದಲ್ಲಿ ಪುನರ್ಜನ್ಮ ತಾಳಿದನು. ನಂತರ ಅಲ್ಲಿಯೂ ಸತ್ತು ಈ ಪ್ರೇತವಾದನು. ಆತನ ಕುಕರ್ಮದಿಂದಲೇ ಆತನಿಗೆ ಈ ವಿಕೃತರೂಪವಿದೆ. ಆದ್ದರಿಂದ ಭಿಕ್ಷುಗಳೇ, ಒಬ್ಬನು ಕಾಯಾ-ವಾಚಾ ಮತ್ತು ಮನಸಾ ಪರಿಶುದ್ಧತೆಯಿಂದಲೇ ಇರಬೇಕು ಎಂದು ನುಡಿದು ಈ  ಗಾಥೆಯನ್ನು ನುಡಿದರು.

ಮಾತಿನೆಡೆ ಸದಾ ರಕ್ಷಣೆಯಿರಲಿ, ಮನಸ್ಸಿನಲ್ಲೂ ಸುಸಂಯಮಿತನಾಗು,

ಕಾಯದಿಂದ ಯಾವುದೇ ಅಕುಶಲ ಕರ್ಮವನ್ನು ಮಾಡಿದಿರು,

ಈ ಮೂರು ರೀತಿಯ ಕಮ್ಮಗಳ ಮಾರ್ಗದಲ್ಲಿ ಪರಿಶುದ್ಧನಾಗು ಮತ್ತು

ಋಷಿಯು ತೋರಿಸಿರುವ ಮಾರ್ಗವನ್ನು ಗಳಿಸುವಂತಾಗು. (281)

5.4.4 ಬೆಂಕಿಯಿಂದ ಆವೃತವಾಗಿರುವ ಅಸ್ತಿಪಂಜರ ರೂಪದ ಪ್ರೇತಗಳು

ಒಮ್ಮೆ ಪೂಜ್ಯ ಮೊಗ್ಗಲ್ಲಾನರವರು ಗೃದ್ಧಕೂಟ ಪರ್ವತದಿಂದ ಪೂಜ್ಯ ಲಕ್ಖಣರ ಸಹಿತ ಇಳಿದು ಬರುತ್ತಿದ್ದರು. ಆಗ ಮೊಗ್ಗಲ್ಲಾನರು ಕೆಲವು ಪ್ರೇತಗಳನ್ನು ಕಂಡರು. ಜೇತವನ ವಿಹಾರಕ್ಕೆ ಹಿಂತಿರುಗಿದ ನಂತರ ಭಗವಾನರೊಂದಿಗೆ ಹೀಗೆ ಹೇಳಿದರು: ಭಗವಾನ್, ನಾನು ಇಂದು ಐದು ಪ್ರೇತಗಳನ್ನು ಕಂಡೆನು. ಆದರೆ ಅವುಗಳ ರೂಪವು ಅಸ್ತಿಪಂಜರದ್ದಾಗಿದ್ದು, ಕಾಷಾಯವಸ್ತ್ರ ಹೊಂದಿದ್ದ ಅವುಗಳ ಸುತ್ತಲೂ ಬೆಂಕಿಯ ಜ್ವಾಲೆಯು ಆವೃತವಾಗಿತ್ತು.

ಆಗ ಭಗವಾನರು ಅವರಿಗೆಲ್ಲಾ ಅದರ ಬಗ್ಗೆ ವಿವರಣೆ ನೀಡಿದರು. ಈ ಪ್ರೇತಗಳು ಕಸ್ಸಪ ಬುದ್ಧರ ಕಾಲದಲ್ಲಿ ಭಿಕ್ಷುಗಳಾಗಿದ್ದರು ಹಾಗು ಕಾಷಾಯವಸ್ತ್ರ ಧರಿಸಿಯೂ ಅಪಾರ ಪಾಪ ಮಾಡಿದ್ದರು. ಅದರ ಪರಿಣಾಮವಾಗಿ ಅವರು ನಿರಯದಲ್ಲಿ ಜನಿಸಿದರು. ನಂತರ ಹೀಗೆ ಈ ರೀತಿಯ ಪ್ರೇತಗಳಾಗಿಯೂ ಜ್ವಾಲೆಗಳ ದುಃಖ ಅನುಭವಿಸುತ್ತಿದ್ದಾರೆ ಎಂದು ಹೇಳಿ ಈ ಗಾಥೆಯನ್ನು ನುಡಿದರು.

ಬಹಳಷ್ಟು ಜನರು ಕಾಷಾಯವಸ್ತ್ರ ಧರಿಸಿಯು ಸಹಾ

ಪಾಪಧಮ್ಮದಲ್ಲಿ ತೊಡಗುತ್ತಾ ಅನಿಯಂತ್ರಿತರಾಗಿದ್ದಾರೆ,

ಪಾಪಕರ್ಮದಿಂದಾಗಿ ಈ ಪಾಪಿಗಳು 

ನಿರಯದಲ್ಲಿ ಹುಟ್ಟುವರು. (307)

5.4.5 ವರ್ತಮಾನದ ವೀಕ್ಷಣೆ

ಒಮ್ಮೆ ಮೊಗ್ಗಲಾನರು ತಮ್ಮ ದಿವ್ಯ ದೃಷ್ಟಿಯಲ್ಲಿ  ಪಸೇನದಿ ರಾಜರು ಲಿಚ್ಚವಿಗಳಿಂದ ಯುದ್ಧದಲ್ಲಿ ಸೋತುಹೋಗುತ್ತಿರುವುದು ಕಂಡರು. ಅದನ್ನು ಭಿಕ್ಖುಗಳಲ್ಲಿ ಹೇಳಿಕೊಂಡರು. ಅದರೆ ಪಸೇನದಿಯು ಪುನಃ ಸೈನ್ಯಗಳನ್ನು ಸೇರಿಸಿಕೊಂಡು ಪುನರಾಕ್ರಮಣ ಮಾಡಿ ಲಿಚ್ಚವಿಗಳನ್ನು ಗೆದ್ದನು .ಈ ವಿಷಯವನ್ನು ತಿಳಿದ ಕೆಲ ಭಿಕ್ಷುಗಳು ಮೊಗ್ಗಲಾನರಿಗೆ ಸುಳ್ಳು ಬಡಾಯಿ ಮಾಡಿದರೆಂದು ಆಪಾದಿಸಿದರು. ಅದರೆ ಸರ್ವವನ್ನು ಅರಿತ ಭಗವಾನರು ಸತ್ಯವನ್ನು ತಿಳಿಸಿ, ಮೊಗ್ಗಲಾನರು ಆಗಿನ ವರ್ತಮಾನವನ್ನಷ್ಟೆ ತಿಳಿಸಿದರು. ಅದು ಆಗ ಸತ್ಯವಾಗಿತ್ತು ಅದರೆ ನಂತರದಲ್ಲಿ ಪಸೇನದಿಯ ಪರಾಕ್ರಮದಿಂದ ಪರಿಣಾಮವು ಬದಲಾಯಿತು ಎಂದು ತಿಳಿಸಿದರು. (ವಿ.ಪಿ.ಪಾರಾಜಿಕ 4.95.17) 

5.4.6.ಸಪರ್ಾಕೃತಿಯ ಪ್ರೇತದ ಘಟನೆ

ಒಮ್ಮೆ ಮಹಾಮೊಗ್ಗಲಾನ ಮತ್ತು ಪೂಜ್ಯ ಲಕ್ಕಣ್ಣನವರು ಒಂದು ಸಾವಿರ ಜಟಾಧಾರಿ ಸನ್ಯಾಸಿಗಳ ಸಮೇತ ರಾಜಗೃಹದಲ್ಲಿ ಭಿಕ್ಷಾಟನೆಗೆ ಹೊರಟರು. ಪೂಜ್ಯ ಮೊಗ್ಗಲಾನರವರು ಸರ್ಪಪ್ರೇತವನ್ನು ನೋಡಿ ಮುಗುಳ್ನಗೆ ಬೀರಿದರು. ಇದರ ಬಗ್ಗೆ ಲಕ್ಕಣ್ಣನವರು ವಿಚಾರಿಸಿದಾಗ ಸಹೋದರ ಪ್ರಶ್ನೆ ಕೇಳಲು ಇದು ಸಕಾಲವಲ್ಲ. ಬುದ್ಧರ ಬಳಿ ಹೋಗುವವರೆಗೂ ಸುಮ್ಮನಿದ್ದು ನಂತರ ಕೇಳು ಎಂದರು ಮೊಗ್ಗಲಾನರವರು. ಹಾಗೆಯೇ ಬುದ್ಧರ ಬಳಿಗೆ ಬಂದು ನಮಸ್ಕರಿಸಿ ಕುಳಿತರು. ಆಗ ಲಕ್ಕಣ್ಣನವರು ಮುಗುಳ್ನಗೆಗೆ ಕಾರಣವನ್ನು ಕೇಳಿದಾಗ ಅದಕ್ಕೆ ಮೊಗ್ಗಲಾನರವರು ಈ ರೀತಿ ಉತ್ತರಿಸಿದರು: ಸೋದರ ನನ್ನ ನಗೆಯ ಕಾರಣವೇನೆಂದರೆ ನಾನು ಒಂದು ಸರ್ಪಪ್ರೇತವನ್ನು ಕಂಡೆನು. ಅದರ ತಲೆಯು ಮಾನವನಂತೆ ಇತ್ತು. ಆದರೆ ಮುಂಡವು ಸರ್ಪದಂತೆ ಇತ್ತು. ಅದು 25 ಯೋಜನ ಉದ್ದವಿತ್ತು. ಅದರ ತಲೆಯಿಂದ ಹೊರಟ ಜ್ವಾಲೆಗಳು ಅದರ ಬಾಲವನ್ನು ಮುಟ್ಟುತ್ತಿತ್ತು. ಅದರ ಬಾಲದಿಂದ ಹೊರಟ ಜ್ವಾಲೆಗಳು ಅದರ ತಲೆಯನ್ನು ಮುಟ್ಟುತ್ತಿತ್ತು. ಈ ರೀತಿ ಅದು ಜ್ವಾಲೆಯಿಂದ ಆವೃತವಾಗಿತ್ತು. ಅಲ್ಲಿಯೇ ಇನ್ನೊಂದು ಕಾಗೆಯ ಪ್ರೇತವಿತ್ತು. ಅದೂ ಸಹಾ ಅಷ್ಟೇ ಉದ್ದವಿತ್ತು.

ಕಾಗೆಯ ಆಕೃತಿಯ ಪ್ರೇತವನ್ನು ಮೊಗ್ಗಲಾನರವರು ಮಾತನಾಡಿಸಿ ಅದರ ಸ್ಥಿತಿ ಕಾರಣ ಕೇಳಿದಾಗ ಆ ಪ್ರೇತವು ಈ ರೀತಿ ಉತ್ತರಿಸಿತ್ತು:

ನಾನು ಹಿಂದಿನ ಜನ್ಮದಲ್ಲಿ ಪೂಜ್ಯರ ಆಹಾರವನ್ನು ಕದ್ದುತಿಂದು ಅವರನ್ನು ಉಪವಾಸಕ್ಕೆ ದೂಡಿದ ಫಲದಿಂದಾಗಿ ಸತ್ತು ಅವೀಚಿ ನರಕದಲ್ಲಿ ಹುಟ್ಟಿ ನಂತರ ಹೀಗೆ ಫಲವನ್ನು ಈಗ ಈ ರೀತಿ ಅನುಭವಿಸುತ್ತಿರುವೆ ಎಂದಿತು.

ಪ್ರೇತಸರ್ಪದ ಕತೆಯೂ ಹಾಗೆಯೇ ಇತ್ತು. ಅದು ಹಿಂದಿನ ಜನ್ಮದಲ್ಲಿ ಬನಾರಸ್ನ ವಾಸಿಯಾಗಿದ್ದನು. ಆತನು ವಾಸವಾಗಿರುವ ಕಡೆಯಲ್ಲೇ ಪಚ್ಚೇಕ ಬುದ್ಧರು ವಾಸವಾಗಿದ್ದರು. ಅವರನ್ನು ಕಾಣಲು ಜನರು ಈತನ ಹೊಲವನ್ನು ತುಳಿದು ಹಾದು ಹೋಗುತ್ತಿದ್ದರು. ಈ ರೈತನು ಇದನ್ನು ತಡೆಯಲು ಪ್ರಯತ್ನಿಸಿ ವಿಫಲನಾದನು. ಕೊನೆಗೆ ಆಕ್ರೋಶಗೊಂಡು ಅವರು ಆಹಾರವನ್ನು ಹುಡುಕುತ್ತಾ ನಗರಕ್ಕೆ ಹೋಗಿರುವಾಗ ಪಾತ್ರೆಗಳನ್ನು ಒಡೆದು ವಾಸಸ್ಥಳಕ್ಕೆ ಬೆಂಕಿಯಿಟ್ಟನು. ಆಗ ಜನಗಳಿಗೆ ಅತಿ ಕ್ರೋಧವುಂಟಾಗಿ ಆತನನ್ನು ಕೊಂದರು. ಮರಣದ ನಂತರ ಅವೀಚಿ ನರಕದಲ್ಲಿ ಹುಟ್ಟಿ ನಂತರ ಗೃದಕೂಟ ಪರ್ವತದಲ್ಲಿ ಪ್ರೇತಸರ್ಪವಾದನು. ಇದಕ್ಕಾಗಿಯೇ ನಾನು ನಗೆ ಬೀರಿದೆ ಎಂದು ಹೇಳಿದರು. 

ಆಗ ಭಗವಾನರು ಈ ರೀತಿ ಹೇಳಿದರು : ಭಿಕ್ಷುಗಳೇ, ಮೊಗ್ಗಲಾನರವರು ಹೇಳಿದ್ದು ನಿಜವಾಗಿದೆ. ನಾನು ಸಹಾ ಅದನ್ನು ಸಂಬೋಧಿಪ್ರಾಪ್ತಿಯ ನಂತರ ನೋಡಿರುವೆ, ಆದರೆ ಬಹುಜನ ಹಿತಕ್ಕಾಗಿ ನಾನು ಹೇಳಿಲ್ಲ. ಏಕೆಂದರೆ ನನ್ನ ಮಾತನ್ನು ನಂಬದವರಿಗೆ ಅದು ಲಾಭಕಾರಿಯಾಗಿಲ್ಲ.

ಆಗ ಭಗವಾನರು ಈ ಗಾಥೆಯನ್ನು ನುಡಿದರು : ಪಾಪಕಮ್ಮವು ತಕ್ಷಣ ಪಲನೀಡದು, ಹಾಲು ತಕ್ಷಣ ಹುಳಿಯಾಗದಂತೆ, ಬೂದಿಮುಚ್ಚಿದ ಕೆಂಡದಂತೆ, ಮೂರ್ಖನಿಗೆ ಮೆಲ್ಲನೆ ಉರಿಯುತ್ತ ಸುಡುವುದು.

5.4.7 ಹಿಂಸೆಯ ಪರಿಣಾಮ ಪ್ರೇತ

ಒಮ್ಮೆ ಪೂಜ್ಯ ಮಹಾ ಮೊಗ್ಗಲಾನರವರು ಗೃದ್ಧಕೂಟದ ಬಳಿ ಒಂದು ಪ್ರೇತವನ್ನು ಕಂಡರು. ಆ ಪ್ರೇತಕ್ಕೇ ಸುಮಾರು 60000 ಸುತ್ತಿಗೆಗಳಿಂದ ತಲೆಗೆ ಪೆಟ್ಟುಗಳು ಒಂದಾದ ಮೇಲೊಂದರಂತೆ ಸುತ್ತಿಗೆಗಳು ಬಂದು ಆಕ್ರಮಣ ಮಾಡುತ್ತಿದ್ದವು. ಆ ದೃಶ್ಯವು ಅತಿ ಭಯಂಕರವಾಗಿತ್ತು. ನಂತರ ಮೊಗ್ಗಲಾನರು ಅದರ ಬಗ್ಗೆ ಬುದ್ಧರಿಗೆ ವಿಚಾರಿಸಿದಾಗ ಭಗವಾನರು ಆ ಪ್ರೇತದ ಬಗ್ಗೆ ಹೀಗೆ ಹೇಳಿದರು. 

ಹಿಂದೆ ಸಮ್ಮಸಂಬುದ್ದರು ಇಲ್ಲದ ಕಾಲದಲ್ಲಿ ಸತ್ಥಿಕುಟ ಎಂಬುವವನು ಕಲ್ಲು ಎಸೆಯುವುದರಲ್ಲಿ ಕುಶಲಿಯಾಗಿದ್ದನು. ಒಮ್ಮೆ ಆತನು ತನ್ನ ಗುರುವಿನಲ್ಲಿ ತನ್ನ ಕೌಶಲ್ಯವನ್ನು ಪ್ರಯತ್ನಿಸುವೆ ಎಂದಾಗ ಆ ಗುರುವು ಆತನಿಗೆ ಹಸು ಅಥವಾ ಮನುಷ್ಯನಿಗೆ ಮಾತ್ರ ಕಲ್ಲಿನಿಂದ ಹೊಡೆಯಬೇಡ ಎಂದು ಎಚ್ಚರಿಕೆ ನೀಡಿದನು. ಅದರೆ ಆತನು ಆ ಹಿತವಚನವನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.

ಒಂದುದಿನ  ಸುನೆತ್ತ ಎಂಬ ಪಚ್ಚೇಕ ಬುದ್ಧರು ಆಹಾರಕ್ಕಾಗಿ ದಾರಿಯಲ್ಲಿ ಹೋಗುತ್ತಿದ್ದರು. ಆಗ ಆ ಮೂರ್ಖನು ಅವರನ್ನೇ ಗುರಿಯಾಗಿ ಆರಿಸಿದನು. ಏಕೆಂದರೆ ಅವರನ್ನು ಆತನು ಭಿಕ್ಷುಕನೆಂದು ಭಾವಿಸಿ, ಇವರನ್ನು ಹೊಡೆದರೆ ಅವರನ್ನು ಕೇಳಲು ಯಾವುದೇ ಬಂಧುವಾಗಲಿ, ಪೋಷಕರಾಗಲಿ ಮತ್ತು ಅವರು ಪ್ರಾಣಿಯೂ ಅಲ್ಲ ಎಂದು ಭಾವಿಸಿ ಕಲ್ಲನ್ನು ಅವರತ್ತ ಎಸೆದನು. ಆತನು ಎಸೆದ ಕಲ್ಲಿನ ವೇಗಕ್ಕೆ ಆ ಕಲ್ಲು ಪಚ್ಚೇಕ ಬುದ್ಧರ ಬಲಕಿವಿಯಿಂದ ತೂರಿ ಎಡಕಿವಿಯಲ್ಲಿ ಹೊರಗೆ ಬಂದಿತು. ಆ ನೋವಿನಿಂದ ಅವರು ಪರಿನಿಬ್ಬಾಣ ಪ್ರಾಪ್ತಿಮಾಡಿದರು.

ಆಗ ಜನರಿಗೆ ಸತ್ಥಿಕೂಟನ ಮೇಲೆ ಅಪಾರ ಕೋಪ ಉಂಟಾಗಿ ಆತನಿಗೆ ಹೊಡೆದು ಕೊಂದರು. ನಂತರ ಅವನು ಅವಿಚಿ ನರಕದಲ್ಲಿ ಹುಟ್ಟಿದನು. ನಂತರ ಅಲ್ಲಿಂದ ಮೃತನಾಗಿ ಗೃದ್ಧಕೂಟದ ಪರ್ವತದ ಬಳಿ ಪ್ರೇತವಾಗಿ ಹುಟ್ಟಿದನು. ಆ ಪ್ರೇತಕ್ಕೆ ನಿರಂತರ ಕೆಂಪಗೆ ಕಾದ 60000 ಸುತ್ತಿಗೆಯಿಂದ ಪೆಟ್ಟುಗಳು ಬೀಳುತ್ತಿದ್ದವು. 

ಹೀಗೆ ಭಗವಾನರು ಆ ಪ್ರೇತದ ಬಗ್ಗೆ ಹೇಳಿ ಮೂರ್ಖರಿಗೆ ಯಾವ ಜ್ಞಾನ, ವಿದ್ಯೆಯು ಫಲನೀಡದೆ, ಅವರನ್ನು ಬದಲಾಗಿ ಹಾನಿಯುಂಟುಮಾಡುತ್ತದೆ ಎಂದು ಹೇಳಿ ಮೇಲಿನ ಗಾಥೆ ನುಡಿದರು.

ಏನೆಲ್ಲ ಜ್ಞಾನವನ್ನು ಮೂರ್ಖನು ಗಳಿಸಿರುವನೋ, ಅದೆಲ್ಲಾ ಆತನ ಅನರ್ಥಕ್ಕಾಗಿಯೇ. ಅದು ಮೂರ್ಖನ ಪುಣ್ಯವನ್ನು, ತಲೆಯನ್ನು ಕತ್ತರಿಸಿ ಹಾಕುತ್ತದೆ. (72)

5.4.8 ಸುಜ್ಞಾನಿಗಳು ಸಮಚಿತ್ತತೆಯಿಂದಿರುತ್ತಾರೆ

ವೇರಂಜಾದ ಬ್ರಾಹ್ಮಣನ ಕೋರಿಕೆಯಂತೆ ಬುದ್ಧರು ವೇರಂಜಾದಲ್ಲಿ ತಂಗಿದ್ದರು. ಆದರೆ ಅವರು ಅಲ್ಲಿದ್ದಾಗ ಆ ಬ್ರಾಹ್ಮಣ ಅವರಿಗೆ ನೋಡಿಕೊಳ್ಳಲಿಲ್ಲ. ಅದೂ ಅಲ್ಲದೆ ವೇರಂಜ ಜನರು ಕ್ಷಾಮವನ್ನು ಎದುರಿಸುತ್ತಿದ್ದರು. ಆದ್ದರಿಂದ ಭಿಕ್ಷುಗಳಿಗೆ ಅತಿಅಲ್ಪವಾದ ಆಹಾರ ದೊರೆಯುತ್ತಿತ್ತು. ಪರಮಪೂಜ್ಯ ಮೊಗ್ಗಲಾನರವರು ತಮ್ಮ ಪವಾಡಶಕ್ತಿಯಿಂದ ಆಹಾರವನ್ನು ತಂದು ನೀಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಅಂದರೆ ಬುದ್ಧರು ಅದಕ್ಕೆ ಅನುಮತಿ ನೀಡಲಿಲ್ಲ. ಈ ಎಲ್ಲಾ ಕಷ್ಟಗಳಿದ್ದರೂ ಭಿಕ್ಷುಗಳು ಎದೆಗುಂದಲಿಲ್ಲ. ಅವರು ಸಿಕ್ಕಿರುವಷ್ಟರಲ್ಲಿ ಸಂತೃಪ್ತರಾಗಿ ಧ್ಯಾನಜೀವನ ನಡೆಸಿದರು. ಕುದುರೆಯ ವ್ಯಾಪಾರಿಗಳು ಆಗ ಅವರಿಗೆ ಅಲ್ಪಸ್ವಲ್ಪ ಧಾನ್ಯ ನೀಡುತ್ತಿದ್ದರು.

ವರ್ಷವಾಸವು ಮುಗಿಯಿತು. ಆಗ ಬುದ್ಧರು ಮತ್ತು ಇತರ ಭಿಕ್ಷುಗಳು ಜೇತವನಕ್ಕೆ ಹಿಂತಿರುಗಿದರು. ಶ್ರಾವಸ್ತಿಯ ಜನರಂತು ಆನಂದದಿಂದ ಬುದ್ಧರಿಗೆ ಮತ್ತು ಭಿಕ್ಷುಗಳಿಗೆ ಆಹಾರೋಪಚಾರವನ್ನು ಮಾಡಿದರು.

ಆ ಸಂದರ್ಭದಲ್ಲಿ ಭಿಕ್ಷುಗಳೊಡನೆ ವೇರಂಜಾದ ಕೆಲವು ಜನರು ಸಹಾ ವಿಹಾರದಲ್ಲಿ ಉಳಿದರು ಅವರಂತು ತಿಂದುತೇಗಿ ನಿದ್ದೆಹೋದರು. ನಂತರ ಎದ್ದ ಆ ಜನರು ನದಿಯ ದಂಡೆಗೆ ಹೋಗಿ ಈಜಾಡಿ, ಕೂಗಾಡುತ್ತಾ, ಕುಣಿದಾಡುತ್ತಾ, ಕುಸ್ತಿಯಾಡುತ್ತಾ, ಗದ್ದಲ ಎಬ್ಬಿಸುತ್ತಾ ಸಭ್ಯತೆ ಉಲ್ಲಂಘಿಸಿದರು.

ಈ ವಿಷಯ ಭಗವಾನರ ಬಳಿಗೆ ಬಂದಿತು. ಆಗ ಭಗವಾನರು ಹೀಗೆಂದರು: ಇದು ಅಜ್ಞಾನಿ ಜನಗಳ ಸ್ವಭಾವವಾಗಿದೆ. ಅವರು ದುಃಖದಲ್ಲಿ ಕುಗ್ಗುವರು ಮತ್ತು ಸುಖದಲ್ಲಿ ಹಿಗ್ಗುವರು. ಆದರೆ ಜ್ಞಾನಿಗಳು ಸುಖ-ದುಃಖಗಳಲ್ಲೂ ಸ್ಥಿರವಾಗಿರುವರು ಎಂದು ಹೇಳಿ ನಂತರ ಈ ಗಾಥೆಯನ್ನು ಹೇಳಿದರು. 

ಸತ್ಪುರುಷರು ಸರ್ವವನ್ನು ತ್ಯಾಗ ಮಾಡುತ್ತಾರೆ. ಸಂತರು ಕಾಮಭೋಗಗಳ ಮಾತುಗಳಲ್ಲಿ ತೊಡಗುವುದಿಲ್ಲ. ಪಂಡಿತರು ಸುಖ-ದುಃಖಗಳ ಸ್ಪರ್ಶಗಳಿಂದ ಸುಖವಾಗಲಿ, ದುಃಖವಾಗಲಿ ವ್ಯಕ್ತಪಡಿಸುವುದಿಲ್ಲ.

ಚೋರನಿಂದ ಜಾಗ್ರತೆ

   ಒಮ್ಮೆ ಮೊಗ್ಗಲಾನರು ರಾಜಗೃಹದ ಅರಣ್ಯದಲ್ಲಿನ ಕುಟೀರದಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲಿ ಕಳ್ಳನೊಬ್ಬನು ಹಳ್ಳಿಯಲ್ಲಿ ಕಳ್ಳತನ ಮಾಡಿ, ಕಾಡಿನಲ್ಲಿ ಬಂದನು. ಅಲ್ಲಿದ್ದಂತಹ ಕುಟೀರವನ್ನು ನೋಡಿ ಇಲ್ಲಿ ಮಲಗಿದ್ದರೆ ತಾನು ಕ್ಷೇಮವೆಂದು ಯೋಚಿಸಿ ಅಲ್ಲಿ ಕುಟೀರದ ಮುಂಭಾಗದಲ್ಲಿ ಎಲೆಗಳನ್ನು ಹಾಸಿಕೊಂಡು ಮಲಗಿದನು. ಮೊಗ್ಗಲಾನರಿಗೆ ವಿಷಯವೆಲ್ಲಾ ಅರಿವಾಗಿ ಆತನಿಗೆ ನೀನೂ ಇಲ್ಲಿ ಮಲಗಬೇಡವೆಂದು ಹೇಳಿ ಆತನನ್ನು ಅಲ್ಲಿಂದ ಓಡಿಸಿದರು.

5.5. ಸುಗತಿಗಳ ಪ್ರತ್ಯಕ್ಷದಶರ್ಿ 

ಅವರು ಕರ್ಮಗಳನ್ನು ಹಾಗೂ ಅವುಗಳ ಫಲಗಳನ್ನು ಸ್ಪಷ್ಟವಾಗಿ ವೀಕ್ಷಿಸಿದ್ದರು. ಹೇಗೆ ಮಾನವರು ತಮ್ಮ ಕಮ್ಮಾನುಸಾರ ಸುಗತಿಗಳನ್ನು ,ನಾನ ಹಂತಗಳ ಸ್ವರ್ಗಗಳನ್ನು ನೋಡಿ ಬೇಟಿ ನೀಡಿ ಸುಕರ್ಮದ ಫಲಗಳನ್ನು ಅರಿಯುತ್ತಿದ್ದರು. ಹಾಗೇಯೆ ಹೇಗೆ ಮಾನವರು ತಮ್ಮ ಕುಕರ್ಮದಿಂದಾಗಿ ಪ್ರೇತಲೋಕಗಳಲ್ಲಿ ಪ್ರಾಣಿಲೋಕದಲ್ಲಿ ಹಾಗೂ ನರಕಗಳಲ್ಲಿ ಹುಟ್ಟಿ ಹೇಗೆ ನರಳುತ್ತಾರೆ ಎಂಬುದನ್ನು ಸ್ವಯಂ ನೋಡಿ ಅದನ್ನು ಜನರಿಗೂ ತಿಳಿಸಿ ಅವರಿಗೂ ಎಚ್ಚರಿಸುತ್ತಿದ್ದರು. ಅವುಗಳ ಬಗೆಗೆ ತಿಪಿಟಕದಲ್ಲಿರುವ ಸುತ್ತಪಿಟಕದಲ್ಲಿರುವ ಖುದ್ದಕ ನಿಕಾಯದಲ್ಲಿನ ವಿಮಾನವತ್ತು ಹಾಗೂ ಪೇತ ವತ್ತುವಿನಲ್ಲಿ  ಹಾಗೂ ಸಂ.ನಿಕಾಯದ 19.1-21 ಹಾಗೂ ವಿನಯ ಪಿಟಿಕದ ಪರಾಜಿಕ4.9.15 ರಲ್ಲಿಯು ಹಾಗೂ ಧಮ್ಮಪದ ಅಟ್ಟಕಥೆ ಹಾಗೂ ಜಾತಕದಲ್ಲಿಯು ಸುದೀರ್ಘ ವಿವರಣೆಯಿದೆ .ಇಲ್ಲಿ ಕೆಲವು ಉದಾಹರಣೆ ನೀಡಲಾಗಿದೆ.

5.5.1 ನಂದಿಯನ ದಾನ ವೃತ್ತಾಂತ

ನಂದಿಯನು ಬನಾರಸ್ನ ಶ್ರೀಮಂತ ಪುತ್ರನಾಗಿದ್ದನು. ಆತನ ತಂದೆ-ತಾಯಿಗಳು ಸಹಾ ನಂದಿಯನ ತರಹ ಧಾಮರ್ಿಕರಾಗಿದ್ದರು. ಅವರು ತಮ್ಮ ಪುತ್ರನು ಸಹಾ ಅವರಂತೆ ಬುದ್ಧ, ಸಂಘಕ್ಕೆ ಸೇವಕನಾಗಿ, ಸಹಾಯಕನಾಗಿ, ಧಾಮರ್ಿಕನಾಗಿ ಜೀವಿಸಲಿ ಎಂದು ಬಯಸುತ್ತಿದ್ದರು. ಆತನ ತಂದೆ-ತಾಯಿಗಳು ಆತನಿಗಾಗಿ ತಮ್ಮ ಬಂಧುವೋರ್ವನ ಪುತ್ರಿ ರೇವತಿ ಎಂಬುವವಳ ಸಂಗಡ ವಿವಾಹ ಮಾಡಲು ಸಿದ್ಧರಾದಾಗ ನಂದಿಯ ಈ ವಿವಾಹಕ್ಕೆ ಒಪ್ಪಲಿಲ್ಲ. ಕಾರಣ ಆಕೆ ತ್ರಿರತ್ನದಲ್ಲಿ ನಂಬಿಕೆವುಳ್ಳವರಾಗಿರಲಿಲ್ಲ ಮತ್ತು ದಾನಾದಿ ಪುಣ್ಯಕಾರ್ಯಗಳನ್ನು ಮಾಡುತ್ತಿರಲಿಲ್ಲ. ಆಗ ನಂದಿಯನ ತಾಯಿಯು ರೇವತಿಗೆ ಮಗಳೇ, ಮನೆಯನ್ನು ಶುಭ್ರವಾಗಿಡು, ಭಿಕ್ಷುಗಳ ಸೇವೆ ಮಾಡು, ಸತ್ಕರಿಸು. ತ್ರಿಶರಣು, ದಾನ, ಶೀಲದಲ್ಲಿ ತಲ್ಲೀನಳಾಗು, ಆಗ ಮಾತ್ರ ನೀನು ನನ್ನ ಮಗನಿಗೆ ಒಪ್ಪಿಗೆಯಾಗುವೆ.

ಇದನ್ನು ಆಲಿಸಿದ ರೇವತಿ ಹಾಗೆಯೇ ನಡೆದುಕೊಂಡಳು. ಇದರಿಂದ ಸಂತುಷ್ಟನಾದ ನಂದಿಯ ಆಕೆಯೊಂದಿಗೆ ವಿವಾಹವಾದನು. ಕಾಲಾನಂತರ ಆತನ ತಂದೆ-ತಾಯಿಗಳು ಸ್ವರ್ಗಸ್ಥರಾದರು. ನಂದಿಯ ಮತ್ತು ರೇವತಿ ತಮ್ಮ ಎರಡು ಮಕ್ಕಳೊಂದಿಗೆ ಸುಖವಾಗಿದ್ದರು. ಮುಂದೆ ನಂದಿಯನು ಭಿಕ್ಷುಗಳಿಗೆ ದಾನ ಮಾಡುತ್ತಲೇ ಇದ್ದನು. ಆತನು ಧಮರ್ೊಪದೇಶ ಆಲಿಸಿ ಭಿಕ್ಷುಗಳಿಗಾಗಿ ದೊಡ್ಡ ವಿಹಾರವನ್ನು ಕಟ್ಟಿಸಿದನು. ಅದರಲ್ಲಿ ನೆಲೆಸಲು ಸ್ಥಳ, ಧ್ಯಾನಮಂದಿರ, ಸಭಾಂಗಣ ಎಲ್ಲವೂ ಇದ್ದವು. ಅಷ್ಟೇ ಅಲ್ಲದೆ ಭಿಕ್ಷುಗಳಿಗಾಗಿ ಸರ್ವ ಸೌಕರ್ಯದಿಂದ ಕೂಡಿತ್ತು. ಇವೆಲ್ಲಾ ನಿಮರ್ಾಣವಾದ ಮೇಲೆ ಆತನು ಬುದ್ಧರ ಬಳಿಗೆ ಬಂದು ಅವರಿಗೆ ಇಸಿಪಟ್ಟಣದ ಈ ವಿಹಾರ ದಾನಗೈಯ್ಯಲು ನಿರ್ಧರಿಸಿ ಕುಳಿತನು. ನಂತರ ಬುದ್ಧರ ಕೈಯಲ್ಲಿ ಸಾಂಕೇತಿಕವಾಗಿ ನೀರನ್ನು ಸುರಿದು ದಾನ ಮಾಡಿದನು. ಆ ನೀರು ಬುದ್ಧರ ಬಲಗೈಗೆ ಸೋಕಿದ ಕೂಡಲೇ ತಾವತಿಂಸ ಸುಗತಿ ಲೋಕದಲ್ಲಿ 12 ಯೋಜನ ಉದ್ದಗಲದ ಭವ್ಯ ಭವನವು ಸೃಷ್ಟಿಯಾಯಿತು. ಅದು ಹಲವು ನೂರು ಯೋಜನಗಳಷ್ಟು ಎತ್ತರವಾಗಿತ್ತು. ಏಳು ರೀತಿಯ ರತ್ನಗಳಿಂದ ಹಾಗು ಸತ್ಕರಿಸಲು ಅಪ್ಸರೆಯರಿಂದ ಕೂಡಿತ್ತು. 

ಅಲೌಕಿಕ ಸಿದ್ಧಿಗಳಲ್ಲಿ ಬುದ್ಧರ ನಂತರ ಎರಡನೆಯವರಾಗಿ ಅದ್ವಿತೀಯ ಸಾಮಥ್ರ್ಯ ಹೊಂದಿದ್ದ ಮೊಗ್ಗಲ್ಲಾನರು ಆಗಾಗ ಸುಗತಿ ಲೋಕಗಳಿಗೆ ಪ್ರಯಾಣ ಮಾಡುತ್ತಿದ್ದರು. ಈ ಭವ್ಯ ಭವನವನ್ನು ಕಂಡು ಮೊಗ್ಗಲ್ಲಾನರು ದೇವತೆಗಳಲ್ಲಿ ಈ ಭವನವು ಯಾರಿಗಾಗಿ? ಎಂದು ವಿಚಾರಿಸಿದಾಗ ಇದು ನಂದಿಯನು ಬುದ್ಧರಿಗೆ ಮತ್ತು ಸಂಘಕ್ಕೆ ದಾನಗೈದ ಫಲದ ಪ್ರತಿಫಲ ಎಂದು ತಿಳಿಯಿತು. ಮೊಗ್ಗಲ್ಲಾನರಿಗೆ ದಾನಾದಿ ಪುಣ್ಯಕರ್ಮಗಳ ಫಲಗಳು ಸತ್ತಮೇಲೆ ಸಿಗುವುದೆಂದು ತಿಳಿದಿತ್ತು. ಆದರೆ ಆತ ಬದುಕಿರುವಂತೆಯೇ ಆತನಿಗಾಗಿ ಭವ್ಯ ಭವನ ನಿಮರ್ಾಣವಾಗುವುದು ಅವರಿಗೆ ಆಶ್ಚರ್ಯವಾಯಿತು. ಸಂದೇಹ ಪರಿಹರಿಸಿಕೊಳ್ಳಲು ಬುದ್ಧರಲ್ಲಿಗೆ ಬಂದರು ಮತ್ತು ಪ್ರಶ್ನಿಸಿದರು. 

ಅದಕ್ಕೆ ಉತ್ತರವಾಗಿ ಭಗವಾನರು ಈ ರೀತಿ ಹೇಳಿದರು: ಓ ಮೊಗ್ಗಲ್ಲಾನ, ನಿನ್ನ ಕಣ್ಣಿಂದಲೇ ಸುಗತಿಯಲ್ಲೂ ಕಂಡು ಸಹಾ ನನಗೇಕೆ ಪ್ರಶ್ನಿಸುವೆ? ಚಿರಕಾಲ ಮನೆಯಿಂದ ದೂರವಿದ್ದು ಪುನಃ ಮನೆಗೆ ಹಿಂದಿರುಗಿ ಬಂದಾಗ ಬಂಧು-ಮಿತ್ರರು ಸ್ವಾಗತಿಸುವುದಿಲ್ಲವೇ? ಹಾಗೆಯೇ ಪುಣ್ಯಶಾಲಿಗೆ ಪುಣ್ಯವು ಪರಲೋಕದಲ್ಲಿ ಸ್ವಾಗತಿಸುತ್ತದೆ ಎಂದು ಹೇಳಿ  ಈ ಎರಡು ಗಾಥೆಗಳು ಹೇಳಿದರು

ಚಿರಕಾಲ ಮನೆಯಿಂದ ದೂರವಿದ್ದ ಪುರುಷನು

ದೂರದಿಂದ ಕ್ಷೇಮವಾಗಿ ಹಿಂತಿರುಗಿದಾಗ

ಆತನ ಮಿತ್ರರು ಶ್ರೇಯೋಭಿಲಾಷಿಗಳು, ಬಂಧುಗಳು

ಆತನ ಬರುವಿಕೆಗಾಗಿ ಅಭಿನಂದಿಸುತ್ತಾರೆ. (219)

ಹಾಗೆಯೇ ಪುಣ್ಯ ಮಾಡಿದವನಿಗೆ,

ಈ ಲೋಕ ತೊರೆದು ಪರಗತಿಗೆ ಹೊರಟಾಗ

ಪುಣ್ಯ ಕಾರ್ಯಗಳು ಬಂಧುಗಳಂತೆ ಪ್ರಿಯಬಾಂಧವರಂತೆ ಸ್ವಾಗತಿಸುತ್ತವೆ.  (220)

5.5.2ದೇವ ದೇವತೆಗಳಾಗುವುದು ಹೇಗೆ ?

ಒಮ್ಮೆ ಪರಮಪೂಜ್ಯ ಮಹಾ ಮೊಗ್ಗಾಲಾನರವರು ದೇವಲೋಕಕ್ಕೆ ಭೇಟಿಯಿತ್ತರು. ಅಲ್ಲಿ ಹಲವಾರು ದೇವ-ದೇವತೆಗಳು ಸುಖಪೂರ್ವಕವಾಗಿ ವೈಭೋಗಗಳಿಂದ ಕೂಡಿದ್ದರು. ಆಗ ಮೊಗ್ಗಲಾನರವರಿಗೆ ಇವರು ಯಾವ ಪುಣ್ಯಗಳಿಂದ ಹೀಗಾಗಿರುವರು ಎಂಬ ಜಿಜ್ಞಾಸೆ ಉಂಟಾಗಿ ಅವರೆಲ್ಲರಿಗೂ ಪ್ರತ್ಯೇಕವಾಗಿ ಪ್ರಶ್ನೆಯನ್ನು ಕೇಳಿದರು.

ನೀವು ಯಾವ ಪುಣ್ಯ ಕರ್ಮ ಮಾಡಿದ್ದರಿಂದಾಗಿ ದೇವ ಜನ್ಮ ತಾಳಿರುವಿರಿ?

ಆಗ ಅವರೆಲ್ಲರೂ ವಿವಿಧರೀತಿಯಲ್ಲಿ ಹೀಗೆ ಉತ್ತರಿಸಿದರು:

ನಾನು ಐಶ್ವರ್ಯವನ್ನು ದಾನ ಮಾಡಿದೆನು.

ನಾನು ಧಮ್ಮವನ್ನು ಸದಾ ಆಲಿಸುತ್ತಿದ್ದೆನು.

ನಾನು ಸದಾ ಸತ್ಯವನ್ನು ನುಡಿದೆನು.

ನಾನು ಕೋಪವನ್ನೇ ಮಾಡಿಕೊಳ್ಳಲಿಲ್ಲ.

ನಾನು ನನಗೆ ಹಿಂಸಿಸಿದವರ ಮೇಲೆ ದ್ವೇಷಿಸಲಿಲ್ಲ.

ನಾನು ಕಬ್ಬನ್ನು ಭಿಕ್ಷುಗಳಿಗೆ ದಾನ ಮಾಡಿದೆನು.

ನಾನು ಹಣ್ಣನ್ನು ಭಿಕ್ಷುಗಳಿಗೆ ದಾನ ಮಾಡಿದೆನು.

ನಾನು ತರಕಾರಿಯನ್ನು ಭಿಕ್ಷುಗಳಿಗೆ ದಾನ ಮಾಡಿದೆನು.

ಅಲ್ಲಿಂದ ಹಿಂತಿರುಗಿದ ಮಹಾ ಮೊಗ್ಗಲಾನರು ಭಗವಾನರಲ್ಲಿ ಇದು ಸಾಧ್ಯವೇ? ಎಂದು ಪ್ರಶ್ನಿಸಿದರು.

ಆಗ ಭಗವಾನರು ಓ ಮೊಗ್ಗಲಾನ, ನೀನೇ ಸ್ವತಃ ನೋಡಿ, ಕೇಳಿ ಸಂಶಯಪಡುವೆ ಏಕೆ? ಅಲ್ಪ ಪುಣ್ಯ ಕರ್ಮಗಳಿಂದಲೂ ಸಹಾ ದೈವತ್ವವನ್ನು ಪಡೆಯಬಹುದು ಎಂದು ಹೇಳಿ ಈ ಗಾಥೆಯನ್ನು ನುಡಿದರು:

ಸತ್ಯವನ್ನೇ ನುಡಿ, ಕೋಪಗೊಳ್ಳಬೇಡ ಮತ್ತು

ಯಾಚಿಸಿದವರಿಗೆ ಅಲ್ಪದಾನವನ್ನದರೂ ನೀಡು,

ಈ ಮೂರರಿಂದಲೇ ದೇವತೆಗಳ ಸಮೀಪ ಹೋಗಬಹುದು. (224)

5.5.3 ಗುಟ್ಟಿಲನ ಪ್ರಶ್ನೆಗಳು

  ಒಮ್ಮೆ ಭಗವಾನರು ರಾಜಗೃಹದಲ್ಲಿ ವಿಹರಿಸುತ್ತಿದ್ದರು. ಆ ಸಮಯದಲ್ಲಿ ಮೊಗ್ಗಲಾನರು ತಾವತಿಂಸ ದೇವಲೋಕಕ್ಕೆ  ಹೋಗಿದ್ದರು. ಆ ಲೋಕದಲ್ಲಿ ಒಂದೆಡೆ 36 ದೇವತೆಗಳ ಅರಮನೆಯು ಇತ್ತು .ಆ ದೇವತೆಗಳಿಗೆ ಸಹಸ್ರಾರು ಅಪ್ಸರೆಯರು ಸಹಾಯಕ್ಕಾಗಿ ಇದ್ದರು. ಅಲ್ಲಿಗೆ ಮೊಗ್ಗಲಾನರು ಹೋಗಿ ಆ ದೇವತೆಗಳ ವೈಭವ, ತೇಜಸ್ಸು, ಇತ್ಯಾದಿಗಳನ್ನು ಪ್ರಶಂಸಿಸುತ್ತಾ ಯಾವ ಕುಶಲ ಕಮ್ಮಗಳನ್ನು ಮಾಡಿದ್ದರಿಂದಾಗಿ ಅವರಿಗೆ ಈ ಬಗೆಯ ಭವ್ಯವಾದ ಸುಗತಿಯು ಸಿಕ್ಕಿತು ಎಂದು ಕೇಳಿದರು. ಆಗ ಅವರಲ್ಲಿ ಒಬ್ಬರು ಉಡುಗೆಗಳನ್ನು ನೀಡಿದೆ ಎಂದರು. ಹೀಗೆಯೇ  ಪ್ರತಿಯೊಬ್ಬರು ತಮ್ಮ ತಮ್ಮ ದಾನದ ವಿಧಗಳನ್ನು ನೀಡಿದ ವಸ್ತುಗಳನ್ನು ಹೇಳಿದರು. ಅದನೆಲ್ಲಾ ಆಲಿಸಿದಂತಹ ಮೊಗ್ಗಾಲಾನರು ನಂತರ ಭಗವಾನರ ಬಳಿಗೆ ಬಂದರು. ಹಾಗೂ ನಡೆದ ಘಟನೆಗಳೆಲ್ಲವನ್ನು ತಿಳಿಸಿದರು. ಆಗ ಭಗವಾನರು ಹೀಗೆ ಪ್ರತಿಕ್ರಿಯೆ ನೀಡಿದರು.:

ಮೊಗ್ಗಲಾನ ಈ ರೀತಿಯಲ್ಲಿ ದೇವತೆಗಳ ಬಳಿಗೆ ಹೋಗಿ ಈ ಬಗೆಯ ಪ್ರಶ್ನೆಗಳನ್ನು ಕೇಳಿರುವುದು ನೀನೆ ಮೊದಲಲ್ಲ. ಹಿಂದಿನ ಜನ್ಮವೊಂದರಲಿ ್ಲ ನನ್ನಿಂದಲೂ ಸಹಾ ಇದೇ ರೀತಿ ಪ್ರಶ್ನೆ ಕೇಳಲ್ಪಟ್ಟಾಗ ಅವರು ಇದೇ ರೀತಿ ಉತ್ತರವನ್ನು ನೀಡಿದ್ದರು. ಆಗ ಅವರು ತಮ್ಮ ಹಿಂದಿನ ಜನ್ಮದಲ್ಲಿ ಗುಟ್ಟಿಲನಾಗಿದ್ದಾಗ ನಡೆದ ಘಟನೆ ಹೇಳಿದರು. ಆ ಜನ್ಮದಲ್ಲಿ ಗುಟ್ಟಿಲನೆಂಬ ವೀಣಾವಾದಕದವರಾಗಿದ್ದರು. ಆಗ ದೇವದತ್ತನು ಆ ಜನ್ಮದಲ್ಲಿ ಅವರ ಶಿಷ್ಯನಾಗಿದ್ದನು. ಆತನು ಆ ಜನ್ಮದಲ್ಲಿ ವಿಧ್ಯೆ ಕಲಿಸಿದಂತಹ ಗುರುವಿಗೇ ಸವಾಲು ಮಾಡಿದನು. ಆಗ ಆ ಜನ್ಮದಲ್ಲಿ ಅವರಿಗೇ ಸಕ್ಕನು ಸಹಾಯ ಮಾಡಲು ಬರುತ್ತಾರೆ ಆಗ ಸಕ್ಕನು ಹೀಗೆ ನುಡಿಯುತ್ತಾನೆ:

ಏಳು ತಂತಿಗಳ ವಾಧ್ಯದಿಂದ ಮಧುರವಾಗಿ, ಎಲ್ಲರಿಗೂ ಒಪ್ಪುವ ರೀತಿ ನಾನೂ ಮೀಟುತ್ತಿರುತ್ತೇನೆ, ಅವುಗಳಿಂದ ಮಾಧುರ್ಯವನ್ನು ನುಡಿಸುತ್ತಿರುತ್ತೇನೆ. ಅಲ್ಲಿ ಮೂಸಿಲನು (ಹಿಂದಿನ ಜನ್ಮದ ದೇವದತ್ತನು) ಪಂದ್ಯಾಹ್ವಾನ ಮಾಡಿರುವನು. ಕೋಸಿಯಾ(ಸಕ್ಕ) ನನಗೆ ಶರಣು ನೀಡು

ಅದಕ್ಕೆ ಸಕ್ಕನು ಹೀಗೆ ಉತ್ತರಿಸುತ್ತಾನೆ. ನಾನು ಶರಣು ನೀಡುವೆನು. ನಾನೂ ಸಹಾ ಗುರುಗಳಿಗೆ ಗೌರವಿಸುವವನೇ , ನಿಮ್ಮ ಶಿಷ್ಯನು ನಿಮಗೆ ಜಯಿಸಲಾರನು. ಗುರುವೇ ನೀವೇ ಶಿಷ್ಯನನ್ನು ಜಯಿಸುವಿರಿ. ನಂತರ ಆ ಪಂದ್ಯದಲ್ಲಿ ಬೋಧಿಸತ್ವರೇ ಜಯಿಸುವರು.

  ಯಾವ ಸ್ತ್ರೀಯರನ್ನು ಮೊಗ್ಗಲಾನರು  ಅಥವಾ ಗುಟ್ಟಿಲ ಬೋಧಿಸತ್ವರು ನೋಡಿದ್ದರೋ  ಅವರು ಕಸ್ಸಪ ಬುದ್ದರ ಕಾಲದಲ್ಲಿದ್ದವರು. ಆ ಕಾಲದಲ್ಲಿ ದಾನ, ಶೀಲ, ಸಹನೆ ಇತ್ಯಾದಿಗಳನ್ನು ಪಾಲಿಸಿ ಈಗ ತಾವತಿಂಸ ದೇವತೆಗಳಾಗಿಹರು. ಈ ಬಗೆಯ ವೈಭವದಲ್ಲಿಹರು.

ಆಗ ಗುಟ್ಟಿಲರು ಆ ದೇವತೆಗಳನ್ನು ಹೀಗೆ ಪ್ರಶ್ನಿಸಿದರು.:ಓ ದೇವತಾ ನೀನು ಅತಿಶಯವಾದ ಸೌಂದರ್ಯವನ್ನು ಪಡೆದಿರುವೆ, ನಾಲ್ಕು ದಿಕ್ಕುಗಳಿಗೂ ಬೆಳಕನ್ನು ನೀಡುವಂತಹ ದಿವ್ಯ ತೇಜಸನ್ನು ಹೊಂದಿರುವೆ. ಯಾವುದರಿಂದಾಗಿ ಈ ದಿವ್ಯವಾದ ರೂಪವು ನಿನಗೆ ಸಿಕ್ಕಿತು, ಯಾವುದರಿಂದಾಗಿ ನೀನೂ ಇಲ್ಲಿ ಪ್ರಗತಿಯಲ್ಲಿರುವೇ ? ಓ ದೇವಿಯೇ ನೀನೂ ಮಾನವಳಾಗಿದ್ದಾಗ ಎಂತಹ ಕಮ್ಮವನ್ನು ಮಾಡಿದ್ದೆ ? ಯಾವುದರಿಂದಾಗಿ ಇಂತಹ ದಿವ್ಯಪ್ರಭೆಯಿಂದ ಕೂಡಿರುವೇ ?

ಯಾವಾಗ ಮೊಗ್ಗಲಾನರು ಈ ರೀತಿಯಲ್ಲಿ ಪ್ರಶ್ನಿಸಿದರೋ ಆಗ ದೇವತೆಯು ಆನಂದಿತಳಾಗಿ ಈ ರೀತಿಯಲ್ಲಿ ಉತ್ತರಿಸಿದಳು :ನಾನು ಅತ್ಯಂತ ಉತ್ಕೃಷ್ಟವಾದ ವಸ್ತ್ರಗಳನ್ನು ಸ್ತ್ರೀಪುರುಷರಿಗೆ ದಾನ ನೀಡಿದ್ದರಿಂದ ನಾನು ಇಂತಹ ದೇವ ರೂಪವನ್ನು ಪಡೆದೆನು ಹಾಗೂ ನನ್ನ ಸುತ್ತಲೂ ಸಹಸ್ರ ಅಪ್ಸರೆಯರು ಸುತ್ತುವರೆದಿದ್ದಾರೆ. ಅಷ್ಟೆ ಅಲ್ಲದೇ ನಾನು ಇಚ್ಚಿಸುವ ರೂಪವನ್ನು ಪಡೆಯುತ್ತೇನೆ. ಈ ಭವ್ಯವಾದ ವಿಮಾನವು ಅದರ ಫಲವೇ ನನ್ನ ದಿವ್ಯವಾದ ಪ್ರಭೆಯು ಸಹಾ ಅದರ ಫಲವೇ ಆಗಿದೆ. ನಂತರ ಅದೇ ರೀತಿಯಾಗಿ ಗುಟ್ಟಿಲರು  ಒಬ್ಬರಿಗೆ ಈ ಹಿಂದಿನ ರೀತಿಯಲ್ಲಿಯೇ ಪ್ರಶ್ನಿಸಿದಾಗ ಅವರು ಹೀಗೆ ಉತ್ತರಿಸಿದರು.

ನಾನೂ ಉತ್ಕೃಷ್ಟವಾದ ಹೂಗಳನ್ನು ನೀಡಿದೆ...

ನಾನೂ ಉತ್ಕೃಷ್ಟವಾದ ಸುಗಂಧದ್ರವ್ಯಗಳನ್ನು ನೀಡಿದೆ....

ನಾನೂ ಉತ್ಕೃಷ್ಟವಾದ ಹಣ್ಣುಗಳನ್ನು ನೀಡಿದೆನು....

ನಾನೂ ಉತ್ಕೃಷ್ಟವಾದ  ರುಚಿಕರವಾದ ಭಕ್ಷ್ಯಗಳನ್ನು ನೀಡಿದೆನು....

ನಾನೂ ಕೇವಲ 5 ಅಂಗುಲದಷ್ಟು ಉತ್ಕೃಷ್ಟವಾದ ಸುಗಂಧದ್ರವ್ಯವನ್ನು ಕಸ್ಸಪ ಥೇರರ ಸ್ಥೂಪಕ್ಕೆ ಭಕ್ತಿಯಿಂದ ಅಪರ್ಿಸಿದೆನು. ಇದರ ಫಲವಾಗಿ 5 ಬೆರಳುಗಳ ಚಿಹ್ನೆಯು ಆ ವಿಮಾನದಲ್ಲಿತ್ತು.

ನಾನೂ ಭಿಕ್ಖುಗಳಿಂದ ಧಮ್ಮವನ್ನು ಆಲಿಸಿ ಒಂದು ದಿನ ಉಪೋಸಥವನ್ನು(ಶೀಲಗಳ ಸಮೇತ ಉಪವಾಸ) ಆಚರಿಸಿದೆನು...

ನಾನೂ ಉತ್ಕೃಷ್ಟವಾದ ನೀರನ್ನು ಭಕ್ತಿಯಿಂದ ಬಿಕ್ಖುವಿಗೆ ನೀಡಿದೆನು...

ನಾನೂ ಅತ್ತೆ ಮಾವಂದಿರ ದುರಾವರ್ತನೆಯನ್ನು ಸಹನೆಯಿಂದ ಸಹಿಸಿದೆನು ಅವರ ಮೇಲೆ ದ್ವೇಷವನ್ನು ತಾಳಲಿಲ್ಲ...

ನಾನೂ ದಾಸಿಯಾಗಿದ್ದಾಗ ಕೋಪ ಪಡಲಿಲ್ಲ ಹಾಗೂ ಅಹಂಕಾರವನ್ನು ಪಡಲಿಲ್ಲ....

ನಾನೂ ಉತ್ಕೃಷ್ಟವಾದ ಹಾಲು ಅನ್ನವನ್ನು ಭಿಕ್ಖುವಿಗೆ ನೀಡಿದೆನು....

ಇದುವರೆಗೂ 25 ದೇವತೆಗಳಿಂದ ಸತ್ಯವು ಹೊರ ಬಂದಿತು. ನಂತರ ಗುಟ್ಟಿಲರು  ಇನ್ನಿತರ ವಿಮಾನಗಳಲ್ಲಿ ಅವರು ಮಾಡಿದ್ದಂತಹ ಸುಕಮ್ಮವನ್ನು ವಿಚಾರಿಸಿದಾಗ..ಅವರು ಹೀಗೆ ಹೇಳಿದರು..

ನಾನೂ ಉತ್ಕೃಷ್ಟವಾದ ಕಾಕಂಬಿಯನ್ನು ನೀಡಿದೆನು....

ನಾನೂ ಕಬ್ಬಿನ ತುಂಡನ್ನು ನೀಡಿದೆನು.

ನಾನು ತಿಂಬರು ಹಣ್ಣನ್ನು ನೀಡಿದೆನು.

ನಾನು ಸಿಹಿಯಾದ ಸೌತೆಕಾಯಿಯನ್ನು (ಕಕ್ಕಾರಿಕ)ನೀಡಿದೆನು

ನಾನೂ ಸೌತೆಕಾಯಿಯನ್ನು (ಎಲಾಲುಕ)ನೀಡಿದೆನು.

ನಾನು ಹಣ್ಣಿನ ಬಳ್ಳಿಯನ್ನು ನೀಡಿದೆನು.

ನಾನು ಫರುಸ್ಸಕ ಹೂವನ್ನು ನೀಡಿದೆನು.

ನಾನು ಅಗ್ನಿ ಪಾತ್ರೆಯನ್ನು ನೀಡಿದೆನು.

ನಾನು ಕೈತುಂಬಾ ಹಸಿರು ಹಣ್ಣನ್ನು ನೀಡಿದೆನು.

ನಾನು ಕೈತುಂಬಾ ಚಿಕ್ಕ ಹೂಗಳನ್ನು ನೀಡಿದೆನು.

ನಾನು ಕಮಲದ ಬೇರುಗಳನ್ನು  ನೀಡಿದೆನು.

ನಾನು ಕೈತುಂಬಾ ನಿಂಬೆ ಹಣ್ಣನ್ನು ನೀಡಿದೆನು.

ನಾನು ಮಾವಿನ ಸಾರನ್ನು ನೀಡಿದೆನು.

ನಾನು ಎಣ್ಣೆ ಬೀಜಗಳಿಂದಾದ ರೊಟ್ಟಿಯನ್ನು ನೀಡಿದೆನು.

ನಾನು ಮಣಿಪಟ್ಟಿಯನ್ನು ನೀಡಿದೆನು.

ನಾನು ಭುಜದ ಪಟ್ಟಿಯನ್ನು  ನೀಡಿದೆನು.

ನಾನು ಗಾಯದ ಪಟ್ಟಿಯನ್ನು ನೀಡಿ ಕಟ್ಟಿ ಸಹಾಯ ನೀಡಿದೆನು.

ನಾನು  ಬೀಸಣಿಗೆೆ ನೀಡಿದೆನು.

ನಾನು  ತಾಳೆ ಬೀಸಣಿಗೆೆ  ನೀಡಿದೆನು.

ನಾನು  ನವಿಲಿನ ಬೀಸಣಿಗೆೆ  ನೀಡಿದೆನು.

ನಾನು ಕೊಡೆಯನ್ನು  ನೀಡಿದೆನು.

ನಾನು ಚಪ್ಪಲಿಯನ್ನು ನೀಡಿದೆನು.

ನಾನು ರೊಟ್ಟಿಯನ್ನು  ನೀಡಿದೆನು.

ನಾನು  ಸಿಹಿತಿಂಡಿಯನ್ನು ನೀಡಿದೆನು.

ನಾನು  ಬಿಕ್ಖುವಿಗೆ ಸಿಹಿರೊಟ್ಟಿಯನ್ನು ನೀಡಿದೆನು. ಅದರ ಪರಿಣಾಮವೇ ನಾನು ಇಂತಹ ದೇವ ರೂಪವನ್ನು ಪಡೆದೆನು ಹಾಗೂ ನನ್ನ ಸುತ್ತಲೂ ಸಹಸ್ರ ಅಪ್ಸರೆಯರು ಸುತ್ತುವರೆದಿದ್ದಾರೆ. ಅಷ್ಟೆ ಅಲ್ಲದೇ ನಾನೂ ಇಚ್ಚಿಸುವ ರೂಪವನ್ನು ಪಡೆಯುತ್ತೇನೆ. ಈ ಭವ್ಯವಾದ ವಿಮಾನವು ಅದರ ಫಲವೇ ನನ್ನ ದಿವ್ಯವಾದ ಪ್ರಭೆಯು ಸಹಾ ಅದರ ಫಲವೇ ಆಗಿದೆ.ಈ ರೀತಿಯಾಗಿ ಅವರಿಂದ ಧಮ್ಮವನ್ನು ಆಲಿಸಿ ನಾನೂ ಪುಣ್ಯದಲ್ಲಿ ಅತಿಕುಶಲನಾದೆನು. ಅಂದಿನಿಂದ ನಾನೂ ಇನ್ನಷ್ಟು ದಾನ, ಸತ್ಯ, ಸಮಚಿತ್ತತೆ, ನಿಯಂತ್ರಣ, ದಮ ಇತ್ಯಾದಿಗಳ ವಿಕಾಸ ಮಾಡಿದೆನು. ಹೀಗಾಗಿ ನನಗೆ ದುಃಖ ಒದಗಲಿಲ್ಲ. ಎಂದು ಭಗವಾನರು ನುಡಿದರು.

5.5.4 ದೀಪ ದಾನದ ಫಲ

ಒಮ್ಮೆ ಶ್ರಾವಸ್ಥಿಯಲ್ಲಿ ಭಗವಾನರು ಇದ್ದಾಗ, ಒಂದು  ಉಪೋಸಥ ದಿನದಂದು  ಎಲ್ಲಡೆ ಸಂಭ್ರಮದ ವಾತಾವರಣವಿತ್ತು. ಎಲ್ಲರೂ ಅಷ್ಟಾಂಗ ಶೀಲದ ಆಚರಣೆಯಲ್ಲಿದ್ದರು. ಆಗ ಒಬ್ಬ ಸ್ತ್ರೀಗೆ ವಿಹಾರದಲ್ಲಿ ದೀಪಗಳನ್ನು ಬೆಳಗಬೇಕೆಂಬ ಇಚ್ಚೆಯುಂಟಾಯಿತು. ಅದರಂತೆ ಆಕೆಯು ಮನೆಗೆ ತೆರಳಿ ದೀಪಗಳನ್ನು ತಂದು ಅವನ್ನು ಹಚ್ಚಿ ವಿಹಾರವನ್ನು ಬೆಳಗಿದಳು. ಹಾಗೂ ಆನಂದಿತಳಾದಳು. ಹಾಗೂ ಕಾಲ ನಂತರ ಸಾವಿನ ನಂತರ ಆಕೆಯು ತಾವತಿಂಸ ದೇವಲೋಕದಲ್ಲಿ ಜನಿಸಿದಳು. ನಂತರ ಮೊಗ್ಗಲಾನರು  ಆಕೆಗೆ ದೇವಲೋಕದಲ್ಲಿ ಭೇಟಿಯಾದಾಗ ಆ ದೇವತೆಯು ಈ ವಿಷಯವನ್ನು ತಿಳಿಸಿದಳು, 

5.5.5 ಶೀಲವಂತೆಯ ವಿಮಾನ

ಆಗ ಭಗವಾನರು ಶ್ರಾವಸ್ತಿಯಲ್ಲಿ ವಿಹರಿಸುತ್ತಿದ್ದರು. ಆ ನಗರದಲ್ಲಿ ಶೀಲವತಿಯಾದ ಪತ್ನಿಯಿದ್ದಳು. ಆಕೆಯು ತನ್ನ ಪತಿಯೊಡನೆ, ಸೌಹಾರ್ದತೆಯಿಂದ , ಸಹನೆಯಿಂದ ಮತ್ತು ಪ್ರಜ್ಞೆಯಿಂದ ಒಡಗೂಡಿ ಜೀವಿಸುತ್ತಿದ್ದಳು. ಆಕೆಯು ಗದರುತ್ತಿರಲಿಲ್ಲ ಕನಿಷ್ಟ ಕೋಪವೂ ತಾಳುತ್ತಿರಲಿಲ್ಲ. ಆಕೆಯ ನುಡಿಗಳು ಸಭ್ಯವಾಗಿ, ಸತ್ಯವಾಗಿ, ನಂಬಿಕೆಯದ್ದಾಗಿರುತ್ತಿದ್ದವು,.ಆಕೆಯು ತನ್ನ ಸಾಮಥ್ಯರ್ಾನುಸಾರವಾಗಿ ದಾನವನ್ನು ಮಾಡುತ್ತಿದ್ದಳು. ಅದರೆ ಯಾವುದೋ ರೋಗಕ್ಕಿಡಾಗಿ ಆಕೆಯು ತೀರಿಹೋಗಿ ನಂತರ ತಾವತಿಂಸ ಲೋಕದಲ್ಲಿ ಉಗಮಿಸಿದಳು.

ಒಮ್ಮೆ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ಆಕೆಯ ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆಕೆಯ ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆಕೆಯು ತನ್ನ ಶೀಲವನ್ನು ಕುರಿತು ಹೀಗೆ ಹೇಳಿದಳು  ನಾನು ಮಾನವಳಾಗಿದ್ದಾಗ ಶೀಲವಂತ ಪತ್ನಿಯಾಗಿದ್ದೆನು, ಪರ ಪುರುಷರನ್ನು ಕುರಿತು ಯೋಚಿಸುತ್ತಿರಲಿಲ್ಲ, ಮಾತೆಯೊಬ್ಬಳು ಹೇಗೆ ತನ್ನ ಪುತ್ರನನ್ನು ಸಲಹುತ್ತಿದ್ದಳೋ ಹಾಗೆ ನಾನು ನನ್ನ ಗಂಡನನ್ನು ನೋಡಿಕೊಳ್ಳುತ್ತಿದ್ದೆನು, ಎಂದಿಗೂ ಕೋಪ ತಾಳುತ್ತಿರಲಿಲ್ಲ. ಸತ್ಯ, ದಾನ, ಸಹಾನುಭೂತಿ ಹಾಗೂ ಶ್ರದ್ಧೆಯಿಂದ ಕೂಡಿದ್ದೇನು. ಅವೆಲ್ಲರ ಪಲಿತಾಂಶವೇ ಈ ನನ್ನಯ ಸುಗತಿ ಎಂದಳು. 

5.5.6 ಕರಣಿಯ ವಿಮಾನ 

ಭಗವಾನರು ರಾಜಗೃಹದಲ್ಲಿದ್ದಾಗ ಒಬ್ಬ ಉಪಾಸಕನು ಅಚಿರಾವತಿ ನದಿಯಲ್ಲಿ ಸ್ನಾನ ಮಾಡಿ ಹಿಂತಿರುಗುತ್ತಿದ್ದನು. ಅಲ್ಲಿ ಆತನು ಭಗವಾನರನ್ನು  ಕಂಡು  ಅವರಿಗೆ ಔತಣಕ್ಕೆ ಕರೆದನು. ಅಲ್ಲಿ ಅವರಿಗೆ ಗೌರವಯುತವಾಗಿ ಆಹಾರ ದಾನ ನೀಡಿದನು. ನಂತರ ಆತನು ಕಾರಣಾಂತರಗಳಿಂದ ಮೃತನಾಗಿ ತಾವತಿಂಸ ದೇವದಲ್ಲಿ ಉಗಮಿಸಿದನು. 

ಒಮ್ಮೆ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ಆತನ ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆತನ  ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆತನು ತನ್ನ ದಾನವನ್ನು ಕುರಿತು ಹೇಳಿದನು.

5.5.7 ದ್ವಾರ ಪಾಲಕ ವಿಮಾನ 

ಒಮ್ಮೆ ಭಗವಾನರು ರಾಜಗೃಹದಲ್ಲಿದ್ದಾಗ ಒಬ್ಬ ಉಪಾಸಕನು ಸಂಘಕ್ಕೆ ಆಗಾಗ್ಗೆ ದಾನವನ್ನು ನೀಡುತ್ತಿದ್ದನು. ಅದರೆ ಆತನ ಮನೆಯು ನಗರದ ಹೊರಗಿತ್ತು .ಅದರೆ ಕಳ್ಳರ ಭಯದಿಂದ ಆತನು ಸದಾ ಮನೆಯ ಬಾಗಿಲನ್ನು ಮುಚ್ಚಿರುತ್ತಿದ್ದನು. ಹೀಗಾಗಿ ಕೆಲವೊಮ್ಮೆ ಭಿಕ್ಷುಗಳು ದಾನಕ್ಕಾಗಿ ಬಂದರು ಸಹಾ ಬಾಗಿಲನ್ನು ನೋಡಿಕೊಂಡು ಹಾಗೆ ಹಸಿವಿನಿಂದ ಹೋಗಿಬಿಡುತ್ತಿದ್ದರು. ಈ ವಿಷಯವನ್ನು ಹೆಂಡತಿಯಿಂದ ತಿಳಿದ ಆತನು ಭಿಕ್ಖುಗಳನ್ನು ಸ್ವಾಗತಿಸಲು ಒಬ್ಬ ದ್ವಾರಪಾಲಕನನ್ನು ನೇಮಿಸಿದನು. ನಂತರ ಬಿಕ್ಖುಗಳು ಆಹಾರವನ್ನು ಸೇವಿಸಿಯೇ ಹೋಗುತ್ತಿದ್ದರು.

ಅದರೆ ಕಾಲನಂತರ ಆ ಉಪಾಸಕನು ಹಾಗೂ ಆ ದ್ವಾರಪಾಲಕನು ಇಬ್ಬರು ತೀರಿಹೋದರು. ಉಪಾಸಕನು ಯಾಮಾ ದೇವಲೋಕದಲ್ಲಿ ಉಗಮಿಸಿದರೆ, ದ್ವಾರಪಾಲಕನು ತಾವತಿಂಸ ದೇವಲೋಕದಲ್ಲಿ ಉಗಮಿಸಿದರು. ಈ ವಿಷಯವನ್ನು ಮೊಗ್ಗಲಾನರು ಅವರಿಗೆ ಭೇಟಿ ಮಾಡಿದ ಬಳಿಕ ತಿಳಿಯುವುದು. ಹೀಗೆ ಈ ಪ್ರಸಂಗದಲ್ಲಿ ತಿಳಿಯುವುದು ಏನೆಂದರೆ ದಾನಿ ಮಾತ್ರವಲ್ಲದೆ, ಆತನ ಸಹಾಯಕರು ಸಹಾ ಮನಸ್ಸನ್ನು ಪ್ರಸನ್ನವಾಗಿಟ್ಟರೆ ಅವರಿಗೂ ಸಹಾ ಸುಗತಿಯು ಲಭಿಸುವುದು.

5.5.8 ಸೂಚಿ ವಿಮಾನ 

ಒಮ್ಮೆ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ದೇವನೊಬ್ಬನ  ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆತನ  ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆತನು ತನ್ನ ದಾನವನ್ನು ಕುರಿತು  ಹೀಗೆ ಹೇಳಿದನು.  ನಾನು ಪೂರ್ವಜನ್ಮದಲ್ಲಿದ್ದಾಗ ಕಮ್ಮಾರ ನಾಗಿದ್ದೆನು. ಒಮ್ಮೆ ನನ್ನ ಬಳಿಗೆ ಪೂಜ್ಯ ಸಾರಿಪುತ್ತರು ಬಂದು ಸೂಜಿಯನ್ನು ಕೇಳಿದರು. ನಾನೂ ಅವರಿಗೆ ಎರಡು ಸೂಜಿಗಳನ್ನು ಭಕ್ತಿಭಾವದಿಂದ ನೀಡಿದೆನು. ಅದರ ಫಲಿತಾಂಶವೇ ಈ ವೈಭವ ಎಂದನು.

5.5.9  ಸುವಣ್ಣವಿಮಾನ :

ಒಮ್ಮೆ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ದೇವನೊಬ್ಬನ  ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆತನ  ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆತನು ತನ್ನ ದಾನವನ್ನು ಕುರಿತು  ಹೀಗೆ ಹೇಳಿದನು.: ನಾನು ಪೂರ್ವಜನ್ಮದಲ್ಲಿ ಅಂದಕವಿಂದ ನಿವಾಸಿ ಯಾಗಿದ್ದೇನು ಅಲ್ಲಿ ಭಗವಾನರನ್ನು ಕಂಡು ಅವರಿಗೆ ಬೆಟ್ಟದ ಪಕ್ಕದಲ್ಲಿ ಸುವಾಸಿತವಾದ ಕುಟೀರವನ್ನು ನಿಮರ್ಿಸಿ ದಾನ ಮಾಡಿದೆನು. ಅದರ ಫಲಿತಾಂಶವೇ ಈ ವೈಭವ .

5.5.10 ಕಂಥಕ ವಿಮಾನ (ಸಿದ್ಧಾರ್ಥರ ಕುದುರೆ ಸೋತಪನ್ನವಾಗಿದ್ದು):

ಒಮ್ಮೆ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ದೇವನೊಬ್ಬನ  ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆತನ  ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆತನು ತನ್ನ ಕುರಿತು ಹೀಗೆ ಹೇಳಿದನು : ನಾನೂ ಪೂರ್ವಜನ್ಮದಲ್ಲಿ ಶಾಕ್ಯರ ವೈಭವದ ಕಪಿಲವಸ್ತುವಿನಲ್ಲಿ ಶುದ್ಧೊದನರ ಪುತ್ರರಾದ ಸಿದ್ಧಾರ್ಥ ಗೋತಮರಿಗೆ ಕುದರೆಯಾಗಿದ್ದೆನು. 

ಅವರು ತಮ್ಮ ಅಭಿನಿಷ್ಕ್ರಮಣ ದಿನದ ಮಧ್ಯರಾತ್ರಿಯಂದು ನನ್ನ ಬಳಿಗೆ ಬಂದು ನನ್ನ ಬೆನ್ನನ್ನು  ತನ್ನ ಜಾಲದ ರೇಖೆಗಳುಳ್ಳ ಕೈಗಳಿಂದ ತಟ್ಟಿ ಹೀಗೆ ನುಡಿದರು :ಸಹಿಸಿಕೊ ಮಿತ್ರನೇ ನಾನೂ ಅನುತ್ತರವಾದ ಸಂಯಕ್ ಸಂಬೋಧಿಯನ್ನು ಪಡೆಯಬೇಕಿದೆ. ಈ ಜಗದ ಜೀವಿಗಳಿಗೆಲ್ಲಾ ಸಹಾಯ ಮಾಡಬೇಕಿದೆ. ಅವರ ಮಧುರವಾದ ನುಡಿಗಳನ್ನು ಆಲಿಸಿ ನಾನೂ ಹೇಷಾರವವನ್ನು ಮಾಡಿದೆನು.

ನಂತರ ಅವರನ್ನು ಕುಳಿಸಿಕೊಂಡು ಸೂರ್ಯೋದಯಕ್ಕೆ ಮುಂಚೆಯೇ ಅವರ ಗಮ್ಯ ಸ್ಥಾನವನ್ನು ತಲುಪಿಸಿದೆನು. ಅದರೆ ನನ್ನ ಹಾಗೂ ಚನ್ನನ ಬಿಟ್ಟು ಹೋಗಲು ಅವರು ಸಿದ್ದರಾದರು. ನಾನೂ ಅವರ ಪಾದಗಳ ಉಗುರುಗಳನ್ನು ನೆಕ್ಕಿದೆನು. ಹಾಗೂ ಅಪಾರವಾಗಿ ಅತ್ತೆನು. ಏಕೆಂದರೆ ನಂತರ ಅವರನ್ನು ನಾನೂ ನೋಡಲಾರದೇ ಹೋಗುತ್ತೇನೆ. ನನ್ನಲ್ಲಿ ಉಂಟಾದ ಶೋಕವು ಯಾವ ಮಟ್ಟಕ್ಕೆ ಹೋಯಿತೆಂದರೆ ನಾನೂ ಕೂಡಲೇ ಅಸ್ತವ್ಯಸ್ತನಾದೆನು ಹಾಗೂ ಕುಸಿದೆನು ಹಾಗೇಯೇ ಮೃತನಾದೆನು.

ಹಾಗೇ ಸತ್ತು ಇಲ್ಲಿ ಈಗ ವೈಭವಯುತವಾಗಿ ಇಲ್ಲಿದ್ದೇನೆ. ತಮ್ಮಲ್ಲಿ ನನ್ನ ವಿನಂತಿ ಏನೆಂದರೆ ತಾವು ಭಗವಾನರ ಬಳಿಗೆ ಹೋದಾಗ ಅವರ ಪಾದಕ್ಕೆ ನನ್ನ ವಂದನೆ ಸಮಪರ್ಿಸುವುದು. ನಾನೂ ಸಹಾ ಅಸಮಾನರಾದ ಅವರನ್ನು ನೋಡಲು ಹೋಗುತ್ತೇನೆ.

 ಹಾಗೇಯೇ ಮುಂದೆ ಆ ದೇವಪುತ್ತರು ಭಗವಾನರನ್ನು ಬೇಟಿಯಾದಾಗ ಅವರ ರೂಪ ಹಾಗೂ ಅವರ ಧ್ವನಿಯನ್ನು ಆಲಿಸಿ ಆನಂದದಿಂದ ಕೂಡಿಹೋದನು. ನಂತರ ಅವರ ಬೋಧನೆಯನ್ನು ಆಲಿಸಿ ಆತನು ಸೋತಪನ್ನನಾಗಿ ಅಲ್ಲಿಂದ ಅದೃಷ್ಯನಾದನು.

5.5.11 ಅನೇಕವಣ್ಣ ವಿಮಾನ ;  

ಒಮ್ಮೆ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ದೇವನೊಬ್ಬನ  ವಿಭಿನ್ನ ವರ್ಣಗಳ ವಿಮಾನದ ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆತನ  ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆತನು ತನ್ನ ಕುರಿತು ಹೀಗೆ ಹೇಳಿದನು :  ನಾನು ಸುಮೇಧ ಬುದ್ಧರ ಕಾಲದವನು. ಆಗ ಭಿಕ್ಖುವಾಗಿದ್ದೆನು ಅದರೆ ಯಾವುಧೇ ಲೋಕೋತ್ತರ ಫಲಗಳನ್ನು ಗಳಿಸಿರಲಿಲ್ಲ. ನಾನೂ ಮಾಡಿದಂತಹ ಪುಣ್ಯ ಕಾರ್ಯ ಏನೆಂದರೆ ಅವರ ರತ್ನಮಯ ಸ್ತೂಪಕ್ಕೆ ನಾನು ಸದಾ ವಂದಿಸುತ್ತಿದ್ದೆನು ಇದರಿಂದಾಗಿ ನನಗೆ ಚಿತ್ತಶಾಂತಿ ದೊರೆಯುತ್ತಿತ್ತು. ಅದರ ಫಲಿತಾಂಶವೇ ಈಗಿನ ದೇವತ್ವ..

5.5.12  ಸುನಿಕ್ಖಿತ ವಿಮಾನ : 

ಒಮ್ಮೆ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ದೇವನೊಬ್ಬನ ವಿಮಾನದ ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆತನ  ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆತನು ತನ್ನ ಕುರಿತು ಹೀಗೆ ಹೇಳಿದನು :ನಾನು ಕಸ್ಸಪ ಭಗವಾನರ ಸ್ತೂಪಕ್ಕೆ ಹೂಗಳನ್ನು ಸಮಪರ್ಿಸುತ್ತಿದ್ದೆನು ಹಾಗೂ ಬೇರೆಯವರು ಸರಿಯಾಗಿ ಜೋಡಿಸಿರದ ಹೂಗಳನ್ನು ಸರಿಯಾಗಿ ಜೋಡಿಸಿದೆನು. ಆ ಸ್ತೂಪವನ್ನೇ ಧ್ಯಾನ ವಿಷಯವಾಗಿ ಮಾಡಿಕೊಂಡು ಧ್ಯಾನಿಸುತ್ತಿದ್ದೆನು. ಹಾಗೂ ಬುದ್ಧಾನುಸತಿಯಲ್ಲಿ ತೊಡಗುತ್ತಿದ್ದೆನು. ಇವೆಲ್ಲದರ ಫಲಿತಾಂಶವೇ ಈ ದೇವತ್ವ ಹಾಗೂ ಇವೆಲ್ಲಾ ವೈಭವ.

5.6 ದುರ್ಗತಿಗಳ ಪ್ರತ್ಯಕ್ಷದಶರ್ಿ     

5.6.1 ಸಾರಿಪುತ್ತರ ತಾಯಿಯ ದುಗ್ಗತಿ ಹಾಗೂ ಸುಗತಿ

ಕಾಶಿಯಲ್ಲಿ ಆಪಾರ ಸಿರಿವಂತನಾದ ಬ್ರಾಹ್ಮಣನಿದ್ದನು. ಆತನು ಆಪಾರ ದಾನಿಯಾಗಿದ್ದನು. ಆತನಿಗೆ ಭಿಕ್ಖುಗಳ ಬಗ್ಗೆ ಹಾಗೂ ಬಡವರ ಬಗ್ಗೆ ಅಪಾರ ಕಾಳಜಿಯಿತ್ತು. ಅತನು ಸರ್ವರಿಗೂ ದಾನ ಮಾಡುತ್ತಿದ್ದನು. ಹಾಗೇಯೇ ಆತನು ತನ್ನ ಪತ್ನಿಗೂ ದಾನ ಮಾಡುವಂತೆ ಪ್ರ್ರೋತ್ಸಾಹ ಮಾಡುತ್ತಿದ್ದನು. ಅದರೆ ಆಕೆಯು ಆತನ ಮುಂದೆ ದಾನ ಮಾಡುತ್ತಿದ್ದಳು ಅದರೆ ಆತನು ಇಲ್ಲದ ವೇಳೆ ಆಕೆ ಕಠೋರ ಭಾವನೆ ತಾಳುತ್ತಿದ್ದಳು. ಭಿಕ್ಖುಗಳಿಗೆ ಅಲ್ಪ ದಾನ ಮಾಡುತ್ತಿದ್ದಳು ಹಾಗೂ ಬಡವರ ಹಾಗೂ ಯಾತ್ರಿಕರ ಮೇಲೆ ಆಕೆ ಹೀಗೆ ಕೆಂಡ ಕಾರುತ್ತಿದ್ದಳು. ; ಸಗಣಿಯನ್ನು ತಿನ್ನಿ, ಮೂತ್ರವನ್ನು ಕುಡಿಯಿರಿ, ರಕ್ತವನ್ನು ಕುಡಿಯಿರಿ, ನಿಮ್ಮ ತಾಯಿಯ ಮೆದಳನ್ನು ತಿನ್ನಿ.. ಕಾಲನಂತರ ಆಕೆಯು ಮೃತ್ಯುವಶಳಾದಳು. ಮೃತ್ಯವಿನ ನಂತರ ಆಕೆಯು ಪ್ರೇತಿಯಾದಳು (ಸ್ತ್ರೀ ಪ್ರೇತ). 

ಹೀಗೆ ಪ್ರೇತ ಜನ್ಮತಾಳಿದ ಆಕೆಯು ಸದಾ ದುಃಖದಲ್ಲಿ ಸಿಲುಕಿದಳು. ಆಕೆಗೆ ಆಹಾರ ಸೇವಿಸಲು ಆಗುತ್ತಿರಲಿಲ್ಲ. ಒಂದು ದಿನ ಆಕೆಯು ಸಾರಿಪುತ್ತರಿಗೆ ನೋಡಿದಳು. ಆಗ ಆಕೆಗೆ ತಾನು ಹಿಂದಿನ ಒಂದು ಜನ್ಮದಲ್ಲಿ ತಾನು ಆತನಿಗೆ ತಾಯಿಯು ಆಗಿದ್ದೆ ಎಂದು ಆಕೆಗೆ ತಿಳಿಯಿತು. ಇದರಿಂದ ಆಕೆಯು ಸಾರಿಪುತ್ತರ ವಾಸ ಸ್ಥಳಕ್ಕೆ ಬಂದಳು. ಅದರೆ ಸಾರಿಪುತ್ತರ ವಾಸ ಸ್ಥಳವನ್ನು ಸದಾ ದೇವತೆಗಳು ಕಾಯುತ್ತಿದ್ದರು. ಹೀಗಾಗಿ ಅವರು ಆಕೆಯನ್ನು ತಡೆದರು. ಆಗ ದುಃಖಿತಳಾದ ಆಕೆಯು ಹೀಗೆ ಹೇಳಿದಳು ;ನಾನು 5 ಜನ್ಮಗಳ ಹಿಂದೆ ಸಾರಿಪುತ್ತರಿಗೆ ತಾಯಿಯಾಗಿದ್ದೆನು. ಎಂದಳು. ಆಗ ಅಕೆಗೆ  ಒಳ ಹೋಗಲು ಅಪ್ಪಣೆ ಸಿಕ್ಕಿತು. 

ಸಾರಿಪುತ್ತರಿಗೆ ಕಾಣುವಂತೆ ದೂರದಲ್ಲಿ ಆಕೆಯು ನಿಂತಳು. ಆಕೆಯ ದಯಾನಿಯಾ ಸ್ಥಿತಿಯನ್ನು ಕಂಡಂತಹ ಸಾರಿಪುತ್ತರು ದಯೆಯಿಂದ  ಆಕೆಗೆ ಹೀಗೆ ವಿಚಾರಿಸಿದರು. ;ನಗ್ನವಾಗಿರುವ, ಅತ್ಯಂತ ಕುರೂಪವಾಗಿರುವ, ತೆಳ್ಳಗೆ ದುರ್ಬಲವಾಗಿರುವ, ನರಗಳು ಹಾಗೂ ಪಕ್ಕೆಲಬುಗಳೆಲ್ಲಾ ಹೊರ ಬಂದಿರುವ ನೀನು ಯಾರು.?

ಆಗ ಆಕೆಯು ಹೀಗೆ ಉತ್ತರಿಸಿದಳು : ನಾನೂ ನಿಮ್ಮ ಹಿಂದಿನ ಜನ್ಮದ ತಾಯಿಯಾಗಿರುವೆನು. ಅದರೆ ಈಗ ನಾನೂ ಪ್ರೇತ ಲೋಕದಲ್ಲಿ ಜನಿಸಿ ಹಸಿವು ಹಾಗೂ ಬಾಯಾರಿಕೆಗಳಿಂದ ಕೂಡಿರುವೆನು.

ನನಗೆ ಸುಲಭವಾಗಿ ದೊರೆಯುವ ಆಹಾರಗಳೆಂದರೆ ಎಂಜಲು, ಗೊಣ್ಣೆ, ಕಫದ ದ್ರವ, ಸುಡುವ ಶವಗಳ ಕೊಬ್ಬು, ಗಭರ್ಿಣಿಯರಿಂದ ಸ್ರಾವವಾಗುವ ರಕ್ತ, ಗಾಯಗೊಂಡಿರುವವರ ರಕ್ತ, ಅಂಗಾಂಗಗಳು ಕತ್ತರಿಸಲ್ಪಟ್ಟವರ ರಕ್ತ, ಹೀಗಾಗಿ ನಾನು ಅರ್ಧ ಸತ್ತಂತೆ ಇರುವೆನು.  

ನಾನು ಮಾನವರ ಹಾಗೂ ಪ್ರಾಣಿಗಳ ರಕ್ತವನ್ನು ಸೇವಿಸುತ್ತ ಜೀವಿಸುತ್ತಿರುವೆನು. ನಾನು ಯಾವ ಶರಣುಯಿಲ್ಲದೆ, ಯಾವ ವಾಸ ಸ್ಥಳವೂ ಇಲ್ಲದೆ ಶವ ಸುಡುವ ಸ್ಥಳದಲ್ಲಿ ಮಲಗುತ್ತಿದ್ದೇನೆ.

ಹೀಗಾಗಿ ಮಗುವೇ ನನಗಾಗಿ ಆಹಾರವನ್ನು ದಾನ ಮಾಡು. ನೀನೂ ಹೀಗೆ ನನಗಾಗಿ ದಾನ ಮಾಡಿದರೆ ಅದು ನನಗೆ ಸಿಗುವುದು ಹಾಗೂ ನಾನು ಈ ರಕ್ತ ಹಾಗೂ ಕೀವು ಸೇವಿಸುವುದು ತಪ್ಪುವುದು. ಆಗ ಸಾರಿಪುತ್ತರು ಹಾಗೆ ಮಾಡುವೆನೆಂದು ವಚನ ನೀಡಿ ಸಮಾದಾನ ಪಡಿಸಿದರು.

ನಂತರ ಸಾರಿಪುತ್ತರು ಮೊಗ್ಗಲಾನರೊಡನೆ ಕೂಡಿ ರಾಜ ಬಿಂಬಸಾರನ ಬಳಿಗೆ ಬಂದು ವಿಷಯವನ್ನೆಲ್ಲಾ ತಿಳಿಸಿದರು. ಆಗ ಬಿಂಬಸಾರರು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದರು. ಆಗ ಸಾರಿಪುತ್ತರು ಬುದ್ಧಭಗವಾನರ ಸಮೇತ ಬಿಕ್ಖುಸಂಘಕ್ಕೇ ಆಹಾರ ,ವಸ್ತ್ರ, ಹಾಗೂ ವಸತಿಯನ್ನು ದಾನ ಮಾಡಿದರು ಹಾಗೂ ಆ ಪುಣ್ಯವನ್ನು ತಮ್ಮ ತಾಯಿಗೆ ವಗರ್ಾಯಿಸಿದರು.

   ನಂತರ ಆ ರಾತ್ರಿಯಂದು ಮೊಗ್ಗಲಾನರ ಬಳಿಗೆ ಅತ್ಯಂತ ಪ್ರಜ್ವಲಿಸುವ ತೇಜಸ್ಸಿನ ದೇವತೆಯೊಬ್ಬಳು ಪ್ರತ್ಯಕ್ಷಳಾದಳು .ಆಗ ಮೊಗ್ಗಲಾನರು ಆಕೆಗೆ ಯಾರೆಂದು ವಿಚಾರಿಸಿದರು.ಆಗ ಆಕೆಯು ಹೀಗೆ ಉತ್ತರಿಸಿದಳು.; ಪೂಜ್ಯರೇ ನನ್ನ ಪುತ್ರ ಸಾರಿಪುತ್ತ ನೀಡಿದ ಅನುತ್ತರವಾದ ದಾನದಿಂದ ನಾನೂ ದೇವಿಯಾಗಿರುವೆನು. ನಾನೂ ಈಗ ಸುಖಿಯಾಗಿರುವೆನು, ಯಾವ ದಿಕ್ಕಿನಿಂದಲೂ ನನಗೆ ಭಯವಿಲ್ಲ, ನನ್ನ ಪುತ್ರನಿಗೆ ವಿಷಯ ತಿಳಿಸಿ. ಪೂಜ್ಯರಾದ ದಯಾಮಯಿಯಾದ ತಮ್ಮ ಬಳಿಗೆ ಪೂಜಿಸಲು ಬಂದಿರುವೆನು. ಎಂದು ಹೇಳಿ ವಂದಿಸಿ ಹೊರಟು ಹೋದಳು.

5.6.2 ಕಣ್ಣಮುಂಡ ಪೇತಿಯ ವಿಶಾಧ ಕಥೆ

   ಒಮ್ಮೆ ಭಗವಾನರು ಶ್ರಾವಸ್ಥಿಯಲ್ಲಿದ್ದಾಗ ಮೊಗ್ಗಲಾನರು ಹಿಮಾಲಯದ ಕಡೆಗೆ ಆಕಾಶಯಾತ್ರೆಯಲ್ಲಿ ತೊಡಗಿರುವಾಗ ಹಿಮಾಲಯದ ಸಮೀಪದ ಕಣ್ಣಮುಂಡ ಸರೋವರದ ಬಳಿಯ ಮಹಲಿನಲ್ಲಿದ್ದಂತಹ ಸುಂದರವಾಗಿರುವ ಅದರೆ ದುಃಖದಿಂದ ಕೂಡಿದ್ದಂತಹ ಪೇತಿಯನ್ನು ಕಂಡರು. ಬಹುಷಃ ಈಕೆಯ ಜೀವನವು ಬೇರೆಯವರಿಗೆ ಪಾಠವಾಗಬಹುದೆಂಬ ಕಾರಣದಿಂದ ಆಕೆಗೆ ಮಾತಾನಾಡಿಸಿದರು. ಹಾಗೂ ಆಕೆಯ ಈಗಿನ ಅವಸ್ಥೆಗೆ ಕಾರಣ ಕೇಳಿದರು. ಆಗ ಆಕೆಯು ತನ್ನ ಜೀವನದ ಕುರಿತು ಹೀಗೇ ಹೇಳಿದಳು:

ನಾನು ಕಸ್ಸಪ ಬುದ್ಧರ ಕಾಲದವಳು. ಆಗ ಕಿಂಬಿಲವೆಂಬ ನಗರದಲ್ಲಿ ಧಾಮರ್ಿಕನೊಬ್ಬನ ಮಡದಿಯಾಗಿದ್ದೆನು.  ನನ್ನ ಪತಿಯು ಬೌದ್ಧೋಪಾಸಕನಾಗಿದ್ದನು. ಅಪಾರ ಪುಣ್ಯಕರ್ಮಗಳನ್ನು ಆತನು ಮಾಡುತ್ತಿದ್ದನು. ಆತನು ಸುಂದರವಾದ ಮರಗಳ ತೋಪುಗಳನ್ನು ನಿಮರ್ಾಣ ಮಾಡುತ್ತಿದ್ದನು. ಸೇತುವೆಗಳ ನಿಮರ್ಾಣ ,ರಸ್ತೆಗಳ ನಿಮರ್ಾಣ ಇತ್ಯಾದಿ ಪ್ರಜಾಹಿತಕಾರ್ಯಗಳಲ್ಲಿ ತೊಡಗುತ್ತಿದ್ದನು,. ಅತನಿಗೆ ಸಮಾನಮನಸ್ಕರಾದ ಸ್ನೇಹಿತರು ಇದ್ದರು ಅವರು ಸಹಾ ಅಂತಹುದೇ ಕಾರ್ಯದಲ್ಲಿ ತೊಡಗುತ್ತಿದ್ದರು. ಅವರ ಪತ್ನಿಯರು ನನ್ನ ಸ್ನೇಹಿತರಾಗಿದ್ದರು. ನಾವೂ ಸಹಾ ವಿಹಾರಗಳಿಗೆ ತೆರಳಿ ಸುಗಂಧಾದಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಒಮ್ಮೆ ಕೆಲವು ಧೂರ್ತರು ನಮ್ಮ ಶೀಲದಿಂದ ನಮ್ಮನ್ನು ಜಾರಿಸುವಂತಹ ಪಂದ್ಯವನ್ನು ಕಟ್ಟಿಕೊಂಡರು. ನಮ್ಮನ್ನು ಹೊಗಳಿ ಇತ್ಯಾದಿಗಳಿಂದ ಸೆಳೆಯಲು ಯತ್ನಿಸಿದರು. ಅವರಿಂದ ಅಕಷರ್ಿತಳಾಗಿ ನಾನು ಶೀಲವಂಚಿತಳಾದೆನು. ಹೀಗೆ ಅವರಲ್ಲಿ ಒಬ್ಬ ಪಂದ್ಯವನ್ನು ಗೆದ್ದನು. ಈ ವಿಷಯವು ಹೇಗೋ ನನ್ನ ಪತಿಗೆ ಗೊತ್ತಾಗಿ ನನ್ನ ಬಳಿ ಈ ಬಗ್ಗೆ ವಿಚಾರಿಸಿದನು.ಆಗ ನಾನು ಈ ರೀತಿಯ ಸಂಗತಿ ನನಗೆ ತಿಳಿಯದು ಎಂದೆನು ಆಗಲೂ ಸಂಶಯ ಪಡುತ್ತಿದ್ದಂಹ ನನ್ನ ಪತಿಗೆ ಹೀಗೆ ಹೇಳಿದೆನು;ನನ್ನಿಂದ ಏನಾದರೂ ಇಂತಹ ಕೃತ್ಯ ನಡೆದಿದ್ದರೆ ನಾನು ಪುನಃ ಹುಟ್ಟಿದಾಗ ಈ ಬಗೆಯ ಕರಿನಾಯಿಯು ನನ್ನನ್ನು ತಿನ್ನಲಿ ಎಂದು ಕರಿ ನಾಯಿಯನ್ನು ತೋರಿಸಿ ಹೇಳಿದೆನು.. ನಂತರ ನನ್ನ ಪತಿ ಹಾಗೂ ಗೆಳತಿಯ ಪತಿಯರು ನನ್ನ ಸ್ನೇಹಿತೆಯರನ್ನು ಈ ವಿಷಯದ ಕುರಿತು ಕೇಳಿದಾಗ ಅವರು ಸಹಾ ವಿಷಯ ಗೊತ್ತಿದ್ದರು ಸಹಾ ಅವರು ಹೀಗೆ ಉತ್ತರಿಸಿದರು.;ನಮಗೆನಾದರೂ ಈ ವಿಷಯ ಗೊತ್ತಿದ್ದರೇ ನಾವು ನಂತರದ ಜನ್ಮದಲ್ಲಿ ಈಕೆಯ ಗುಲಾಮರಾಗಲಿ.

    ಅದರೆ ನಮ್ಮ ನಿಧನದ ನಂತರ ಹಾಗೇ ಆಯಿತು. ನಾನೂ ಈ ಹಿಮಾಲಯದ ಪ್ರಾಂತ್ಯದ ಕಣ್ಣಮುಂಡ ಸರೋವರದ ಹತ್ತಿರದ ಮಹಲಿನಲ್ಲಿನ ಪೇತಿಯಾದೇನು. ನನ್ನ ಗೆಳತಿಯರು ನನ್ನ ಗುಲಾಮರಾದರು. ಹಾಗೂ ನಾವು ಮಾಡಿದ ಪುಣ್ಯದಿಂದ ನಾವು ಹಗಲು ಹೊತ್ತು ಸುಖವಾಗಿರುತ್ತಿದ್ದೆವು. ಅದರೆ ಪ್ರತಿರಾತ್ರಿ ನನ್ನನ್ನು ಕರಿನಾಯಿಯು ತಿಂದು ಬಿಡುತ್ತಿತ್ತು. ಪುನಃ  ಹಗಲಿನಲ್ಲಿ ಜೀವಂತಳಾಗುತ್ತಿದ್ದೆನು. ಇಧೇ ರೀತಿಯಲ್ಲಿ ಜೀವನ ಸಾಗುತ್ತಿತ್ತು. ಇಲ್ಲಿನ ಸರೋವರದ ಪಕ್ಕದ ಮಾವಿನ ಹಣ್ಣುಗಳು ಯವ್ವನ ಪ್ರಸಾದಿಸುವುದರಿಂದಾಗಿ ಒಮ್ಮೆ ರಾಜನು ಇಲ್ಲಿಗೆ ಬಂದನು,. ಆತನು ನನ್ನ ದೀನ ಅವಸ್ಥೆ ಗಮನಿಸಿ ಆ ನಾಯಿಯನ್ನು ತನ್ನ ಬಾಣದಿಂದ ಕೊಂದನು. ಅಂದಿನಿಂದ ನನಗೆ ರಾತ್ರಿಯಲ್ಲಿ ಈಗ ನಾಯಿಯಿಂದ ತಿನ್ನಲ್ಪಡುವ ಹಾಗಿಲ್ಲ. ನಂತರ ಕೆಲವು ಕಾಲ ನನ್ನ ಬಳಿ ವಾಸಿಸಿದ ರಾಜನು ಸಹಾ ಹೊರಟುಹೋದನು. ಅಂದಿನಿಂದ ಹೀಗೆ ಜೀವಿಸುತ್ತಿದ್ದೇನೆ. ಎಂದಳು. 

ನಂತರ ಮೊಗ್ಗಲಾನರು ಆಕೆಯ ಚರಿತೆಯನ್ನು ಭಗವಾನರಿಗೂ ತಿಳಿಸಿದರು.

5.6.3 ನಾಲ್ಕು ಪೇತಗಳ ಕಥೆ

ಒಮ್ಮೆ ಭಗವಾನರು ಶ್ರಾವಸ್ಥಿಯಲ್ಲಿದ್ದಾಗ,  ಮೊಗ್ಗಲಾನರು ವಿಂದ್ಯ ಪರ್ವತ ಶ್ರೇಣಿಯ ಪಕ್ಕದ ಕಾಡಿನಲ್ಲಿ ಸಂಚರಿಸುತ್ತಿದ್ದಾಗ ನಾಲ್ಕು ಪ್ರೇತಗಳನ್ನು ಕಂಡರು ಹಾಗೂ ಅವರ ಬಗ್ಗೆ ಹಾಗೂ ಅವರ ಕಮ್ಮಗಳ ಬಗ್ಗೆ ಕೇಳಿದರು. ಆಗ ಆ ನಾಲ್ಕು ಪ್ರೇತಗಳು ಒಬ್ಬ ದುಶ್ಶೀಲ ವ್ಯಾಪಾರಿ, ಆತನ ಪತ್ನಿ, ಆತನ ಮಗ ಹಾಗೂ ಆತನ ಸೊಸೆಯದು ಎಂದು ತಿಳಿಯಿತು.. ಆಗ ಮೊಗ್ಗಲಾನರು ಅವರ ಕಮ್ಮಗಳ ಬಗ್ಗೆ ಕೇಳಿದರು. ಆಗ ಅವರು ತಮ್ಮ ತಮ್ಮ ಕಮ್ಮಗಳ ಕುರಿತು ಹೀಗೇ ಹೇಳಿಕೊಂಡರು. 

ನಾನೂ ಕೆಟ್ಟ ವ್ಯಾಪಾರಿಯಾಗಿದ್ದೆನು ನಾನು ತಪ್ಪು ತಕ್ಕಡಿಗಳನ್ನು ಇಟ್ಟುಕೊಂಡು ಮೋಸ ಮಾಡುತ್ತಿದ್ದೆನು. ಆಹಾರದಲ್ಲಿ ಕಲಬೆರಕೆ ಮಾಡುತ್ತಿದ್ದೆನು. ಪರಿಣಾಮವಾಗಿ ಹುಳುಗಳಿರುವ ಕೊಳೆತ ವಾಸನೆಯ ಸಗಣಿಯನ್ನು ಸೇವಿಸುತ್ತಿದ್ದೇನೆ.

ನನ್ನ ಪುತ್ರನು ತನ್ನ ತಾಯಿಯನ್ನು ಗಾಯಗೊಳಿಸಿದನು. ನನ್ನ ಸೊಸೆಯು ಮಾಂಸವನ್ನು ತಿಂದು ಇಲ್ಲವೆಂದು ಸುಳ್ಳು ಹೇಳುತ್ತಿದ್ದಳು. ಹೀಗಾಗಿ ಆಕೆಯ ರಕ್ತವನ್ನು ಆಕೆಯೇ ಕುಡಿಯುವಳು. .ನನ್ನ ಪತ್ನಿಯು ನನ್ನ ವಸ್ತುಗಳನ್ನು ಅಡಗಿಸಿ ಅದರ ಕುರಿತು  ಏನಾದರೂ ಕೇಳಿದರೇ ಆಕೆ ಹೀಗೆ ಹೇಳುತ್ತಿದ್ದಳು. : ನಾನು ಏನಾದರೂ ನಿಮ್ಮ ವಸ್ತುಗಳನ್ನು ಅಡಗಿಸಿದ್ದರೇ ನನ್ನ ಆಹಾರವು ಸಗಣಿಯಾಗಲಿ.

 ಹೀಗಾಗಿ ಅಕೆಯು ಸೇವಿಸುವ  ಸಿಹಿ ವಾಸನೆಯ ಅನ್ನವೂ ಸಗಣಿಯಾಗುತ್ತದೆ. ಹೀಗೆ ಅವರಿಂದ ಕೇಳಿದ ಮೊಗ್ಗಲಾನರು ಅವರ ವಿಷಯವನ್ನು ಕುರಿತು ನಂತರ ಭಗವಾನರಿಗೆ ತಿಳಿಸಿದರು.

5.7 ದೇಹ ರೂಪಾಂತರದ ಇದ್ಧಿ

ಒಮ್ಮೆ ಶ್ರಾವಸ್ಥಿಯ ಜನರು ವಿಭಿನ್ನ ಧಮರ್ೀಯರಿಗೆ ಔತಣಕೂಟವನ್ನು ಏರ್ಪಡಿಸಿದರು. ಅದರಲ್ಲಿ ಅವರು ಮೊಗ್ಗಲಾನರವರನ್ನೇ ಮೊದಲಿಗರಾಗಿ ಆಯ್ಕೆ ಮಾಡಿದರು. ಈ ಔತಣಕೂಟವು ನದಿಯ ಎದುರಿನ ದೊಡ್ಡ ಚೌಕದಲ್ಲಿ ನಡೆಯಿತು.

ಅಲ್ಲಿಗೆ ಅನೇಕ ಪಂಗಡಗಳ ನಾಯಕರು ಬಂದಿದ್ದರು, ಅದರೆ ಅವರಲ್ಲಿ ತಾವೇ ಶ್ರೇಷ್ಟರೆಂಬ ಅಹಂಕಾರವೂ ಹಾಗೂ ಮಿಥ್ಯದೃಷ್ಟಿಯು ಇತ್ತು. ಅವರೆಲ್ಲಾ ಆ ಔತಣಕೂಟಕ್ಕೆ ಹೋಗಬೇಕಾದರೆ ನದಿಯನ್ನು ದಾಟಬೇಕಿತ್ತು. ಆಗ ದೂರದಲ್ಲಿ ಭಗವಾನರು ಭಿಕ್ಕೂಸಂಘದ ಸಮೇತ ಬರುತ್ತಿದ್ದರು. ಆಗ ಮೊಗ್ಗಲಾನರು ಭಗವಾನರಿಗೆ ಹಾಗೂ ಭಿಕ್ಖುಸಂಘಕ್ಕಾಗಿ ತಮ್ಮ ಶರೀರವನ್ನು ರತ್ನಗಳ ಬೃಹತ್ ಸೇತುವೆಯನ್ನಾಗಿಸಿದರು. ಈ ಸೇತುವೆಯಿಂದ ಅವರೆಲ್ಲಾ ದಾಟಲಿ ಎಂಬುದು ಅವರ ಇಚ್ಚೆಯಾಗಿತ್ತು. ಅದರೆ ತಕ್ಷಣ ಸೇತುವೆ ಪ್ರತ್ಯಕ್ಷವಾಗಿದ್ದಕ್ಕೆ ಪರಪಂಗಡಗಳ ನಾಯಕರು ಹಾಗೂ ಅವರ ಅನುಯಾಯಿಗಳೆಲ್ಲಾ ಸೇತುವೆ ಹತ್ತಿ ಒಡಲಾರಂಬಿಸಿದರು. ಅವರು   ಮಧ್ಯಭಾಗಕ್ಕೆ ಬಂದಾಗ ಸೇತುವೆಯು ಬಿದ್ದುಹೋಯಿತು. ತಕ್ಷಣ ಭಗವಾನರ ಮುಂದೆ ಸೇತುವೆ ಮತ್ತೊಮ್ಮೆ ಪ್ರತ್ಯಕ್ಷವಾಯಿತು. ಆಗ ಭಗವಾನರು ತಕ್ಷಣ ಪರಪಂಗಡಗಳ ಅವಸ್ತೆ ಗಮನಿಸಿ ಅವರು ಮುಳಗದಂತೆ ಸಂಕಲ್ಪಿಸಿದರು ಹಾಗೂ ತಮ್ಮ ಸಂಘದ ಹಿಂದೆ ಇರುವಂತೆ ಸಂಕಲ್ಪಿಸಿದರು. ಅದರಂತೆಯೇ ಅವರೆಲ್ಲಾ ಅವರ ಹಿಂದೆ ಕಾಣಿಸಿಕೊಂಡರು. ನಂತರ ಅವರೆಲ್ಲ ನದಿಯ ಆ ಕಡೆಯ ದಡ ತಲುಪಿದರು. ನಂತರ ಸೇತುವೆಯು ಅದೃಷ್ಯವಾಯಿತು. ಹಾಗೇಯೇ ಪರ ಫಂಗಡದವರಿಗೆ ಬುದ್ಧಭಗವಾನರ ಮಹೊನ್ನತೆ ಅರಿವಾಯಿತು. ಅವರಿಗೆ ತಮ್ಮ ಸೀಮಿತತೆಯ ಅರಿವು ಉಂಟಾಯಿತು.

5.8 ಮೊಗ್ಗಲಾನರಿಗೆ ನೀಡಿದ ದಾನಗಳ ಫಲ

5.8.1 ಸತ್ಕಾರದ ಫಲ:

ಮೊಗ್ಗಲಾನರು ಬುದ್ಧಭಗವಾನರ ಅಗ್ರ ಶ್ರಾವಕರು ಹೀಗಾಗಿ ಅವರಿಗೆ ನೀಡಿದ ದಾನಫಲವೂ ಸಮಾನ್ಯವಾದುದಲ್ಲ. ಅದರ ಕುರಿತು ದೇವೆಂದ್ರ ಸಕ್ಕನೇ ಹೀಗೆ ಹೇಳಿದ್ದಾನೆ.: ತಥಾಗತರಿಗೆ ಆಗಲಿ ಅಥವಾ ಅವರ ಅಗ್ರಶಿಷ್ಯರಿಗೇ ಆಗಲಿ ನೀಡುವ ಭಕ್ತಿಯುತ ದಾನ  ಸಾಧಾರಣವಾದುದಲ್ಲ. ಅದರ ಕುರಿತ ವಿವರಣೆ ಹೀಗಿದೆ.

ಒಮ್ಮೆ ಒಬ್ಬ ಶ್ರದ್ಧಾಯುತ ಹೆಣ್ಣು ಮೊಗ್ಗಲಾನರಿಗೆ ಮನೆಗೆ ಸ್ವಾಗತಿಸಿ ಪೀಠವನ್ನು ನೀಡಿ ಭಕ್ತಿಯಿಂದ ದಾನವನ್ನು ನೀಡಿದಳು ಹಾಗೂ ತುಂಬಾ ಆನಂದ ಪಟ್ಟಳು. ಇದಾದ ಕೆಲವು ದಿನಗಳ ನಂತರ ಆಕೆಯು ಕಾಯಿಲೆಯಿಂದ ಸಾವಿಗೇ ಈಡಾದಳು. ಅದರೆ ಆ ದಾನದ ಫಲದಿಂದ ಆಕೆಯು ತಾವತಿಂಸ ಸುಗತಿಯಲ್ಲಿ ಉಗಮಿಸಿದಳು.

5.8.2 ದಾನದ ಫಲಿತಾಂಶ : 

  ಭಗವಾನರು ರಾಜಗೃಹದ ವೇಳುವನದಲ್ಲಿ ನೆಲೆಸಿದ್ದಾಗ ರಾಜಗೃಹದಲ್ಲಿ ಸುಗೃಹಸ್ಥ ಕುಟುಂಬವೊಂದಿತ್ತು. ಆ ಮನೆಯಲ್ಲಿ ಪ್ರತಿಯೊಬ್ಬರು ಸಹಾ ದಾನದಲ್ಲಿ ಆನಂದಿಸುತ್ತಿದ್ದರು. ಆ ಮನೆಯ ಹುಡುಗಿಯು ಸಹಾ ದಾನದಲ್ಲಿ ಅತಿಯಾಗಿ ಆನಂದಿಸುತ್ತಿದ್ದಳು. ಆಕೆಯು ದಾನ ನೀಡದೇ ಆಹಾರವನ್ನೇ ಸೇವಿಸುತ್ತಿರಲಿಲ್ಲ. ಆಕೆಯು ಸದಾ ತನ್ನ ಭಾಗದ ಆಹಾರದಲ್ಲಿ ಅರ್ಧ ಭಾಗವನ್ನು ಇಟ್ಟೆ ನಂತರ ಊಟ ಮಾಡುತ್ತಿದ್ದಳು. ಇದನ್ನು ಕಂಡ ಆಕೆಯ ತಾಯಿಯು ಆಕೆಗೆ ದುಪ್ಪಟ್ಟು ಆಹಾರ ನೀಡಿದರೆ ಆ ಹುಡುಗಿಯು ಅದರಲ್ಲೂ ಸಹಾ ಭಾಗವನ್ನು ಮಾಡಿ ಅದನ್ನು ಹಂಚಿ ನಂತರ ಆಹಾರವನ್ನು ಸೇವಿಸುತ್ತಿದ್ದಳು.

ಕಾಲವು ಕಳೆದಂತೆ ಆಕೆಯು ಯುವತಿಯಾದಳು. ಅದರೆ ಆಕೆಗೆ ಮಿಥ್ಯದೃಷ್ಟಿಯುಳ್ಳವರ ಮನೆಯಲ್ಲಿ ವಿವಾಹ ಮಾಡಲಾಯಿತು. ಹೀಗಾಗಿ ಅವರೆಲ್ಲ ದಾನಕ್ಕೆ ಮಹತ್ವವೇ ನೀಡಿರಲಿಲ್ಲ.

ಒಮ್ಮೆ ಮಹಾಮೊಗ್ಗಲಾನರು ಆಹಾರಕ್ಕಾಗಿ ತಿರುಗಾಡುತ್ತಿರಬೇಕಾದರೇ ಆ ಯುವತಿಯು ಮೊಗ್ಗಲಾನರನ್ನು ಕಂಡು ಅವರನ್ನು ಮನೆಗೆ ಆಹ್ವಾನಿಸಿ ತನ್ನ ಅತ್ತೆಯು  ಪಕ್ಕದಲ್ಲಿಟ್ಟಿದ್ದಂಹ ಸಿಹಿರೊಟ್ಟಿಯನ್ನು ದಾನವಾಗಿ ನೀಡಿದಳು. ಇದನ್ನು ಕಂಡ ಆ ಅತ್ತೆಗೆ ಅತಿಯಾದ ಕೋಪವು ಉಂಟಾಯಿತು. ಆಕೆಯು ಬಯ್ಯುತ್ತಾ ಒನಕೆಯಿಂದ ಆ ಯುವತಿಯ ಭುಜಕ್ಕೆ ಹೊಡೆದಳು. ಅದರೆ ಆ ಯುವತಿಯು ಅತ್ಯಂತ ಕೋಮಲೆಯಾಗಿದ್ದರಿಂದ ಆಕೆಯು ನೋವು ಸಹಿಸಲಾರದೆ ಸ್ಥಳದಲ್ಲಿಯೇ ಮೃತಪಟ್ಟಳು ಅದರೆ ದಾನ ನೀಡಿದ್ದರಿಂದಾಗಿ ಆಕೆಯು ತಾವತಿಂಸ ದೇವಲೋಕದಲ್ಲಿ ಜನಿಸಿದಳು.

  ಒಮ್ಮೆ ಮೊಗ್ಗಲಾನರು ದೇವಯಾನದಲ್ಲಿ ತೊಡಗಿದ್ದಾಗ ಅವರು ತೇಜಸ್ವಿಯಾಗಿದ್ದ ದೇವಿಯನ್ನು ಕಂಡು ಆಕೆಯ ವೈಭವಕ್ಕೆ ಕಾರಣ ಕೇಳಿದಾಗ ಆಕೆಯು ತಾನು ಹಿಂದಿನ ಜನ್ಮದಲ್ಲಿ ಏನಾಗಿದ್ದೇನೆ ಎಂಬುದನ್ನು ತಿಳಿಸಿ ಆಕೆಯು ಅವರಿಗೆ ನೀಡಿದ್ದ ದಾನವೇ ಕಾರಣವೆಂದು ತಿಳಿಸಿದಳು. 

5.8.3 ಮಲ್ಲಿಗೆಯ ಪೂಜೆ : 

ಆ ಸಮಯದಲ್ಲಿ ಭಗವಾನರು ರಾಜಗೃಹದಲ್ಲಿ ವಾಸಿಸುತ್ತ್ತಿದ್ದರು.ಆ ರಾಜಗೃಹದಲ್ಲಿ ಮೊಗ್ಗಲಾನರ ಮೇಲೆ ಅಪಾರವಾದ ಶ್ರದ್ಧೆಯನ್ನು ಹೊಂದಿದ್ದಂತಹ ಗೃಹಸ್ಥನಿದ್ದನು. ಆತನಿಗೆ ಹಲವಾರು ಹೆಣ್ಣುಮಕ್ಕಳಿದ್ದರು . ಅವರಲ್ಲಿ ಒಬ್ಬ ಹುಡುಗಿಯು ಸಹಾ ಅದೇ ಬಗೆಯ ಶ್ರದ್ಧೆಯನ್ನು ಹೊಂದಿದ್ದಳು.ಒಮ್ಮೆ ಮೊಗ್ಗಲಾನರು ದಾರಿಯಲ್ಲಿ ಹೋಗುತ್ತಿರಬೇಕಾದರೆ ಆಕೆಯು ಮೊಗ್ಗಲಾನರನ್ನು ಮನೆಗೆ ಆಹ್ವಾನಿಸಿದಳು .ಅವರಿಗೆ ಪೀಠವನ್ನು ಹಾಕಿ ಮಲ್ಲಿಗೆಯ ಹೂಹಾರದಿಂದ ಪೂಜಿಸಿದಳು. ಹಾಗೂ ಮೊಗ್ಗಲಾನರ ಪಿಂಡಪಾತ್ರೆಗೆ ಜೇನುಬೆಲ್ಲವನ್ನು ಹಾಕಿದಳು. ಅವರಿಗೆ ಮೊಗ್ಗಲಾನರು ಧನ್ಯವಾದಗಳನ್ನು ತಿಳಿಸಿದರು. ಅದರೆ ಆ ಹುಡುಗಿಯು ಮನೆಕೆಲಸಗಳಲ್ಲಿ ತೊಡಗಿದ್ದರಿಂದಾಗಿ ಆಕೆಯಿಂದ ಬೋಧನೆ ಆಲಿಸಲು ಆಗಲಿಲ್ಲ. ಮುಂದೆ ಒಂದು ದಿನ ನಿಮ್ಮ ಬೋಧನೆ ಆಲಿಸುತ್ತೇನೆ ಎಂದು ಹೇಳಿ ಆಕೆಯು ಅಲ್ಲಿಂದ ಹೊರಟಳು.. ನಂತರ ಮೊಗ್ಗಲಾನರು ಅಲ್ಲಿಂದ ಹೊರಟರು.

ಅದರೆ ಆ ಹುಡುಗಿಯು ಅದೇ ದಿನದಂದು ಕಾರಾಣಾಂತರಗಳಿಂದ ಮೃತಪಟ್ಟಳು. ಹಾಗೇಯೇ ಆಕೆಯು ಆ ಕ್ಷಣವೇ ತಾವತಿಂಸ ದೇವಲೋಕದಲ್ಲಿ ಉಗಮಿಸಿದಳು.

   ಒಮ್ಮೆ ಮೊಗ್ಗಲಾನರು ದೇವಯಾನದಲ್ಲಿ ತೊಡಗಿದ್ದಾಗ ಅವರು ತೇಜಸ್ವಿಯಾಗಿದ್ದ ದೇವಿಯನ್ನು ಕಂಡು ಆಕೆಯ ವೈಭವಕ್ಕೆ ಕಾರಣ ಕೇಳಿದಾಗ ಆಕೆಯು ತಾನು ಹಿಂದಿನ ಜನ್ಮದಲ್ಲಿ ಏನಾಗಿದ್ದೇನೆ ಎಂಬುದನ್ನು ತಿಳಿಸಿ ಆಕೆಯು ಅವರಿಗೆ ನೀಡಿದ್ದ ದಾನವೇ ಕಾರಣವೆಂದು ತಿಳಿಸಿದಳು. 

5.8.4  ಫಲದಾಯಕ ವಿಮಾನ 

ಒಮ್ಮೆ ತಾವತಿಂಸ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ದೇವನೊಬ್ಬನ  ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆತನ  ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆತನು ತನ್ನ ದಾನವನ್ನು ಕುರಿತು  ಹೀಗೆ ಹೇಳಿದನು :ನಾನೂ ರಾಜ ಬಿಂಬಸಾರನ ಬಳಿ ಉಧ್ಯಾನವನ ಪಾಲಕನಾಗಿದ್ದೆನು ಅದರೂ ನಿಮ್ಮನ್ನು ಆಗ ಕಂಡು ಮಾವಿನ ಹಣ್ಣುಗಳನ್ನು ಶ್ರದ್ಧೆಯಿಂದ ನೀಡಿದೆನು ಹಾಗೇಯೇ ನಾನೂ ಒಮ್ಮೆ ಭಗವಾನರಿಗೂ ಮಾವಿನ ಹಣ್ಣುಗಳನ್ನು ನೀಡಿದೆನು ಅವರು ಅವನ್ನು ಪೂಜ್ಯ ಸಾರಿಪುತ್ತ, ಪೂಜ್ಯ ಮಹಾ ಕಸ್ಸಪ ಹಾಗೂ ತಮ್ಮೊಡನೆ ಹಂಚಿಕೊಂಡರು ಆ ದಾನದ ಫಲದಿಂದ ನನಗೆ ಆಗಲೇ ರಾಜನು ಒಡವೆ ವಸ್ತ್ರ ಹಾಗೂ ಹಳ್ಳಿಯನ್ನು ಉಡುಗೊರೆಯಾಗಿ ನೀಡಿದನು. ಹಾಗೂ ಸಾವಿನ ನಂತರ ಈ ಸ್ವರ್ಣಮಯ ವಿಮಾನದಲ್ಲಿ ವಾಸಿಸುತ್ತಿದ್ದೇನೆ. 

5.8.5  ಗೋಪಾಲಕ ವಿಮಾನ :

ಭಗವಾನರು ರಾಜಗೃಹದ ವೇಳುವನದಲ್ಲಿದ್ದಾಗ  ಒಬ್ಬ ಗೋಪಾಲಕನು(ದನಗಾಹಿ) ಹಸುಗಳನ್ನು ಮೇಯಿಸಲು ಹೋಗುತ್ತಿದ್ದನು. ಹಾಗೆ ಹೋಗಬೇಕಾದರೆ ಆತನು ಮೊಗ್ಗಲಾನರಿಗೆ ಎದುರಾಗಿ ಬಂದನು. ತಕ್ಷಣ ಮೊಗ್ಗಲಾನರಿಗೆ ಆತನ ಆಯಸ್ಸು ಅತಿ ಅಲ್ಪವೆಂದು ತಿಳಿಯಿತು. ಆ ಗೋಪಾಲಕನಿಗೂ ಮೊಗ್ಗಲಾನರನ್ನು ಕಂಡ ಕೂಡಲೇ ದಾನ ನೀಡಬೇಕೆಂಬ ಆಸೆಯಾಯಿತು. ಆಗ ಆತನ ಬಳಿಯಲ್ಲಿ ಕುಮ್ಮಾಸವೆಂಬ ಸಿಹಿ ತಿಂಡಿಯಿತ್ತು. ಮೊದಲಿಗೆ ಆತನಲ್ಲಿ ದಾನ ನೀಡಲೋ ಅಥವಾ ಬೇಡವೋ ಎಂಬ ಅನಿಧರ್ಾರ ಉಂಟಾಯಿತು. ನಂತರ ಈ ಮಹತ್ತರ ಅವಕಾಶ ತಪ್ಪಿಕೊಳ್ಳಬಾರದೆಂದುಕೊಂಡನು. ಆತನು ಮೊಗ್ಗಲಾನರಿಗೆ ಆ ಕುಮ್ಮಾಸಪಿಂಡವನ್ನು ನೀಡಿದಾಗ ಅವರು ಅನುಕಂಪೆಯಿಂದ ಸ್ವೀಕರಿಸಿದರು. ಹಾಗೂ ಸೇವಿಸತೊಡಗಿದರು. ಅವರು ಸೇವಿಸುವುದನ್ನು ಕಂಡು ಆತನಿಗೆ ಆಪಾರ ಅನಂದವೂ ಉಂಟಾಯಿತು. ಅದೇ ವೇಳೆಯಲ್ಲಿ ಆತನು ಹಸುಗಳನ್ನು ಓಡಿಸುವ ಆತುರದಲ್ಲಿ ಹಾವೊಂದನ್ನು ತುಳಿದನು. ಅದು ತಕ್ಷಣ ಕಚ್ಚಿತು. ಭೀಕರ ವಿಷವು ತಕ್ಷಣ ದೇಹವ್ಯಾಪಿ ಹರಡಿತು ಆತನು ಸತ್ತುಹೋದನು. ಅದರೆ ಸಾಯುವ ಸ್ಥಿತಿಯಲ್ಲಿಯೂ ಆತನು ದಾನದ ಆನಂದದಲ್ಲಿದ್ದನು. ಹೀಗಾಗಿ ಆತನು ತಾವತಿಂಸ ದೇವಲೋಕದಲ್ಲಿ ಉಗಮಿಸಿದನು.

5.8.6  ಕಬ್ಬಿನ ದಾನದಿಂದ ಪೇತವು ದೇವವಾಯಿತು

ಒಮ್ಮೆ ಭಗವಾನರು ವೇಲುವನದಲ್ಲದ್ದಾಗ ಮಹಾ ಮೊಗ್ಗಲಾನರು ರಾಜಗೃಹದ ಕಡೆಗೆ ಹೊರಟರು. ಅಲ್ಲಿ ಪೇತವೊಂದು ಅವರ ಬಳಿಗೆ ಬಂದು ಹೀಗೆ ಪ್ರಶ್ನಿಸಿತು. 

ಇಲ್ಲಿ ನನ್ನ ಎದುರಿಗೆ ಬೃಹತ್ ಕಬ್ಬಿನ ತೋಪು  ಕಾಣಿಸಿಕೊಳ್ಳುವುದು ಅದರೂ ನನಗೆ ತಿನ್ನಲು ಆಗುವುದಿಲ್ಲ. ಪೂಜ್ಯರೇ ಇದಕ್ಕೆ ಕಾರಣ ನೀಡಿ.?

ನಾನು ನರಳುತ್ತಿದ್ದೇನೆ, ತಿನ್ನಲು ಸಂಘರ್ಷ ಮಾಡುತ್ತಿರುತ್ತೇನೆ, ತಿಂದು ಹಾಕಲ್ಪಡುತ್ತಿದ್ದೇನೆ, ಸಾವಿಗೆ ಹತ್ತಿರವಾಗುತ್ತಿರುತ್ತೇನೆ, ಅಳುತ್ತಿದ್ದೇನೆ ಇದು ಯಾವ ಕಮ್ಮದ ಪರಿಣಾಮ ?

ನಾನು ಇವುಗಳಿಂದ ದಾಟಲು ಯತ್ನಿಸುತ್ತಿದ್ದೇನೆ, ನೆಲದ ಮೇಲೇ ಬಿದ್ದು ಮೀನಿನಂತೆ ಹೊರಳಾಡುತ್ತಿದ್ದೇನೆ, ಗೋಳಾಡುತ್ತಾ ಆಶ್ರುಮುಕನಾಗುತ್ತೇನೆ. ಇದು ಯಾವುದರ 

ಪರಿಣಾಮ ?

ನಾನೂ ಹಸಿದಿದ್ದೇನೆ, ಬಾಯಾರಿದ್ದೇನೆ, ಬಳಲಿ ಬೇಸತ್ತಿದ್ದೇನೆ, ಯಾವುದೇ ಸುಖ ಹಾಗೂ ಸಂತೋಷವಿಲ್ಲದೇ ಭಯಭೀತನಾಗಿದ್ದೇನೆ. ಓ ನಿಮಗೆ ಒಳ್ಳೆಯದಾಗಲಿ,  ನಾನೂ ಯಾವ ರೀತಿಯಲ್ಲಿ ಈ ಕಬ್ಬನ್ನಾದರೂ ಆಹಾರವಾಗಿ ಪಡೆಯಬಲ್ಲೇ?

ಆಗ ಮೊಗ್ಗಲಾನರು ಹೀಗೆ ಉತ್ತರಿಸಿದರು. ಇದಕ್ಕೆ ಕಾರಣವಿದೆ ಹಿಂದಿನ ಜನ್ಮದಲ್ಲಿ ನೀನು ಹೇರಳವಾದ ಕಬ್ಬನ್ನು ತಿನ್ನುತ್ತಾ ಸಾಗಿದೆ. ಹಿಂದಿನಿಂದ ಮಗುವೊಂದು ನಿನ್ನಲ್ಲಿ ಕಬ್ಬನ್ನು ಯಾಚಿಸಿತು ಅದರೂ ನೀನೂ ಯಾವ ಉತ್ತರವೂ ಹಾಗೂ ಕಬ್ಬನ್ನು ನೀಡದೇ ಹೋದೆ. ಅದರ ಪರಿಣಾಮವೇ ಇದು. .

ನೋಡಿಲ್ಲಿ ನಿನ್ನ ಹಿಂದೆ ಕಬ್ಬು ಕಾಣಿಸುವುದು ಈಗ ನೀನೂ ಹೃದಯಭರಿತವಾಗಿ ತಿನ್ನು. ನಿನ್ನ ದಾನ ಗುಣದಿಂದಾಗಿಯೇ ನೀನು ಸುಖವಾಗಿರುವೆ. ಎಂದು ಹೇಳಿ ಮೊಗ್ಗಲಾನರು ಹಿಂಬದಿಯಿಂದ ಕಬ್ಬನ್ನು ಹಿಡಿದುಕೊಂಡರು. 

ಯಾವಾಗ ಪೇತವು ಮೊಗ್ಗಲಾನರಿಗೇ ಒಳಿತನ್ನು ಬಯಸಿತೋ ಹಾಗೂ ಅವರ ಸಂಪರ್ಕಕ್ಕೆ ಬಂದಿತೋ ಹಾಗೂ ಮೊಗ್ಗಲಾನರಗೆ ದಾನ ಮಾಡಲು ಇಚ್ಚಿಸಿತೋ  ಮತ್ತು ಮೊಗ್ಗಲಾನರು ಬೆಂಬಲವಾಗಿ ತಿನ್ನಲು ಹಿಡಿದುಕೊಂಡು ಅದಕ್ಕೆ ಸಹಾಯ ಮಾಡಿದರೋ ಆಗ ಅದಕ್ಕೂ ತಿನ್ನಲು ಸಾಧ್ಯವಾಯಿತು. ಆಗ ಅದು ಹೃದಯ ಪೂರ್ವಕವಾಗಿ ತಿಂದಿತು. ಅದು ಅಪಾರ ಸಂತೋಷಿಸಿತು.

  ನಂತರ ಪೇತವು ಕಬ್ಬಿನ ಜಲ್ಲೆಗಳನ್ನು ಕಟ್ಟಿ ಅವನ್ನು ಮೊಗ್ಗಲಾನರಿಗೆ ನೀಡಿತು. ಅದನ್ನು ಮೊಗ್ಗಲಾನರು ಭಗವಾನರಿಗೇ ನೀಡಿದರು. ಭಗವಾನರು ಆಶೀವರ್ಾದ ಮಾಡಿದರು.ಈ ದಾನದಿಂದಾಗಿ ಅದು ತಾವತಿಂಸ ಲೋಕದಲ್ಲಿ ಉಗಮಿಸಿತು.

5.8.7 ಅಸೂಯೆಯಿಂದ ಸಗಣಿ ತಿನ್ನುವ ಪ್ರೇತವಾದನು

ಒಮ್ಮೆ ಮೊಗ್ಗಲಾನರು ಸಗಣಿ ತಿನ್ನುತ್ತಿದ್ದಂತಹ ಪೇತವನ್ನು ನೋಡಿದರು. ಹಾಗೂ ಅದಕ್ಕೆ ಆ ಸ್ಥಿತಿಗೆ ಕಾರಣ ಕೇಳಿದರು. ಆಗ ಆ ಪೇತವು ಹೀಗೆ ನುಡಿಯಿತು.:  ನನ್ನ ಮನೆಯಲ್ಲಿ  ಭಿಕ್ಖು ವಾಸ ಮಾಡುತ್ತಿದ್ದನು. ಅಲ್ಲಿಗೆ ಬೇರೆ ಬಿಕ್ಖುಗಳು ಸಹಾ  ಬರುತ್ತಿದ್ದರು. ಅವರಿಗೂ ನಾನು  ಉಪಚಾರ ಮಾಡುವುದನ್ನು ಕಂಡು ಅಲ್ಲಿ ಮೊದಲೇ ಇದ್ದಂತಹ ಬಿಕ್ಖು ಅಸೂಯೆಗೆ ಒಳಗಾಗಿ ಅವರಿಗೆ ಬಯ್ಯುತ್ತಿದ್ದನು. ನಾನೂ ಸಹಾ ಅತನನ್ನೇ ಅನುಕರಿಸಿದೆನು. ಈಗ ಇಬ್ಬರೂ ಸಹಾ ಪೇತಗಳಾಗಿರುವೆವು. ನಾನು ಈಗ ಆತನ ತಲೆಯ ಮೇಲೆಯೇ ನಿಂತಿದ್ದೇನೆ. ಬೇರೆಯವರು ತಿರಸ್ಕರಿಸಿದಂತಹ ಸಗಣಿ ಅಥವಾ ಸಗಣಿಯಂತಹ ಆಹಾರವು ನನಗೆ ಆಹಾರವಾಗುವುದು. ಹಾಗೂ ನಾನು ತಿರಸ್ಕರಿಸಿದ ಆಹಾರವನ್ನು ಆತನು ಪಡೆಯುತ್ತಾನೆ. ಇದನ್ನು ಆಲಿಸಿದ ಮೊಗ್ಗಲಾನರು ಈ ವಿಷಯವನ್ನು ಭಗವಾನರಿಗೆ ತಿಳಿಸಿದರು. ಆಗ ಭಗವಾನರು ಇದೆಲ್ಲಾ ಪರರ ತಪ್ಪು ಹುಡುಕುವುದರ ಪರಿಣಾಮವೆಂದರು.

5.8.8  ಶ್ರಾವಸ್ಥಿ ನಗರದ ಪೇತಗಳು 

ಒಮ್ಮೆ ಭಗವಾನರು ಶ್ರಾವಸ್ಥಿಯಲ್ಲಿದ್ದಾಗ ಮೊಗ್ಗಲಾನರು ಶ್ರಾವಸ್ಥಿಯ ಬೀದಿಗಳಲ್ಲಿ ಆಹಾರಕ್ಕಾಗಿ ಹೋಗುತ್ತಿರುವಾಗ ಅಲ್ಲಿ ಪೇತಗಳ ಗುಂಪನ್ನು ನೋಡಿದರು. ಆಗ ಮೊಗ್ಗಲಾನರು ಅವರ ಬಗ್ಗೆ ಅವರನ್ನೇ ಮಾತನಾಡಿಸಿ ಅವರ ಈ ಸ್ಥಿತಿಗೆ ಕಾರಣಗಳನ್ನು ಕೇಳಿದರು. ಅದಕ್ಕೆ ಅವರು ಪಾಪ ಕಮ್ಮಗಳೆಂದರು. ಆಗ ಮೊಗ್ಗಲಾನರು ಅವರಿಗೆ ಯಾವ ಪಾಪಕಮ್ಮದಿಂದ ಹೀಗೆ ಆಗಿರುವಿರಿ ಎಂದು ವಿಚಾರಿಸಿದಾಗ ಅವರು ಹೀಗೆ ಉತ್ತರಿಸಿದರು.: ನಾವು ಅಧಾಮರ್ಿಕರಾಗಿದ್ದೆವು. ನಮಗೆ ಧಮ್ಮ ಜೀವನದಲ್ಲಿ ನಂಬಿಕೆ ಇರಲಿಲ್ಲ. ನಾವು ಹಣದಾಹದಿಂದ ಕೂಡಿದ್ದು ಅದಕ್ಕಾಗಿ ಅನೇಕ ಪಾಪಗಳನ್ನು ಮಾಡಿದೆವು. ಕಳ್ಳತನ , ಮೋಸ, ಪರರ ಆಸ್ತಿಕಬಳಿಕೆ, ಸುಳ್ಳು ,ಅಪ್ರಮಾಣಿಕತೆ, ದಾನವನ್ನು ಸಹಾ ಯಾರಿಗೂ ನೀಡಲಿಲ್ಲ. ಅದರೇ ಈಗ ನಾವು ಪರರು ನೀಡುವ ದಾನಗಳ ಫಲಕ್ಕಾಗಿ ಜನರು ಉಳಿಯುವ ಸ್ಥಳಗಳಲ್ಲಿ ಉಳಿದಿದ್ದೇವೆ. ನಾವು ನದಿಗಳ ಸಮೀಪಕ್ಕೆ ಹೋದರೆ ಅದು ಸಹಾ ಬರಿದಾಗುವುದು. ಬಿಸಿಲಿಗೆ ನೆರಳಲ್ಲಿ ಹೋದರೂ ಅದು ಸಹಾ ಪರಮ ಬಿಸಿಯಾಗುವುದು. ನಮ್ಮ ಮೇಲೆ ಸುಡುವಂತಹ ಬಿಸಿ ಗಾಳಿಯು ಬೀಸುವುದು. ನಾವು ಇದಕ್ಕಿಂತ ಹೆಚ್ಚಿನದಕ್ಕೂ ಅರ್ಹರಾಗಿದ್ದೇವೆ

ನಾವು ಆಹಾರಕ್ಕೆ ಯೋಜನಗಳಷ್ಟು ದೂರ ಸಾಗುವೆವು. ಅದರೂ ಸಹಾ ನಮಗೇನು ಸಿಗದು. ಅಯ್ಯೋ ! ನಾವು ಅಲ್ಪ ಪುಣ್ಯಸ್ಥರಾಗಿದ್ದೇವೆ.

ನಾವು ಹಸಿವಿನಿಂದ ಕ್ಷೀಣವಾಗಿ ಮೂಚರ್ೆಹೋಗುತ್ತೇವೆ. ಭೂಮಿಗೆ ನಮ್ಮ ತಲೆಯೇ ಮೊದಲು ಬೀಳುವುದು. ನಾವು ನಮ್ಮ ತಲೆ ಹಾಗೂ ಎದೆಗಳನ್ನು ಬಡಿದುಕೊಂಡು ಅಯ್ಯೋ ! ನಾವು ಅಲ್ಪ ಪುಣ್ಯಸ್ಥರಾಗಿದ್ದೇವೆ ಎಂದು ಗೋಳಾಡುತ್ತೇವೆ..

ನಾವು ಇದಕ್ಕೆಲ್ಲಾ ಅರ್ಹರಾಗಿದ್ದೇವೆ, ನಮಗೆ ಇದಕ್ಕಿಂದ ಹೆಚ್ಚು ಸಿಗಲೂ ಅರ್ಹತೆ ಪಡೆದಿದ್ದೇವೆ. ನಾವೂ ಏನಾದರೂ ಈ ಸ್ಥಿತಿಯಿಂದ ಮುಕ್ತರಾಗಿ ಪುನಃ ಮಾನವರಾದರೇ ನಾವು ಶೀಲವಂತರಾಗುತ್ತೇವೆ. ಹಾಗೂ ದಾನಿಗಳಾಗುತ್ತೇವೆ. ಎಂದವು. 

ಮೊಗ್ಗಲಾನರು ಇವರ ವಿಷಯವನ್ನು ಭಗವಾನರಿಗೆ ತಿಳಿಸಿದರು.

5.9 ಸರ್ವಲೋಕಗಳ ಯಾನ

    ಬಲಶಾಲಿಯಾದ ವ್ಯಕ್ತಿಯೊಬ್ಬ ತೆರೆದ ಕೈಯನ್ನು ವೇಗವಾಗಿ ಮಡಚುವಷ್ಟು ಅಥವಾ     ಮಡಚಿರುವ ಕೈಯನ್ನು ತೆರೆಯುವಷ್ಟು ಕಾಲದಲ್ಲಿ ಮೊಗ್ಗಲಾನರು ಈ ಭೂಲೋಕವನ್ನು ಬಿಟ್ಟು ಉನ್ನತ ಸುಗತಿ ಲೋಕಗಳಿಗೆ ಅಥವಾ ಬ್ರಹ್ಮಲೋಕಗಳಿಗೆ ಕ್ಷಣಾರ್ಧದಲ್ಲಿ ಹೋಗುತ್ತಿದ್ದರು. ಈ ಸಾಮಾಥ್ರ್ಯವನ್ನು ಅವರು ಧ್ಯಾನದಲ್ಲಿ ಗಳಿಸಿದ್ದರು. ಹಾಗೆ ಅವರು ಆ ಲೋಕಗಳಿಗೆ ಹೋಗಿ ಅವರ ಸುಗತಿಗಳಿಗೆ ಕಾರಣವನ್ನು ತಿಳಿಯುತ್ತಿದ್ದರು. ಅಥವಾ ಅಲ್ಲಿಯು ಬೋಧನೆ ಮಾಡುತ್ತಿದ್ದರು. ಭಗವಾನರು 3 ತಿಂಗಳ ಕಾಲ ಅಭಿದಮ್ಮವನ್ನು ದೇವತೆಗಳಿಗೆ ಬೋಧಿಸುವಾಗ ಅಲ್ಲಿನ ವಾರ್ತವಿಶೇಷಗಳನ್ನು ಇಲ್ಲಿಗೆ ಬಂದು ತಿಳಿಸುತ್ತಿದ್ದರು. ಹಾಗೆಯೇ ಸಕ್ಕ -ದೇವತೆಗಳ ಒಡೆಯನನ್ನು ಸಹಾ ಹೋಗಿ ಪರೀಕ್ಷಿಸುತ್ತಿದ್ದರು.ಅವರು ಕೇವಲ ದೇವತೆಗಳನ್ನು ಮಾತ್ರವಲ್ಲ ಯಾವ ಸಮಣ ಬ್ರಾಹ್ಮಣರಿಗೂ ಅಥವಾ ಮನುಷ್ಯರಿಗೂ ಪ್ರವೇಶವಿಲ್ಲದ ಬ್ರಹ್ಮಲೋಕಗಳಿಗೂ ಹೋಗಿ ಅಲ್ಲಿಯು ಸಹಾ ಬ್ರಹ್ಮರಿಗೂ ಬೋಧನೆ ಮಾಡುತ್ತಿದ್ದರು. ಹಾಗೂ ಕೆಲವರಿಗೆ ಸೋತಪತ್ತಿ ಫಲ ಸಿಗುವಂತೆ ಮಾಡುತ್ತಿದ್ದರು. ಅವನ್ನು ನಾವು ಸಂ.ನಿ 6.5 ನಲ್ಲಿ ಹಾಗೂ ಅಂ.ನಿ.4.34:7.53 ರಲ್ಲಿ ಕಾಣಬಹುದು. ಈ ಕೆಳಕಂಡ ಉದಾಹರಣೆಯಲ್ಲಿ ಅವರು ಸಕ್ಕನಿಗೆ ಬೋಧನೆ ಮಾಡಿರುವುದು ಸಿಗುತ್ತದೆ.

5.9.1 ಸಕ್ಕ ಸುತ್ತಂ

ಒಮ್ಮೆ ಪರಮಪೂಜ್ಯ ಮೊಗ್ಗಲಾನರು ಶ್ರಾವಸ್ಥಿಯ ಜೇತವನದ ಆನಾಥಪಿಂಡಿಕನ ಉಧ್ಯಾನದಲ್ಲಿ ವಿಹರಿಸುತ್ತಿದ್ದರು, ಆಗ ಬಲಶಾಲಿ ವ್ಯಕ್ತಿಯೊಬ್ಬ ಮಡಚಿದ ಕೈಯನ್ನು ವೇಗದಿಂದ ವಿಸ್ತಾರಮಾಡುವಷ್ಟು ಅಥವಾವಿಸ್ತರಿಸಿದ ಕೈಯನ್ನು ವೇಗದಿಂದ ಮಡಚುವಷ್ಟು ವೇಗದಲ್ಲಿ ಜೇತವನದಿಂದ ಕಣ್ಮರೆಯಾಗಿ ತಾವತಿಂಸ ದೇವಲೋಕದಲ್ಲಿ ಅವರ ನಡುವೆ ಪ್ರತ್ಯಕ್ಷರಾದರು. ಆಗ ಸಕ್ಕ ಹಾಗು 500 ದೇವತೆಗಳು ಭಕ್ತಿಯಿಂದ ಮೊಗ್ಗಲಾನರ ಬಳಿಗೆ ಸಮೀಪಿಸಿದರು ಹಾಗು ವಂದಿಸಿದರು ಹಾಗು ಗೌರವದಿಂದ ಒಂದೆಡೆ ನಿಂತರು. ಆಗ ಮೊಗ್ಗಲಾನರು ಅವರೊಂದಿಗೆ ಹೀಗೆ ಹೇಳಿದರು : 

ಸಾಧು ದೇವಾಧಿಗಳೊಡೆಯ ಸಾಧು ,ಬುದ್ಧರಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದನ್ನೇ ಮಾಡಿರುವೆ, ಏಕೆಂದರೆ ಬುದ್ಧರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ  ದೇವಾಧಿಗಳೊಡೆಯ ಸಾಧು ,ಹಾಗೆಯೆ ಧಮ್ಮದಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದನ್ನೇ ಮಾಡಿರುವೆ, ಏಕೆಂದರೆ ಧಮ್ಮರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ  ದೇವಾಧಿಗಳೊಡೆಯ ಸಾಧು ,ಹಾಗೆಯೆ ಸಂಘದಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದನ್ನೇ ಮಾಡಿರುವೆ, ಏಕೆಂದರೆ ಸಂಘದಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ  ದೇವಾಧಿಗಳೊಡೆಯ ಸಾಧು.

ಸಾಧು ಮಾರಿಸರಾದ ಮೊಗ್ಗಲಾನರೇ ಸಾಧು,ಬುದ್ಧರಲ್ಲಿ ಸರಣಾಗಮನವನ್ನು ಮಾಡುವುದು ಖಂಡಿತವಾಗಿಯು ಒಳ್ಳೆಯದೆ ಆಗಿದೆ, ಏಕೆಂದರೆ ಬುದ್ಧರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ ಮೊಗ್ಗಲಾನರವರೇ ಸಾಧು ,ಹಾಗೆಯೆ ಧಮ್ಮದಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದೆ ಆಗಿದೆ ಏಕೆಂದರೆ ಧಮ್ಮರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ ಮಾರಿಸರಾದ ಮೊಗ್ಗಲಾನರೆ ಸಾಧು ,ಹಾಗೆಯೆ ಸಂಘದಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದೆ ಆಗಿದೆ, ಏಕೆಂದರೆ ಸಂಘದಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ  ಮೊಗ್ಗಲಾನರವರೆ ಸಾಧು.

ಸಾಧು ದೇವಾಧಿಗಳೊಡೆಯ ಸಾಧು ,ಬುದ್ಧರಲ್ಲಿ ಹೀಗೆ ಶ್ರದ್ಧೆಯನ್ನು ಹೊಂದುವುದು ಖಂಡಿತ ಒಳ್ಳೆಯದು ಅದೆಂದರೆ, ಭಗವಾನರು ಹೀಗಿರುವರು ಅವರು ಅರಹಂತರು, ಸಮ್ಮಸಂಬುದ್ಧರು, ವಿಧ್ಯಾಚರಣಸಂಪನ್ನರು, ಸುಗತರು, ಲೋಕವಿದರು, ಅನುತ್ತರ ದಮ್ಯಸಾರಥಿಯು, ಬುದ್ಧರು ಹಾಗು ಭಗವಾನರು ಆಗಿದ್ದಾರೆ. ಹೀಗೆ ಈ ಬಗೆಯ ಧೃಡಶ್ರದ್ಧೆಯಿಂದ ಇಲ್ಲಿನ ಜೀವಿಗಳು ತಮ್ಮ ಮರಣದ ನಂತರ ಸುಗತಿಯಲ್ಲಿ ,ಸ್ವರ್ಗಲೋಕದಲ್ಲಿ ಉದಯಿಸುವರು.

ಸಾಧು ದೇವಾಧಿಗಳೊಡೆಯ ಸಾಧು, ಧಮ್ಮದಲ್ಲಿ ಹೀಗೆ ಶ್ರದ್ಧೆಯನ್ನು ಹೊಂದುವುದು ಖಂಡಿತ ಒಳ್ಳೆಯದು ಹೇಗೆಂದರೆ,  ಭಗವಾನರಿಂದ ಧಮ್ಮವು ಬಹು ಚೆನ್ನಾಗಿ ವಿವರಿಸಲ್ಟಟ್ಟಿದೆ, ನೇರವಾಗಿ ನೋಡಬಹುದಾಗಿರುವಂತಹುದು, ಕಾಲವಿಳಂಬವಿಲ್ಲದೆ, ತಕ್ಷಣ ಫಲಕಾರಿಯು, ಬನ್ನಿ ಪರಿಕ್ಷಿಸಿ ಎಂದು ಆಹ್ವಾನಿಸುವಂತಹುದು, ಊದ್ರ್ವಗಾಮಿಯು ಉನ್ನತಿಕಾರಕವು, ಪ್ರತಿಯೊಬ್ಬ ಪ್ರಾಜ್ಞನಿಂದ ಅರಿಯಲ್ಪಡುವಂತಹುದು.ಹೀಗೆ ಈ ಬಗೆಯ ಧೃಡಶ್ರದ್ಧೆಯಿಂದ ಇಲ್ಲಿನ ಜೀವಿಗಳು ತಮ್ಮ ಮರಣದ ನಂತರ ಸುಗತಿಯಲ್ಲಿ ,ಸ್ವರ್ಗಲೋಕದಲ್ಲಿ ಉದಯಿಸುವರು.

ಸಾಧು ದೇವಾಧಿಗಳೊಡೆಯ ಸಾಧು, ಸಂಘದಲ್ಲಿ ಹೀಗೆ ಶ್ರದ್ಧೆಯನ್ನು ಹೊಂದುವುದು ಖಂಡಿತ ಒಳ್ಳೆಯದು ಹೇಗೆಂದರೆ, ಭಗವಾನರ ಶ್ರಾವಕಸಂಘವು ಒಳ್ಳೆಯ ಮಾರ್ಗವನ್ನು ಅನುಸರಿಸುತ್ತಿದೆ, ಭಗವಾನರ ಶ್ರಾವಕಸಂಘವು ನೇರವಾದ ಮಾರ್ಗವನ್ನು ಅನುಸರಿಸುತ್ತಿದೆ, ಭಗವಾನರ ಶ್ರಾವಕಸಂಘವು ಸತ್ಯದ ಮಾರ್ಗವನ್ನು ಅನುಸರಿಸುತ್ತಿದೆ, ಭಗವಾನರ ಶ್ರಾವಕಸಂಘವು ಯೋಗ್ಯವಾದ ಮಾರ್ಗವನ್ನು ಅನುಸರಿಸುತ್ತಿದೆ, ಈ ಶ್ರಾವಕ ಸಂಘವು ನಾಲ್ಕು ಜೊತೆಯ ವ್ಯಕ್ತಿಗಳಿಂದ ,ಎಂಟು ವಿಧದ ವ್ಯಕ್ತಿಗಳಿಂದ ಕೂಡಿದೆ, ಈ ಶ್ರೇಷ್ಟಸಂಘವು ದಾನಗಳಿಗೆ,ಆತೀಥ್ಯಕ್ಕೆ, ದಕ್ಷಣೆಗೆ, ಅಂಜಲಿಬದ್ಧರಾಗಿ ವಂದಿಸುವುದಕ್ಕೂ ಅರ್ಹವಾಗಿದೆ.ಲೋಕದಲ್ಲಿರುವ ಅನುತ್ತರವಾದ ಪುಣ್ಯಕ್ಷೇತ್ರವಾಗಿದೆ.ಹೀಗೆ ಈ ಬಗೆಯ ಧೃಡಶ್ರದ್ಧೆಯಿಂದ ಇಲ್ಲಿನ ಜೀವಿಗಳು ತಮ್ಮ ಮರಣದ ನಂತರ ಸುಗತಿಯಲ್ಲಿ ,ಸ್ವರ್ಗಲೋಕದಲ್ಲಿ ಉದಯಿಸುವರು.

ಸಾಧು ದೇವಾಧಿಗಳೊಡೆಯ ಸಾಧು, ಶೀಲಗಳ ಹೊಂದಿರುವಿಕೆ ಆರ್ಯರಿಗೆ ಪ್ರೀಯವಾಗಿರುತ್ತವೆ. ಅಖಂಡ ಶೀಲ, ಅಛಿದ್ರ ಶೀಲ, ಅಕಳಂಕಿತ ಶೀಲ, ಅನಿಂದನೀಯ ಶೀಲ, ಇವುಗಳೆಲ್ಲವೂ ಜ್ಞಾನಿಗಳಿಂದ ಪ್ರಶಂಸೆಗೆ ಪಾತ್ರವಾಗಿವೆ, ಅಂಟುಕೊಳ್ಳದಿರುವಿಕೆಗೆ ಸಹಾಯಕವಾಗಿದೆ,ಸಮಾಧಿಗೆ ಸಹಾಯಕಾರಿಯಾಗಿವೆ, ಏಕೆಂದರೆ ಶೀಲಗಳನ್ನು ಹೊಂದಿರುವಿಕೆ ಆರ್ಯರಿಗೆ ಪ್ರಿಯವಾದುದು, ಶೀಲಪಾಲನೆ ಮಾಡುವ ಜೀವಿಗಳು ಸಾವಿನ ನಂತರ ಸುಗತಿಯನ್ನು ಹೊಂದಿ, ಸ್ವರ್ಗಲೋಕಗಳಲ್ಲಿ ಉದಯಿಸುತ್ತವೆ.

ಸಾಧು ಮಾರಿಸರಾದ ಮೊಗ್ಗಲಾನರೇ ಸಾಧು,ಬುದ್ಧರಲ್ಲಿ ಧೃಡಶ್ರದ್ಧೆ ಹೊಂದಿರುವುದು  ತುಂಬಾ ಒಳ್ಳೆಯದು ,.................ಹಾಗೆಯೇ ಧಮ್ಮದಲ್ಲಿ ಧೃಡಶ್ರದ್ಧೆಹೊಂದಿರುವುದು ತುಂಬಾ ಒಳ್ಳೆಯದು ......................... ಹಾಗೆಯೇ ಸಂಘದಲ್ಲಿ  ಧೃಡಶ್ರದ್ಧೆ ಹೊಂದಿರುವುದು ತುಂಬಾ ಒಳ್ಳೆಯದು ...............,ಅದೇರೀತಿ ಶೀಲಗಳನ್ನು ಹೊಂದಿರುವುದು ಆರ್ಯರಿಗೆ ಪ್ರಿಯವಾಗಿರುತ್ತವೆ. ಅಖಂಡ ಶೀಲ, ಅಛಿದ್ರ ಶೀಲ, ಅಕಳಂಕಿತ ಶೀಲ, ಅನಿಂದನೀಯ ಶೀಲ, ಇವುಗಳೆಲ್ಲವೂ ಜ್ಞಾನಿಗಳಿಂದ ಪ್ರಶಂಸೆಗೆ ಪಾತ್ರವಾಗಿವೆ, ಅಂಟುಕೊಳ್ಳದಿರುವಿಕೆಗೆ ಸಹಾಯಕವಾಗಿದೆ,ಸಮಾಧಿಗೆ ಸಹಾಯಕಾರಿಯಾಗಿವೆ, ಏಕೆಂದರೆ ಶೀಲಗಳನ್ನು ಹೊಂದಿರುವಿಕೆ ಆರ್ಯರಿಗೆ ಪ್ರಿಯವಾದುದು, ಶೀಲಪಾಲನೆ ಮಾಡುವ ಜೀವಿಗಳು ಸಾವಿನ ನಂತರ ಸುಗತಿಯನ್ನು ಹೊಂದಿ ಸ್ವರ್ಗಲೋಕಗಳಲ್ಲಿ ಉದಯಿಸುತ್ತವೆ. 

ಸಾಧು ದೇವಾಧಿಗಳೊಡೆಯ ಸಾಧು ,ಬುದ್ಧರಲ್ಲಿ, ಧಮ್ಮದಲ್ಲಿ, ಸಂಘದಲ್ಲಿ, ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದನ್ನೇ ಮಾಡಿರುವೆ, ಏಕೆಂದರೆ ಬುದ್ಧರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಅಂತಹ ದೇವತೆಗಳು ಉಳಿದ ದೇವತೆಗಳಿಗಿಂತ 10 ವಿಧದಲ್ಲಿ ಮೀರಿಸುವಂತಿರುತ್ತವೆ. ಅವೆಂದರೆ: ಆ ದೇವತೆಗಳು ದಿವ್ಯವಾದ ಆಯಸ್ಸನ್ನು , ದಿವ್ಯವಾದ ಸೌಂದರ್ಯವನ್ನು,  ದಿವ್ಯವಾದ ಸುಖಗಳನ್ನು, ದಿವ್ಯವಾದ ಕೀತರ್ಿಯನ್ನು, ದಿವ್ಯವಾದ ಸಾರ್ವಬೌಮತ್ವವನ್ನು, ಮತ್ತು ದಿವ್ಯವಾದ ಆಕಾರಗಳನ್ನು, ಶಬ್ದಗಳನ್ನು, ದಿವ್ಯವಾದ ಸುಗಂಧವನ್ನು, ದಿವ್ಯವಾದ ರುಚಿಯನ್ನು, ದಿವ್ಯವಾದ ಸ್ಪಶ್ರ್ಯವನ್ನು ಹೊಂದಿರುತ್ತವೆ.

ನಂತರ ದೇವತೆಗಳೊಡೆಯ ಸಕ್ಕರು 600ದೇವತೆಗಳೊಂದಿಗೆ ಮೊಗ್ಗಲಾನರ ಬಳಿಗೆ ಬಂದರು ಹಾಗು.............700 ದೇವತೆಗಳೊಂದಿಗೆ.........800......80000 ದೇವತೆಗಳೊಂದಿಗೆ ಮೊಗ್ಗಲಾನರ ಬಳಿ ಸಮೀಪಿಸಿ ವಂದಿಸಿ ,ಗೌರವದಿಂದ ಒಂದೆಡೆ ನಿಂತರು, ಆಗ ಮಹಾಮೊಗ್ಗಲಾನರು ಅವರೊಂದಿಗೆ ಹೀಗೆ ನುಡಿದರು,; (ಆ ಸಂಭಾಷಣೆಯೆಲ್ಲಾ ಮೇಲಿನಂತೆಯೆ ಇದೆ.)

5.9.2 ಉತ್ತರಾಳ ಹಾಗೂ ಸಿರಿಮಾಳ ವಿಮಾನ

ರಾಜಗೃಹದ ವಾಸಿಯಾಗಿದ್ದ ಉತ್ತರಾಳು ರೈತ ಪುಣ್ಯನ ಮಗಳಾಗಿದ್ದಳು. ಪುಣ್ಣ (ಪುಣ್ಯ)ನು ಶ್ರೀಮಂತ ಸುಮನನಲ್ಲಿ ಕೆಲಸ ಮಾಡುತ್ತಿದ್ದನು. ಒಂದುದಿನ ಪುಣ್ಯ ಮತ್ತು ಆತನ ಹೆಂಡತಿ ಪೂಜ್ಯ ಸಾರಿಪುತ್ತರಿಗೆ ಆಹಾರವನ್ನು ನೀಡಿದರು. ಆಗ ಸಾರಿಪುತ್ರರು ಆಗಷ್ಟೇ ನಿರೋಧ ಸಮಾಪತ್ತಿಯಿಂದ ಹೊರಬಂದಿದ್ದರು. (ನಿರೋಧ ಸಮಾಪತ್ತಿ ಎಂದರೆ ನಿಬ್ಬಾಣ ಸಾಕ್ಷಾತ್ಕಾರವೇ ಆಗಿದೆ). ಆಗ ನೀಡಿದ ದಾನದಿಂದಾಗಿ ಮಹತ್ಫಲ ಸಿಗುವುದು. ಹೀಗಾಗಿ ಪುಣ್ಣ ಆ ಪುಣ್ಯ ಫಲದಿಂದಾಗಿ ತಕ್ಷಣವೇ ಶ್ರೀಮಂತನಾಗಿಬಿಟ್ಟನು. ಆತನು ಹೊಲವನ್ನು ಉತ್ತುತ್ತಿರುವಾಗ ಆತನಿಗೆ ಚಿನ್ನವು ಸಿಕ್ಕತು. ಮತ್ತು ರಾಜನು ಸಹಾ ಆತನಿಗೆ ಅಧಿಕೃತವಾಗಿ ರಾಜ ಸರಾಫನೆಂದು ಘೋಷಿಸಿಬಿಟ್ಟನು. ಒಂದು ಸಂದರ್ಭದಲ್ಲಿ ಪುಣ್ಯನ ಕುಟುಂಬವು ಭಗವಾನರಿಗೆ ಮತ್ತು ಭಿಕ್ಷುಗಳಿಗೆ ಏಳು ದಿನಗಳ ಕಾಲ ಆತಿಥ್ಯ ನೀಡಿತು. ಹಾಗು ಏಳನೆಯ ದಿನದಂದು ಭಗವಾನರ ಬೋಧನೆ ಆಲಿಸಿ ಆ ಕುಟುಂಬದ ಮೂವರು ಸೋತಪತ್ತಿ ಫಲದಲ್ಲಿ ಪ್ರತಿಷ್ಠಿತರಾದರು. ನಂತರ ಉತ್ತರಾಳು ಶ್ರೀಮಂತ ಸುಮನನ ಮಗನೊಂದಿಗೆ ವಿವಾಹವಾದಳು. ಆದರೆ ಅವರು ಬೌದ್ಧರಾಗಿರಲಿಲ್ಲ. ಹೀಗಾಗಿ ಉತ್ತರಾಳು ಅಲ್ಲಿ ಸಂತೃಪ್ತವಾಗಿರಲಿಲ್ಲ. ಒಮ್ಮೆ ಆಕೆ ತನ್ನ ತಂದೆಯೊಂದಿಗೆ ಹೀಗೆ ಹೇಳಿದಳು: ಅಪ್ಪಾ, ನನಗೇಕೆ ಇಂತಹ ಪಂಜರದಲ್ಲಿ ಹಾಕಿಬಿಟ್ಟೆ. ಇಲ್ಲಿ ನಾನು ಯಾವ ಭಿಕ್ಷುವನ್ನು ನೋಡಿಲ್ಲ ಹಾಗು ಯಾವ ಭಿಕ್ಷುವಿಗೂ ದಾನವನ್ನೇ ನೀಡಿಲ್ಲ ಈ ಮಾತುಗಳನ್ನು ಕೇಳಿ ತಂದೆಗೂ ಅನುಕಂಪವಾಗಿ ಆತನು ಮಗಳಿಗಾಗಿ 15000 ರೂ.ಗಳನ್ನು ನೀಡಿದನು. ಗಂಡನ ಅಪ್ಪಣೆ ಪಡೆದು ಈ ಹಣದಿಂದ ಆಕೆಯು ಪತಿಗಾಗಿ ಸಿರಿಮಾ ಎಂಬ ವಾರಾಂಗನೆಯನ್ನು ಏಪರ್ಾಟು ಮಾಡಿ 15 ದಿನಗಳ ಕಾಲ ಪತಿಗೆ ಸೇವೆ ಮಾಡಲು ಆಕೆಗೆ ನೇಮಿಸಿದಳು. 

ನಂತರ ಉತ್ತರಾಳು ತಾನು 15 ದಿನಗಳ ಕಾಲ ಭಗವಾನರಿಗೆ ಮತ್ತು ಭಿಕ್ಷುಗಳಿಗೆ ಆಹಾರ ದಾನ ನೀಡಿದಳು. 15ನೇ ದಿನದಂದು ಆಕೆಯು ಅಡುಗೆ ಮನೆಯಲ್ಲಿ ಆಹಾರ ಸಿದ್ಧಪಡಿಸುತ್ತಿರುವುದನ್ನು ಕಂಡು ಹೀಗೆ ಯೋಚಿಸಿದನು. ಈ ಉತ್ತರಾ ಅದೆಷ್ಟು ಮೂರ್ಖಳಾಗಿದ್ದಾಳೆ, ಈಕೆಗೆ ಸಂತೋಷವಾಗಿರುವುದು ಹೇಗೆ ಎಂಬುದೇ ತಿಳಿದಿಲ್ಲ. ಕೇವಲ ದಾನಗಳಲ್ಲಿಯೇ ಇರುತ್ತಾಳೆ, ನಂತರ ನಕ್ಕುಬಿಟ್ಟನು. ಆತನು ಉತ್ತರಾಳಿಗೆ ಕಂಡು ನಗೆಬೀರಿದ್ದನ್ನು ಸಿರಿಮಾ ನೋಡಿದಳು. ಆಕೆಗೆ ಅತಿಯಾದ ಅಸೂಯೆಯು ಉಂಟಾಯಿತು. ತಾನು ಕೇವಲ ಬಾಡಿಗೆ ಪತ್ನಿ ಎಂಬುದನ್ನು ಆಕೆ ಮರೆತಳು. ಸಿರಿಮಾಳು ಅಡುಗೆ ಮನೆಗೆ ನುಗ್ಗಿ, ಅಲ್ಲಿ ಕುದಿಯುತ್ತಿದ್ದ ಎಣ್ಣೆಯ ಪಾತ್ರೆ ಎತ್ತಿಕೊಂಡಳು. ನಂತರ ಉತ್ತರಾಳ ತಲೆಯ ಮೇಲೆ ಸುರಿಯುವ ಉದ್ದೇಶದಿಂದ ಅವಳತ್ತ ಧಾವಿಸಿದಳು. ಉತ್ತರಾಳಲ್ಲಿ ಏನೋ ಅಪಾಯ ಮುನ್ಸೂಚನೆ ಉಂಟಾಯಿತು. ತಕ್ಷಣ ಆಕೆಗೆ ಸಿರಿಮಾಳು ಬಿಸಿಯಾಗಿರುವ ಎಣ್ಣೆಯನ್ನು ಸುರಿಯಲು ಬರುತ್ತಿದ್ದಾಳೆ ಎಂದು ಅರ್ಥವಾಯಿತು. ತಕ್ಷಣ ಆಕೆಯು ಈ ರೀತಿಯ ಸತ್ಯಕ್ರಿಯೆ ಮಾಡಿದಳು ನನ್ನಲ್ಲಿ ಸಿರಿಮಾಳ ಮೇಲೆ ಯಾವುದೇ ರೀತಿಯ ದ್ವೇಷವೂ ಇಲ್ಲ, ಈ ಸತ್ಯವಚನದಿಂದಾಗಿ ನನಗೆ ಯಾವುದೇ ಸುಡುವ ಅನುಭವ ಆಗದಿರಲಿ, ಹಾಗೊಂದು ವೇಳೆ ನಾನು ಸಿರಿಮಾಳಿಗೆ ದ್ವೇಷಿಸಿದ್ದೇ ಆಗಿದ್ದರೆ, ಈ ಬಿಸಿ ಎಣ್ಣೆಯ ನನಗೆ ಸುಡಲಿ. ಆಗ ಸಿರಿಮಾಳು ಬಿಸಿಯಾದ ಎಣ್ಣೆಯನ್ನು ಉತ್ತರಾಳ ತಲೆಯ ಮೇಲಿಂದ ಸುರಿದೇಬಿಟ್ಟಳು. ಆಶ್ಚರ್ಯ ! ಆ ಬಿಸಿ ಎಣ್ಣೆಯು ಆಕೆಗೆ ಅಣುಮಾತ್ರವೂ ಹಾನಿ ಉಂಟು ಮಾಡಲಿಲ್ಲ. ಅದು ಸತ್ಯವೇ ಆಗಿತ್ತು. ಹೀಗಾಗಿಯೇ ಉತ್ತರಾಳ ಮೈತ್ರಿ, ದ್ವೇಷರಹಿತತೆ, ಸತ್ಯಕ್ರಿಯೆ ಸಮ್ಮಿಲನಗೊಂಡು ಆಕೆಗೆ ಸಂರಕ್ಷಿಸಿತು. ಆದ್ದರಿಂದಲೇ ಆಕೆಗೆ ಬಿಸಿ ಎಣ್ಣೆಯು ಸಹಾ ತಣ್ಣೀರಿನಂತೆ ಅನುಭವವಾಯಿತು. ಆಗ ಸಿರಿಮಾಳು ಈ ಎಣ್ಣೆಯು ತಣ್ಣದ್ದಾಗಿರಬೇಕು, ಆದ್ದರಿಂದಲೇ ಆಕೆಗೆ ಏನೂ ಆಗಲಿಲ್ಲ ಎಂದು ಭಾವಿಸಿ ಮತ್ತೊಂದು ಪಾತ್ರೆಯ ಬಿಸಿಯಾದ ಎಣ್ಣೆಯನ್ನು ಎತ್ತಿಕೊಳ್ಳಲು ಹೋದಳು. ತಕ್ಷಣ ಉತ್ತರಾಳ ಸೇವಕಿಯರು ಸಿರಮಾಳನ್ನು ತಡೆದು ಹಿಡಿದು ಬಾರಿಸಿದರು. ಆಗ ಉತ್ತರಾಳೇ ಅವರನ್ನು ತಡೆದು, ಸಿರಿಮಾಗೆ ಉಪಚಾರ ಮಾಡಿದಳು. 

ಆಗ ಸಿರಿಮಾಗೆ ತನ್ನ ನಿಜಸ್ಥಿತಿ ಅರಿವಾಯಿತು. ಹಾಗು ತಾನು ಉತ್ತರಾಳಿಗೆ ಮಾಡಿದ ಅನ್ಯಾಯಕ್ಕೆ ಪಶ್ಚಾತ್ತಾಪಪಟ್ಟಳು. ಮತ್ತು ಆಕೆಯಲ್ಲಿ ಕ್ಷಮೆಯಾಚಿಸಿದಳು. ಆಗ ಉತ್ತರಾಳು ಹೀಗೆ ಹೇಳಿದಳು: ಕೇವಲ ನನ್ನ ಮಹಾತಂದೆಯು ಒಪ್ಪಿದರೆ ಮಾತ್ರ ನಾನು ನಿನಗೆ ಕ್ಷಮಿಸುವೆ ಎಂದಳು. ಆಗ ಆಕೆಯು ಆ ಮಹಾತಂದೆಯನ್ನು ಭೇಟಿಮಾಡಲು ಒಪ್ಪಿದಳು. ಆ ಮಹಾತಂದೆಯು ಬುದ್ಧರಲ್ಲದೆ ಬೇರಾರು ಆಗಿರಲಿಲ್ಲ. ಆಕೆಯು ಜನ್ಮಗಳಿಂದ ಪಾರುಮಾಡುವ ಬುದ್ಧರನ್ನೇ ತನ್ನ ತಂದೆ ಎಂದು ಮಾಮರ್ಿಕವಾಗಿ ಹೇಳಿದ್ದಳು. ಧಮ್ಮ ಬೋಧಿಸಿದಂತಹ ಸತ್ಯದ ಅರಿವು ಮೂಡಿಸುವಂತಹ ಬುದ್ಧರನ್ನೇ ಆಕೆಯು ತಂದೆ ಎಂದು ಭಾವಿಸಿದ್ದಳು. ಸಿರಿಮಾಳು ಬುದ್ಧರನ್ನು ಕಾಣಲು ಇಚ್ಛಿಸಿದಳು. ಹೀಗಾಗಿ ಉತ್ತರಾಳು ಭಗವಾನರಿಗೆ ಮತ್ತು ಭಿಕ್ಷುಗಳಿಗೆ ಉತ್ತರಾಳ ಮನೆಯಲ್ಲಿಯೇ ಸಿರಿಮಾಳು ದಾನ ಅಪರ್ಿಸುವಂತೆ ಏಪರ್ಾಡು ಮಾಡಿದಳು. 

ಭಗವಾನರು ಅಲ್ಲಿಗೆ ಬಂದರು, ಆತಿಥ್ಯವನ್ನು ಪಡೆದರು. ಆಹಾರ ಸೇವನೆಯ ನಂತರ ಸಿರಿಮಾ ಮತ್ತು ಉತ್ತರಾಳ ನಡುವೆ ನಡೆದುದೆಲ್ಲವನ್ನು ಭಗವಾನರಿಗೆ ತಿಳಿಸಲಾಯಿತು. ನಂತರ ಸಿಮಾಳು ತನ್ನ ಅಪರಾಧಕ್ಕೆ ಕ್ಷಮೆ ಯಾಚಿಸಿದಳು. ಬುದ್ಧರಲ್ಲಿ ಉತ್ತರಾಳಿಂದ ಕ್ಷಮೆ ನೀಡಿಸಬೇಕೆಂದು ಯಾಚಿಸಿದಳು.

ಆಗ ಭಗವಾನರು ಉತ್ತರಾಳಿಗೆ ಹೀಗೆ ಪ್ರಶ್ನಿಸಿದರು: ಓ ಉತ್ತರಾ, ಸಿರಿಮಾಳು ನಿನ್ನ ಮೇಲೆ ಬಿಸಿಯಾದ  ಎಣ್ಣೆಯನ್ನು ಸುರಿದಾಗ ಯಾವರೀತಿಯ ಅನುಭೂತಿ ಪಡೆದೆ?

ಭಗವಾನ್, ಸಿರಿಮಾಳು ನನ್ನ ದಾನಾದಿ ಪುಣ್ಯಕಾರ್ಯಕ್ಕೆ ಸಹಾಯಕಳಾಗಿಯೇ (ನನ್ನ ಪತಿಯೊಂದಿಗೆ) ಇದ್ದುದರಿಂದಾಗಿ ನಾನಂತು ಆಕೆಯ ಮೇಲೆ ಕೃತಜ್ಞಳಾಗಿದ್ದೆ ಹೊರತು ಲವಲೇಶವೂ ಆಕೆಯಲ್ಲಿ ದ್ವೇಷಾಸೂಯೆಯಿಂದ ಕೂಡಿರಲಿಲ್ಲ. ನಾನು ಆಕೆಯಲ್ಲಿ ಮೈತ್ರಿಯುತ ಚಿತ್ತದಿಂದಲೇ ಇದ್ದೆನು. ಮೈತ್ರಿಯನ್ನು ಆಕೆಯತ್ತ ಪ್ರಸಾರ ಮಾಡುತ್ತಿದ್ದೆನು.

ಆಗ ಭಗವಾನರು ಆಕೆಗೆ ಹೀಗೆ ಪ್ರಶಂಸಿಸಿದರು: ಸಾಧು, ಸಾಧು ಉತ್ತರಾ ಸಾಧು, ಯಾವುದೇ ದ್ವೇಷ ಹೊಂದಿಲ್ಲದೆ ನಿನಗೆ ಹಾನಿ ಮಾಡಿದವರ ಮೇಲೆಯೇ ಮೈತ್ರಿಯಿಂದ ಜಯಿಸಿರುವ, ನಿನ್ನ ಸಹಾಯ ದಾನಗಳಿಂದ ಸ್ವಾರ್ಥದಿಂದಿರುವವರ ಮೇಲೆ ಜಯಿಸಿರುವೆ. ಸತ್ಯಕ್ರಿಯೆಯನ್ನು ಆಚರಿಸುತ್ತ ಸತ್ಯವನ್ನೇ ನುಡಿದು ಸುಳ್ಳುಗಾರರನ್ನು ಜಯಿಸಿರುವೆ ಎಂದು ಹೇಳಿ ಈ ಗಾಥೆಯನ್ನು ನುಡಿದರು.

ಅಕ್ರೋಧದಿಂದ ಕ್ರೋಧವನ್ನು ಜಯಿಸು,

ಅಸಾಧುವಾದುದನ್ನು (ಕೆಟ್ಟದ್ದನ್ನು) ಒಳ್ಳೆಯತನದಿಂದ ಜಯಿಸು,

ಜಯಿಸು ಜಿಪುಣನನ್ನು ದಾನದಿಂದಲೇ, 

ಸತ್ಯದಿಂದಲೇ ಸುಳ್ಳುಗಾರರನ್ನು ಜಯಿಸು. (223)

ನಂತರ ಉತ್ತರಾಳು ಈ ಘಟನೆ ನಡೆದಿರುವಾಗಲೇ ಕ್ಷಮಿಸಿದ್ದಳು. ಆದರೆ ಈಗ ಭಗವಾನರ ಸಮ್ಮುಖದಲ್ಲಿ ಭಗವಾನರ ಆದೇಶದಂತೆ ಮೌಖಿಕವಾಗಿಯು ಕ್ಷಮಿಸಿದಳು. ನಂತರ ಭಗವಾನರು 4 ಆರ್ಯಸತ್ಯಗಳನ್ನು ಬೋಧಿಸಿದರು.  ಬೋಧನೆಯ ಅಂತ್ಯದಲ್ಲಿ ಉತ್ತರಾಳು ಸಕದಾಗಾಮಿಯಾದಳು. ಹಾಗೂ ಉತ್ತರಾಳ ಪತಿ, ಅತ್ತೆ, ಮಾವ, ಸಿರಿಮಾ ಹಾಗೂ ಆಕೆಯ ಸಂಗಡವಿದ್ದಂತಹ 500 ವಾರಂಗನೆಯರು ಸಹಾ ಸೋತಪನ್ನರಾದರು.

ನಂತರ ಕಾಲನಂತರ ಉತ್ತರಾಳು ತೀರಿಹೋಗಿ ತಾವತಿಂಸ ದೇವಲೋಕದಲ್ಲಿ ಉಗಮಿಸಿದಳು.

ಒಮ್ಮೆ ಮೊಗ್ಗಲಾನರು ತಾವತಿಂಸ ದೇವಲೋಕಕ್ಕೆ ಹೋಗಿದ್ದಾಗ ಉತ್ತರಾಳು ದೇವತೆಯಾಗಿರುವುದನ್ನು ಕಂಡು ಆಕೆಯನ್ನು ಮಾತನಾಡಿಸಿದರು ಹಾಗೂ ಆಕೆಯ ವೈಭೋಗವನ್ನು ಕಂಡು ಆಕೆಯ ಉನ್ನತಮಯ ಸ್ಥಿತಿಗೆ ಕಾರಣ ಕೇಳಿದರು ಆಗ ಆಕೆಯು ಸ್ವಾರ್ಥವಿಲ್ಲದಿರುವಿಕೆ, ಪತಿ ಸೇವೆ, ಕೋಪರಹಿತತೆ, ಶೀಲಪಾಲನೆ, ಉಪೋಸಥ, ದಾನ, ತಿಸರಣುವಿಗೆ ಶರಣು ಹೋಗಿರುವಿಕೆ, ಮೆತ್ತ ಹಾಗೂ ಆರ್ಯಸತ್ಯಗಳ ಪಾಲನೆಯೇ ಕಾರಣವೆಂದಳು.

ರಾಜಗೃಹದಲ್ಲಿ ಸಿರಿಮಾಳು ಭಗವಾನರ ಬೋಧನೆಯನ್ನು ಆಲಿಸಿ  ಸೋತಪನ್ನಳಾದ ಮೇಲೆ ಆಕೆಯು ತನ್ನ ಹಿಂದಿನ ಅಸಹ್ಯಕರ ವೃತ್ತಿಯನ್ನು ತೊರೆದಳು. ನಂತರ ಆಕೆಯೂ ಸಹ ಭಿಕ್ಷುಗಳಿಗೆ ಆಹಾರ ನೀಡುತ್ತಿದ್ದಳು. ಈಕೆಯ ಖ್ಯಾತಿಯ ಬಗ್ಗೆ ಕೇಳಿ ಒಬ್ಬ ಯುವಕ ಭಿಕ್ಷು ಮೋಹಗೊಂಡನು. ಮತ್ತು ಆಕೆಯನ್ನು ಕಾಣಲು ಹೋದನು. ಆಗ ಆಕೆ ರೋಗದಿಂದ ಕೂಡಿದ್ದು. ಆದರೂ ಸಹ ಭಿಕ್ಷುಗಳಿಗೆ ವಂದಿಸಿ ಆಹಾರ ನೀಡಿ ಹೊರಟಳು. ಯುವಕ ಭಿಕ್ಷುವು ಹೀಗೆ ಯೋಚಿಸಿದನು ರೋಗದಿಂದ ಇರುವಾಗಲೇ ಹೀಗಿರಬೇಕಾದರೆ ಚೆನ್ನಾಗಿರುವಾಗ ಇನ್ನೆಷ್ಟು ಸುಂದರಳಾಗಿ ಇದ್ದಿರಬಹುದು ಎಂದು ಯೋಚಿಸಿ ಮತ್ತಷ್ಟು ರಾಗಾಸಕ್ತನಾದನು.

ಆ ರಾತ್ರಿಯೇ ಆಕೆಯು ಸತ್ತುಹೋದಳು. ಈ ವಿಷಯವನ್ನು ರಾಜ ಬಿಂಬಸಾರನು ಭಗವಾನರಲ್ಲಿಗೆ ಬಂದು ತಿಳಿಸಿದನು. ಭಗವಾನರು ಸತ್ಯದರ್ಶನ ಮಾಡಿಸುವುದಕ್ಕಾಗಿ, ಬಿಂಬಸಾರನಿಗೆ 3 ದಿನಗಳ ಕಾಲ ಆಕೆಯ ಶವವನ್ನು ಸಂಸ್ಕಾರ ಮಾಡದಿರುವಂತೆ ಬುದ್ಧಿವಾದ ನೀಡಿದರು. 4ನೆಯ ದಿನ ಆಕೆಯ ಶರೀರವು ಬಣ್ಣಗೆಟ್ಟು ಊದಿ, ಹುಳುಗಳು ಹೊರಬರಲಾರಂಭಿಸಿತು. ಆಗ ರಾಜನು ಸಿರಿಮಾಳನ್ನು 1000 ರೂ.ಗೆ ಮಾರಾಟ ಘೋಷಿಸಿ ಯಾರು ಬೇಕಾದರೂ ಪಡೆಯಬಹುದೆಂದು ಡಂಗೂರ ಸಾರಿದನು. ಆದರೆ ಯಾರೂ ಬರಲಿಲ್ಲ. ಕೊನೆಗೆ ಪುಕ್ಕಟೆಯಾಗಿ ಆಕೆ ಶವ ಸಿಗುವುದೆಂದು ಡಂಗೂರ ಸಾರಿದನು. ಯಾರಿಗೂ ಸಹ ಆಕೆಯ ಶರೀರ ಬೇಕಾಗಿರಲಿಲ್ಲ. ಎಲ್ಲರೂ ಆಕೆ ಬದುಕಿದ್ದಾಗ ಎಷ್ಟು ಆಸೆ ಪಡುತ್ತಿದ್ದರೋ ಸತ್ತಾಗ ಅಷ್ಟೇ ಅಸಹ್ಯಪಡುತ್ತಿದ್ದರು.

ಯುವಕ ಭಿಕ್ಷುವಿಗೆ ಸಿರಿಮಾ ಸತ್ತಳೆಂದು ಇನ್ನೂ ತಿಳಿದಿರಲಿಲ್ಲ. ಬುದ್ಧರು ಮತ್ತು ಭಿಕ್ಷುಗಳು ಸಿರಿಮಾಳನ್ನು ಕಾಣಲು ಹೋಗುತ್ತಿದ್ದಾರೆಂದು ಆತನು ಸಂತೋಷದಿಂದ ಅವರೊಂದಿಗೆ ಹೋದನು. 

ಆಗ ಭಗವಾನರು ಆಕೆಯ ಶವವನ್ನು ತೋರಿಸಿ ಭಿಕ್ಷುಗಳೊಂದಿಗೆ ಹೀಗೆ ಹೇಳಿದರು: ಭಿಕ್ಷುಗಳೇ ನೋಡಿ, ಆಕೆ ಜೀವಂತವಾಗಿದ್ದಾಗ ಆಕೆಯನ್ನು ಪಡೆಯಲು ಸಹಸ್ರ ಸಹಸ್ರ ರೂಪಾಯಿಗಳನ್ನು ಸುರಿಯಲು ಸಿದ್ಧರಾದವರು ಈಗ ಪುಕ್ಕಟೆಯಾಗಿ ಪಡೆಯಲು ಸಿದ್ಧವಿಲ್ಲ. ಏಕೆಂದರೆ ಶರೀರವು ಅನಿತ್ಯವಾದುದು. ಕೊಳೆಯುವಂತಹದು. ಅಶುಭವು, ಮರಣದಲ್ಲಿ ಅಂತ್ಯವಾಗುವಂತಹುದು. 

ಚಿತ್ತಾಕರ್ಷವಾದ ಈ ಸುಂದರ ಶರೀರವನ್ನು ನೋಡಿ, 

ನೋಡಿ ಈ ಹುಣ್ಣುಗಳ ರಾಶಿ, ಅಸಹ್ಯತೆಯ ಗುಡ್ಡೆ, ರೋಗಗ್ರಸ್ತವು, 

ದ್ರುವವಲ್ಲದ್ದು, ಸ್ಥಿರವಲ್ಲದ ಈ ದೇಹವನ್ನು ಗಮನಿಸಿ. (147)

ಈ ಸುಂದರವಾದ ಶರೀರವನ್ನು ಗಮನಿಸಿ, ಹುಣ್ಣುಗಳ ರಾಶಿ, ಅಸಹ್ಯತೆ ಗುಡ್ಡೆ, ರೋಗಗ್ರಸ್ತವು, ದ್ರುವವಲ್ಲದ, ಸ್ಥಿರವಲ್ಲದ ದೇಹವಿದು.  ನಂತರ ಹಾಗೆ ಬೋಧನೆಯನ್ನು ಮುಂದುವರೆಸಿದರು. ನಂತರ ಬೋದನೆಯ ಅಂತ್ಯದಲ್ಲಿ 84000 ಮಾನವರು ಧಮ್ಮವನ್ನು ಅರಿತರು. ಹಾಗೂ ಇದನ್ನು ಕೇಳಿದಾಗ, ನೋಡಿದಾಗ ಆ ಯುವಕ ಭಿಕ್ಷುವು ಆಸಕ್ತಿಗಳನ್ನು ತೊರೆದು ಸ್ಥಿರಚಿತ್ತನಾದನು. ಹಾಗೂ  ಆತನು ಅರಹಂತನಾದನು.ಸಿರಿಮಾಳು ಸಹಾ ಸಾವಿನ ನಂತರ ತಾವತಿಂಸ ದೇವಲೋಕದಲ್ಲಿ ಉಗಮಿಸಿದಳು.

5.9.3 ಸಾಲಾ ಹೂಗಳ ಸಮರ್ಪಣೆ 

ಒಮ್ಮೆ ಮೊಗ್ಗಲಾನರು ತಾವತಿಂಸ ದೇವಲೋಕಕ್ಕೆ ಹೋಗಿದ್ದಾಗ ಕೆಂಪು ಸ್ಫಟಿಕದ ವಿಮಾನವನ್ನು ನೋಡಿದರು. ಅದರ ಮುಂದೆ ಸಾಲವೃಕ್ಷಗಳು ಹಾಗೂ ಅಲ್ಲಿನ ನೆಲವು ಸ್ವರ್ಣದ್ದಾಗಿತ್ತು.ಆಗ ಅಲ್ಲಿ ವಾಸಿಸುತ್ತಿದ್ದಂತಹ ದೇವತೆಗೆ ಮೊಗ್ಗಾಲಾನರು ಮಾತಾನಾಡಿಸಿ ಆಕೆಯ ಈ ವೈಭವದ ಕಾರಣವನ್ನು ಕೇಳಿದರು. ಆಗ ಆಕೆಯು ಈ ರೀತಿಯಲ್ಲಿ ಉತ್ತರಿಸಿದಳು. ನಾನು ಹಿಂದಿನ ಜನ್ಮದಲ್ಲಿ ಮಾನವಳಾಗಿದ್ದಾಗ ಗುಲಾಮರ ಹುಡುಗಿಯಾಗಿದ್ದೆನು ಒಮ್ಮೆ  ಭಗವಾನರು ಕುಳಿತಿರುವಾಗ ಶ್ರದ್ಧೆಯಿಂದ ಸಾಲಾ ವೃಕ್ಷಗಳ ಹೂಗಳನ್ನು ಅವರ ಮೇಲೆ ಹಾಕಿದೆನು. ಹಾಗೇಯೇ ಸಾಲಾ ವೃಕ್ಷದಿಂದಾದ ಹಾರವನ್ನು ಭಗವಾನರಿಗೆ ಸಮಪರ್ಿಸಿದೆನು. ಇದರಿಂದ ಭಗವಾನರು ನನಗೆ ಪ್ರಶಂಸಿಸಿದರು ಅದರ ಪರಿಣಾಮವೇ ಈ ಎಲ್ಲ ವೈಭೋಗ  ಎಂದು ಆಕೆಯು ನುಡಿದಳು.

5.9.4 ಔಷಧಿಯ ಪುಣ್ಯ ಫಲ

   ಒಮ್ಮೆ ಮೊಗ್ಗಲಾನರು ತಾವತಿಂಸ ದೇವಲೋಕಕ್ಕೆ ಹೋಗಿದ್ದಾಗ ಅಲ್ಲಿ ತೇಜಸ್ವಿಯಾದ ಎಲ್ಲಾ ಬಗೆಯ ವೈಭವಗಳನ್ನು ಹೊಂದಿದ್ದಂತಹ ದೇವತೆಯನ್ನು ನೋಡಿದರು ಆಕೆಯ ಬಗ್ಗೆ ಹಾಗೂ ಆಕೆಯ ಪುಣ್ಯಾಚರಣೆಯ ಬಗ್ಗೆ ವಿಚಾರಿಸಿದರು. ಆಗ ಆಕೆಯು ಹೀಗೆ ಉತ್ತರಿಸಿದಳು. 

  ನಾನು ಅಂದಕೋವಿಂದ ನಗರದಲ್ಲಿದ್ದಾಗ ವೈದ್ಯರ ಮಗಳಾಗಿದ್ದೆನು.ಅಲ್ಲಿಗೆ ಪೂಜ್ಯ ಆನಂದರು ಗಂಜಿಗಾಗಿ ಬಂದಿದ್ದರು. ಅವರು ಭಗವಾನರಿಗೆ ವಾತದೋಷ ಉಂಟಾಗಿದ್ದರಿಂದಾಗಿ ಔಷಧಿಗೆಂದು ಬಂದಿದ್ದರು.ಆ ಪಿಂಡಪಾತ್ರೆಯನ್ನು ಗಮನಿಸಿ ಖಂಡಿತವಾಗಿ ಅದು ಭಗವಾನರದ್ದೆ ಎಂದು ಭಾಸವಾಗಿ ಅವರಿಗೆ  ಜುಜುಬಿಯಿಂದಾದ ಗಂಜಿಯಲ್ಲಿ ಎಣ್ಣೆಯನ್ನು ಹಾಗೂ ಸಂಬಾರವಸ್ತುಗಳಾದ ಕರಿಮೆಣಸು, ಶುಂಠಿ ಜೊತೆಗೆ ಲಾಮಜ್ಜಕವನ್ನು ಬೆರಸಿ ಸ್ವಾದಿಷ್ಟಯುತವಾದ ಆಹಾರ ನೀಡಿದೆನು.. ನಂತರ ಕಾರಾಣಾಂತರವಾಗಿ ತೀರಿಹೋಗಿ ಇಲ್ಲಿ ಈ ತಾವತಿಂಸ ಲೋಕದಲ್ಲಿ ಈ ರೀತಿಯ ವೈಭವಯುತವಾಗಿದ್ದೇನೆ. ಎಂದಳು.

5.9.5  ಅಂಬ ವಿಮಾನ : 

ಒಮ್ಮೆ ಮೊಗ್ಗಲಾನರು ತಾವತಿಂಸ ದೇವಲೋಕಕ್ಕೆ ಹೋಗಿದ್ದಾಗ ಅಲ್ಲಿ ತೇಜಸ್ವಿಯಾದ ಎಲ್ಲಾ ಬಗೆಯ ವೈಭವಗಳನ್ನು ಹೊಂದಿದ್ದಂತಹ ದೇವತೆಯನ್ನು ನೋಡಿದರು ವಿಶೇಷವಾಗಿ ಆಕೆಯ ವಿಮಾನದಲ್ಲಿ ಮಾವಿನ ವೃಕ್ಷಗಳು ಸಹಾ ಇದ್ದವು. ಆಕೆಯ ಬಗ್ಗೆ ಹಾಗೂ ಆಕೆಯ ಪುಣ್ಯಾಚರಣೆಯ ಬಗ್ಗೆ ವಿಚಾರಿಸಿದರು. ಆಗ ಆಕೆಯು ಹೀಗೆ ಉತ್ತರಿಸಿದಳು. 

ನಾನೂ ಮಾವಿನ ವೃಕ್ಷಗಳ ಸಹಿತ ಒಂದು ವಿಹಾರವನ್ನು ಕಟ್ಟಿ ಅದನ್ನು ಭಗವಾನರಿಗೆ ಸಮಪರ್ಿಸಿದೆನು. ಅದರ ಫಲಿತವೇ ಈ ಎಲ್ಲಾ ವೈಭವ. 

5.9.6  ವಂದನಾ ವಿಮಾನ :

ಒಮ್ಮೆ ಮೊಗ್ಗಲಾನರು ತಾವತಿಂಸ ದೇವಲೋಕಕ್ಕೆ ಹೋಗಿದ್ದಾಗ ಅಲ್ಲಿ ತೇಜಸ್ವಿಯಾದ ಎಲ್ಲಾ ಬಗೆಯ ವೈಭವಗಳನ್ನು ಹೊಂದಿದ್ದಂತಹ ದೇವತೆಯನ್ನು ನೋಡಿದರು ಆಕೆಯ ಬಗ್ಗೆ ಹಾಗೂ ಆಕೆಯ ಪುಣ್ಯಾಚರಣೆಯ ಬಗ್ಗೆ ವಿಚಾರಿಸಿದರು. ಆಗ ಆಕೆಯು ಹೀಗೆ ಉತ್ತರಿಸಿದಳು. ಒಮ್ಮೆ ಭಗವಾನರು ಶ್ರಾವಸ್ಥಿಗೆ ಹೋಗುವ ದಾರಿಯಲ್ಲಿ ಹಳ್ಳಿಯಿಂದ ಹಾದು ಹೋಗುತ್ತಿರುವಾಗ ಅವರನ್ನು ಕಂಡು ಭಕ್ತಿಯಿಂದ ವಂದಿಸಿದೆನು. ಅಪಾರ ಶ್ರದ್ಧೆಯಿಂದ ಕೂಡಿದೆನು. ಆ ಆನಂದದಿಂದಲೇ ಇದ್ದೆನು. ಕಾಲಾನಂತರ ಕಾರಣಾಂತರದಿಂದ ಮರಣ ಹೊಂದಿದೆನು ನಂತರ ಆ ಬುದ್ಧವಂದನೆಯ ಪರಿಣಾಮದಿಂದಲೇ ಹೀಗೆ ಇಲ್ಲಿ ಇಂತಹ ವೈಭವದಿಂದ ಇರುವೆನು.

5.9.7 ರಜ್ಝುಮಾಲ ವಿಮಾನ :  

ಬುದ್ಧಭಗವಾನರು ತಮ್ಮ ಅಸಾಧಾರಣವಾದ ಜ್ಞಾನದಿಂದ ಜನರಿಗೆ ಸಹಾಯ ಮಾಡುತ್ತಿದ್ದರು. ಜನರು ತಮ್ಮ ಅಜ್ಞಾನದ ಕಾರ್ಯಗಳಿಂದ ಮತ್ತೆ ಹೆಚ್ಚು ದುಃಖ ಅನುಭವಿಸುವುದನ್ನು ತಡೆಯಲು ಅವರಿಗೆ ಸಮ್ಮಾದೃಷ್ಟಿ ನೀಡುತ್ತಿದ್ದರು.

ಅಂತಹುದೇ ಈ ಘಟನೆ ರಜ್ಜುಮಾಲಾಳದು. ಆಕೆಯು ಗಯಾ ಸಮೀಪದ ಹಳ್ಳಿಯಲ್ಲಿ ಗುಲಾಮಳಾಗಿದ್ದಳು. ಆಕೆಯ ಒಡತಿಗೆ ರಜ್ಜುಮಾಲಾಳೆಂದರೆ ಅಸಹ್ಯವಾಗುತ್ತಿತ್ತು.  ಅದ್ದರಿಂದ ಆಕೆಯು ಸದಾ ರಜ್ಜುಮಾಲಾಳೊಂದಿಗೆ ಕೆಟ್ಟ ರೀತಿಯಲ್ಲಿ ವತರ್ಿಸುತ್ತಿದ್ದಳು.  ಕೆಲವೊಮ್ಮೆ ಆಕೆಯ ತಲೆಗೂದಲನ್ನು ಎಳೆದು ಹಾಕಿದ್ದುಂಟು.  ಒಂದುದಿನ ರಜ್ಜುಮಾಲಾಳು ತಲೆ ಬೋಡಿಸಿಕೊಂಡು ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದುಂಟು. ಆದರೆ ಆಕೆಯ ಕ್ರೂರಿ ಒಡತಿ ಆಕೆಯ ಕತ್ತಿನ ಸುತ್ತಲು ಹಗ್ಗವನ್ನು ಹಾಕಿ ಎಳೆದಾಡುತ್ತಿದ್ದಳು. 

ರಜ್ಜುಮಾಲಾಳಿಗೆ ಜೀವಿಸುವುದೇ ಅಸಾಧ್ಯವಾಯಿತು ಮತ್ತು ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದಳು. ಆದರೆ ಆಕೆಯ ಹಳ್ಳಿಯ ಮಾರ್ಗದಲ್ಲಿ ಬುದ್ಧರು ಆಕೆಗಾಗಿ ಕಾಯುತ್ತಿರುವುದನ್ನು ಕಂಡಳು. ಪ್ರಜ್ಞಾನಾಥ ತಥಾಗತರು ಆದ ಬುದ್ಧರು ಆಕೆಗೆ ಧಮ್ಮವನ್ನು ಬೋಧಿಸಿದರು. ಧಮ್ಮವನ್ನು ಪರಿಶುದ್ಧವಾಗಿ ಹೀರಿಕೊಂಡು ಆಕೆಯು ಸೋತಪನ್ನಳಾದಳು. ಆಕೆ ಲೋಕ ಕರುಣಿಕರ ಹಿಂಬಾಲಕಳಾದಳು. 

ಆಕೆ ಹಿಂತಿರುಗಿ ತನ್ನ ಒಡತಿಗೆ ಏನಾಯಿತೆಂದು ಹೇಳಿದಳು. ಆಕೆಯ ಒಡತಿ ಈ ವಿಷಯ ಕೇಳಿ ಬುದ್ಧರನ್ನು ದಶರ್ಿಸಿ ಅವರ ಬೋಧನೆಯನ್ನು ಆಲಿಸಿದಳು. ನಂತರ ಆಕೆಯೂ ಸಹ ಸೋತಪನ್ನಳಾಗಿ ವಿಧ್ಯಾಚರಣ ಸಂಪನ್ನರ ಹಿಂಬಾಲಕಳಾದಳು.

ನಂತರ ಬುದ್ಧಭಗವಾನರು ಅವರಿಗೆ ಹಿಂದಿನ ಜನ್ಮಗಳ ವೃತ್ತಾಂತವನ್ನು ತಿಳಿಸಿದರು. ಹಿಂದಿನ ಜನ್ಮದಲ್ಲಿ ರಜ್ಜುಮಾಲಾಳು ಒಡತಿಯಾಗಿದ್ದಳು. ಈಗಿರುವ ಒಡತಿ ಆಗ ಸೇವಕಿಯಾಗಿದ್ದಳು (ಗುಲಾಮಳು). ಆ ಹಿಂದಿನ ಜನ್ಮದಲ್ಲಿ ರಜ್ಜುಮಾಲಾಳು ಆ ಗುಲಾಮಳಿಗೆ ಬಹಳ ಹಿಂಸೆ ನೀಡಿದ್ದಳು. ಆ ಸೇವಕಿಯು ಸೇಡಿಗಾಗಿ ಪ್ರತಿಜ್ಞೆ ಮಾಡಿದ್ದಳು. ಫಲವಾಗಿ ಈಗ ಸೇವಕಿಯು ಒಡತಿಯಾಗಿ, ಒಡತಿ ಸೇವಕಿಯಾಗಿರುವಳು. ಕೊನೆಗೆ ಬುದ್ಧಭಗವಾನರು ಕರುಣಾಶಕ್ತಿಯಿಂದ ಅವರಿಬ್ಬರು ಮತ್ತೆ ಪಾಪ ಮಾಡುವುದು ತಪ್ಪಿತು. ದ್ವೇಷಿಸುವುದು ತಪ್ಪಿತು. ಅಷ್ಟೇ ಅಲ್ಲದೆ ಈಗ ಬಾಂಧವ್ಯದಿಂದ ಇರುವುದು ಆಯಿತು.

ಕಾಲನಂತರ ರಜ್ಜುಮಾಲಳು ನಿಧನಳಾದಳು ನಂತರ ಆಕೆಯು ತಾವತಿಂಸ  ದೇವಲೋಕದಲ್ಲಿ ಉಗಮಿಸಿದಳು. ಅಲ್ಲಿ ಆಕೆಯು ಭವ್ಯವಾದ ವಿಮಾನದಲ್ಲಿ ವಾಸಿಸುತ್ತಿದ್ದಳು ಆಕೆಯನ್ನು ಕಂಡಂತಹ ಮೊಗ್ಗಲಾನರು ಆಕೆಯ ಬಗ್ಗೆ ಹಾಗೂ ಆಕೆಯ ಪುಣ್ಯಾಚರಣೆಯ ಬಗ್ಗೆ ವಿಚಾರಿಸಿದರು. ಆಗ ಆಕೆಯು ತನ್ನ ಪೂರ್ವಜನ್ಮದ ಕಥೆಯನ್ನು ಹೇಳಿದಳು ಹಾಗೂ ಭಗವಾನರಿಗೆ ಶರಣು, ದಾನ, ಶೀಲ, ಕೋಪರಹಿತತೆ ಇತ್ಯಾದಿ ಪುಣ್ಯಗಳ ಫಲಿತಾಂಶವೇ ಈ ವೈಭವವೆಂದಳು.

5.9.8  ಬ್ರಹ್ಮಲೋಕಕ್ಕೆ ಯಾನ

ಒಮ್ಮೆ ಭಗವಾನರು ಶ್ರಾವಸ್ಥಿಯ ಜೇತವನದ ಆನಾಥಪಿಂಡಿಕನ ವಿಹಾರದಲ್ಲಿದ್ದರು.ಆಗ ಬ್ರಹ್ಮನೊಬ್ಬನಿಗೆ ಈ ರೀತಿಯ ದೃಷ್ಟಿಕೋನವು ಉಂಟಾಯಿತು. ಇಲ್ಲಿಗೆ ಯಾವುದೇ ಬ್ರಾಹ್ಮಣನಾಗಲಿ ಅಥವಾ ಸಮಣನಾಗಲಿ ಯಾರೊಬ್ಬ ಭಿಕ್ಖುವು ಸಹಾ ಇಲ್ಲಿಗೆ ಬರಲಾರನು. ಆಗ ಭಗವಾನರಿಗೆ ಆತನಲ್ಲಿ ಉಂಟಾದ ದಿಟ್ಟಿಯು ಮನಸ್ಸನ್ನು ಆತನ ಬಳಿಗೆ ಹರಿಸಿದಾಗ ಅರಿವಿಗೆ ಬಂದಿತು. ತಕ್ಷಣ ಭಗವಾನರು ಅಲ್ಲಿಂದ ಅದೃಷ್ಯರಾಗಿ ಆ ಬ್ರಹ್ಮನ ಬಳಿಯಲ್ಲಿ ಪ್ರತ್ಯಕ್ಷರಾದರು. ಆಗ ಭಗವಾನರು ತೇಜೋ ಧಾತುವಿನಲ್ಲಿ ಗಮನಕೊಟ್ಟು ಇದನ್ನು ಮಾಡಿದರು.

  ಅದೇ ಸಮಯದಲ್ಲಿ ಮೊಗ್ಗಲಾನರು ಭಗವಾನರು ಈಗ ಎಲ್ಲಿಹರು ಎಂದು ಗಮನ ಹರಿಸಿದಾಗ ಭಗವಾನರು ಬ್ರಹ್ಮನ ಮೇಲೆ ಪದ್ಮಾಸಿನರಾಗಿ ಆಕಾಶದಲ್ಲೇ ಕುಳಿತಿರುವುದನ್ನು ಕಂಡರು. ತಕ್ಷಣ ಮೊಗ್ಗಲಾನರು ಸಹಾ ಮರುಕ್ಷಣದಲ್ಲೇ ಅಲ್ಲಿಂದ ಮರೆಯಾಗಿ ಅವರು ಸಹಾ ಬ್ರಹ್ಮನ ಬಳಿಯಲ್ಲಿ ಪೂರ್ವದಿಕ್ಕಿನಲ್ಲಿ ಪ್ರತ್ಯಕ್ಷರಾದರು. ಆಗ ಮೊಗ್ಗಲಾನರು ತೇಜೋ ಧಾತುವಿನಲ್ಲಿ ಗಮನಕೊಟ್ಟು ಇದನ್ನು ಮಾಡಿದರು.

ಅದೇ ಸಮಯದಲ್ಲಿ ಮಹಾಕಸ್ಸಪರವರು ಸಹಾ ಭಗವಾನರು ಈಗ ಎಲ್ಲಿಹರು ಎಂದು ಗಮನ ಹರಿಸಿದಾಗ ಭಗವಾನರು ಬ್ರಹ್ಮನ ಮೇಲೆ ಪದ್ಮಾಸಿನರಾಗಿ ಆಕಾಶದಲ್ಲೇ ಕುಳಿತಿರುವುದನ್ನು ಕಂಡರು. ತಕ್ಷಣ ಮಹಾಕಸ್ಸಪರವರು ಸಹಾ ಮರುಕ್ಞಣದಲ್ಲೇ ಅಲ್ಲಿಂದ ಮರೆಯಾಗಿ ಅವರು ಸಹಾ ಬ್ರಹ್ಮನ ಬಳಿಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಪ್ರತ್ಯಕ್ಷರಾದರು. ಆಗ ಮಹಾಕಸ್ಸಪರವರುತೇಜೋ ಧಾತುವಿನಲ್ಲಿ ಗಮನಕೊಟ್ಟು ಇದನ್ನು ಮಾಡಿದರು.

ಅದೇ ಸಮಯದಲ್ಲಿ ಅನುರುದ್ಧರವರು  ಭಗವಾನರು ಈಗ ಎಲ್ಲಿಹರು ಎಂದು ಗಮನ ಹರಿಸಿದಾಗ ಭಗವಾನರು ಬ್ರಹ್ಮನ ಮೇಲೆ ಪದ್ಮಾಸಿನರಾಗಿ ಆಕಾಶದಲ್ಲೇ ಕುಳಿತಿರುವುದನ್ನು ಕಂಡರು. ತಕ್ಷಣ ಅನುರುದ್ಧರವರು  ಸಹಾ ಮರುಕ್ಷಣದಲ್ಲೇ ಅಲ್ಲಿಂದ ಮರೆಯಾಗಿ ಅವರು ಸಹಾ ಬ್ರಹ್ಮನ ಬಳಿಯಲ್ಲಿ ಉತ್ತರ ದಿಕ್ಕಿನಲ್ಲಿ ಪ್ರತ್ಯಕ್ಷರಾದರು. ಆಗ ಮಹಾಕಸ್ಸಪರವರು ತೇಜೋ ಧಾತವಿನಲ್ಲಿ ಗಮನಕೊಟ್ಟು ಇದನ್ನು ಮಾಡಿದರು.

ಅದೇ ಸಮಯದಲ್ಲಿ ಮಹಾಕಪ್ಪಿನರವರು   ಭಗವಾನರು ಈಗ ಎಲ್ಲಿಹರು ಎಂದು ಗಮನ ಹರಿಸಿದಾಗ ಭಗವಾನರು ಬ್ರಹ್ಮನ ಮೇಲೆ ಪದ್ಮಾಸಿನರಾಗಿ ಆಕಾಶದಲ್ಲೇ ಕುಳಿತಿರುವುದನ್ನು ಕಂಡರು. ತಕ್ಷಣ ಮಹಾಕಪ್ಪಿನರವರು  ಸಹಾ ಮರುಕ್ಷಣದಲ್ಲೇ ಅಲ್ಲಿಂದ ಮರೆಯಾಗಿ ಅವರು ಸಹಾ ಬ್ರಹ್ಮನ ಬಳಿಯಲ್ಲಿ ಪಶ್ಚಿಮ ದಿಕ್ಕಿನಲ್ಲಿ ಪ್ರತ್ಯಕ್ಷರಾದರು. ಆಗ ಮಹಾಕಸ್ಸಪರವರು ತೇಜೋ ಧಾತವಿನಲ್ಲಿ ಗಮನಕೊಟ್ಟು ಇದನ್ನು ಮಾಡಿದರು. 

ಇದರಿಂದಾಗಿ ಆ ಬ್ರಹ್ಮನಿಗೆ ತನ್ನ ದೃಷ್ಟಿಕೋನವು ತಪ್ಪಾದುದು ಎಂದು ಅರಿವಾಯಿತು. ಏಕೆಂದರೆ ಬುದ್ಧರು ಮಾತ್ರವಲ್ಲದೆ ಅವರ ಶಿಷ್ಯರು ಸಹಾ ಆತನ ಮನಸ್ಸನ್ನು ಓದಿದುದಲ್ಲದೇ ಆತನಿಗಿಂತ ಉನ್ನತ ಆಸನದಲ್ಲಿ ಕುಳಿತರು .ಅವರು ಪ್ರತ್ಯಕ್ಷ ಹಾಗೂ ಅದೃಷ್ಯರಾಗುವ ವೇಗವು ಸಹಾ ಆಶ್ಚರ್ಯ ತಂದಿತ್ತು. ಅದರೂ ಆತನಲ್ಲಿ ತಾನು ನಿತ್ಯ ಹಾಗೂ ನಿರಂತರ ಎಂಬ ದೃಷ್ಟಿಕೋನವು ಇನ್ನೂ ಉಳಿದಿತ್ತು. ನಂತರ ಬುದ್ಧರ ಬೋಧನೆಯಿಂದ ಅದು ಸಹಾ ದೂರಾಯಿತು.

5.10  ಸರ್ವವನ್ನು ಕಂಪನ ಹಾಗೂ ಚಲಿಸುವಂತೆ ಮಾಡುವವರು 

(ದೂರಸ್ಥಚಲನೆಕಾರ)

5.10.1 ಮಿಗಾರ ಭವನದ ಕಂಪನ 

ಮೊಗ್ಗಲಾನರಿಗೆ ಸರ್ವಧಾತುಗಳ ಮೇಲೆ ಹಾಗೂ ಸರ್ವ ವಸ್ತುಗಳ ಮೇಲೆ ಹಾಗೂ ಅವುಗಳ ಸ್ಥಿತಿಗಳ ಮೇಲೆ ಸವರ್ೊಚ್ಛ ಪ್ರಭುತ್ವವಿತ್ತು. ಒಮ್ಮೆ ಕೆಲ ಭಿಕ್ಖುಗಳು ವಿಹಾರದಲ್ಲಿದ್ದಾಗ  ನಿರ್ಲಕ್ಷ ಹೊಂದಿ ಪಾ ್ರಪಂಚಿಕ ವಿಷಯಗಳಲ್ಲಿ ಅತಿಯಾದ ಅಸಕ್ತಿ ಮಾತುಕತೆಗಳಲ್ಲಿ ತೊಡಗಿದ್ದರು . ಹಾಸ್ಯ ತಮಾಷೆೆಗಳಲ್ಲಿ ತೊಡಗಿದ್ದರು. ಆಗ ಭಗವಾನರು  ಮೊಗ್ಗಲಾನರಿಗೆ ಅವರನ್ನು ಸರಿಹಾದಿಗೆ ತರುವಂತೆ ನುಡಿದಾಗ ಮೊಗ್ಗಲಾನರು ತಮ್ಮ ಹೆಬರ್ಬಳಿನಿಂದ ಭೂಮಿಯನ್ನು ಒತ್ತಿದಾಗ ಆ ಭಿಕ್ಖುಗಳು ವಾಸವಿದ್ದ ಮಿಗಾರ ಭವನವೇ ಭೂಕಂಪನವಾದಂತೆ ಅಲುಗಾಡಿತು . ಆಗ ಭಿಕ್ಕೂಗಳೆಲ್ಲಾ ಭಯಭೀತರಾಗಿ ಹೊರಗೇ ಓಡಿ ಬಂದರು. ನಂತರ ತಮ್ಮ ಕರ್ತವ್ಯವನ್ನು ನೆನೆಸಿಕೊಂಡು ಸರಿಹಾದಿಗೆ ಬಂದರು. ಆಗ ಅವರಿಗೆ ಈ ಅತಿಮಾನಸ ಶಕ್ತಿಯ ಬಗೆಗೆ ಆಸಕ್ತಿ ಬಂದು ಭಗವಾನರಲ್ಲಿ ಕೇಳಿದಾಗ ಭಗವಾನರು ಅವರಿಗೆ ಅತಿಮಾನಸ ಶಕ್ತಿಗಳಿಗೆ ಆಧಾರವಾಗಿರುವ ಇದ್ಧಿಪಾದಗಳ ಬಗ್ಗೆ ಬೋಧನೆ ಮಾಡಿದರು (ಸಂ.ನಿ.51.14: ಜಾ299)

5.10.2 ವೈಜಯಂತ ಭವನದ ಕಂಪನ

ಒಮ್ಮೆ ಮೊಗ್ಗಲಾನರು ತಾವತಿಂಸ ಸ್ವರ್ಗಕ್ಕೆ ಹೋಗಿರುವಾಗ ದೇವೆಂದ್ರ ಸಕ್ಕನು ಧಮ್ಮವನ್ನು ಮರೆತು ಕೇವಲ ಸ್ವಗರ್ೀಯ ಸುಖಗಳಲ್ಲಿ ತಲ್ಲಿನನಾಗಿರುವಂತೆ ಕಂಡು ಬಂದಿತು. ಆಗ ಮೊಗ್ಗಲಾನರು ಇಂದ್ರನನ್ನೆ ಸರಿಹಾದಿಗೆ ತರಲು ವೈಜಯಂತ ಭವನವನ್ನೇ ತಮ್ಮ ಹೆಬ್ಬೆರಳಿನಿಂದ ಅದುಮಿ ನಡುಗಿಸಿದರು. ಈ ಘಟನೆಯಿಂದ ವಿಚಲಿತನಾದ ಸಕ್ಕರು ಅಹಂಕಾರದಿಂದ ವಿಮುಖರಾಗಿ ,ಬಹು ದಿನದ ಹಿಂದೆ ಆಲಿಸಿದ್ದಂತಹ ದುಃಖಕ್ಕೆ ಕಾರಣವಾದ ತೃಷ್ಣಕ್ಷಯದ ಬೋಧನೆಯನ್ನು ನೆನೆಪಿಸಿಕೊಂಡು ಮೊಗ್ಗಲಾನರಲ್ಲಿ ಕ್ಷಮೆ ಯಾಚಿಸಿದರು. ಮೊಗ್ಗಲಾನರು ಸಕ್ಕನಿಗೆ ಅದೇ ಬೋಧನೆಯನ್ನು ಪುನಃ ನೆನೆಪಿಸಲು ಹಾಗೂ ಪುನನಾರರ್ವತಿಸಲು ಕಾರಣವಿತ್ತು ಅವರು ಸಹಾ ಭಗವಾನರಿಂದ ಅದೇ ಸುತ್ತವನ್ನು ಆಲಿಸಿ ಅರಹಂತರಾಗಿದ್ದರು.. ಮೊಗ್ಗಲಾನರಿಗೆ ಆ ಸುತ್ತವು ಸಕ್ಕನ ಮೇಲೆ ಯಾವ ರೀತಿ ಪರಿಣಾಮ ಬೀರಿರಬಹುದು ಎಂಬ ಕುತೂಹಲವೂ ಇತ್ತು.

5.10.3 ಕ್ಷಾಮನಿವಾರಣೆಗೆ ಇದ್ದಿ ಶಕ್ತಿ

ಒಮ್ಮೆ ಭಗವಾನರು ಹಾಗೂ ಸಂಘವಿದ್ದ ಕಡೆಯಲ್ಲಿ ಬೀಕರ ಕ್ಷಾಮವಿತ್ತು, ಭಿಕ್ಖುಗಳಿಗೆ ಸಾಕಷ್ಟು ಆಹಾರ ಸಿಗುತ್ತಿರಲ್ಲಿಲ್ಲ. ಆಗ ಮೊಗ್ಗಲಾನರು ಭಗವಾನರಿಂದ ಈ ರೀತಿ ಅನುಮತಿ ಕೇಳಿದರು.  ಭಗವಾನ್ ಈ ಭೂಮಿಯ ಕೆಲ ಕೆಳಪದರುಗಳಲ್ಲಿ ಹೇರಳವಾದ ಆಹಾರವಿದೆ. ನಾನು ಆ ಪದರಗಳನ್ನು ಬುಡಮೇಲು ಮಾಡಲೇ, ಮೇಲ್ಬಾಗಕ್ಕೆ ತರಲೇ ,ಹಾಗೂ ಈ ಮೇಲ್ಭಾಗವನ್ನು ಕೆಳಗೆ ಹಾಕಲೇ ?

ಬೇಡ ಮೊಗ್ಗಲಾನ ಅದರಿಂದಾಗಿ ಅಪಾರ ಸಂಖ್ಯೆಯ ಜೀವಿಗಳಿಗೆ ಹಾನಿಯಾಗುವುದು. ಹೀಗೆ ಭಗವಾನರು ಅದಕ್ಕೆ ಅನುಮತಿ ನೀಡಲಿಲ್ಲ.

ಹಾಗಾದರೇ ಭಗವಾನ್ ನಾನು ಇದ್ಧಿಶಕ್ತಿಯಿಂದ  ಕ್ಷಾಮವಿಲ್ಲದ ಉತ್ತರ ಕುರು ರಾಜ್ಯಕ್ಕೆ ನೇರವಾಗಿ ರಸ್ತೆ ನಿಮರ್ಿಸಲೇ ? ಅದರಿಂದಾಗಿ ಭಿಕ್ಖುಗಳಿಗೆ ಸುಲಭವಾಗಿ ಆಹಾರ ಸಿಗುವಂತಾಗುವುದು.  ಅದರೇ ಭಗವಾನರು ಅದಕ್ಕೂ ಸಹಾ ನಿರಾಕರಿಸಿದರು. ಅದರೆ ಮುಂದೆ ಸ್ವಲ್ಪಕಾಲದಲ್ಲೇ ಕ್ಷಾಮ ದೂರಾಯಿತು. ಎಲ್ಲರೂ ಕ್ಷೇಮವಾಗಿ ಉಳಿದರು. ಅತಿಮಾನಸಶಕ್ತಿಯ ಅಗತ್ಯವಿಲ್ಲದೆಯೇ ಎಲ್ಲವೂ ಸರಿಹೋಯಿತು. ಬಹುಷಃ ಮೊಗ್ಗಲಾನರ ಸಲಹೆ ನಿರಾಕರಿಸಿದ ಏಕೈಕ ಘಟನೆ ಇದಾಗಿತ್ತು. (ವಿನಯ ಪಿಟಿಕ ,ಪಾರಾಜಿಕ1 , 2)

5.10.4  ಹಿಮಾಲಯದಿಂದ ಔಷಧಿ ರವಾನೆ

    ಒಮ್ಮೆ ಸಾರಿಪುತ್ತರು ಕಾಯಿಲೆ ಬಿದ್ದರು ಅವರ ಗುಣಮುಖಕ್ಕಾಗಿ ಹಿಮಾಲಯದ ಒಂದು ವಿಶಿಷ್ಟ ಕಮಲದ ದಂಟಿನ ಅಗತ್ಯವಿತ್ತು. ಆಗ ಮೊಗ್ಗಲಾನರು ಆ ದಂಟನ್ನು ತಾವು ಇದ್ದ ಕಡೆಯಿಂದಲೇ ಆ ಸ್ಥಾನದಿಂದ ಇಲ್ಲಿಗೆ ಬರುವಂತೆ ಸ್ಥಾನಪಲ್ಲಟಗೊಳಿಸಿದರು..  ಅದನ್ನು ಸಾರಿಪುತ್ತರಿಗೆ ನೀಡಿದರು. (ಮಹಾವಗ್ಗ 4.20)

5.10.5  ಆನಂದ ಬೋಧಿ ವೃಕ್ಷವನ್ನು ತಂದವರು

ಮಹಾಮೊಗ್ಗಲಾನರು ಮಹಾಬೋಧಿ ವೃಕ್ಷದ ಹಣ್ಣನ್ನು ತರಲು ಆಕಾಶ ಮಾರ್ಗದಿಂದ ಹೊರಟರು. ಹಾಗೂ ಅಲ್ಲಿ ದಂಡದಿಂದ ಹಣ್ಣನ್ನು ಬೀಳಿಸಿ ಅದನ್ನು ನೆಲಕ್ಕೆ ಬೀಳಿಸದೆ ಬಟ್ಟೆಯಿಂದ ಮುಚ್ಚಿಕೊಂಡು ತೆಗೆದುಕೊಂಡು ಬಂದರು. ಇಲ್ಲಿ ರಾಜರ ಅನುಮತಿಯಿಂದ ಜೇತವನದ ದ್ವಾರದ ಬಳಿಯಲ್ಲಿ ಗುಂಡಿಯನ್ನು ತೋಡಿದರು. ಅಲ್ಲಿನ ಮಣ್ಣಿಗೆ ಬಂಗಾರ ಪುಡಿಯನ್ನು ಹಾಗೂ ಸುಗಂಧಿತ ದ್ರವ್ಯಗಳನ್ನು ಬೆರೆಸಲಾಯಿತು. ಅಲ್ಲಿ ಸಮಸ್ತ ಗಣ್ಯರು ನೆರೆದಿದ್ದರು, ಬಂಗಾರದ ದೊಡ್ಡ ಪಾತ್ರೆಗೆ ಕೆಳಗೆ ಅಪಾರ ರಂದ್ರಗಳನ್ನು ಮಾಡಿಸಿ, ಅದಕ್ಕೆ ಸುಗಂದಿತ ಮಣ್ಣನ್ನು ಹಾಕಿ ಅದಕ್ಕೆ ಬೀಜ ಹಾಕಲು ರಾಜ ಪಸೇನದಿಯನ್ನು ಕೇಳಿಕೊಂಡರು ಅದರೆ ಸದಾ ರಾಜ್ಯವೂ ತನ್ನ ಅಧೀನದಲ್ಲಿ ಇರುವುದಿಲ್ಲ ಹೀಗಾಗಿ ಇದಕ್ಕೆ ಆನಾಥಪಿಂಡಿಕರೇ ಸೂಕ್ತರೆಂದು ರಾಜರು ಹೇಳಿದಾಗ ಅವರು ಒಪ್ಪಿದರು. 

ನಂತರ ಆ ಜೀಜವನ್ನು ಅದರಲ್ಲಿ ಹಾಕಿ ನಂತರ ಮಣ್ಣನ್ನು ಮುಚ್ಚಿದರು. ತಕ್ಷಣ ಅಲ್ಲಿ ಅದ್ಭುತವು ನಡೆಯಿತು. ಆ ಬೋಧಿವೃಕ್ಷವೂ ಆ ಕ್ಷಣವೇ ಬೆಳೆಯತೊಡಗಿತು. ಹಾಗೆಯೇ ಬೇಳೆಯುತ್ತ ಸುಮಾರು 50 ಕೈಗಳ ಎತ್ತರಕ್ಕೆ ಬೆಳೆಯಿತು. ಹಾಗೇಯೇ 50 ಕೈಗಳಷ್ಟು ಅಗಲದಷ್ಟು ಅದರ ಶಾಖೆಗಳು ಅಗಲವಾಯಿತು. ಅಲ್ಲಿ ಒಂದು ಬೃಹತ್ ವೃಕ್ಷದ ನಿಮರ್ಾಣವಾಗಿಬಿಟ್ಟಿತು. ಎಲ್ಲರೂ ಆಶ್ಚರ್ಯಗಳಿಂದ ಆನಂದಿತರಾದರು. ಆಗ ಪಸೇನದಿಯು ಆ ವೃಕ್ಷದ ಸುತ್ತಲೂ ಸ್ವರ್ಣದ ಮಿಶರ್ಿತ ಮಣ್ಣಿನಿಂದ ಸಮ ಮಾಡಿದನು. ಹಾಗೇಯೆ ಸ್ವರ್ಣದ ಹಾಗೂ ಬೆಳ್ಳಿಯ ಬಿಂದಿಗೆಗಳಲ್ಲಿ ನೀರು ಹಾಗೂ ಸುಗಂಧಿತ ದ್ರವ್ಯಗಳನ್ನು ವ್ಯವಸ್ಥೆ ಮಾಡಿದನು. ಅದರ ಸುತ್ತಲೂ ಭವ್ಯವಾದ ರತ್ನಮಯ ಅಂಗಣವನ್ನು ಹಾಗೆಯೇ ಅದಕ್ಕೆ 7 ಭವ್ಯವಾದ ರತ್ನಮಯ ದ್ವಾರಗಳನ್ನು ನಿಮರ್ಿಸಿದನು. ಅದನ್ನು ಅತ್ಯಂತ ಸುಂದರ ಹಾಗೂ ಪೂಜ್ಯನೀಯ ವಾತಾವರಣ ನಿಮರ್ಾಣ ಮಾಡಿದನು.

ಇದಾದ ನಂತರ ಆನಂದರು ಭಗವಾನರಲ್ಲಿಗೆ ಬಂದು ಬೋಧಿವೃಕ್ಷದ ಕೆಳಗೆ ಧ್ಯಾನ ಮಾಡಿದಂತೆ ಇಲ್ಲೂ ಸಹಾ ಮಾಡಿ ಎಂದು ಕೇಳಿಕೊಂಡರು. ಅದರೆ ಭಗವಾನರು ಗಯಾದಲ್ಲಿನ ಆ ಬೋಧಿವೃಕ್ಷದ ಸ್ಥಳದ ವಿನಃ ಬೇರೆ ಯಾವ ಸ್ಥಳವೂ ಆದನ್ನು ಸಹಿಸಲಾರದು ಎಂದು ನುಡಿದರು. ಆಗ ಆನಂದರು ಸರ್ವರ ಮಂಗಳಕ್ಕಾಗಿಯಾದರೂ ಈ ಸ್ಥಳದ ಭೂ ಸಾಮಾಥ್ರ್ಯಕ್ಕೆ ಅನುಸಾರವಾಗಿಯಾದರೂ ಈ ಸ್ಥಳದಲ್ಲಿ ಧ್ಯಾನಿಸಿ ಎಂದು ಕೇಳಿಕೊಂಡರು. ಆಗ ಭಗವಾನರು ಅದಕ್ಕೆ ಒಪ್ಪಿ ಅಲ್ಲಿ ಧ್ಯಾನಿಸಿದರು.

ಅಂದಿನಿಂದ ಆ ಸ್ಥಳಕ್ಕೆ ಆನಂದ ಬೋಧಿ ಎಂದು ಕರೆಯುತ್ತಾರೆ. ಈ ವೃಕ್ಷಕ್ಕೆ ಮಹಾಮೊಗ್ಗಲಾನರೇ ಬೀಜವನ್ನು ಆಕಾಶ ಮಾರ್ಗದಿಂದ ತಂದಿದ್ದರು. 


- ಂ0ಂ  

No comments:

Post a Comment

12. ಪರಿನಿಬ್ಬಾಣದ ನಂತರ

 12. ಪರಿನಿಬ್ಬಾಣದ ನಂತರ  12.1 ಉಕ್ಕಚೆಲಾ ಸುತ್ತ: ಆಗ ಭಗವಾನರು ವಜ್ಜಿಗಳ ರಾಜ್ಯದಲ್ಲಿ ವಿಹರಿಸುತ್ತಿದ್ದರು. ಗಂಗಾನದಿಯ ತೀರದ ಉಕ್ಕಚೆಲಾದಲ್ಲಿ ಇದ್ದರು. ಆಗಷ್ಟೇ ಸಾರ...