Saturday, November 5, 2022

3. ಬುದ್ಧ ಭಗವಾನರ ಜೀವನದಲ್ಲಿ ಮಹತ್ತರ ಪಾತ್ರ

 3. ಬುದ್ಧ ಭಗವಾನರ ಜೀವನದಲ್ಲಿ ಮಹತ್ತರ ಪಾತ್ರ






3.1 ಅಗ್ರಶ್ರಾವಕರ ಜೊತೆಯಲ್ಲಿಯೇ ಯಸೋಧರೆಯ ಭೇಟಿ

ಭಗವಾನರು ಕಪಿಲವಸ್ತುವಿನಲ್ಲಿ ಅರಮನೆಗೆ ಭೇಟಿ ಕೊಟ್ಟಾಗ ಯಸೋಧರೆಯ ಹೊರತು ಎಲ್ಲರೂ ಭಗವಾನರನ್ನು ದಶರ್ಿಸಿದರು. ಆಕೆಯಲ್ಲಿ ಭಗವಾನರ ಬಗ್ಗೆ ಅಪಾರ ಶ್ರದ್ಧೆ, ಭಕ್ತಿ, ಪ್ರೀತಿ ಇದ್ದರೂ ಸಹಾ ಈ ರೀತಿಯ ಮನೋಭಾವನೆಯಿಂದ ಕೂಡಿದ್ದಳು ಅದೆಂದರೆ: ಖಂಡಿತವಾಗಿ ನನ್ನಲ್ಲಿ ಪಾತಿವ್ರತ್ಯದಂತಹ ಹಾಗು ಇತರ ಸದ್ಗುಣಗಳು ಇದ್ದಲ್ಲಿ ಅನುಪಮ ಸಂಪನ್ನರಾದ ಭಗವಾನರೇ ಸ್ವತಃ ಬಂದು ನನಗೆ ದರ್ಶನ ನೀಡಲಿ.

ಇದನ್ನು ತಮ್ಮ ದಿವ್ಯಶ್ರೋತದಿಂದ ಅರಿತ ಭಗವಾನರು ಅಗ್ರಶ್ರಾವಕರಾದ ಸಾರಿಪುತ್ತ ಹಾಗು ಮೊಗ್ಗಲಾನರ ಜೊತೆಯಲ್ಲಿಯೇ ಅಂತಃಪುರ ಪ್ರವೇಶಿಸುತ್ತಾರೆ. ತಮಗೆಂದು ಮೀಸಲಾಗಿದ್ದ ಪೀಠದಲ್ಲಿ ಕುಳಿತು ರಾಜಕುಮಾರಿಯು ತನಗೆ ಸರಿ ಎನಿಸಿದಂತೆ ಗೌರವಿಸಲಿ ಎಂದು ನುಡಿದರು. ಹಾಗೆಯೇ ಭಗವಾನರು ಅಗ್ರಶ್ರಾವಕರಿಗೂ ಹೀಗೆ ನುಡಿದರು: ರಾಜಕುಮಾರಿಯು ಅಪಾರ ದುಃಖತಪ್ತಳು, ಆಕೆಯು ಹೃದಯಾಳದಿಂದ ಗೌರವ ಅಪರ್ಿಸುವಾಗ ಯಾರೂ ಆಕೆಯನ್ನು ತಡೆಯಬೇಡಿ. ಯಶೋಧರೆಯು ಅಲ್ಲಿ ಹತ್ತಿರ ಬರುತ್ತಿದ್ದಂತೆಯೇ ವೇಗವಾಗಿ ಭಗವಾನರ ಪಾದಗಳನ್ನು ಹಿಡಿದು ತನ್ನ ತಲೆಯನ್ನು ಪಾದಗಳ ಮೇಲಿರಿಸಿ ತನಗೆ ಸರಿ ಎನಿಸುವಂತೆ ಗೌರವಿಸಿದಳು. 

3.2 ಅತಿ ಮಾನಸ ಶಕ್ತಿಗಳ ಪ್ರದರ್ಶನ

ಒಮ್ಮೆ ರಾಜಗೃಹದ ಶ್ರೇಷ್ಟಿಗೆ ಯಾವ ಪಂಗಡದ ಸಮಣ ಬ್ರಾಹ್ಮಣರು ಇದ್ದಿಶಕ್ತಿಸಂಪನ್ನರು ಎಂದು ತಿಳಿಯುವ ಆಸಕ್ತಿಯಾಯಿತು ಅದಕ್ಕಾಗಿ ಆತನು ಶ್ರೀಗಂಧದ ಪಿಂಡಪಾತ್ರೆಯನ್ನು ನಿಮರ್ಿಸಿ, ಅದನ್ನು ಬಹು ಎತ್ತರವಾದ ಕಂಬದ ಮೇಲೆ ಇಟ್ಟು ಯಾರು ಋದ್ಧಿಸಂಪನ್ನರೋ ಅವರು ಪಡೆಯಬಹುದು ಎಂದು ಘೋಷಿಸಿದನು. 

 ಅದೇ ಸಮಯದಲ್ಲಿ ಮೊಗ್ಗಲಾನ ಹಾಗೂ ಪಿಂಡೋಲ ಭಾರದ್ವಜರು ಆ ಸ್ಥಳದಲ್ಲಿ ಹಾದು ಹೋಗುತ್ತಿದ್ದರು. ಅನ್ಯ ಧಮರ್ಿಯ ಸಮಣ ಬ್ರಾಹ್ಮಣರು ಹೆದರಿ ಮೌನ ತಾಳಿದರು.  ಕೆಲ ಜನರು ಅಲ್ಲಿ ಕಂಡು ಬಂದಂತಹ ಮೊಗ್ಗಲಾನರಿಗೆ  ಇದಕ್ಕೆ ಆಹ್ವಾನ ನೀಡಿದರು. ಅದರೆ ಮೊಗ್ಗಲಾನರು ಅದಕ್ಕೆ ನಿರಾಕರಿಸಿ  ಇದಕ್ಕೆ ಪಿಂಡೋಲ ಭಾರದ್ವಜನೇ ಸಾಕು  ಎಂದು ಆತನಿಗೆ ಒಪ್ಪಿಗೆ ನೀಡಿದರು. ಆತನು ಇದ್ದಿಯಲ್ಲಿ ಅತಿಕಿರಿಯ, ಅದರೆ ಹಾರುವ ಶಕ್ತಿಯುಳ್ಳವನಾಗಿದ್ದನು. ಆತನು ಹಾರಿ ಕ್ಷಣಾರ್ಧದಲ್ಲಿ ಪಿಂಡಪಾತ್ರೆಯನ್ನು ಎತ್ತಿಕೊಂಡು ಇಳಿದನು. ಅದನ್ನು ಭಗವಾನರ ಸಮ್ಮುಖದಲ್ಲಿ ತರಲಾಯಿತು. ಅದರೆ ಭಗವಾನರು ಇದ್ಧಿಶಕ್ತಿಯಿಂದ ಜನರ ಸೆಳೆಯುವುದು ತಪ್ಪು ಎಂದು ನುಡಿದು, ಅತಿಮಾನಸ ಶಕ್ತಿಯ ಪ್ರದರ್ಶನ ನಿಶಿದ್ಧಿಸಿದರು. ಹಾಗೂ ಆ ಪಿಂಡಪಾತ್ರೆಯನ್ನು ಒಡೆದು ಹಾಕಿದರು. ಏಕೆಂದರೆ ಅರಹಂತರಲ್ಲದವರು ಅದಕ್ಕೆ ಒಳಗಾಗಿ ಲಾಭ ಸತ್ಕಾರದ ಬಲೆಗೆ ಬೀಳುವ ಸಾಧ್ಯತೆಯಿತ್ತು.

   ಈಗ ಅನ್ಯಮತಾವಾಲಂಭಿಗಳಲ್ಲಿ ಬುದ್ಧರ ಶಿಷ್ಯರು ಅತಿಮಾನಸಶಕ್ತಿಗಳ ಪ್ರದರ್ಶನ ಮಾಡುವುದಿಲ್ಲ ಎಂಬ ವಿಷಯ ತಿಳಿದು ಅವರೆಲ್ಲಾ ಆನಂದ ಪಟ್ಟರು ಏಕೆಂದರೆ ಅವರಿಗೆ ಮಾಡುವುದಕ್ಕೆ ಬರುತ್ತಿರಲಿಲ್ಲ ಈ ನೆಪ ಹಾಕಿ ತಾವು ಸಹಾ ಪಾರಾಗಬಹುದು ಎಂದು ಅವರು ಭಾವಿಸಿದರು. ಅದಕ್ಕಾಗಿ ಹೀಗೆ ಹೇಳಲು ತೊಡಗಿದರು.:ಶ್ರಮಣ ಗೋತಮರು ಏನಾದರೂ ಪವಾಡ ಮಾಡಿದರೇ ನಾವೂ ಎರಡೂ ಮಾಡುತ್ತೇವೆ. ಎಂದು ಬಹಿರಂಗ ಸಾವಾಲು ಎಸೆದರು. 

  ಈ ವಿಷಯವನ್ನು ರಾಜಬಿಂಬಸಾರರು ಭಗವಾನರ ಬಳಿ ತಿಳಿಸಿ ಭಗವಾನರಲ್ಲಿ ಅತಿಮಾನಸಶಕ್ತಿ ಪ್ರದರ್ಶಸಿಲು ಕೇಳಿಕೊಂಡರು. ಆಗ ಭಗವಾನರು ಒಪ್ಪಿದರು. ಆಗ ರಾಜರು ಆ ನಿಯಮವು ತಮಗೆ  ಅನ್ವಯವಾಗುವುದಿಲ್ಲವೇ ಎಂದು ಕೇಳಿದಾಗ ಬುದ್ಧರು ಹೀಗೆ ಉತ್ತರಿಸಿದರು.: ಮಹಾರಾಜ ಬುದ್ಧರಿಗೆ ನಿಯಮಗಳಿರುವುದಿಲ್ಲ. ಹೇಗೆಂದರೆ ಯಾವ ರೀತಿ ತೋಟದ ಹಣ್ಣು ಹೂಗಳು ಪರರಿಗೆ ನಿಶಿದ್ಧವೇ ಹೊರತು ಮಾಲಿಕನಿಗಲ್ಲ ಅದೇ ರೀತಿ ಅರಹಂತರು ಹಾಗೂ ಸಮ್ಮಸಂಬುದ್ಧರಾಗಿರುವ ಅವರು ತಪ್ಪು  ಎಸಗುವ ಸಾಧ್ಯತೆಯೇ ಇಲ್ಲ ಎಂದರು.

  ನಂತರ ಭಗವಾನರು ಆಷಾಢ ಹುಣ್ಣಿಮೆಯಂದು ಅತಿಮಾನಸ ಶಕ್ತಿ ಪ್ರದಶರ್ಿಸಲು ನಿರ್ಧರಿಸಿ ಅದನ್ನು ರಾಜ ಬಿಂಬಸಾರನಿಗೆ ತಿಳಿಸಿದರು. ಈ ವಿಷಯವು ಎಲ್ಲಡೆ ಹಬ್ಬಿತು. ಎಲ್ಲರು ಆ ಮಹಾಸುದಿನಕ್ಕಾಗಿ ಕಾದರು. ಆಗ ರಾಜರು ಮಂಟಪ ಮಾಡಲು ಹೇಳಿದಾಗ ಬುದ್ಧರು ನಿರಾಕರಿಸಿ ಅದನ್ನು ದೇವೇಂದ್ರ ಸಕ್ಕನು 12 ಯೋಜನ ಉದ್ದದ ಮಂಟಪವನ್ನು ಮಾಡುವನೆಂದರು.

ಆಗ ಈ ರೀತಿಯಲ್ಲಿ ಡಂಗೂರ ಸಾರಲಾಯಿತು :

. ಇಂದಿಗೆ ಸರಿಯಾಗಿ 7ನೇಯ ದಿನದಂದು ಬುದ್ಧಭಗವಾನರು ಆಷಾಡ ಹುಣ್ಣಿಮೆಯಂದು ಶ್ರಾವಸ್ಥಿ ನಗರದ ದ್ವಾರದ ಹತ್ತಿರ ಗಂಡಂಬ ವೃಕ್ಷದ ಕೆಳಗೆ ಅತಿಮಾನಸ ಶಕ್ತಿಗಳನ್ನು ಪ್ರದಶರ್ಿಸುವರು. ಆಸಕ್ತರಾದ ಎಲ್ಲರೂ ಸೇರುವುದು. ಹಾಗೂ ಅನ್ಯ ಮಾತಾವಲಂಬಿಗಳು ಯಾರೇ ಆಗಿರಲಿ ಅವರು ಇಚ್ಚಿಸಿದರೇ ತಮ್ಮ ಶಕ್ತಿಯನ್ನು ಸಹಾ ಪ್ರದಶರ್ಿಸಬಹುದು.

ಆಗ ಭಗವಾನರು ಆ ಸಮಯದಲ್ಲಿ ಶ್ರಾವಸ್ತಿಯ ಆ ಸ್ಥಳಕ್ಕೆ ಹೋದರು. ಅಲ್ಲಿ ರಾಜನ ಮಾಲಿಯು ನೀಡಿದ ಹಣ್ಣು ಸೇವಿಸಿ ಅದನ್ನು ಹೂಳು ಎಂದು ಅಜ್ಞಾಪಿಸಿದರು. ಅದನ್ನು ಹೂಳಿದ ನಂತರ ಅದು ಕ್ಷಣಾರ್ಧದಲ್ಲೇ ಹೆಮ್ಮರವಾಯಿತು. ಶಕ್ರನು ಸಹಾ ಭವ್ಯ ಮಂಟಪವನ್ನು ನಿಮರ್ಿಸಿದ್ದನು.

ಪರಮತಾವಲಂಬಿಗಳು ಕೇವಲ ಬಡಾಯಿಕೋರರೇ ಹೊರತು ಯಾವ ಪವಾಡವೂ ಪ್ರದಶರ್ಿಸಲಿಲ್ಲ. ಆಗ ಭಗವಾನರು ಯಮಕಪತಿಹಾರಿಯ ಎಂಬ ಅವಳಿ ಪವಾಡ ತೋರಿಸಿದರು. ಆಗ ಒಂದುಕಡೆಯಿಂದ ನೀರು ಮತ್ತು ಇನ್ನೊಂದೆಡೆಯಿಂದ ಅಗ್ನಿಯನ್ನು ತಮ್ಮ ದೇಹದಿಂದ ಪ್ರಕಾಶಿಸಿದರು. ಇದನ್ನು ಕಂಡ ಸಮಸ್ತ ಜನರು ಆಶ್ಚರ್ಯದಿಂದ, ಅಪಾರ ಶ್ರದ್ಧೆಯಿಂದ ಕೂಡಿದವರಾದರು. ನಂತರ ಜನರ ಮನಸ್ಸು ಧಮ್ಮವನ್ನು ಹೀರಲೂ ಪಕ್ವವಾಗಿದೆ ಎಂದು ತಿಳಿದು ಆಕಾಶದಿಂದಲೇ ಧಮ್ಮವನ್ನು ಬೋಧಿಸಿದರು. 20ಕೋಟಿ ಜೀವಿಗಳು ಆ ಅಮೃತಧಮ್ಮವನ್ನು ಆಲಿಸಿ ಧನ್ಯತೆ ಪಡೆದವು. ನಂತರ ಹಿಂದಿನ ಬುದ್ಧರಂತೆ  ಪರ್ವತಗಳಿಗಿಂತಲೂ ಬೃಹತ್ ಶರೀರ ಪಡೆದು ಪರ್ವತ ಹತ್ತಿ ಭಗವಾನರು ಅಲ್ಲಿಂದ ನೇರವಾಗಿ ತಾವತಿಂಸ ದೇವಲೋಕಕ್ಕೆ ಹೋದರು. ಅಲ್ಲಿ ಅವರ ಮಾತೆಯಾದ ಮಹಾಮಾಯಾದೇವಿಯವರು ಪುರುಷ ದೇವತೆಯಾಗಿ ಪುನರ್ಜನ್ಮಿಸಿದ್ದರು. ಅಲ್ಲಿ ಅವರ ಹೆಸರು ಸಂತುಸಿತಾದೇವ ಎಂದಾಗಿತ್ತು. ಅಲ್ಲಿ ಭಗವಾನರು ಇಡೀ ಮೂರು ತಿಂಗಳು ದೇವತೆಗಳಿಗೆ ಮತ್ತು ಬ್ರಹ್ಮರಿಗೆ ಅಭಿಧಮ್ಮೋಪದೇಶ ಮಾಡಿದರು. ಪರಿಣಾಮವಾಗಿ ಸಂತುಸಿತಾದೇವ ಮತ್ತು ಇತರ ಎಲ್ಲಾ ದೇವತೆಗಳು ಮತ್ತು ಬ್ರಹ್ಮರು ಸೋತಾಪತ್ತಿ ಫಲಪಡೆದರು. ಹಾಗೂ ಇತರ 80 ಕೋಟಿ ದೇವತೆಗಳು ಇತರ ಫಲಗಳನ್ನು ಪಡೆದರು.

*   *   *

ಭಗವಾನರು ಹೀಗೆ ದೇವಲೋಕಕ್ಕೆ  ಹೋಗಿರುವಾಗ ಜನರೆಲ್ಲಾ ಬಂದು ಭಗವಾನರೆಲ್ಲಿ? ಎಂದು ಮೊಗ್ಗಲ್ಲಾನ ರವರಲ್ಲಿ ಕೇಳತೊಡಗಿದರು. ಮೊಗ್ಗಲ್ಲಾನ ರವರಿಗೆ ಭಗವಾನರೆಲ್ಲಿದ್ದಾರೆ ಎಂದು ತಿಳಿದಿತ್ತು. ಆದರೂ ಅನುರುದ್ಧರವರ ದಿವ್ಯದೃಷ್ಟಿಯ ಬಗ್ಗೆ ಜನರಿಗೆ ತಿಳಿಯಲಿ ಎಂದು ಅನುರುದ್ಧರವರನ್ನು ಕೇಳಿ ಎಂದರು. ಅವರೆಲ್ಲಾ ಹೋಗಿ ಪೂಜ್ಯ ಅನುರುದ್ಧರವರಿಗೆ ಭೇಟಿಮಾಡಿ ಭಗವಾನರೆಲ್ಲಿ ಎಂದು ಕೇಳಿದರು. ಆಗ ಅನುರುದ್ಧರು ತಮ್ಮ ದಿವ್ಯಚಕ್ಷುವಿನಿಂದ ವೀಕ್ಷಿಸಿ ಹೀಗೆ ಹೇಳಿದರು: ಭಗವಾನರು ತಾವತಿಂಸ ಲೋಕದಲ್ಲಿದ್ದಾರೆ. ಅಲ್ಲಿಯ ಸಭಾಂಗಣದಲ್ಲಿ ಸುವರ್ಣವರ್ಣದ ಶಿಲಾ ಸಿಂಹಾಸನದಲ್ಲಿ ಆಸೀನರಾಗಿ ತಮ್ಮ ತಾಯಿಯ ಸಹಿತ ಸರ್ವ ದೇವತೆಗಳಿಗೆ ಅಭಿಧಮ್ಮ ಬೋಧಿಸುತ್ತಿರುವರು ಎಂದರು.

ಆ ಸಮಯದಲ್ಲಿ ಪೂಜ್ಯ ಸಾರಿಪುತ್ರರು ಶ್ರಾವಸ್ಥಿಯಿಂದ ಮೂವತ್ತು ಯೋಜನಗಳಷ್ಟು ದೂರದಲ್ಲಿರುವ ಸಂಕಪ್ಪನಗರದಲ್ಲಿದ್ದರು. ಅಲ್ಲಿದ್ದು ಇಡೀ ವಷರ್ಾವಾಸದ ಕಾಲದಲ್ಲಿ ಭಗವಾನರು ಅಲ್ಲಿ ಬೋಧಿಸಿದ್ದನ್ನು ಇಲ್ಲಿ ಭಿಕ್ಷುಗಳಿಗೆ ಅಭಿಧಮ್ಮವನ್ನು ಪ್ರಕಟಪಡಿಸಿದರು. 

ವಷರ್ಾವಾಸದ ಅಂತ್ಯದಲ್ಲಿ ಪೂಜ್ಯ ಮೊಗ್ಗಲ್ಲಾನರವರು ತಾವತಿಂಸ ದೇವಲೋಕಕ್ಕೆ ಭಗವಾನರನ್ನು ಕಾಣಲು ಹೊರಟರು. ಅಲ್ಲಿಂದ ಭಗವಾನರು ಹಿಂದಿರುಗುವ ಕಾಲ ಮತ್ತು ಸ್ಥಳವನ್ನು ನಿಗಡಿಪಡಿಸಿಕೊಂಡು ಬಂದಿದ್ದರು. ಭಗವಾನರು ವಷರ್ಾವಾಸದ ಅಂತ್ಯದಲ್ಲಿ ಬರುವ ಹುಣ್ಣಿಮೆಯಂದು, ಸಂಕಸ್ಸನಗರದಲ್ಲಿ ಸಾರಿಪುತ್ರರು ಇರುವ ಕಡೆಯಲ್ಲಿ ಇಳಿಯುವರು ಎಂದು ತಿಳಿಯಪಡಿಸಿದರು. ಇದರಿಂದಾಗಿ ಜನರಿಗೆ ಅವರೇ ಅಗ್ರ ಇದ್ದಿಸಂಪನ್ನರು ಎಂದು ತಿಳಿಯಿತು.

ವಾಗ್ದಾನದಂತೆಯೇ ಭಗವಾನರು ಸಂಕಸ್ಸ ನಗರದ ಮಹಾ ಹೆಬ್ಬಾಗಿಲಿನಲ್ಲಿ,  ಅಶ್ವಯುಜ ತಿಂಗಳಿನ ಪೂರ್ಣಮಿಯಂದು ತಮ್ಮ ಶರೀರದಿಂದ ಆರು ವರ್ಣದ ಕಿರಣಗಳಿಂದ ಪ್ರಕಾಶಿಸುತ್ತಾ ಒಂದೆಡೆ ದೇವತೆಗಳು ಮತ್ತೊಂದೆಡೆ ಬ್ರಹ್ಮರೊಂದಿಗೆ ಜೊತೆಗೂಡಿ ಇಳಿದರು. ಆಗ ಇಡೀ ನಗರವೆಲ್ಲಾ ಇವರ ತೇಜಸ್ಸಿನಿಂದ ಪ್ರಕಾಶಮಯವಾಗಿತ್ತು. ಇನ್ನೊಂದೆಡೆ ಭಿಕ್ಷುಗಣದೊಂದಿಗೆ ಸಾರಿಪುತ್ರರು ಸ್ವಾಗತಿಸಿದರು. ಭಗವಾನರು ಹೀಗೆ ದೇವತೆಗಳೊಂದಿಗೆ ಮತ್ತು ಬ್ರಹ್ಮರೊಂದಿಗೆ ಅತ್ಯಂತ ಪ್ರಕಾಶಮಾನವಾಗಿ ಇಳಿಯುತ್ತಿದ್ದುದನ್ನು ಕಂಡು ಸಾರಿಪುತ್ರರು ಶ್ರದ್ಧಾಭಕ್ತಿಯಿಂದ ಕೂಡಿ ಭಗವಾನರ ಬಳಿಗೆ ಬಂದು    ಹೀಗೆ ನುಡಿದರು: ಪರಮಪೂಜ್ಯ ಭಗವಾನ್, ನಾವು ಎಂದಿಗೂ ಈ ಬಗೆಯ ತಮ್ಮ ಭವ್ಯವೈಭೋಗದ ಲೀಲೆಯನ್ನು ಈ ಹಿಂದೆ ಕೇಳಿರಲಿಲ್ಲ, ಕಂಡಿರಲಿಲ್ಲ. ದೇವತೆಗಳಿಂದಲೂ ಮತ್ತು ಬ್ರಹ್ಮರಿಂದಲೂ ಹೀಗೆ ಪೂಜಿತರಾಗಿರುವುದನ್ನು ನೋಡೇ ಇರಲಿಲ್ಲ ಎಂದರು. 

ಆಗ ಭಗವಾನರು ಹೀಗೆ ನುಡಿದರು: ಮಗು ಸಾರಿಪುತ್ರ, ಯಾರಲ್ಲಿ ಅದ್ವಿತೀಯ ಸದ್ಗುಣಗಳಿರುವವೋ ಅವರು ಖಂಡಿತವಾಗಿ ದೇವಮನುಷ್ಯರಿಂದ ಪೂಜಿತರಾಗುತ್ತಾರೆ 

ಎಂದು ಹೇಳಿ ಹೀಗೆ ಈ ಗಾಥೆಗಳನ್ನು ನುಡಿದರು.  

ಯಾವ ಧೀಮಂತರು ಧ್ಯಾನದಲ್ಲೇ ನಿರತರೋ, ಯಾರು ತ್ಯಾಗದ ಶಾಂತತೆಯಲ್ಲಿ ರತರಾಗಿರುವರೋ ಅಂತಹ ಸ್ಮೃತಿವಂತರು, ಸಮ್ಮಾಸಂಬುದ್ಧರನ್ನು ದೇವತೆಗಳು ಸಹಾ ಪ್ರಿಯರಾಗಿ ಕಾಣುವರು. (ಧ.ಪ.181)

ಬೋಧನೆಯ ಅಂತ್ಯದಲ್ಲಿ ಬಹಳಷ್ಟು ಜನರು ಫಲಗಳನ್ನು ಪ್ರಾಪ್ತಿಮಾಡಿದರು.

3.3 ಸಾರಿಪುತ್ತರು ಪ್ರಜ್ಞೆಯಲ್ಲಿ ಅಗ್ರರೆಂದು ಲೋಕಕ್ಕೆ ತಿಳಿದ ಬಗೆ

ಒಮ್ಮೆ ಭಗವಾನರು ಲೋಕ ಕಲ್ಯಾಣಕ್ಕಾಗಿ ಯಮಕಪರಿಹಾರಿಯ ಅತೀಂದ್ರಿಯ ಶಕ್ತಿಯನ್ನು ಪ್ರದಶರ್ಿಸಿ, ಅಪಾರ ಜನರಲ್ಲಿ ಶ್ರದ್ಧೆಯನ್ನು ಸ್ಥಾಪಿಸಿ ಅವರಿಗೆ ಧಮ್ಮ ಬೋಧಿಸಿ ಸೋತಾಪನ್ನಾದಿ ಸ್ಥಿತಿಗಳಲ್ಲಿ ಪ್ರತಿಷ್ಠಾಪಿಸಿದರು. ನಂತರ ಭಗವಾನರು ಅಲ್ಲಿಂದ ತಾವತಿಂಸ ಲೋಕಕ್ಕೆ ಹೊರಟು ಅಲ್ಲಿ ಮೂರು ತಿಂಗಳ ಕಾಲ ದೇವತೆಗಳಿಗೆ ಅಭಿಧಮ್ಮ ಕಲಿಸುತ್ತಾರೆ. ನಂತರ ಭಗವಾನರು ಸಂಕಸ್ಸದಲ್ಲಿ ದೇವತೆಗಳ ಸಹಿತ ಇಳಿಯುತ್ತಾರೆ. ಆಗ ಸಕ್ಕ ದೇವೇಂದ್ರನು ಭಗವಾನರ ಪಿಂಡಪಾತ್ರೆ ಹಿಡಿದಿದ್ದರೆ, ಬ್ರಹ್ಮ ಕೊಡೆಯನ್ನು ಹಿಡಿದಿರುತ್ತಾನೆ. ಆಗ ಭಗವಾನರು ಲೋಕಕ್ಕೆ ಸಾರಿಪುತ್ತರ ಪ್ರಜ್ಞಾಪ್ರಕಾಶ ತಿಳಿಯಲೆಂದು ಎಲ್ಲರಿಗೂ ಪ್ರಶ್ನಿಸುತ್ತಾ ನಂತರ ಸಾರಿಪುತ್ತ ಹಂತದ ಪ್ರಶ್ನೆಯನ್ನು ಕೇಳುತ್ತಾರೆ. ಅದಕ್ಕೆ ಬೇರೆ ಯಾರಲ್ಲೂ ಉತ್ತರವಿರಲಿಲ್ಲ. ಆಗ ಸಾರಿಪುತ್ತರು ಆ ಪ್ರಶ್ನೆಗೆ ವಿಸ್ತಾರವಾದ ಉತ್ತರ ನೀಡುತ್ತಾರೆ.  ಅದರಿಂದಾಗಿ 30 ಕೋಟಿ ಜೀವಿಗಳು ಅಮೃತಧಮ್ಮವನ್ನು ಪಡೆಯುತ್ತಾರೆ. ಆ ಉತ್ತರದಿಂದಾಗಿ ಅವರು ಜನರಿಗೆ ದೇವತೆಗಳಿಗೆ ಹಾಗು ಬ್ರಹ್ಮರಿಗೂ ಪ್ರಜ್ಞೆಯಲ್ಲಿ ಅಗ್ರರು ಎಂದು ತಿಳಿದುಹೋಗುವುದು. ಆಗ ಜನರು ಸಾರಿಪುತ್ತರನ್ನು ಪ್ರಶಂಸಿಸುತ್ತಾರೆ. ಆಗ ಭಗವಾನರು ಸಾರಿಪುತ್ತರು ಈಗ ಮಾತ್ರವಲ್ಲ, ಹಿಂದೆಯೂ ಮಹಾ ಪ್ರಾಜ್ಞರೆಂದು ಪೂರ್ವ ಜನ್ಮದ ಸರಭಮಿಗ ಜಾತಕವನ್ನು ತಿಳಿಸುತ್ತಾರೆ. 

3.4 ಮೊಗ್ಗಲಾನ ಹಾಗೂ ಸಾರಿಪುತ್ತರ ಸ್ಥಿರವಾದ ಸ್ನೇಹ

  ಒಮ್ಮೆ ಮೊಗ್ಗಲಾನ ಹಾಗೂ ಸಾರಿಪುತ್ತರು ವರ್ಷಕಾಲದಲ್ಲಿ ಏಕಾಂತ ವಿಹಾರಿಯಾಗಿ ತೊಡಗಿದ್ದರು. ಇದಕ್ಕಾಗಿ ಅವರು ಭಗವಾನರಿಂದ ಅನುಮತಿ ಪಡೆದು ಭಿಕ್ಕೂಗಳಿಂದಲೂ ದೂರವಾಗಿ ಹಳ್ಳಿಯ ಸಮೀಪದ ಅರಣ್ಯದಲ್ಲಿ ಧ್ಯಾನಿಗಳಾಗಿ ವಿಹರಿಸುತ್ತಿದ್ದರು. ಅಲ್ಲಿ ಒಬ್ಬ ವ್ಯಕ್ತಿಯು ಪರರನ್ನು ಬೇರೆ ಮಾಡುವುದರಲ್ಲಿ ಆನಂದಿಸುವವನಾಗಿದ್ದನು. ಆತನು ಹಲವಾರು ಜನರಿಗೇ ಹೀಗೆ ಹಿಂದಿನಿಂದಲೂ ಮಾಡುತ್ತಿದ್ದನು. ಇಲ್ಲಿ ಸಾರಿಪುತ್ತ ಹಾಗೂ ಮೊಗ್ಗಲಾನರು ಒಟ್ಟಾಗಿ ಇರುವುದು ಆತನಿಂದ ನೋಡಿ ಸಹಿಸಲಾಗಲಿಲ್ಲ. ಇವರಿಬ್ಬರಿಗೂ  ಭೇದ ತಂದಿಡಬೇಕೆಂದು ನಿರ್ಧರಿಸಿ ಆತನು ಮೊದಲು ಸಾರಿಪುತ್ತರ ಬಳಿಗೆ ಬಂದನು. ಹಾಗೂ ಹೀಗೆ ಹೇಳಿದನು. ಭಂತೆ ತಮಗೂ ಹಾಗೂ ಮೊಗ್ಗಲಾನರವರಿಗೂ ಏನಾದರೂ ಜಗಳವಾಗಿತ್ತೇನು?

ಏಕೆ ?

ಏಕೆಂದರೆ ಅವರು ಹೀಗೆ ಹೇಳುತ್ತಿದ್ದರು ಏನೆಂದರೆ ಸಾರಿಪುತ್ತನು ನನಗೆ ಜಾತಿಯಲ್ಲಾಗಲಿ,ಗೋತ್ರದಲ್ಲಿಯಾಗಲಿ, ವಂಶದಲ್ಲಿಯಾಗಲಿ, ಸಿದ್ಧಿಗಳಲ್ಲಾಗಲಿ ಯಾವ ರೀತಿಯೂ ಸಮನಲ್ಲ ಎಂದು.

ಹೌದೇ ಸರಿ ನೀನು ಹೋಗು ಎಂದರು.

ನಂತರ ಆತನು ಮಾರನೆಯ ದಿನ ಮೊಗ್ಗಲಾನರ ಬಳಿಗೆ ಬಂದನು ಹಾಗೂ ಹೀಗೆ ಹೇಳಿದನು.

ಭಂತೆ ತಮಗೂ ಹಾಗೂ ಸಾರಿಪುತ್ತರವರಿಗೂ ಏನಾದರೂ ಜಗಳವಾಗಿತ್ತೇನು?

ಏಕೆ ?

ಏಕೆಂದರೆ ಅವರು ಹೀಗೆ ಹೇಳುತ್ತಿದ್ದರು ಏನೆಂದರೆ ಮೊಗ್ಗಲಾನನು  ನನಗೆ ಜಾತಿಯಲ್ಲಾಗಲಿ,ಗೋತ್ರದಲ್ಲಿಯಾಗಲಿ, ವಂಶದಲ್ಲಿಯಾಗಲಿ, ಜ್ಞಾನದಲ್ಲಾಗಲಿ ಯಾವ ರೀತಿಯೂ ಸಮನಲ್ಲ ಎಂದು.

ಹೌದೇ ಸರಿ ನೀನು ಹೋಗು ಎಂದರು.

ನಂತರ ಮೊಗ್ಗಲಾನರು ಸಾರಿಪುತ್ತರ ಬಳಿಗೆ ಬಂದರು ಹಾಗೂ ಹೀಗೇ ಕೇಳಿದರು: ಸಾರಿಪುತ್ತ  ನಮ್ಮ ಹತ್ತಿರವೇ ಇದ್ದು ನಮ್ಮ ದಾನದಲ್ಲಿರುವ ಈ ವ್ಯಕ್ತಿಯು ನಿನ್ನೊಂದಿಗೇ ಏನಾದರೂ ಹೇಳಿದನೇ ?

ಆಗ ಸಾರಿಪುತ್ತರು ವಿಷಯವನ್ನೆಲ್ಲಾ ಹಂಚಿಕೊಂಡರು. ನಂತರ ಮೊಗ್ಗಲಾನರು ವಿಷಯವನ್ನು ಹಂಚಿಕೊಂಡರು. ನಂತರ ಅವರು ಆ ವ್ಯಕ್ತಿಯನ್ನು ಹತ್ತಿರ ಸೇರಿಸದೆ ಆತನನ್ನು ದೂರವಿಟ್ಟರು. ಸಾರಿಪುತ್ತ ಹಾಗೂ ಮೊಗ್ಗಲಾನರು ಸದಾ ಜೊತೆಗಿರುತ್ತಿದ್ದರು. ಹಾಗೂ ಅವರಿಗೆ ಪರಸ್ಪರರ ಮೇಲೆ ಅಪಾರ ಗೌರವಗಳಿತ್ತು. ಆಗಾಗ ಇನ್ನೊಬ್ಬರ ಸಾಧನೆಗಳನ್ನು ಪ್ರಶಂಸಿಸುತ್ತಿದ್ದರು. ಹಾಗೂ ಉಪಾಸಕರು ಸಹಾ ಅವರ ಜೊತೆಯಲ್ಲಿಯೇ ಭಿಕ್ಖು ಸಂಘಕ್ಕೆ ದಾನಕ್ಕಾಗಿ ಆಹ್ವಾನ ನೀಡುತ್ತಿದ್ದರು. 

3.5 ಮೊಗ್ಗಲಾನರನ್ನು ತಪ್ಪಾಗಿ ಭಾವಿಸಿದ ಭಿಕ್ಷುಗಳು

ಒಮ್ಮೆ ಮೊಗ್ಗಲಾನರು ವರ್ಷವಾಸಕ್ಕೆಂದು 600 ಭಿಕ್ಷುಗಳ ಸಹಿತ ವಿಹಾರವೊಂದರಲ್ಲಿ ನೆಲೆಸಿದರು. ಆಗ ಅವರನ್ನು ಗಮನಿಸಿದ ಉಪಾಸಕರು ಅವರಿಗೆ ಎಲ್ಲಾ ಪರಿಕರಗಳನ್ನು ಒದಗಿಸುವುದಾಗಿ ವಚನವಿತ್ತರು. ವಷರ್ಾವಾಸ ಕಳೆಯುತ್ತಿದ್ದರೂ ಎಲ್ಲಾ ಪರಿಕರಗಳು ಇನ್ನೂ ಬಂದಿರಲಿಲ್ಲ. ಹೀಗಾಗಿ ಅವರು ಬುದ್ಧರತ್ತ ಹೋಗುವಾಗ ಭಿಕ್ಷುಗಳಿಗೆ ಹೀಗೆ ಹೇಳಿದರು: ಉಪಾಸಕರು ಯುವ ಭಿಕ್ಷುಗಳಿಗೆ ಮತ್ತು ಸಾಮಣೇರರಿಗೆ ಪರಿಕರಗಳನ್ನು ನೀಡಿದರೆ ತೆಗೆದುಕೊಂಡು ಕಳುಹಿಸಿಕೊಡಿ, ಅವರು ನೀಡದಿದ್ದರೆ ನನಗೆ ಸಂದೇಶವನ್ನು ತಲುಪಿಸಿರಿ.

ಆಗ ಭಿಕ್ಷುಗಳು ಇದರ ಬಗ್ಗೆ ಹೀಗೆ ಚಚರ್ಿಸಲಾರಂಭಿಸಿದರು: ಕೇಳಿದಿರಾ, ಮೊಗ್ಗಲಾನರ ಮಾತನ್ನು, ಅವರಲ್ಲಿ ಇನ್ನೂ ಬಯಕೆಗಳಿವೆ, ಇಲ್ಲದಿದ್ದರೆ ಹಾಗೇಕೆ ಹೇಳುತ್ತಿದ್ದರು....

ಆಗ ಅಲ್ಲಿಗೆ ಬಂದ ಭಗವಾನರು ಅವರು ಚಚರ್ಿಸುತ್ತಿದ್ದ ವಿಷಯವನ್ನು ಕೇಳಿದಾಗ, ಅವರು ಇಂತಹ ವಿಷಯವೆಂದು ತಿಳಿಸಿದಾಗ, ಭಗವಾನರು ಹೀಗೆ ನುಡಿದರು: ಭಿಕ್ಷುಗಳೇ, ನನ್ನ ಪುತ್ರನಾದ  ಮೊಗ್ಗಲಾನ ಬಯಕೆಗಳನ್ನು ಹೊಂದಿಲ್ಲ, ಆತನು ಆ ರೀತಿಯ ಹೇಳುವಿಕೆಯ ಹಿಂದೆ ಇರುವ ಉದ್ದೇಶವೇನೆಂದರೆ ಜನರ ಪುಣ್ಯ ವ್ಯರ್ಥವಾಗದಿರಲಿ ಹಾಗೂ ಸಾಮಣೇರರಿಗೂ ಪರಿಕರ ಸಿಗಲಿ ಎಂದೇ ಆಗಿದೆ ಎಂದು ನುಡಿದು ಈ ಮೇಲಿನ ಗಾಥೆ ನುಡಿದರು.

ಯಾರಲ್ಲಿ ಅವಲಂಬನೆ ಕಾಣಲಾಗುವುದಿಲ್ಲವೋ,

ಪರಮಾರ್ಥದ ಪ್ರಜ್ಞೆಯಿಂದ ಸಂಶಯಗಳಿಂದ ಮುಕ್ತನೋ,

ಯಾರು ಅಮರತ್ವದ ಆಳಕ್ಕೆ ಮುಳುಗಿರುವನೋ

ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ. (411)

3.6 ಧೈರ್ಯವೇ ಜೀವನ

ಒಮ್ಮೆ ಮೊಗ್ಗಲಾನರು ಹಿಮಾಲಯಗಳತ್ತ ಸಂಚರಿಸುತ್ತಿದ್ದರು. ಆಗ ಗುಂಪಿನಿಂದ ತಪ್ಪಿಸಿಕೊಂಡಿದ್ದ ಮೇಕೆಯನ್ನು ನೋಡಿದರು. ಹಾಗೇ ನೋಡುತ್ತಿದ್ದಂತೆ ಅದರ ಮೇಲೆ ಚಿರತೆಯೊಂದು ಅದರ ಮೇಲೆ ಹಾರಲು ಬಂದಿತು. ಆಗ ಕ್ಷಿಪ್ರವಾಗಿ ಮೇಕೆ ಹೀಗೆ ಯೋಚಿಸಿತು.  ಈಗ ನಾನು ಹೆದರಿ ಓಡಿಹೋದರೆ ನನ್ನ ಜೀವ ಕಳೆದುಕೊಳ್ಳಬೇಕಾಗುತ್ತದೆ. ಅದರ ಬದಲು ವೀರರಂತೆ ಎದುರಿಸುವೆ. ಬಹುಶಃ ನನ್ನ ಪ್ರಾಣ ಉಳಿದರೂ ಉಳಿಯಬಹುದು ಎಂದು ಹೀಗೆ ಯೋಚಿಸಿ ಅದು ಎದುರಿಸಲು ಸಿದ್ಧವಾಯಿತು. ಹೀಗೆ ಚಿರತೆಯು ಹಾರಲು ಬಂದಾಗ ಮೇಕೆಯು ಪಕ್ಕಕ್ಕೆ ಬಂದು ತನ್ನ ಕೊಂಬಿನಿಂದ ಅದಕ್ಕೆ ತಿಮಿಯಿತು. ಇದರಿಂದ ಕೆಲಕಾಲ ಚಿರತೆಯು ದಿಗ್ಭ್ರಾಂತವಾಯಿತು. ಇದೇ ಸಮಯ ಬಳಸಿಕೊಂಡು ಮೇಕೆಯು ಓಡಿಹೋಗಿ ತನ್ನ ಗುಂಪಿಗೆ ಸೇರಿತು. ಮೊಗ್ಗಲನರಿಗೆ ಆಶ್ಚರ್ಯವೆನಿಸಿ ಭಗವಾನರಿಗೆ ಈ ವಿಷಯ ತಿಳಿಸಿದರು. ಆಗ ಭಗವಾನರು ಈ ಸಲ ಅದು ಧೈರ್ಯ ಪ್ರದಶರ್ಿಸಿ ಉಳಿದಿದೆ ಅದರೆ ತನ್ನ ಹಿಂದಿನ ಜನ್ಮದಲ್ಲಿ ಹಾಗೆ ಮಾಡದೆ ತನ್ನ ಪ್ರಾಣವನ್ನು ಕಳೆದುಕೊಂಡಿತ್ತು ಎಂದು ಅದರ ಹಿಂದಿನ ಜನ್ಮವನ್ನು ತಿಳಿಸಿದರು.


- ಂ0ಂ  

No comments:

Post a Comment

12. ಪರಿನಿಬ್ಬಾಣದ ನಂತರ

 12. ಪರಿನಿಬ್ಬಾಣದ ನಂತರ  12.1 ಉಕ್ಕಚೆಲಾ ಸುತ್ತ: ಆಗ ಭಗವಾನರು ವಜ್ಜಿಗಳ ರಾಜ್ಯದಲ್ಲಿ ವಿಹರಿಸುತ್ತಿದ್ದರು. ಗಂಗಾನದಿಯ ತೀರದ ಉಕ್ಕಚೆಲಾದಲ್ಲಿ ಇದ್ದರು. ಆಗಷ್ಟೇ ಸಾರ...