2. ಬುದ್ಧ ಭಗವಾನರ ಶಾಸನದಲ್ಲಿ
2.1 ಮಹಾಮೊಗ್ಗಲಾನರ ಅರಹಂತತ್ವ ಪ್ರಾಪ್ತಿ
ಮಹಾಮೊಗ್ಗಲಾನರವರು ಮಗಧದ ಸಮೀಪದ ಕಲ್ಲವಾಲಪುತ್ತ ಎಂಬ ಹಳ್ಳಿಯಲ್ಲಿ ನೆಲೆಸಿದ್ದರು. ಪಬ್ಬಜ್ಜ ಸ್ವೀಕಾರದ ಏಳು ದಿನಕ್ಕೆ ಕಾಲಿಟ್ಟರು. ಸದಾಕಾಲ ಧ್ಯಾನದಲ್ಲಿ ತೊಡಗಿದರು. ಆದರೂ ಅವರು ಥೀನಮಿದ್ಧ (ಆಲಸ್ಯ, ಜಡತೆ, ನಿದ್ದೆ) ಯಿಂದಾಗಿ ತುಸು ತ್ರಾಸಪಟ್ಟರು.
ಮೊಗ್ಗಲಾನರವರು ತಮ್ಮ ಧ್ಯಾನ ಸಾಧನೆಗೆ ಮಗಧದ ಸಮೀಪದ ಕಲ್ಲವಲಪುತ್ತ ಎಂಬ ಹಳ್ಳಿಯ ಪಕ್ಕದ ಅರಣ್ಯವನ್ನು ಆಯ್ಕೆ ಮಾಡಿದರು, ಅಲ್ಲಿ ಅವರು ಪದ್ಮಾಸನದಲ್ಲಿ ಹಾಗೂ ನಡಿಗೆಯ ಭಂಗಿಯಲ್ಲಿ ಧ್ಯಾನವನ್ನು ಆರಂಭಿಸಿದರು. ಅದರೂ ಸಹಾ ಅವರು ತೂಗಡಿಕೆಯನ್ನು ಗೆಲ್ಲಲಾರೆದೆ ಹೋದರು. ಅವರಿಗೆ ನಿದ್ರಿಸಲು ಇಷ್ಟವಿರಲಿಲ್ಲ ಅದರೂ ತಮ್ಮ ಬೆನ್ನು ಹಾಗೂ ಕತ್ತನ್ನು ನೇರವಾಗಿಡಲು ಅಸಮರ್ಥರಾದರು. ಅದರೂ ತಮ್ಮ ಇಚ್ಚಾಶಕ್ತಿಯಿಂದ ಕಣ್ಣುಗಳನ್ನು ಅಗಲವಾಗಿಸಿ ನಿದ್ರೆ ಗೆಲ್ಲಲು ಯತ್ನಿಸಿದರು. ಅದರೂ ಯಶಸ್ವಿಯಾಗದೆ ಹೋಯಿತು, ಅಂದು ಅವರು ಸಂಘಕ್ಕೆ ಸೇರಿ 7ನೆಯ ದಿನವಾಗಿತ್ತು. ಭಗವಾನರಿಗೆ ಇವರ ಕಷ್ಟಗಳು ಅರ್ಥವಾಗಿ ಅವರ ಮುಂದೆ ತೇಜೋಮಯವಾಗಿ ಪ್ರತ್ಯಕ್ಷವಾದರು. ಹಾಗೂ ಹೀಗೆ ಕೇಳಿದರು.
ಮೊಗ್ಗಲಾನ ತೂಗಡಿಸುತ್ತಿರುವೆಯಾ.? ಮೊಗ್ಗಲಾನ ತೂಗಡಿಸುತ್ತಿರುವೆಯಾ (ಮಂಪರು)
ಹೌದು ಭಗವಾನ್
ಸರಿ ಮೊಗ್ಗಲಾನ , ಯಾವಾಗಲಾದರೂ ನಿನಗೆ ನಿದ್ದೆ ಅಥವಾ ತೂಗಡಿಕೆ ಆವರಿಸಿದಾಗ ಆ ಯೋಚನೆ ಅಥವಾ ಆ ಗ್ರಹಿೆಕೆಯೆಡೆಗೆ ಗಮನ ಹರಿಸದಿರು, ಹಾಗೆ ಆ ಗ್ರಹಿಕೆಯೆಡೆ ಗಮನವನ್ನು ಹರಿಸಿದಾಗ ತೂಗಡಿಕೆ ದೂರವಾಗುವುದು.
ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಆಗ ನೀನೂ ಹಿಂದೆ ಆಲಿಸಿರುವ ಬೋಧನೆಯನ್ನು (ಧಮ್ಮ) ನೆನಪಿಸಿಕೋ ಹಾಗೂ ಅವನ್ನು ವಿಶ್ಲೇಶಿಸಿಕೊ..........
ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನೀನೂ ಆಲಿಸಿದ್ದ ಧಮ್ಮವನ್ನು ಪೂರ್ಣ ವಿವರವಾಗಿ ಪುನಾರಾವತರ್ಿತಗೊಳಿಸಿಕೊ..............
ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನಿನ್ನ ಕಿವಿಗಳ ಹಾಲೆಗಳನ್ನು ಎಳೆದಾಡು ಮತ್ತು ನಿನ್ನ ಅಂಗಗಳನ್ನು ಉಜ್ಜಲು ಆರಂಭಿಸು,............
ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನೀನು ಆಸನದಿಂದ ಎದ್ದೇಳು ಹಾಗೂ ಕಣ್ಣುಗಳನ್ನು ನೀರಿನಿಂದ ತೊಳೆದುಕೊ, ನಂತರ ಎಲ್ಲಾ ದಿಕ್ಕುಗಳ ಕಡೆಗೆ ವೀಕ್ಷಿಸಲು ಆರಂಭಿಸು, ನಕ್ಷತ್ರಗಳನ್ನು ಹಾಗೂ ನಕ್ಷತ್ರಗಳ ಸಮೂಹ ರಾಶಿಗಳನ್ನು ನೋಡಲು ಆರಂಭಿಸು..........
ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಬೆಳಕಿನ ಸಂಜ್ಞೆಯತ್ತ ಗಮನಹರಿಸು, ಹಗಲಿನ ಸಂಜ್ಞೆಯತ್ತ ಗಮನಹರಿಸು, ಅದನ್ನು ರಾತ್ರಿಯಲ್ಲಿ ಅಭ್ಯಾಸಿಸು ಅಂದರೆ ರಾತ್ರಿಯನ್ನು ಹಗಲಿನಂತೆ ಹಾಗೂ ಹಗಲನ್ನು ರಾತ್ರಿಯಂತೆ ಗ್ರಹಿಸುವುದು., ಹೀಗಾದಾಗ ಮನಸ್ಸು ಸ್ವಚ್ಚವಾಗಿ ಜಡರಹಿತವಾಗುವುದು. ಹೀಗೆ ಮನಸ್ಸನ್ನು ಬೆಳಕಿನಂತೆ ಪೂರ್ಣವಾಗಿ ಪ್ರಕಾಶಿಸು........
ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಆಗ ಇಂದ್ರಿಯಗಳನ್ನು ಅಂತಮರ್ುಖಗೊಳಿಸಿ, ಮನಸ್ಸನ್ನು ಬಾಹ್ಯಕ್ಕೆ ದಾರಿತಪ್ಪದಂತೆ ಜಾಗಾರೂಕತೆವಹಿಸಿ, ನಡಿಗೆಯ ಧ್ಯಾನವನ್ನು ಆರಂಭಿಸು, ನಡಿಗೆಯಲ್ಲಿಯೇ ಗಮನವಹಿಸು. ಹಾಗೂ ಹಿಂದೆಯಿರುವುದನ್ನು ಕಲ್ಪಿಸಿಕೊ, ಹಾಗೂ ಹಿಂದೆಯಿದ್ದಾಗ ಮುಂದೆಯಿರುವುದನ್ನು ಕಲ್ಪಿಸಿಕೋ........
ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನಿದ್ದೆಯು ಈಗ ಅವಶ್ಯಕವೆಂದು ತಿಳಿದು ಆಗ ಜಾಗಾರೂಕತೆಯಿಂದ, ಸ್ಪಷ್ಟ ಅರಿವಿನಿಂದ, ಸಿಂಹಶಯ್ಯೆಯ ಭಂಗಿಯಲ್ಲಿ ಬಲಮುಖವಾಗಿ ಮಲಗಿ, ಬಲಗಾಲ ಮೇಲೆ ಎಡಗಾಲನ್ನು ಇಟ್ಟು ನೇರವಾಗಿ ಮಲಗಿ, ಮತ್ತೆ ಮೇಲೆಳುವ ಸಮಯವನ್ನು ನಿಗಧಿತಪಡಿಸಿ, ಅಲ್ಪನಿದ್ದೆಯಲ್ಲಿ ತೃಪ್ತಿತಾಳಿ ನಂತರ ಎಚ್ಚರಗೊಂಡಾಗ ಜಾಗರೂಕತೆ ತಾಳಿ ಈ ಬಗೆಯ ಮನೋಭಾವ ತಾಳುವುದು ನಾನು ಅತಿನಿದ್ದೆಯಲ್ಲಿ ಅಥವಾ ಅತಿವಿಶ್ರಾಂತಿಯ ಸುಖದಲ್ಲಿ ತಲ್ಲೀನಲಾಗಿಲ್ಲ ಹಾಗೂ ತಲ್ಲೀನವಾಗುವುದಿಲ್ಲ. ಹೀಗೆ ಮೊಗ್ಗಾಲಾನ ನೀನು ಸುಶಿಕ್ಷಣಗೊಳಿಸಿಕೊಳ್ಳಬೇಕು.
ನಂತರ ಮೊಗ್ಗಲಾನ ನೀನು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು ಹೇಗೆಂದರೆ ನಾನು ನನ್ನ ಅಹಂಕಾರ ಉದಯಿಸುವ ಅಥವಾ ವೃದ್ಧಿಯಾಗುವಂತಹ ಕುಟುಂಬಗಳಿಗೆ ಆಹಾರಕ್ಕೆ ಹೋಗಲಾರೆನು ಏಕೆಂದರೆ ಹಲವಾರು ಪ್ರಾಪಂಚಿಕ ಕಾರ್ಯಗಳಲ್ಲಿ ತೊಡಗಿರುವ ಕುಟುಂಬಗಳಿಗೆ ಹೋದಾಗ ಅವರು ಗಮನಹರಿಸದೆ ಹೋಗಬಹುದು ಆಗ ಇವರು ನನಗೆ ಇಷ್ಟ ಪಡುತ್ತಿಲ್ಲ, ಏನೂ ದೊರೆಯದೆ ಹೋಯಿತು, ಎಂದು ಲಜ್ಜೆಗೆ ಒಳಗಾಗಿ, ಕ್ಷೊಭೆಗೆ ಒಳಗಾಗಿ, ಅನಿಯಂತ್ರಿತನಾಗಿ, ಸಮಾಧಿಗೆ ದೂರನಾಗುತ್ತಾನೆ.
ನಂತರ ಮೊಗ್ಗಲಾನ ನೀನು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು, ನಾನು ಮುಖಾಮುಖಿ ಅಥವಾ ವಿವಾದಾತ್ಮಕ ವಾದಗಳಲ್ಲಿ ತೊಡಗುವುದಿಲ್ಲ ಏಕೆಂದರೆ ಆಗ ನಾನಾ ಚಚರ್ೆ ವಾದ ವಿವಾದಗಳು ಉಂಟಾಗಿ ಕ್ಷೊಭೆಗೆ ಒಳಗಾಗಿ, ಅನಿಯಂತ್ರಿತನಾಗಿ, ಸಮಾಧಿಗೆ ದೂರನಾಗುತ್ತಾನೆ.
ಮತ್ತೆ ಮೊಗ್ಗಾಲಾನ ನಾನು ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಪ್ರಶಂಸಿಸಲಾರೆನು, ಹಾಗೆಯೇ ನಾನು ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಅಪ್ರಶಂಸಿಸಲಾರೆನು ಹಾಗೆಯೇ ಗೃಹಸ್ಥರೊಡನೆಯಾಗಲಿ ಅಥವಾ ಪಬ್ಬಜಿತರೊಡನೆಯಾಗಲಿ ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಪ್ರಶಂಸಿಸಲಾರೆನು, ಹಾಗೂ ಯಾವ ಸ್ಥಳಗಳು ನಿಶಬ್ದದಿಂದ ಕೂಡಿವೆಯೋ, ಶಬ್ಧರಹಿತವೂ, ಹಾಗೂ ನಿರ್ಜನ ಪ್ರದೇಶಗಳೋ ಅಂತಹ ಧ್ಯಾನಯೋಗ್ಯ ಪ್ರದೇಶಗಳನ್ನು ನಾನು ಪ್ರಶಂಸಿಸುವೆನು.
ಹೀಗೆ ಭಗವಾನರು ನುಡಿದಾಗ ಮೊಗ್ಗಲಾನರು ಹೀಗೆ ಪ್ರಶ್ನಿಸಿದರು : ಭಗವಾನ್ ಸಂಕ್ಷಿಪ್ತವಾಗಿ ತಿಳಿಸಿ, ಯಾವ ರೀತಿಯಲ್ಲಿ ಒಬ್ಬನು ತೃಷ್ಣೆಯಿಂದ ಮುಕ್ತನಾಗುವನು, ಪೂರ್ಣವಾಗಿ ಬಂಧನಮುಕ್ತನಾಗುವನು, ಅತ್ಯಂತ ನಿಷ್ಟನು ,ಬ್ರಹ್ಮಚರ್ಯೆಯ ಜೀವನ ಪೂರ್ಣಗೊಳಿಸುವನು, ಅಂತಿಮ ಹಂತವನ್ನು ಪಡೆಯುವನು, ಹಾಗೂ ದೇವ ಮನುಷ್ಯರಲ್ಲಿ ಶ್ರೇಷ್ಟನಾಗುವನು.
ಇಲ್ಲಿ ಮೊಗ್ಗಾಲಾನ, ಒಬ್ಬನು ಹೀಗೆ ಕೇಳುತ್ತಾನೆ ಏನೆಂದರೆ ಎಲ್ಲಾ ಆಗುಹೋಗುಗಳು ಅಂಟಿಕೊಳ್ಳುವಿಕೆಗೆ ಅರ್ಹವಲ್ಲ ಆಗ ಆತನು ಎಲ್ಲಾ ಬಗೆಯ ಸ್ಥಿತಿಗಳನ್ನು ಅರಿಯುತ್ತಾನೆ, ಯಾವುದೇ ಅನುಭವಗಳಾಗಲಿ ಅದರಲ್ಲಿ ಕ್ಷಣಿಕತೆಯನ್ನು ಅರಿತು, ವಿರಾಗ ತಾಳುತ್ತಾನೆ, ನಿರೋಧ ತಾಳುತ್ತಾನೆ, ತ್ಯೆಜಿಸುವಿಕೆ ತಾಳುತ್ತಾನೆ, ಹೀಗೆ ಲೋಕದ ಯಾವುದಕ್ಕೂ ಅಂಟಲಾರನು, ಹೀಗೆ ಯಾವುದಕ್ಕೂ ಅಂಟದೆ ತಳಮಳಗೊಳ್ಳಲಾರನು, ತಳಮಳಗೊಳ್ಳದೆ ಆರತರ್ಯದಲ್ಲೇ ಸರಿಯಾಗಿ ಮುಕ್ತನಾಗುತ್ತಾನೆ, ಆಗ ಆತನಲ್ಲಿ ವಿಮುಕ್ತಿ ಜ್ಞಾನವು ಉಂಟಾಗುವುದು, ಜನ್ಮವು ಅಂತ್ಯವಾಯಿತು, ಬ್ರಹ್ಮಚರ್ಯೆಯ ಜೀವನ ಪೂರ್ಣವಾಯಿತು, ಮಾಡಬೇಕಾದುದೆಲ್ಲಾ ಮಾಡಿಯಾಯಿತು, ಈ ಲೋಕಗಳಿಗೆ ಇನ್ನೇನೂ ಉಳಿದಿಲ್ಲ.
ಈ ರೀತಿಯಾಗಿ ಮೊಗ್ಗಾಲಾನ ಸಂಕ್ಷಿಪ್ತವಾಗಿ ಒಬ್ಬನು ತೃಷ್ಣೆಯಿಂದ ಮುಕ್ತನಾಗುವನು, ಪೂರ್ಣವಾಗಿ ಬಂಧನಮುಕ್ತನಾಗುವನು, ಅತ್ಯಂತ ನಿಷ್ಟನು ,ಬ್ರಹ್ಮಚರ್ಯೆಯ ಜೀವನ ಪೂರ್ಣಗೊಳಿಸುವನು, ಅಂತಿಮ ಹಂತವನ್ನು ಪಡೆಯುವನು, ಹಾಗೂ ದೇವ ಮನುಷ್ಯರಲ್ಲಿ ಶ್ರೇಷ್ಟನಾಗುವನು.. (ಪಾಚಾಲ ಸುತ್ತ, ಅಂಗುತ್ತರ ನಿಕಾಯ 7.58)
ನಂತರ ಮೊಗ್ಗಲಾನರು ಭಗವಾನರ ಬೋಧನೆಗೆ ಅನುಸಾರವಾಗಿ ಧ್ಯಾನಿಸಲು ಆರಂಭಿಸಿದರು. ಆಗ ಅವರಿಗೆ ಸಮಾಧಿಯ ಉತ್ತುಂಗ ಶಿಖರಕ್ಕೆ ಏರಲು ಭಗವಾನರು ಹೇಗೆ ಸಹಾಯ ಮಾಡಿದರು ಎಂಬುದನ್ನು ಅವರ ಮೂಲಕವೇ ಕೇಳೊಣ.
2.2 ಸಮಾಧಿಯ ಹಾಗೂ ಪ್ರಜ್ಞೆಯ ಉತ್ತುಂಗ ಶಿಖರಕ್ಕೆರಲು ಸಹಾಯ
1. ಪಠಮಝಾನ(ಪ್ರಥಮ ಧ್ಯಾನ) ಪಞ್ಞಾ ಸುತ್ತಂ
.ಒಮ್ಮೆ ಅಯುಷ್ಮಂತರಾದ ಮಹಾಮೊಗ್ಗಲಾನರವರು ಸಾವಸ್ಥಿಯಲ್ಲಿನ ಆನಾಥಪಿಂಡಿಕನ ಜೇತವನದಲ್ಲಿ ವಿಹರಿಸುತ್ತಿದ್ದರು, ಆಗ ಮೊಗ್ಗಲಾನರು ಬಿಕ್ಖುಗಳನ್ನು ಕುರಿತು ಹೀಗೆ ಸಂಬೋಧಿಸಿದರು: ಅಯುಷ್ಮಂತ ಭಿಕ್ಖುಗಳೇ,ಆಗ ಅವರು ಸಹಾ ಆಯುಷ್ಮಂತರೇಎಂದರು. ಆಗ ಮೊಗ್ಗಲಾನರು ಭಿಕ್ಖುಗಳೊಂದಿಗೆ ಹೀಗೆ ನುಡಿದರು:
ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈ ರೀತಿಯ ಯೋಚನೆ ಉಂಟಾಯಿತು: ಪ್ರಥಮ ಝಾನ, ಪ್ರಥಮ ಝಾನ ಎನ್ನುತ್ತಾರಲ್ಲ ಏನಿದು ಪ್ರಥಮ ಝಾನ? ಆಗ ಮಿತ್ರರೇ ಉತ್ತರವು ಹೀಗೆ ಹೊಳೆಯಿತು. ಇಲ್ಲಿ ಎಲ್ಲಾ ವಿಧವಾದ ಕಾಮಸುಖಗಳಿಂದ ವಿಮುಖವಾಗಿ, ಅಕುಶಲಸ್ಥಿತಿಗಳಿಂದ ಬರಿದಾಗಿ, ಭಿಕ್ಖುವು ಪ್ರಥಮ ಝಾನದಲ್ಲಿ ಪ್ರವೇಶಿಸಿ ವಿಹರಿಸುತ್ತಾನೆ. ಅದು ವಿತರ್ಕ, ವಿಚಾರಗಳಿಂದ ಕೂಡಿ, ಏಕಾಂತದಿಂದ ಉಂಟಾದ ಪೀತಿ(ಆನಂದ),ಸುಖಗಳಿಂದ ಕೂಡಿರುತ್ತದೆ. ಇದೇ ಪ್ರಥಮ ಧ್ಯಾನವಾಗಿದೆ. ನಂತರ ಮಿತ್ರರೆ ಕಾಮಸುಖಗಳಿಂದ ವಿಮುಖನಾಗಿ, ಅಕುಶಲಸ್ಥಿತಿಗಳಿಂದ ಬರಿದಾಗಿ, ನಾನು ಪ್ರಥಮ ಝಾನದಲ್ಲಿ ಪ್ರವೇಶಿಸಿರುವಾಗ ಇಂದ್ರಿಯಸುಖಗಳ ಸಂಜ್ಞೆಯು ಹಾಗು ಗಮನವು ದಾಳಿಮಾಡಿತು.
ಆಗ ಭಗವಾನರು ಇದ್ಧಿಬಲದಿಂದಾಗಿ ಕಾಣಿಸಿಕೊಂಡು ಹೀಗೆ ನುಡಿದರು. ಮೊಗ್ಗಲಾನ ಮೊಗ್ಗಲಾನ ಅಲಕ್ಷಿಸಬೇಡ, ಬ್ರಾಹ್ಮಣನೇ ಪ್ರಥಮ ಝಾನದ ಬಗ್ಗೆ ಅಲಕ್ಷ ಬೇಡ, ನಿನ್ನ ಮನಸ್ಸನ್ನು ಪ್ರಥಮ ದ್ಯಾನದ ಬಗ್ಗೆ ಸಮಾಹಿತಗೊಳಿಸು, ಏಕಾಗ್ರತೆಗೊಳಿಸು. ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ ಕಾಮಸುಖಗಳಿಂದ ವಿಮುಖವಾಗಿ, ಅಕುಶಲಸ್ಥಿತಿಗಳಿಂದ ಬರಿದಾಗಿ, ವಿತರ್ಕ, ವಿಚಾರಗಳಿಂದ ಕೂಡಿ, ಏಕಾಂತದಿಂದ ಉಂಟಾದ ಪೀತಿ(ಆನಂದ), ಸುಖಗಳಿಂದ ಕೂಡಿ ಪ್ರಥಮ ಝಾನದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜ್ಞಾ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.
2. ದುತಿಯ (ದ್ವಿತೀಯ) ಝಾನ(ಧ್ಯಾನ) ಪಞ್ಞಾ ಸುತ್ತಂ
ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈ ರೀತಿಯ ಯೋಚನೆಯುಂಟಾಯಿತು ದ್ವಿತೀಯ ಝಾನ ದ್ವಿತೀಯ ಝಾನ ಎನ್ನುತ್ತಾರಲ್ಲ ಯಾವುದಕ್ಕೆ ದ್ವಿತೀಯ ಝಾನವೆನ್ನುವರು? ನಂತರ ಆಯುಷ್ಮಂತರು ಹೀಗೆ ಹೇಳಿದರು- ಇಲ್ಲಿ ಭಿಕ್ಷುವು ವಿತರ್ಕ ಹಾಗು ವಿಚಾರವನ್ನು ನಿಮರ್ೂಲಗೊಳಿಸಿ ದ್ವಿತೀಯ ಝಾನಕ್ಕೆ ಪ್ರವೇಶಿಸುತ್ತಾನೆ, ಅದು ವಿತರ್ಕ ಹಾಗು ವಿಚಾರಕ್ಕೆ ಅತೀತವಾಗಿ ಆಂತರಿಕ ಶ್ರದ್ಧೆಯಿಂದ ಹಾಗು ಚಿತ್ತದ ಏಕೋಭಾವದಿಂದ ಕೂಡಿರುತ್ತದೆ ಮತ್ತು ಸಮಾಧಿಯಿಂದ ಪೀತಿ(ಆನಂದ) ಹಾಗು ಸುಖ ಉತ್ಪನ್ನವಾಗಿರುತ್ತದೆ (ಕೂಡಿರುತ್ತದೆ). ಇದಕ್ಕೆ ದ್ವಿತೀಯ ಧ್ಯಾನವೆನ್ನುವರು. ಹೀಗೆ ಮಿತ್ರರೇ ನಾನು ವಿತರ್ಕ ಹಾಗು ವಿಚಾರವನ್ನು ನಿಮರ್ೂಲಗೊಳಿಸಿ ದ್ವಿತೀಯ ಝಾನಕ್ಕೆ ಪ್ರವೇಶಿಸಿ, ವಿತರ್ಕ ಹಾಗು ವಿಚಾರಕ್ಕೆ ಅತೀತವಾಗಿ ಆಂತರಿಕ ಶ್ರದ್ಧೆಯಿಂದ ಹಾಗು ಚಿತ್ತದ ಏಕೋಭಾವದಿಂದ ಕೂಡಿದ ಮತ್ತು ಸಮಾಧಿಯಿಂದ ಪೀತಿ (ಆನಂದ) ಹಾಗು ಸುಖ ಉತ್ಪನ್ನವಾದ ಆ ಸ್ಥಿತಿಯಲ್ಲಿರುವಾಗ ನನ್ನಲ್ಲಿ ವಿರ್ತಕ ಹಾಗು ವಿಚಾರವು ದಾಳಿ ಮಾಡಿತು.
ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ ದ್ವಿತೀಯ ಧ್ಯಾನದ ಬಗ್ಗೆ ಅರ್ಲಕ್ಷ ಬೇಡ,ನಿನ್ನ ಮನಸ್ಸನ್ನು ದ್ವಿತೀಯ ಝಾನದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ , ವಿತರ್ಕ, ವಿಚಾರಗಳಿಂದ ದೂರಾಗಿ ಹೀಗೆಯೇ ದ್ವಿತೀಯ ಝಾನದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜ್ಞಾ ಪ್ರಾಪ್ತಿಯ ಶ್ರೇಷ್ಠತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.
3. ತತಿಯ(ತೃತೀಯ) ಝಾನ(ಧ್ಯಾನ) ಪಞ್ಞಾ ಸುತ್ತಂ
ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈ ರೀತಿಯ ಯೋಚನೆಯುಂಟಾಯಿತು. ತೃತೀಯ ಝಾನ ತೃತೀಯ ಝಾನ ಎನ್ನುತ್ತಾರಲ್ಲ ಯಾವುದಕ್ಕೆ ತೃತೀಯ ಝಾನವೆನ್ನುವರು? ನಂತರ ಆಯುಷ್ಮಂತರು ಹೀಗೆ ಹೇಳಿದರು- ಇಲ್ಲಿ ಭಿಕ್ಷುವು ಆನಂದವನ್ನು (ಪೀತಿ)ನಿಮರ್ೂಲವನ್ನಾಗಿಸಿ ತ್ರಿತೀಯ ಝಾನಕ್ಕೆ ಪ್ರವೇಶಿಸುತ್ತಾನೆ, ಅದು ಆನಂದಕ್ಕೆ ಅತೀತವಾಗಿ ವಿರಾಗ ಹೊಂದಿ ಉಪೇಕ್ಷಯಿಂದ ಕೂಡಿದ ಸುಖದಿಂದಾಗಿ ಕಾಯವೆಲ್ಲವೂ ಆ ಆದ್ಭುತ ಸುಖದಿಂದ ಕೂಡಿ ವಿಹರಿಸುತ್ತಾನೆ. ಅ ದಿವ್ಯ ಸುಖಕ್ಕೆ ಆರ್ಯರು ಉಪೆಕ್ಖ(ಸಮಚಿತ್ತತೆ)ಯಿಂದ ಕೂಡಿದ ಸ್ಮೃತಿವಂತನು ವಿಹರಿಸುವ ಸುಖವಿಹಾರೆಂದು ಕರೆಯುತ್ತಾರೆ ಇದನ್ನೇ ತೃತೀಯ ಧ್ಯಾನವೆನ್ನುವರು.ಹೀಗೆ ಮಿತ್ರರೇ ಹೀಗೆ ನಾನು ಆನಂದವನ್ನು (ಪೀತಿ)ನಿಮರ್ೂಲಗೊಳಿಸಿ ತೃತೀಯ ಝಾನಕ್ಕೆ ಪ್ರವೇಶಿಸಿ, ಆನಂದಕ್ಕೆ ಅತೀತವಾಗಿ ವಿರಾಗ ಹೊಂದಿ ಉಪೇಕ್ಷಯಿಂದ ಕೂಡಿದ ಸುಖದಿಂದಾಗಿ ಕಾಯವೆಲ್ಲವೂ ಆ ಆದ್ಭುತ ಸುಖದಿಂದ ಕೂಡಿ ವಿಹರಿಸುತ್ತಿದ್ದಾಗ ಚಿತ್ತದ ಏಕೋಭಾವದಿಂದ ಕೂಡಿದ ಮತ್ತು ಉಪೇಕ್ಷೇಯ ಹಾಗು ಸುಖ ಉತ್ಪನ್ನವಾದ ಆ ಸ್ಥಿತಿಯಲ್ಲಿರುವಾಗ ನನ್ನಲ್ಲಿ ಆನಂದವುು ದಾಳಿ ಮಾಡಿತು.
ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ ತೃತೀಯ ಧ್ಯಾನದ ಬಗ್ಗೆ ಅರ್ಲಕ್ಷ ಬೇಡ,ನಿನ್ನ ಮನಸ್ಸನ್ನು ತ್ರತೀಯ ಝಾನದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ , ಆನಂದದಿಂದ ದೂರಾಗಿ ಹೀಗೆಯೇ ತೃತೀಯ ಝಾನದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜ್ಞಾ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.
4.ಚತುತ್ಥ ಝಾನ (ಚತುರ್ಥಧ್ಯಾನ) ಪಞ್ಞಾ ಸುತ್ತಂ
ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈ ರೀತಿಯ ಯೋಚನೆಯುಂಟಾಯಿತು: ಚತುರ್ಥಧ್ಯಾನ ಚತುರ್ಥಧ್ಯಾನ ಎನ್ನುತ್ತಾರಲ್ಲ ಯಾವುದಕ್ಕೆ ಚತುರ್ಥಧ್ಯಾನವೆನ್ನುವರು? ನಂತರ ಆಯುಷ್ಮಂತರು ಹೀಗೆ ಹೇಳಿದರು- ಇಲ್ಲಿ ಭಿಕ್ಖುವು ಸುಖವನ್ನು ಹಾಗು ದುಃಖವನ್ನು ವಜರ್ಿಸುತ್ತಾ, ಹಿಂದಿನ ಸುಖಪೂರ್ವಕ ಹಾಗು ದುಃಖಪೂರ್ವಕ ಮನಸ್ಥಿತಿಗಳೆಲ್ಲವನ್ನು ದಾಟುತ್ತಾ ,ಚತುರ್ಥ ಝಾನವನ್ನು ಪ್ರವೇಶಿಸಿ ವಿಹರಿಸುತ್ತಾನೆ, ಆ ದಿವ್ಯಸ್ಥಿತಿಯು ಸುಖವಲ್ಲದ ಹಾಗು ದುಃಖವಲ್ಲದ ಉಪೇಕ್ಷಾಭಾವದಿಂದ(ಸಮಚಿತ್ತತೆ) ಕೂಡಿದ್ದು ಆ ಸ್ಥಿತಿಯ ಜಾಗ್ರತೆಯಿಂದ ಕೂಡಿರುತ್ತಾನೆ. ಇದಕ್ಕೆ ಚತುರ್ಥ ಝಾನವೆನ್ನುವರು. ಹೀಗೆ ಮಿತ್ರರೇ ನಾನು ಸುಖವನ್ನು ಹಾಗು ದುಃಖವನ್ನು ವಜರ್ಿಸುತ್ತಾ, ಹಿಂದಿನ ಸುಖಪೂರ್ವಕ ಹಾಗು ದುಃಖಪೂರ್ವಕ ಮನಸ್ಥಿತಿಗಳೆಲ್ಲವನ್ನು ದಾಟುತ್ತಾ ,ಚತುರ್ಥ ಝಾನವನ್ನು ಪ್ರವೇಶಿಸಿ ವಿಹರಿಸುತ್ತಿದ್ದಾಗ, ಆ ದಿವ್ಯಸ್ಥಿತಿಯು ಸುಖವಲ್ಲದ ಹಾಗು ದುಃಖವಲ್ಲದ ಉಪೇಕ್ಷೇಭಾವದಿಂದ(ಸಮಚಿತ್ತತೆ) ಕೂಡಿದ್ದು ಆ ಸ್ಥಿತಿಯ ಜಾಗ್ರತೆಯಿಂದ ಕೂಡಿದ್ದಾಗ ಸುಖದಿಂದ ಕೂಡಿದ ಸಂಜ್ಞೆಯು ಹಾಗು ಗಮನವು ನನ್ನಲ್ಲಿ ದಾಳಿ ಮಾಡಿತು.
ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ ಚತುತ್ಥ ದ್ಯಾನದ ಬಗ್ಗೆ ಅಲಕ್ಷ ಬೇಡ, ನಿನ್ನ ಮನಸ್ಸನ್ನು ಚತುರ್ಥಝಾನದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ ,ಸುಖದುಃಖಗಳಿಂದ ದೂರಾಗಿ ಹೀಗೆಯೇ ಚತುರ್ಥಝಾನದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜ್ಞಾ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.
5. ಆಕಾಸನಞಚಾಯತನ ಪಞ್ಞಾ ಸುತ್ತಂ
ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈ ರೀತಿಯ ಯೋಚನೆಯುಂಟಾಯಿತು ಆಕಾಸನಂಚಾಯತನ, ಆಕಾಸನಂಚಾಯತನ ಎನ್ನುತ್ತಾರಲ್ಲ ಯಾವುದಕ್ಕೆ ಆಕಾಸನಂಚಾಯತನವೆನ್ನುವರು ? ನಂತರ ಆಯುಷ್ಮಂತರು ಹೀಗೆ ಹೇಳಿದರು , ಆಗ ಮಿತ್ರರೇ ನನ್ನಲ್ಲಿ ಈ ಬಗೆಯ ಯೋಚನೆಗಳು ಉಂಟಾದವು ;ಇಲ್ಲಿ ಆಕಾರಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಇಂದ್ರಿಯಗಳ ಗುರುತುಗಳನ್ನು ದಾಟಿಹೋಗಿ, ವೈವಿಧ್ಯತೆಗಳಿಗೆಲ್ಲಾ ಗಮನ ನೀಡದೆ, ಕೇವಲ ಆಕಾಶವು ಅನಂತ ಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಾನೆ ,ಇದನ್ನೇ ಆಕಾಸನಂಚಾಯತನ ಎನ್ನುವರು.ಹೀಗೆ ಮಿತ್ರರೇ ನಾನು ಆಕಾರಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಇಂದ್ರಿಯಗಳ ಗುರುತುಗಳನ್ನು ದಾಟಿಹೋಗಿ, ವೈವಿಧ್ಯತೆಗಳಿಗೆಲ್ಲಾ ಗಮನ ನೀಡದೆ, ಕೇವಲ ಆಕಾಶವು ಅನಂತ ಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಿದ್ದೆನು, ಆಗ ಆಕಾರಗಳಿಂದ ಕೂಡಿದ ಸಂಜ್ಞೆಯು ಹಾಗು ಗಮನವು ನನ್ನಲ್ಲಿ ದಾಳಿ ಮಾಡಿತು.
ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ ಆಕಾಸನಂಚಾಯತನದ ಬಗ್ಗೆ ಅಲಕ್ಷ ಬೇಡ,ನಿನ್ನ ಮನಸ್ಸನ್ನು ಆಕಾಸನಂಚಾಯತನದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ ಆಕಾರಗಳಿಂದ ದೂರಾಗಿ ಆಕಾರಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಇಂದ್ರಿಯಗಳ ಗುರುತುಗಳನ್ನು ದಾಟಿಹೋಗಿ, ವೈವಿಧ್ಯತೆಗಳಿಗೆಲ್ಲಾ ಗಮನ ನೀಡದೆ, ಕೇವಲ ಆಕಾಶವು ಅನಂತ ಎಂಬ ಭಾವದಲ್ಲೇ ಜಾಗ್ರತನಾಗಿ, ,ಹೀಗೆಯೇ ಆಕಾಸನಂಚಾಯತನದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜ್ಞಾ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.
6. ವಿನ್ಯಾನಂಚಾಯತನ ಪಞ್ಞಾ ಸುತ್ತಂ
ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈರೀತಿಯ ಯೋಚನೆಯುಂಟಾಯಿತು ವಿನ್ಯಾನಂಚಾಯತನ, ವಿನ್ಯಾನಂಚಾಯತನ, ಎನ್ನುತ್ತಾರಲ್ಲ ಯಾವುದಕ್ಕೆ ವಿನ್ಯಾನಂಚಾಯತನ, ವೆನ್ನುವರು ? ನಂತರ ಆಯುಷ್ಮಂತರು ಹೀಗೆ ಹೇಳಿದರು , ಆಗ ಮಿತ್ರರೇ ನನ್ನಲ್ಲಿ ಈ ಬಗೆಯ ಯೋಚನೆಗಳು ಉಂಟಾದವು ;ಇಲ್ಲಿ ಆಕಾಸನಂಚಾಯತನಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ ಆಕಾಶಕ್ಕೆ ಗಮನ ನೀಡದೆ, ಕೇವಲ ವಿನ್ಯಾನ ಅನಂತ ಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಾನೆ ,ಇದನ್ನೇ ವಿನ್ಯಾನಂಚಾಯತನ, ಎನ್ನುವರು.ಹೀಗೆ ಮಿತ್ರರೇ ನಾನು ಆಕಾಸನಂಚಾಯತನಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಕೇವಲ ವಿನ್ಯಾನ ಅನಂತ ಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಿದ್ದೆನು, ಆಗ ಆಕಾಸನಂಚಾಯತನಗಳಿಂದ ಕೂಡಿದ ಸಂಜ್ಞೆಯು ಹಾಗು ಗಮನವು ನನ್ನಲ್ಲಿ ದಾಳಿ ಮಾಡಿತು.
ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ ವಿನ್ಯಾನಂಚಾಯತನದ ಬಗ್ಗೆ ಅಲಕ್ಷ ಬೇಡ,ನಿನ್ನ ಮನಸ್ಸನ್ನು ವಿನ್ಯಾನಂಚಾಯತನದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ ಆಕಾಸನಂಚಾಯತನಗಳಿಂದ ದೂರಾಗಿ ಆಕಾಶದ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಬೇರಡೆ ಗಮನ ನೀಡದೆ, ಕೇವಲ ವಿನ್ಯಾನವು (ಅರಿವು)ಅನಂತ ಎಂಬ ಭಾವದಲ್ಲೇ ಜಾಗ್ರತನಾಗಿ, ,ಹೀಗೆಯೇ ವಿನ್ಯಾನಂಚಾಯತನದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜ್ಞಾ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.
7. ಅಕಿಂಚನ್ಯಾಯತನ ಪಞ್ಞಾ ಸುತ್ತಂ
.ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈರೀತಿಯ ಯೋಚನೆಯುಂಟಾಯಿತು ಅಕಿಂಚನ್ಯಾಯತನ,ಅಕಿಂಚನ್ಯಾಯತನ ಎನ್ನುತ್ತಾರಲ್ಲ ಯಾವುದಕ್ಕೆ ಅಕಿಂಚನ್ಯಾಯತನ, ವೆನ್ನುವರು ? ನಂತರ ಆಯುಷ್ಮಂತರು ಹೀಗೆ ಹೇಳಿದರು , ಆಗ ಮಿತ್ರರೇ ನನ್ನಲ್ಲಿ ಈ ಬಗೆಯ ಯೋಚನೆಗಳು ಉಂಟಾದವು ;ಇಲ್ಲಿ ವಿನ್ಯಾನಂಚಾಯತನಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ ವಿನ್ಯಾನಕ್ಕೆ ಗಮನ ನೀಡದೆ, ಕೇವಲ ಏನೂ ಇಲ್ಲ ಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಾನೆ ,ಇದನ್ನೇ ಅಕಿಂಚನ್ಯಾಯತನ ಎನ್ನುವರು.ಹೀಗೆ ಮಿತ್ರರೇ ನಾನು ವಿನ್ಯಾನಂಚಾಯತನಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಕೇವಲ ಏನೂ ಇಲ್ಲಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಿದ್ದೆನು, ಆಗ ವಿನ್ಯಾನಂಚಾಯತನಗಳಿಂದ ಕೂಡಿದ ಸಂಜ್ಞೆಯು ಹಾಗು ಗಮನವು ನನ್ನಲ್ಲಿ ದಾಳಿ ಮಾಡಿತು.
ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ ಅಕಿಂಚನ್ಯಾಯತನದ ಬಗ್ಗೆ ಅರ್ಲಕ್ಷ ಬೇಡ,ನಿನ್ನ ಮನಸ್ಸನ್ನು ಅಕಿಂಚನ್ಯಾಯತನದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ ವಿನ್ಯಾನಂಚಾಯತನಗಳಿಂದ ದೂರಾಗಿ ವಿನ್ಯಾನದ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಬೇರಡೆ ಗಮನ ನೀಡದೆ, ಕೇವಲ ಏನೂ ಇಲ್ಲಎಂಬ ಭಾವದಲ್ಲೇ ಜಾಗ್ರತನಾಗಿ, ,ಹೀಗೆಯೇ ಅಕಿಂಚನ್ಯಾಯತನದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜ್ಞಾ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.
8. ನೇವಸನ್ಯನಾಸನ್ಯಾಯತನ ಪಞ್ಞಾ ಸುತ್ತಂ
ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈ ರೀತಿಯ ಯೋಚನೆಯುಂಟಾಯಿತು ನೇವಸನ್ಯನಾಸನ್ಯಾಯತನ, ನೇವಸನ್ಯನಾಸನ್ಯಾಯತನ(ಗ್ರಹಿಕೆ ಇಲ್ಲ ಗ್ರಹಿಕೆ ಇಲ್ಲದೆಯು ಇಲ್ಲ) ಎನ್ನುತ್ತಾರಲ್ಲ ಯಾವುದಕ್ಕೆ ನೇವಸನ್ಯನಾಸನ್ಯಾಯತನವೆನ್ನುವರು? ನಂತರ ಆಯುಷ್ಮಂತರು ಹೀಗೆ ಹೇಳಿದರು , ಆಗ ಮಿತ್ರರೇ ನನ್ನಲ್ಲಿ ಈ ಬಗೆಯ ಯೋಚನೆಗಳು ಉಂಟಾದವು . ಇಲ್ಲಿ ಅಕಿಂಚನ್ಯಾಯತನಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ ವಿನ್ಯಾನಕ್ಕೆ ಗಮನ ನೀಡದೆ, ಕೇವಲ ನೇವಸನ್ಯನಾಸನ್ಯಾಯತನ ಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಾನೆ ,ಇದನ್ನೇ ನೇವಸನ್ಯನಾಸನ್ಯಾಯತನ ಎನ್ನುವರು.ಹೀಗೆ ಮಿತ್ರರೇ ನಾನು ಅಕಿಂಚನ್ಯಾಯತನಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಕೇವಲ ನೇವಸನ್ಯನಾಸನ್ಯಾಯತನಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಿದ್ದೆನು, ಆಗ ಅಕಿಂಚನ್ಯಾಯತನಗಳಿಂದ ಕೂಡಿದ ಸಂಜ್ಞೆಯು ಹಾಗು ಗಮನವು ನನ್ನಲ್ಲಿ ದಾಳಿ ಮಾಡಿತು.
ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ ನೇವಸನ್ಯನಾಸನ್ಯಾಯತನ ಬಗ್ಗೆ ಅರ್ಲಕ್ಷ ಬೇಡ,ನಿನ್ನ ಮನಸ್ಸನ್ನು ನೇವಸನ್ಯನಾಸನ್ಯಾಯತನದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ ಅಕಿಂಚನ್ಯಾಯತನಗಳಿಂದ ದೂರಾಗಿ ಆ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಬೇರಡೆ ಗಮನ ನೀಡದೆ, ಕೇವಲ ನೇವಸನ್ಯನಾಸನ್ಯಾಯತನಎಂಬ ಭಾವದಲ್ಲೇ ಜಾಗ್ರತನಾಗಿ, ,ಹೀಗೆಯೇ ನೇವಸನ್ಯನಾಸನ್ಯಾಯತನದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜ್ಞಾ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.
9. ಅನಿಮಿತ್ತ (ಚಿನ್ಹರಹಿತ) ಪಞ್ಞಾ ಸುತ್ತಂ
.ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈ ರೀತಿಯ ಯೋಚನೆಯುಂಟಾಯಿತು ಅನಿಮಿತ್ತ ಚೇತೋಸಮಾಧಿ ಅನಿಮಿತ್ತ ಚೇತೋಸಮಾಧಿ ಎನ್ನುತ್ತಾರಲ್ಲ ಯಾವುದಕ್ಕೆ ಅನಿಮಿತ್ತ ಚೇತೋಸಮಾಧಿವೆನ್ನುವರು ? ನಂತರ ಆಯುಷ್ಮಂತರು ಹೀಗೆ ಹೇಳಿದರು , ಆಗ ಮಿತ್ರರೇ ನನ್ನಲ್ಲಿ ಈ ಬಗೆಯ ಯೋಚನೆಗಳು ಉಂಟಾದವು ;ಇಲ್ಲಿ ಎಲ್ಲಾ ನಿಮಿತ್ತಗಳ(ಚಿನ್ಹೆಗಳ) ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ ಎಲ್ಲಾ ನಿಮಿತ್ತಗಳ(ಚಿನ್ಹೆಗಳಿ)ಗೆ ಗಮನ ನೀಡದೆ, ಕೇವಲ ಅನಿಮಿತ್ತ ಚೇತೋಸಮಾಧಿ ಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಾನೆ ,ಇದನ್ನೇ ಅನಿಮಿತ್ತ ಚೇತೋಸಮಾಧಿ ಎನ್ನುವರು.ಹೀಗೆ ಮಿತ್ರರೇ ನಾನು ಎಲ್ಲಾ ನಿಮಿತ್ತಗಳ(ಚಿನ್ಹೆಗಳ)ಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಕೇವಲ ಅನಿಮಿತ್ತ ಚೇತೋಸಮಾದಿಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಿದ್ದೆನು, ಆಗ ನಿಮಿತ್ತಗಳ(ಚಿನ್ಹೆಗಳ)ಗಳಿಂದ ಕೂಡಿದ ಸಂಜ್ಞೆಯು ಹಾಗು ಗಮನವು ನನ್ನಲ್ಲಿ ದಾಳಿ ಮಾಡಿತು.
ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ ಅನಿಮಿತ್ತ ಚೇತೋಸಮಾಧಿ ಬಗ್ಗೆ ಅಲಕ್ಷ ಬೇಡ, ನಿನ್ನ ಮನಸ್ಸನ್ನುಅನಿಮಿತ್ತ ಚೇತೋಸಮಾಧಿದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ ಎಲ್ಲಾ ನಿಮಿತ್ತಗಳ(ಚಿನ್ಹೆಗಳ)ಗಳಿಂದ ದೂರಾಗಿ ಆ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಬೇರೆಡೆ ಗಮನ ನೀಡದೆ, ಕೇವಲ ಅನಿಮಿತ್ತ ಚೇತೋಸಮಾದಿಎಂಬ ಭಾವದಲ್ಲೇ ಜಾಗ್ರತನಾಗಿ, ,ಹೀಗೆಯೇಅನಿಮಿತ್ತ ಚೇತೋಸಮಾಧಿದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜ್ಞಾ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.
ಹೀಗೆ ಮೊಗ್ಗಲಾನರು ಭಗವಾನರಿಂದ ಧಾತುಕಮಟ್ಠಾನವನ್ನು ಆಲಿಸಿ ಶ್ರಾವಕ ಪಾರಮಿ ಜ್ಞಾನ ಪಡೆದು ಉನ್ನತವಾದ ಮೂರು ಮಾರ್ಗಗಳನ್ನು ಜಯಿಸಿ ಅರಹಂತರಾದರು. ಹಾಗೆಯೇ ಅಗ್ರಶ್ರಾವಕತ್ವವನ್ನು ಪಡೆದರು. ಹೀಗೆ ಸಂಘಕ್ಕೆ ಸೇರಿದ ಏಳನೆಯ ದಿನಕ್ಕೆ ಅರಹಂತರಾದರು. ಹಾಗೂ ಮೊಗ್ಗಲಾನರವರಲ್ಲಿ ಅನೇಕ ವಿಶೇಷಗಳಿವೆ .ಅವರು ಸಹಾ ಭಗವಾನರಂತೆ ಹಾಗೂ ಸಾರಿಪುತ್ತರಂತೆ ದ್ವಿವಿಧದಲ್ಲಿ ಉಭಯವಿಮೊಕ್ಖ ಪಡೆದರು. ಅಂದರೆ ಪಜ್ಞಾ ವಿಮುಕ್ತಿ ಹಾಗೂ ಚೇತೋ ವಿಮುಕ್ತಿ.. ಸಾಧಾರಣವಾಗಿ ಎಲ್ಲರೂ 2ರಲ್ಲಿ ಒಂದು ವಿಧದಲ್ಲಿ ವಿಮುಕ್ತರಾಗುವರು, ಅದರೆ ಬುದ್ಧರು ಹಾಗೂ ಅಗ್ರ ಶ್ರಾವಕರು ಉಭಯವಿಮುಕ್ತಿ ಪಡೆಯುವರು. ಅಂದರೆ ಪ್ರಜ್ಞೆಯಿಂದ ವಿಮುಕ್ತಿ ಹಾಗೂ ಚೇತೋ ವಿಮುಕ್ತಿ ಅಂದರೆ ಸಮಾಧಿ ಹಂತಗಳನ್ನು ದಾಟಿ, ರೂಪ ಸಮಾಧಿ ಹಾಗೂ ಅರೂಪ ಸಮಾಧಿಗಳನ್ನು ದಾಟಿ, ನಿಮಿತ್ತಾತೀತ ಧ್ಯಾನಗಳನ್ನು ದಾಟಿ ನಿಬ್ಬಾಣ ಪಡೆಯುವಿಕೆ. ಭಗವಾನರು ಸಂಬೋಧಿಯ ದಿನದಂದು ಕೇವಲ ಪ್ರಥಮ ಝಾವದಂದು 6 ರಿಂದ 10ರವರೆಗೆ ಅಂದರೆ ಕೇವಲ 4 ಗಂಟೆಗಳಲ್ಲಿ ಅವರು 91 ಕಲ್ಪಗಳನ್ನು ಅದರಲ್ಲಿ ಬರುವ ಅಸಂಖ್ಯಾತ ಜನ್ಮಗಳನ್ನು ನೆನೆಸಿಕೊಂಡಿದ್ದರು. ಅಂದರೆ ಸಮಾಧಿಯ ಹಾಗೂ ಅವರ ಮನೋವೇಗವನ್ನು ನಾವು ಇಲ್ಲಿ ಅಂದಾಜು ಮಾಡಬಹುದು. ಅಂದರೆ ಸಮಯದ ಅಂತರವನ್ನು ಹೇಗೆ ಸಮಾಧಿಯು ಕಡಿಮೆ ಮಾಡುವುದು ಎಂಬುದು ತಿಳಿಯುವುದು. ಅದೇ ರೀತಿಯಲ್ಲಿ ಮೊಗ್ಗಲಾನರು 7 ದಿನದಲ್ಲಿ ಅರಹಂತತ್ವ ಗಳಿಸಿದರು. ಹಾಗೇಯೇ ಅವರು ಕ್ಷಿಪ್ರವಾಗಿ ಅಭಿಜ್ಞಾಸಹಿತವಾಗಿ ಅರಹತ್ವ ಗಳಿಸಿದರು. ಈ ಬಗೆಯ ಕ್ಷಿಪ್ರಾಭಿಜ್ಞ ಸಂಪನ್ನತೆಯಲ್ಲಿಯು ಅವರೇ ಅಗ್ರಗಣ್ಯರು. ಹೀಗೆ ಮಹಾ ಪ್ರಯಾಸದ ಹಾದಿಯಲ್ಲಿ ಅವರು ಭಗವಾನರ ಸಹಾಯದಿಂದಾಗಿ ಅವರು ಈ ಅತ್ಯುನ್ನತ ಸ್ಥಿತಿಯನ್ನು
ಸಾಧಿಸಿದರು.
2.3 ಅಗ್ರಶ್ರಾವಕತ್ವದ ಘೋಷಣೆ
ಅಂದು ಸಂಜೆ ಭಗವಾನರು ಎಲ್ಲಾ ಭಿಕ್ಷುಗಳನ್ನು ಸಭೆಗೆ ಕರೆದಿದ್ದರು. ಅಂದು ಅಗ್ರಶ್ರಾವಕರು ಯಾರು ಎಂದು ಘೋಷಿಸುವುದಾಗಿ ತಿಳಿಸಿದರು. ಭಿಕ್ಷುಗಳು ನಾನಾರೀತಿಯಲ್ಲಿ ಈ ಬಗ್ಗೆ ಊಹಿಸಿದರು. ಕೆಲವರು ಪಂಚವಗರ್ಿಯ ಭಿಕ್ಷುಗಳಲ್ಲಿ ಅಗ್ರಶ್ರಾವಕರಿರಬಹುದೆಂದು ಭಾವಿಸಿದರೆ, ಇನ್ನು ಕೆಲವರು ಯಸನ ಜೊತೆಗಿದ್ದ ಭಿಕ್ಷುಗಳ ತಂಡದಲ್ಲಿರಬಹುದೆಂದು ಭಾವಿಸಿದರು. ಅಥವಾ ಭದ್ದವಗ್ಗಿಯರ ಗುಂಪಿರಬಹುದೇ ಎಂದು ಕೆಲವರು ಊಹಿಸಿದರು. ಆದರೆ ಭಗವಾನರು ಇವರ್ಯಾರನ್ನೂ ಘೋಷಿಸದೆ, ಕೇವಲ ಹದಿನೈದು ದಿನಗಳ ಹಿಂದಷ್ಟೇ ಸೇರಿದ್ದ ಸಾರಿಪುತ್ತ ಹಾಗು ಮೊಗ್ಗಲಾನರವರನ್ನು ಅಗ್ರಶ್ರಾವಕರೆಂದು ಘೋಷಿಸಿದರು. ಸಾರಿಪುತ್ತರವರು ಮಹಾ ಧಮ್ಮಸೇನಾನಿ ಎಂದು ಹಾಗು ಮೊಗ್ಗಲಾನರನ್ನು ಇದ್ದಿಪಾದ ಹಾಗು ಅಭಿಜ್ಞಾಗಳಲ್ಲಿ ಅಗ್ರಗಣ್ಯ ಎಂದು ಘೋಷಿಸಿದರು. ಹೀಗೆ ಸಾರಿಪುತ್ತರು ಭಗವಾನರನ್ನು ಹೊರತುಪಡಿಸಿದರೆ ಪ್ರಜ್ಞಾ ವಿಕಾಸದಲ್ಲಿ ಸಾರಿಪುತ್ತರೇ ಅಗ್ರರಾಗಿದ್ದರು. ಹೀಗಾಗಿ ಜನರನ್ನು ಕೆಲವರು ದ್ವಿತೀಯ ಬುದ್ಧರೆಂದು ಭಗವಾನರನ್ನು ಹೊರತುಪಡಿಸಿದರೆ ಅವರೇ ಅಗ್ರರಾಗಿದ್ದರು. ಶ್ರೀಲಂಕದ ಚೈತ್ಯಗಳಲ್ಲಿ ಹಾಗು ಜಪಾನಿನ ಚೈತ್ಯಗಳಲ್ಲಿ ಇಂದಿಗೂ ಭಗವಾನರ ಬಲಗಡೆ ಸಾರಿಪುತ್ತರನ್ನು ಹಾಗು ಎಡಗಡೆಗೆ ಮೊಗ್ಗಲಾನರನ್ನು ಕಾಣಬಹುದು.
ಭಗವಾನರು ಸಾರಿಪುತ್ತ ಹಾಗು ಮೊಗ್ಗಲಾನರವರನ್ನು ಏಕೆ ಆಯ್ಕೆ ಮಾಡಿದರು? ಇದರ ಕುರಿತಾಗಿ ಭಗವಾನರು ಆ ಭಿಕ್ಷು ಸಭೆಗೆ ಹೀಗೆ ತಿಳಿಸಿದರು. ನಾನು ಯಾವುದೇ ಪಕ್ಷಪಾತದ ಆಯ್ಕೆ ಮಾಡಿಲ್ಲ. ಇದೆಲ್ಲವು ಹಿಂದಿನ ಜನ್ಮವೊಂದರಲ್ಲಿ ಪ್ರತಿ ಬೆಳೆಗೂ ಒಂಬತ್ತು ಬಾರಿಯಂತೆ ಆಹಾರ ದಾನ ಮಾಡಿದರು. ಆದರೂ ಸಹಾ ಅವರು ಅಗ್ರಶ್ರಾವಕತ್ವದ ಬಗ್ಗೆ ಇಚ್ಛಿಸಿರಲಿಲ್ಲ. ಆದರೆ ಏಕೈಕ ಆಕಾಂಕ್ಷೆ ಏನೆಂದರೆ, ಬುದ್ಧರು ಜ್ಞಾನೋದಯ ಪಡೆದನಂತರ ತಾನೇ ಪ್ರಥಮವಾಗಿ ಅರಹಂತರಾಗಬೇಕು. ಅದರಂತೆಯೇ ಆಯಿತು. ಹಾಗೆಯೇ ಬಹಳ ಕಾಲದ ಹಿಂದೆ ಅನೋಮದಸ್ಸಿಯು ಸಮ್ಮಾಸಂಬುದ್ಧರಾಗಿದ್ದಾಗ, ಸಾರಿಪುತ್ತ ಹಾಗು ಮೊಗ್ಗಲಾನರು ಅಗ್ರಶ್ರಾವಕತ್ವದ ಬಗ್ಗೆ ಮಹಾಸಂಕಲ್ಪ ಮಾಡಿದ್ದರು. ಅದರಂತೆ ಅವರ ಆಕಾಂಕ್ಷೆಗಳು ಈಗ ಫಲನೀಡಿವೆ. ಹಾಗೆಯೇ ಅವರು ಈಗ ಅವೆಲ್ಲ ಅರ್ಹತಾ ಗುಣಗಳನ್ನು ಹೊಂದಿದ್ದಾರೆ. ಹೀಗಾಗಿ ಅವರನ್ನೇ ನಾನು ಆಯ್ಕೆ ಮಾಡಬೇಕಾಯಿತು.
ಓ ಭಿಕ್ಖುಗಳೇ ಸಾರಿಪುತ್ತ ಹಾಗೂ ಮೊಗ್ಗಲಾನರ ಮಿತೃತ್ವವನ್ನು ಮಾಡಿಕೊಳ್ಳಿ, ಏಕೆಂದರೆ ಅವರು ಪರಮಪ್ರಾಜ್ಞರಾಗಿದ್ದಾರೆ ಹಾಗೂ ಬ್ರಹ್ಮಚರ್ಯೆಯ ಶ್ರೇಷ್ಟ ಜೀವನಕ್ಕೆ ಅವರು ಸಹಕಾರಿಯಾಗಿದ್ದಾರೆ, ಸಾರಿಪುತ್ತರು ಮಾತೆಯ ರೀತಿ ಮತ್ತು ಮೊಗ್ಗಲಾನರು ದಾದಿಯಂತೆ ಸಲಹುತ್ತಾರೆ. ಸಾರಿಪುತ್ತರು ಸೋತಪನ್ನತೆಗೆ ಸಹಾಯ ಮಾಡುವರು ಹಾಗೂ ಮೊಗ್ಗಲಾನರು ಅತ್ಯುನ್ನತ ಗುರಿಗೆ ಸಹಾಯ ಮಾಡುವರು. ಎಂದು ಭಗವಾನರು ಅವರ ಬಗ್ಗೆ ಪ್ರಶಂಶಿಸಿದ್ದಾರೆ.
ಇಬ್ಬರು ಸಹಾ ಉಭಯ ರೀತಿಯ ವಿಮೊಕ್ಖ ಸಾಧಿಸಿದ್ದರೂ ಸಹಾ ಸಾರಿಪುತ್ತರು ಪರರಿಗೆ ಬೋಧಿಸುವಾಗ ಪ್ರಜ್ಞೆಗೆ ಒತ್ತು ನೀಡಿದ್ದರೆ ಮೊಗ್ಗಲಾನರು ಚೇತೊವಿಮುಕ್ತಿಗೆ ಒತ್ತು ನೀಡುತ್ತಿದ್ದರು. ಅಷ್ಟೆ ಅಲ್ಲ ಅಯುಷ್ಮಂತ ರಾಹುಲರ ಪಬ್ಬಜ್ಜದ ನಂತರ ರಾಹುಲರಿಗೆ ಗುರುಗಳಾಗಿ ಸಾರಿಪುತ್ತ ಹಾಗೂ ಮೊಗ್ಗಲಾನರನ್ನೇ ಸ್ವಯಂ ಭಗವಾನರೇ ನೇಮಿಸಿದ್ದರು. ಸಾರಿಪುತ್ತರು ಪ್ರಜ್ಞೆಗೇ ಗುರುಗಳಾಗಿದ್ದರೆ ಮೊಗ್ಗಲಾನರು ಶೀಲ ಹಾಗೂ ಸಮಾಧಿಗೆ ಗುರುಗಳಾಗಿದ್ದರು. ಒಮ್ಮೆ ಸಾರಿಪುತ್ತರು ಮೊಗ್ಗಲಾನರ ಅಭಿಜ್ಞಾಕ್ಕೆ ತಮ್ಮನ್ನು ಹೋಲಿಸುತ್ತ ,ಮೊಗ್ಗಲಾನರು ಹಿಮಾಲಯವಾದರೇ ತಾವು ಸಣ್ಣ ಬಂಡೆ ಎಂದು ಹೇಳುತ್ತಾರೆ. ಹಾಗೆಯೇ ಮೊಗ್ಗಲಾನರು ಸಹಾ ಸಾರಿಪುತ್ತರನ್ನು ಪ್ರಜ್ಞೆಯಲ್ಲಿ ಸಮುದ್ರವೆಂದು ಹಾಗೂ ತಾವು ಉಪ್ಪಿನ ಹರಳಿನಷ್ಟು ಎಂದು ಹೇಳುತ್ತಾರೆ. ಹಾಗೆಯೇ ಕೆಲವು ಪ್ರಶ್ನೆಗಳಿಗೆ ಸಾರಿಪುತ್ತರು ಮಾತ್ರವೇ ಉತ್ತರಿಸಲು ಸಾಧ್ಯವಾಗುತ್ತಿತ್ತು ಅದೇ ರೀತಿ ಕೆಲವೋಂದು ಸಮಸ್ಯೆಗಳು ಕೇವಲ ಮೊಗ್ಗಲಾನರ ಇದ್ದಿಶಕ್ತಿಯಿಂದ ಮಾತ್ರ ಪರಿಹಾರವಾಗುತ್ತಿತ್ತು.
2.4 ಮೊಟ್ಟಮೊದಲ ಇದ್ಧಿಯ ಆಕಾಂಕ್ಷೆ
ಅನಂತ ಕಾಲದ ಹಿಂದೆ ಮೊಗ್ಗಲಾನರು ಮೀನುಗಾರನ ವೃತ್ತಿಯಲ್ಲಿದ್ದರು. ಕಾಲನಂತರ ಅವರಿಗೆ ತಮ್ಮ ವೃತ್ತಿಯು ಅತ್ಯಂತ ಹೀನವಾದ ವೃತ್ತಿ ಎನಿಸಿತು ಏಕೆಂದರೆ ಇದರಿಂದಾಗಿ ಪರಜೀವಿಗಳಿಗೆ ಅಪಾರ ದುಃಖವಾಗುವ ಸಾಧ್ಯತೆಯಿತ್ತು. ಹೀಗಾಗಿ ಅವರು ಆ ವೃತ್ತಿಯನ್ನು ತೊರೆದರು. ಒಂದು ದಿನ ಅವರು ಪಚ್ಚೆಕ ಬುದ್ಧರನ್ನು ಕಂಡು ಅವರನ್ನು ಆಹಾರಕ್ಕೆ ಆಹ್ವಾನಿಸಿದರು. ಆಹಾರದ ನಂತರ ಪಚ್ಚೆಕ ಬುದ್ಧರು ಶೀಲವನ್ನು ಬೋದಿಸಿ ನಂತರ ಆಕಾಶ ಮಾರ್ಗದಲ್ಲಿ ಹಾರಿ ಹೋದರು. ಇದರಿಂದ ಸ್ಪೂತರ್ಿಹೊಂದಿದ ಮೊಗ್ಗಲಾನರು ತಾವು ಸಹಾ ಮುಂದಿನ ಜನ್ಮದಲ್ಲಿ ಇದ್ಧಿಸಂಪನ್ನರಾಗಬೇಕೆಂದು ಸಂಕಲ್ಪಿಸಿದರು. ಇಚ್ಚೆ ಇದ್ದಲ್ಲಿ ಮಾರ್ಗವಿದ್ದೆ ಇರುತ್ತದೆ. ಅದರಂತೆ ಎಲ್ಲವೂ ಸಾಧ್ಯವಾಯಿತು.
2.5 ಸಾರದ ತಾಪಸಿಯ ಹಾಗೂ ಸಿರಿವರ್ಧನರ ಮಹತ್ವಾಕಾಂಕ್ಷೆ
ಸಾರಿಪುತ್ತರ ಈ ಧಮ್ಮಪ್ರಯಾಣವು ಈ ಒಂದು ಜನ್ಮದಲ್ಲಿ ದೊರೆತಿರುವುದಲ್ಲ, ಈ ಅಗ್ರಶ್ರಾವಕತ್ವ ಅಥವಾ ಧಮ್ಮಸೇನಾಪತಿಯಾಗಲು ಅವರ ಒಂದು ಅಸಂಖ್ಯೆಯ ಮತ್ತು ಒಂದು ಲಕ್ಷ ಕಲ್ಪದಷ್ಟು ಹಿಂದಿನ ಶ್ರಮವಿದೆ. ಆಗ ಅನೊಮದಸ್ಸಿ ಸಮ್ಮಾಸಂಬುದ್ಧರು ಧಮ್ಮ ಬೋಧಿಸಿದ್ದಂತಹ ಕಾಲವದು. ಅನೊಮದಸ್ಸಿಯು ಗೋತಮ ಬುದ್ಧರಿಗಿಂತ 18ನೇ ಹಿಂದಿನ ಬುದ್ಧರಾಗಿದ್ದಂತಹವರು. ಆ ಸಮಯದಲ್ಲಿ ಈ ಸಾರಿಪುತ್ತರವರು ಸಾರದನೆಂಬ ಹೆಸರಿನ ಶ್ರೀಮಂತ ಬ್ರಾಹ್ಮಣನಾಗಿ ಹುಟ್ಟಿದ್ದರು. ಆ ಸಮಯದಲ್ಲಿ ಮೊಗ್ಗಲಾನರು ಸಿರಿವರ್ಧನ ಎಂಬ ಹೆಸರಿನ ಶ್ರೀಮಂತ ಗೃಹಸ್ಥರಾಗಿ ಹುಟ್ಟಿದ್ದರು. ಈ ಇಬ್ಬರ ಕುಟುಂಬಗಳು ಸ್ನೇಹದಿಂದಿದ್ದವು.
ಹೀಗಿರುವಾಗ ಸಾರದರ ತಂದೆಯು ಮರಣಿಸಿದಾಗ ಸಾರದರವರಿಗೆ ಪ್ರಾಪಂಚಿಕತೆಯ ಕ್ಷಣಿಕತೆಯು ಅರಿವಾಗಿ ಗೃಹತ್ಯಾಗ ಮಾಡಿ ತಾಪಸಿಯಾದರು. ಹಾಗು ಅವರು ಸಿರಿವರ್ಧನರನ್ನು ತಪೋಜೀವನಕ್ಕೆ ಆಹ್ವಾನಿಸಿದರು. ಆದರೆ ಸಿರಿವರ್ಧನರು ಅದಕ್ಕೆ ಒಪ್ಪಲಿಲ್ಲ. ಕಾಲಕ್ರಮೇಣ ಝಾನಸಿದ್ಧಿಗಳನ್ನು ಗಳಿಸಿದ ಸಾರದರವರು ಅಪಾರ ಸಮೂಹಕ್ಕೆ ನಾಯಕರಾಗಿದ್ದರು.
ಒಮ್ಮೆ ಅನೊಮದಸ್ಸಿ ಸಮ್ಮಾಸಂಬುದ್ಧರು ಆಹಾರಕ್ಕಾಗಿ ಬಂದಾಗ ಸಾರದರವರು ಬುದ್ಧರ ಲಕ್ಷಣಗಳನ್ನು ಗಮನಿಸಿಯೇ ಅವರ ಮಹೋನ್ನತೆಯನ್ನು ಅರಿತು ಅತ್ಯಂತ ಗೌರವಯುತ ಆಹಾರ ಪಾನಿಯಗಳ ವ್ಯವಸ್ಥೆ ಮಾಡುತ್ತಾರೆ. ಗಮನಿಸುತ್ತಾರೆ. ಆಗ ಅನೊಮದಸ್ಸಿಗೆ ನಿಭ ಹಾಗು ಅನೋಮ ಎಂಬ ಇಬ್ಬರು ಅಗ್ರಶ್ರಾವಕರಿರುತ್ತಾರೆ. ಅಗ್ರನಾಗಿ, ಮಹಾ ಅಗ್ರಶ್ರಾವಕ ನಂತರ ಅಲ್ಲಿಗೆ ಬಂದಂತಹ ಭಿಕ್ಷು ಸಂಘ ಹಾಗು ಅಗ್ರಶ್ರಾವಕರನ್ನು ಅಲ್ಲಿ ಸಾರದರವರು ಹೂವಿನಿಂದಲೇ ಮಾಡಲ್ಪಟ್ಟ ಛತ್ರಿಯನ್ನು ಭಗವಾನರಿಗೆ ಹಿಡಿಯುತ್ತಾರೆ. ಭಗವಾನರ ಹಿಂದೆಯೇ ಇದ್ದು, ಅವರ ಶಿರದ ಮೇಲೆಯೇ ಹಿಡಿದಿರುತ್ತಾರೆ. ಆ ಸಮಯದಲ್ಲಿ ಭಗವಾನರು ನಿರೋಧ ಸಮಾಪತ್ತಿಯಲ್ಲಿ ಪ್ರವೇಶಿಸಿ, ಆ ಮಹೋನ್ನತ ಸ್ಥಿತಿಯಲ್ಲಿಯೇ ಒಂದು ವಾರದಷ್ಟು ಕಾಲ ಹಾಗೆಯೇ ನೆಲೆಸುತ್ತಾರೆ. ಸಾರದರವರು ಸಹಾ ಅಪಾರ ಶ್ರದ್ಧೆಯಿಂದ ಇಡೀ ವಾರದ ಕಾಲದಲ್ಲಿ ಅವರಿಗೆ ಹೂಕೊಡೆಯಿಂದಲೇ, ಅವರ ಹಿಂದೆ ನಿಂತುಕೊಂಡು ಇಡೀ ವಾರದಲ್ಲಿ ಅಲುಗಾಡದೆ, ನಿದ್ರೆಹೋಗದೆ, ಆಹಾರ ಸೇವಿಸದೆ ಹೂಛತ್ರಿಯನ್ನು ಹಿಡಿದುಕೊಂಡು, ತಮ್ಮ ಭಕ್ತಿಯನ್ನು ತೋರಿಸುತ್ತಾರೆ.
ನಂತರ ಭಗವಾನರು ನಿರೋಧ ಸಮಾಪತ್ತಿಯಿಂದ ಹೊರಬಂದಾಗ ಸಾರಿಪುತ್ತರವರು ಭಗವಾನರ ಪಾದ ಕಮಲಗಳಿಗೆ ವಂದಿಸುತ್ತಾ ಹೀಗೆ ಆಕಾಂಕ್ಷೆಯನ್ನು, ಸಂಕಲ್ಪವನ್ನು ಹೇಳಿಕೊಳ್ಳುತ್ತಾರೆ. ಭಗವಾನ್, ಈ ಪುಣ್ಯಫಲದಿಂದಾಗಿ, ನಾನು ದೇವೇಂದ್ರನಾಗಲು ಇಚ್ಛಿಸುತ್ತಿಲ್ಲ ಅಥವಾ ಮಹಾಬ್ರಹ್ಮನಾಗಲು ಇಚ್ಛಿಸುತ್ತಿಲ್ಲ. ನನಗಿರುವ ಮಹತ್ವಾಕಾಂಕ್ಷೆ ಒಂದೇ, ಅದೇನೆಂದರೆ ಭವಿಷ್ಯದ ಸಮ್ಮಾಸಂಬುದ್ಧರಿಗೆ ನಾನು ಧಮ್ಮಸೇನಾನಿಯಂತಹ ಅಗ್ರಶ್ರಾವಕನಾಗುವುದು, ಹೀಗಾಗುವಂತೆ ಆಶೀರ್ವದಿಸಿ.
ಆಗ ಭಗವಾನರು ಹೀಗೆ ಯೋಚಿಸಿದರು: ಈತನ ಸಂಕಲ್ಪವು ಈಡೇರುವುದೇ? ತಕ್ಷಣ ಅವರಿಗೆ ಹಾಗಾಗುವುದೆಂದು ತಿಳಿದುಹೋಯಿತು. ಆಗ ಅವರು ಸಾರದರವರಿಗೆ ಹೀಗೆ ಹೇಳಿದರು: ಓ ಸಾರದ, ನಿನ್ನ ಶ್ರಮ ವ್ಯರ್ಥವಾಗಲಿಲ್ಲ. ನಿನ್ನ ಆಕಾಂಕ್ಷೆ ನಿಷ್ಫಲವಾಗುವುದಿಲ್ಲ, ಭವಿಷ್ಯದಲ್ಲಿ ಒಂದು ಅಸಂಖ್ಯೆಯ ಹಾಗು ಲಕ್ಷ ಕಲ್ಪದ ನಂತರ ಗೋತಮ ಬುದ್ಧರು ಉದಯಿಸುವರು. ಆಗ ನೀನು ಅವರಿಗೆ ಸಾರಿಪುತ್ತ ಎಂಬ ಹೆಸರಿನ ಧಮ್ಮಸೇನಾನಿ ಅಗ್ರಶ್ರಾವಕನಾಗುವೆ ಎಂದು ಭವಿಷ್ಯವಾಣಿ ನುಡಿದು ನಂತರ ಭಗವಾನರು ಅಲ್ಲಿಂದ ಹೊರಟರು.
ಇದರಿಂದಾಗಿ ಸಾರದರವರು ಅತ್ಯಂತ ಆನಂದಭರಿತರಾದರು. ಈ ವಿಷಯವನ್ನು ಹಂಚಿಕೊಳ್ಳಲು ಸಿರಿವರ್ಧನರ ಬಳಿಗೆ ಬಂದರು. ಅವರಲ್ಲಿ ನಡೆದ ವಿಷಯ ತಿಳಿಸಿದರು. ಆಗ ಸಿರಿವರ್ಧನರಲ್ಲಿಯು ದ್ವಿತೀಯ ಅಗ್ರಶ್ರಾವಕನಾಗಲು ಸಂಕಲ್ಪವು ಅತ್ಯಂತ ಹಿರಿದಾಯಿತು. ಅದನ್ನು ಹೇಳಿದಾಗ ಸಾರದರವರು ಸಹಾ ಅದಕ್ಕೆ ಪ್ರೋತ್ಸಾಹಿಸಿದರು. ಇದರಿಂದಾಗಿ ಪ್ರೇರಣೆ ಹೊಂದಿದ ಸಿರಿವರ್ಧನರವರು ದೊಡ್ಡದಾದ ಆಹಾರ ದಾನದ ಭವನವನ್ನು ನಿಮರ್ಿಸಿದರು. ಅದಾದ ಬಳಿಕ ಭಗವಾನರಿಗೆ ಭಿಕ್ಖುಸಂಘದ ಸಮೇತ ಔತಣಕ್ಕೆ ಆಹ್ವಾನಿಸಿದರು. ಇಡೀ ವಾರಪೂತರ್ಿ ಭಗವಾನರಿಗೆ ಹಾಗು ಅವರ ಸಂಘಕ್ಕೆ ಆಹಾರ ಪೂರೈಕೆ ಮಾಡಿದರು. ವಾರದ ಕೊನೆಯ ದಿನದಂದು ಭಿಕ್ಖುಗಳಿಗೆ ಚೀವರ ದಾನವನ್ನು ಮಾಡಿದರು. ನಂತರ ಭಗವಾನರಲ್ಲಿ ಈ ರೀತಿಯ ವಚಿ ಅಭಿಟ್ಠಾನವನ್ನು ಮಾಡಿದರು. ಈ ಮಹಾದಾನದಿಂದಾಗಿ ಈಗಿನ ಅನೋಮ ಅಗ್ರಶ್ರಾವಕರಂತೆ ಇದ್ದಿಸಂಪನ್ನದಲ್ಲಿ ಆಗುವಂತಾಗಲಿ. ನಾನು ಸಹಾ ಗೋತಮ ಬುದ್ಧರಲ್ಲಿಯೇ ಅಗ್ರಶ್ರಾವಕನಾಗಲಿ, ಹೀಗೆ ಸದಾ ಸಾರದ ಹಾಗು ನಾನು ಮಿತ್ರರಾಗಿಯೇ ಅಂತಿಮ ಜನ್ಮದವರೆಗೆ ಉಳಿಯುವಂತಾಗಲಿ.
ಅದನ್ನು ಆಲಿಸಿದ ಅನೊಮದಸ್ಸಿ ಭಗವಾನರು ಹೀಗೆ ಸಂಭವಿಸಬಹುದೇ ಎಂದು ದಿವ್ಯದೃಷ್ಟಿಯಿಂದ ಗಮನಿಸಿದಾಗ, ಹಾಗೇ ಆಗುವುದನ್ನು ದಶರ್ಿಸಿದ ಭಗವಾನರು ಮುಂದೆ ಗೋತಮಬುದ್ಧರ ಕಾಲದಲ್ಲಿ ಮೊಗ್ಗಲಾನ ಎಂಬ ಹೆಸರಿನ ಅಗ್ರಶ್ರಾವಕರಾಗಿ, ಇದ್ದಿಗಳಲ್ಲಿ ಅಗ್ರನಾಗುವೆ ಎಂದು ಭವಿಷ್ಯವಾಣಿ ನುಡಿದರು. ಇದಾದ ನಂತರ ಸಿರಿವರ್ಧನ ಮುಂದೆಯು ಸಂಘಕ್ಕೆ ಅಪಾರ ದಾನಗಳನ್ನು ಮಾಡಿ ಮುಂದೆ ಮರಣದ ನಂತರ ಸುಗತಿಯಲ್ಲಿ ಜನಿಸಿದರು. ಹಾಗೆಯೇ ಸಾರದ ತಾಪಸಿಯು ಸಹಾ ಧ್ಯಾನ ಜೀವನದಲ್ಲಿ ಅತಿ ಅಭಿವೃದ್ಧಿ ಹೊಂದಿ ಮುಂದೆ ಮರಣದ ನಂತರ ಬ್ರಹ್ಮಲೋಕದಲ್ಲಿ ಉದಯಿಸಿದರು.
- ಂ0ಂ

No comments:
Post a Comment