8. ಭಗವಾನರು ಮೊಗ್ಗಲಾನರ ರೋಗವನ್ನು ಗುಣಪಡಿಸಿದ್ದು
(ಮಹಾಮೊಗ್ಗಲಾನ ಥೇರ ಭೊಜ್ಜಾಂಗ ಸುತ್ತ)
ನಾನು ಹೀಗೆ ಕೇಳಿದ್ದೇನೆ : ಒಮ್ಮೆ ಭಗವಾನರು ರಾಜಗೃಹದ ವೇಲುವನದ ಕಲಂದಕನಿವಾಪದಲ್ಲಿ ನೆಲಸಿದ್ದರು.ಆ ಸಮಯದಲ್ಲಿ ಮೊಗ್ಗಲಾನರು ಗಿಜ್ಜಕೂಟದಲ್ಲಿ (ಗಿಡಗಗಳ ಬೆಟ್ಟದಲ್ಲಿ) ಇದ್ದರು ಅದರೆ ಅವರು ಆ ಸಮಯದಲ್ಲಿ ತೀವ್ರವಾಗಿ ಅಸ್ವಸ್ಥರಾಗಿದ್ದರು. ಅಗ ಭಗವಾನರು ತಮ್ಮ ಏಕಾಂತದಿಂದ ಎದ್ದು ಮಹಾಮೊಗ್ಗಲಾನರು ಇರುವಲ್ಲಿಗೆ ಬಂದರು. ಅಲ್ಲಿ ಪಕ್ಕದಲ್ಲಿ ಕುಳಿತು ಹೀಗೆ ನುಡಿದರು. :
ಮೊಗ್ಗಲಾನ ಹೇಗಿರುವೆ ?ನೀನು ನಿನ್ನ ನೋವುಗಳನ್ನು ಸಹಿಸುತ್ತಿರುವೆಯಾ ? ನಿನ್ನ ನೋವುಗಳು ಕಡಿಮೆಯಾಗುತ್ತಿದೆಯೇ ? ಇದಕ್ಕೆ ಸಂಬಂದಿಸಿದ ಲಕ್ಷಣಗಳು ಕಡಿಮೆ ಯಾಗುತ್ತಿದೆಯಲ್ಲವೆ?
ಇಲ್ಲ ಭಂತೆ, ನನ್ನಿಂದ ಸಹಿಸಲಾಗುತ್ತಿಲ್ಲ, ನೋವಿನ ವೇದನೆಗಳು ಅತಿ ತೀಕ್ಷ್ಣವಾಗಿವೆ, ಈ ನೋವಿನ ಹಾಗೂ ಅಸ್ವಸ್ಥತೆಯ ಲಕ್ಷಣಗಳು ಕಡಿಮೆಯಾಗುತ್ತಿಲ್ಲ.
ಮೊಗ್ಗಲಾನ ಸಪ್ತಭೋಧಿ ಅಂಗಗಳು ನನ್ನಿಂದ ಚೆನ್ನಾಗಿ ವಿವರಿಸಲ್ಪಟ್ಟಿದೆ, ಹಾಗೂ ನನ್ನಲ್ಲಿ ಚೆನ್ನಾಗಿ ಸ್ಥಾಪಿಸಲ್ಪಟ್ಟಿದೆ. ಅವು ಪರಿಪೂರ್ಣ ಅರಿವಿಗೆ, ಅಭಿಜ್ಞೆಗೆ, ಸಂಬೋಧಿಗೆ, ಮತ್ತು ನಿಬ್ಬಾಣಕ್ಕೆ ಕರೆದೂಯ್ಯುವುದು.
ಯಾವುವವು ಸಪ್ತಭೋಧಿ ಅಂಗಗಳು ನನ್ನಿಂದ ಚೆನ್ನಾಗಿ ವಿವರಿಸಲ್ಪಟ್ಟಿರುವ ಹಾಗೂ ನನ್ನಲ್ಲಿ ಚೆನ್ನಾಗಿ ಸ್ಥಾಪಿಸಲ್ಪಟ್ಟಿದೆ ಪರಿಪೂರ್ಣ ಅರಿವಿಗೆ, ಅಭಿಜ್ಞೆಗೆ, ಸಂಬೋಧಿಗೆ, ಮತ್ತು ನಿಬ್ಬಾಣಕ್ಕೆ ಕರೆದೂಯ್ಯುವ ಆ ಸಪ್ತಬೋಧಿ ಅಂಗಗಳು ಯಾವುವು ?
ಅವೆಂದರೆ :
1. ಸತಿ (ಎಚ್ಚರಿಕೆಯ) ಸಂಬೋಧಿ ಅಂಗ
2 ಧಮ್ಮ ವಿಚಯ(ಧಮ್ಮದ ಶೋಧನೆಯ) ಸಂಬೋಧಿ ಅಂಗ
3. ವಿರಿಯಾ (ಸತತ ಪ್ರಯತ್ನಶೀಲತೆ) ಸಂಬೋಧಿ ಅಂಗ
4. ಪೀತಿ(ಆನಂದ) ಸಂಬೋಧಿ ಅಂಗ
5. ಪಸ್ಸಧಿ(ಪ್ರಶಾಂತತೆಯ) ಸಂಬೋಧಿ ಅಂಗ
6. ಸಮಾಧಿ ಸಂಬೋಧಿ ಅಂಗ
7. ಉಪೇಕ್ಖ (ಸಮಚಿತ್ತತೆಯ) ಸಂಬೋಧಿ ಅಂಗ.
ಈ ಸಪ್ತಭೋಧಿ ಅಂಗಗಳು ನನ್ನಿಂದ ಚೆನ್ನಾಗಿ ವಿವರಿಸಲ್ಪಟ್ಟಿದೆ, ಹಾಗೂ ನನ್ನಲ್ಲಿ ಚೆನ್ನಾಗಿ ಸ್ಥಾಪಿಸಲ್ಪಟ್ಟಿದೆ. ಅವು ಪರಿಪೂರ್ಣ ಅರಿವಿಗೆ, ಅಭಿಜ್ಞೆಗೆ, ಸಂಬೋಧಿಗೆ, ಮತ್ತು ನಿಬ್ಬಾಣಕ್ಕೆ ಕರೆದೂಯ್ಯುವುದು.
ಹೀಗೆ ಭಗವಾನರು ಸಪ್ತ ಬೋಧಿಯ ಅಂಗಗಳ ಬಗ್ಗೆ ವಿವರಿಸಿದಾಗ ಮೊಗ್ಗಲಾನರು ಅವುಗಳ ಗಹನವಾನ ಆಳ ಅರ್ಥವನ್ನು ಅರಿತರು. ಹಾಗೂ ಅತ್ಯಂತ ಆನಂದವುಳ್ಳವರಾಗಿ ಹೀಗೆ ನುಡಿದರು :
ಖಂಡಿತವಾಗಿಯು ಭಗವಾನ್ ಇವು ಭೋಧಿ ಅಂಗಗಳೇ ಆಗಿವೆ. ಖಂಡಿತವಾಗಿಯು ಸುಗತರೇ ಇವು ಬೋಧಿಯ ಅಂಗಗಳೆ ಆಗಿವೆ. ಹಾಗು ಮೊಗ್ಗಲಾನರ ರೋಗವು ಪೂರ್ಣವಾಗಿ ಅದೃಷ್ಯವಾಯಿತು.
ಏತೇನ ಸಚ್ಚ ವಜ್ಜೆನ ರೋಗ ವೂಪ ಸಮೇತು ಮೆ/ತೆ
ಏತೇನ ಸಚ್ಚ ವಜ್ಜೆನ ರೋಗ ವೂಪ ಸಮೇತು ಮೆ/ತೆ
ಏತೇನ ಸಚ್ಚ ವಜ್ಜೆನ ರೋಗ ವೂಪ ಸಮೇತು ಮೆ/ತೆ
ಈ ಸತ್ಯವಚನದಿಂದಾಗಿ ನಾನೂ/ನೀನು/ಅವರು ರೋಗದಿಂದ ಮುಕ್ತನಾಗಲಿ(ರಾಗಲಿ)
ಈ ಸತ್ಯವಚನದಿಂದಾಗಿ ನಾನೂ/ನೀನು/ಅವರು ರೋಗದಿಂದ ಮುಕ್ತನಾಗಲಿ(ರಾಗಲಿ)
ಈ ಸತ್ಯವಚನದಿಂದಾಗಿ ನಾನೂ/ನೀನು/ಅವರು ರೋಗದಿಂದ ಮುಕ್ತನಾಗಲಿ(ರಾಗಲಿ

No comments:
Post a Comment