Monday, November 7, 2022

12. ಪರಿನಿಬ್ಬಾಣದ ನಂತರ

 12. ಪರಿನಿಬ್ಬಾಣದ ನಂತರ 



12.1 ಉಕ್ಕಚೆಲಾ ಸುತ್ತ:

ಆಗ ಭಗವಾನರು ವಜ್ಜಿಗಳ ರಾಜ್ಯದಲ್ಲಿ ವಿಹರಿಸುತ್ತಿದ್ದರು. ಗಂಗಾನದಿಯ ತೀರದ ಉಕ್ಕಚೆಲಾದಲ್ಲಿ ಇದ್ದರು. ಆಗಷ್ಟೇ ಸಾರಿಪುತ್ತ ಹಾಗು ಮೊಗ್ಗಲಾನರೀರ್ವರು ಪರಿನಿಬ್ಬಾಣ ಪಡೆದಿದ್ದರು. ಅದಕ್ಕೆ ಮುಂಚೆಯೇ ಶುದ್ಧೋಧನ, ಯಶೋಧರೆ, ರಾಹುಲ ಇವರೆಲ್ಲರೂ ಪರಿನಿಬ್ಬಾಣ ಪಡೆದಿದ್ದರು. ಆ ಸಮಯದಲ್ಲಿ ಭಗವಾನರು ಭಿಕ್ಷುಗಳೊಡನೆ ತೆರೆದ ಆಕಾಶದಲ್ಲಿ, ನದಿಯ ದಡದಲ್ಲಿ ಕುಳಿತಿದ್ದರು. ಭಗವಾನರು ಭಿಕ್ಖು ಸಮೂಹಕ್ಕೆ ಹೀಗೆ ನುಡಿದರು.

ಭಿಕ್ಷುಗಳೇ, ಈಗ ಸಾರಿಪುತ್ತ ಹಾಗು ಮೊಗ್ಗಲಾನರವರು ಪರಿನಿಬ್ಬಾಣ ಪಡೆದಿರುವುದಕ್ಕಾಗಿ ಈ ಸಭೆಯು ಬರಿದಾದ ಅಥವಾ ಟೊಳ್ಳಾದ ಮನಸ್ಥಿತಿಯನ್ನು ಅನುಭವಿಸುತ್ತಿದೆ. ಆದರೆ ನನಗೆ ಈ ಬಗೆಯ ಬರಿದಾದ ಮನಸ್ಥಿತಿಯಿಲ್ಲ. ಹಾಗೆಯೇ ಸಾರಿಪುತ್ತ ಹಾಗೂ ಮೊಗ್ಗಲಾನರು ಎಲ್ಲಿರುವರು ಎಂಬ ಹಂಬಲಿಕೆಯೂ ಇಲ್ಲ.

ಭಿಕ್ಖುಗಳೇ, ಹಿಂದಿನ ಸಮ್ಮಾಸಂಬುದ್ಧರಿಗೂ ನನಗೆ ಸಾರಿಪುತ್ತ ಹಾಗು ಮೊಗ್ಗಲಾನರ ಜೋಡಿ ಇರುವಂತೆ ಅವರಿಗೂ ಇದ್ದರು. ಹಾಗೆಯೇ ಮುಂದಿನ ಸಮ್ಮಾಸಂಬುದ್ಧರಿಗೂ ಇರುತ್ತಾರೆ.

ಅದ್ಭುತ ಭಿಕ್ಷುಗಳೇ, ಈ ಜೋಡಿಯು ಶಾಸ್ತರ ಬೋಧನೆಗೆ ಅನುಗುಣವಾಗಿಯೇ ಆಚರಿಸಬಲ್ಲ, ಅನುಷ್ಠಾನ ಮಾಡಬಲ್ಲ, ಬುದ್ಧರ ಬುದ್ಧಿವಾದದಂತೆಯೇ ತಿದ್ದಿಕೊಳ್ಳಬಲ್ಲಂತಹ, ಅವರು ನಾಲ್ಕು ಬಗೆಯ ಸಭೆಗಳಿಗೂ ಪ್ರಿಯರಾಗಿದ್ದರು, ಗೌರವಕ್ಕೆ ಪಾತ್ರರಾಗಿದ್ದರು. ಆದರೂ ಭಿಕ್ಷುಗಳೇ, ಆಶ್ಚರ್ಯ, ಅದ್ಭುತ! ತಥಾಗತರಿಗೆ ಇಂತಹ ಅದ್ಭುತ ಅಗ್ರಶ್ರಾವಕರ ಜೋಡಿ ವಿಯೋಗವಾದರೂ ಸಹಾ ನಿರಾಸೆಯಿಲ್ಲ, ಶೋಕವಿಲ್ಲ, ಪ್ರಲಾಪವಿಲ್ಲ. ಏಕೆಂದರೆ ಯಾವುದೆಲ್ಲವೂ ಜನಿಸಿದೆಯೋ, ಅಸ್ತಿತ್ವದಲ್ಲಿದೆಯೋ ಅವೆಲ್ಲವೂ ದೂರವಾಗುತ್ತದೆ (ಎಂಬ ಸ್ಪಷ್ಟ ಜ್ಞಾನವಿರುವುದಕ್ಕಾಗಿ) ವಿಯೋಗವಾಗುವಂತಹುದನ್ನು ಹೇಗೆತಾನೆ ವಿಯೋಗವಾಗಬಾರದು ಎಂದು ಅಳಿಸಲಾಗುತ್ತದೆ?! ನಿಜಕ್ಕೂ ಅಂತಹ ಸ್ಥಿತಿ ಸಾಧ್ಯವಿಲ್ಲ. ಆದ್ದರಿಂದ ಭಿಕ್ಖುಗಳೇ ನಿಮಗೆ ನೀವೇ ದ್ವೀಪಗಳಾಗಿ, ನಿಮಗೆ ನೀವೇ ಶರಣುಹೊಂದಿ. ಬೇರ್ಯಾವ ಆಶ್ರಯವೂ ಬೇಡ, ಧಮ್ಮವೇ (ಜ್ಞಾನವೇ) ನಿಮ್ಮ ಆಶ್ರಯ, ಧಮ್ಮವೇ ನಿಮ್ಮ ಶರಣು, ಬೇರ್ಯಾವ ಶರಣು ಹೋಗದಿರಿ.

ಹೀಗೆ ಭಗವಾನರೇ ಸಾರಿಪುತ್ತರಿಗೆ ಮತ್ತು ಮೊಗ್ಗಲಾನರಿಗೆ ಈ ರೀತಿಯಾಗಿ ಅಂತಿಮ ಪ್ರಶಂಸೆ ಮಾಡಿದರು. ನಂತರ ಅಸ್ಥಿಅವಶೇಷಗಳಿಗೆ ಸ್ತೂಪ ನಿಮರ್ಿಸಲು ಆಜ್ಞೆಯಿತ್ತರು. ನಂತರ ಭಗವಾನರು ರಾಜಗೃಹಕ್ಕೆ ಹೋಗಲು ನಿಶ್ಚಯಿಸಿದರು. ನಂತರ ಬೃಹತ್ ಸಮೂಹದೊಂದಿಗೆ ಅಲ್ಲಿಗೆ ಬಂದರು. 

12.2 ಮೊಗ್ಗಲಾನರ ಸ್ತೂಪ

ನಳಂದದ ಸ್ತೂಪದ ಸ್ಥಳವನ್ನು ಸಾರಿಪುತ್ತರ ಹುಟ್ಟಿನ ಹಾಗು ಪರಿನಿಬ್ಬಾಣದ ಸ್ಥಳವೆಂದು ಭಾವಿಸುತ್ತಾರೆ. ಸಾರಿಪುತ್ತರ ಸ್ತೂಪದಲ್ಲಿ ಪ್ರಧಾನವಾಗಿ ಅವರ ಅಸ್ಥಿ ಅವಶೇಷಗಳಿರುತ್ತದೆ. ಅಂತಹ ಸ್ತೂಪವು ಹಿಂದೆ ಬುದ್ಧ ಭಗವಾನರ ಕೋರಿಕೆಯಂತೆ ರಾಜ ಅಜಾತಶತ್ರುವು ಸ್ತೂಪವನ್ನು ನಿಮರ್ಿಸಿದ್ದಾನೆ. ಇತಿಹಾಸದ ಪ್ರಕಾರ ಭಿಕ್ಖು ಚುಂದರು ಸಾರಿಪುತ್ತರ ಅಸ್ಥಿಯನ್ನು ತೆಗೆದುಕೊಂಡು ಆನಂದರವರಿಗೆ ನೀಡುತ್ತಾರೆ, ಆನಂದರವರು ಭಗವಾನರಿಗೆ ನೀಡುತ್ತಾರೆ. ಭಗವಾನರ ಕೋರಿಕೆಯಂತೆ ರಾಜ ಅಜಾತಶತ್ರುವು ಸ್ತೂಪವನ್ನು ಕಟ್ಟಿಸುತ್ತಾನೆ. ಮುಂದೆ ಅಶೋಕ ಚಕ್ರವತರ್ಿಯು ಇದನ್ನು ಇನ್ನೂ ಭವ್ಯವಾಗಿ ನಿಮರ್ಿಸುತ್ತಾನೆ. ಅದು ನಳಂದದಲ್ಲಿ ಇದೆ. ಹಾಗೆಯೇ ಸಾಂಚಿಯಲ್ಲೂ ಮುಂದೆ ಅಶೋಕ ಚಕ್ರವತರ್ಿ ನಿಮರ್ಿಸಿದ್ದಾನೆ. ಸಾಂಚಿಯ ಅಸ್ಥಿ ಅವಶೇಷದ ಪವಿತ್ರ ಕೋಣೆಯು ಎರಡು ಕಲ್ಲಿನ ಕೋಶವಾಗಿ ಕಂಡುಬರುತ್ತದೆ. ಉತ್ತರ ದಿಕ್ಕಿನತ್ತ ಇರುವುದು ಮಹಾಮೊಗ್ಗಲಾನರವರದು ಹಾಗು ದಕ್ಷಿಣ ದಿಕ್ಕಿನತ್ತ ಇರುವುದು ಸಾರಿಪುತ್ತರದು ಎಂದು ಖಚಿತಪಡಿಸಲಾಗಿದೆ. ನೀವು ಶ್ರೀಲಂಕ, ಜಪಾನ್ ಅಥವಾ ಚೀನಾ ದೇಶಗಳಿಗೆ ಹೋದರೆ ಭಗವಾನರ ಪಕ್ಕದಲ್ಲಿ ಬಲಗಡೆ ಹಾಗು ಎಡಗಡೆ ಇಬ್ಬರು ಭಿಕ್ಷುಗಳ ವಿಗ್ರಹಗಳನ್ನು ಕಾಣಬಹುದು. ಅವರೇ ಸಾರಿಪುತ್ತ ಹಾಗು ಮಹಾಮೊಗ್ಗಲಾನ. ಬಲಗಡೆ ಯಾವಾಗಲೂ ಸಾರಿಪುತ್ತರು ಇರುತ್ತಾರೆ ಹಾಗು ಎಡಗಡೆ ಮೊಗ್ಗಲಾನರು ಇರುತ್ತಾರೆ. ಭಗವಾನರೇ ಚುಂದ ಸುತ್ತದಲ್ಲಿ ನುಡಿದಿರುವಂತೆ ಸಾರಿಪುತ್ತರ ಅಸ್ಥಿಯು ಶಂಕುವಿನ ವರ್ಣದ್ದಾಗಿದೆ. ಇದನ್ನು ಈ  ಹೀಗೆ ಕಾಣಬಹುದು.

ಮೊಗ್ಗಲಾನರ ಅಸ್ಥಿಗಳು

ಸಾಂಚಿ ಸ್ತೂಪ 3 ರಲ್ಲಿ ಸಾರಿಪುತ್ತ ಹಾಗೂ ಮೊಗ್ಗಲಾನರ ಸ್ತೂಪಗಳೆರಡೂ ಇವೆ. ಇದಕ್ಕೆ ಬ್ರಿಟೀಷರ ಪುರಾತನ ಶಾಸ್ತ್ರಜ್ಞನಾದ ಅಲೆಗ್ಸಾಂಡರ್ ಕನ್ನಿಂಗ್ಹ್ಯಾಮ್ರವರ  ಕೊಡುಗೆ ಅಪಾರ ಅವರು ಬೌದ್ಧ ಸ್ತೂಪಗಳ ಅನ್ವೇಷಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಇದರ ಶೋಧನೆಯು ಸಹಾ ಅವರೇ ಮಾಡಿದ್ದರು. ಅವರು ಹೀಗೆ ಹೇಳಿದ್ದಾರೆ :ಆ ಸ್ತೂಪದಲ್ಲಿ ತೋಪಿನಾಕಾರದ ಆಕೃತಿಯೊಳಗೆ ಹಲವು ಗಂಟೆಗಳ ಶ್ರಮದ ನಂತರ 5 ಅಡಿಯ ಉದ್ದದ ಚಪ್ಪಡಿಯು ಕಂಡು ಬಂದಿತು. ಅದನ್ನು  ಉತ್ತರ ದಕ್ಷಿಣವಾಗಿ ಮಲಗಿಸಿದ್ದರು. ಆ ಚಪ್ಪಡಿಯನ್ನು ಎತ್ತಿದಾಗ ನಮಗೆ 2 ವಿಶಾಲವಾದ ಪೆಟ್ಟಿಗೆಗಳು ಕಂಡು ಬಂದಿತು. ಅವೇ ಸಾರಿಪುತ್ತ ಹಾಗೂ ಮೊಗ್ಗಲಾನರ ಅಸ್ಥಿಗಳು.  ಸಾರಿಪುತ್ತರದು ದಕ್ಷಿಣ ದಿಕ್ಕಿನಲ್ಲಿ ಹಾಗೂ ಮೊಗ್ಗಲಾನರದ್ದು ಉತ್ತರ ದಿಕ್ಕಿನಲ್ಲಿ ಇಟ್ಟಿದ್ದರು. ಅದರ ಮೇಲೆ ಬ್ರಾಹ್ಮಿ ಲಿಪಿಯಲ್ಲಿ ಅಸೋಕನು ಕೆತ್ತಿಸಲಾದಂತಹ ಸಾರಿಪುತ್ತಸ್ಸ  ಹಾಗೂ ಮಹಾ ಮೊಗ್ಗಲಾನಸ್ಸ ಎಂದು ವಿವರಣೆಯಿದೆ.

ಸ್ತೂಪದಲ್ಲಿರುವ ಅಸ್ಥಿಯ ವಿವರಣೆ

ಸಾರಿಪುತ್ತರ ಪೆಟ್ಟಿಗೆಯಲ್ಲಿ  ಬಿಳಿಯ ನುಣುಪಾದ ಬಳಪದ ಕಲ್ಲಿನ  ಭರಣಿಯಾಗಿದ್ದು 6 ಅಂಗುಲ ಅಗಲವಾಗಿದ್ದು 3 ಅಂಗುಲ ಎತ್ತರವಾಗಿದೆ. ಅದರ ಹೊರ ಮೇಲ್ಮೈ ನುಣುಪಾಗಿದ್ದು ಗಟ್ಟಿಯಾಗಿದೆ, ಅದು ಅತ್ಯಂತ ಕುಶಲ ಕಾಮರ್ಿಕರಿಂದ ನಿಮರ್ಿತವಾಗಿದೆ, ಭರಣಿಯಿಂದ ಈಗಲೂ ಶ್ರೀಗಂಧದ ಸುವಾಸನೆಯಿದೆ.  ಒಳಗೆ ಅಸ್ಥಿಯ ಜೊತೆಗೆ ಹಲವಾರು ಅತ್ಯಮೂಲ್ಯ ಕಲ್ಲುಗಳಿವೆ(ವಜ್ರ, ರತ್ನ ಇತ್ಯಾದಿ). ಹಾಗೂ ಆ ಭರಣಿಯು ಸಹಾ ಸಾರಿಪತ್ತರ ಒಂದು ಮೂಳೆಯಿಂದ ಕೂಡಿದೆ. ಅದು ಕೇವಲ ಒಂದು ಅಂಗುಲದಷ್ಟಿದೆ. 

ಮೊಗ್ಗಲಾನರ ಕಲ್ಲಿನ ಪೆಟ್ಟಿಗೆಯಲ್ಲಿ ಇನ್ನೊಂದು ಬಳಪದ ಕಲ್ಲಿನ ಭರಣಿಯಿದ್ದು ಅದು ಸಾರಿಪುತ್ತರ ಭರಣಿಯ ತರಹವಿದೆ. ಒಂದು ಭರಣಿಯಲ್ಲಿ ಮೊಗ್ಗಲಾನರ ಎರಡು ಮೂಳೆಯ ಅಸ್ಥಿಗಳಿವೆ. ಅವು ಸಾರಿಪುತ್ತರದಕ್ಕಿಂತ ಚಿಕ್ಕಾದಾಗಿದ್ದು ಅದರೆ ಅಗಲ ಹೆಚ್ಚಾಗಿದೆ.

ಪ್ರತಿ ಭರಣಿಯಲ್ಲಿ ಏಕ ಅಕ್ಷರದ ಲಿಪಿಯಿದ್ದು ಸಾರಿಪುತ್ತರ ಭರಣಿಯ ಮೇಲೆ ಸಾ ಎಂಬ ಅಕ್ಷರವಿದೆ ಹಾಗೂ ಮೊಗ್ಗಲಾನರ ಭರಣಿಯ ಮೇಲೆ ಮ ಅಕ್ಷರವಿದೆ. ಸಾರಿಪುತ್ತರ ಭರಣಿಯು ದಕ್ಷಿಣ ದಿಕ್ಕಿನಲ್ಲಿದೆ ಹಾಗೂ ಮೊಗ್ಗಲಾನರ ಭರಣಿಯು ಉತ್ತರ ದಿಕ್ಕಿನಲ್ಲಿದೆ. ಭಗವಾನರ ಕಾಲದಲ್ಲಿಯು ಭಗವಾನರು ಪೂವರ್ಾಭಿಮುಖವಾಗಿ ಕುಳಿತ್ತಿದ್ದರೆ ಸಾರಿಪುತ್ತ ಹಾಗೂ ಮೊಗ್ಗಲಾನರು ದಕ್ಷಿಣ ಹಾಗೂ ಉತ್ತರಾಭಿಮುಖವಾಗಿ ಕುಳಿತುಕೊಳ್ಳುತ್ತಿದ್ದರು.

- ಂ0ಂ  

11. ಮೊಗ್ಗಲ್ಲಾನರವರ ದುರಂತ ಹಾಗೂ ಪರಿನಿಬ್ಬಾಣ

 11. ಮೊಗ್ಗಲ್ಲಾನರವರ ದುರಂತ ಹಾಗೂ ಪರಿನಿಬ್ಬಾಣ





ವರ್ಧಮಾನ ಮಹಾವೀರರ ಮರಣದ ನಂತರ ಅವರ ಶಿಷ್ಯರಲ್ಲಿ ಅತಿ ಹಿಂಸಾತ್ಮಕ ಜಗಳವುಂಟಾಯಿತು. ಅವರ ಶಿಷ್ಯರಲ್ಲೇ ಗುರುವಿನ ಬೋಧನೆಯ ಬಗ್ಗೆ ವಾದವಿವಾದಗಳಾದವು. ಹೀಗಾಗಿ ಜನರು ಸಹಾ ಅವರ ಮೇಲೆ ಶ್ರದ್ಧೆ ಕಳೆದುಕೊಂಡರು.  

ಇತ್ತ ಬುದ್ಧ ಧಮ್ಮ ಅತ್ಯಂತ ಉನ್ನತ ಶಿಖರವೇರಿತ್ತು. ಅದಕ್ಕೆ ಕಾರಣ ಬುದ್ಧ ಭಗವಾನರು ಮಾತ್ರವಲ್ಲದೆ ಸಾರಿಪುತ್ತರ ಪ್ರಜ್ಞಾಶೀಲತೆ ಹಾಗೂ ಮೊಗ್ಗಲಾನರ ಇದ್ಧಿ ಶಕ್ತಿ. ಮೊಗ್ಗಲ್ಲಾನರಿಗೆ ಮಹಾಮೊಗ್ಗಲ್ಲಾನ ಎಂದೇ ಕರೆಯುತ್ತಿದ್ದರು. ಏಕೆಂದರೆ ಅಂತಹ ಶ್ರೇಷ್ಠತೆ ಅವರಲ್ಲಿತ್ತು. ಅವರು ವಿವಿಧ ಮನಸ್ಶಕ್ತಿಗಳನ್ನು ಸಂಪಾದಿಸಿದ್ದರು. ಅವರು ಮಾಡದ ಪವಾಡವೇ ಇರಲಿಲ್ಲ. ಸಮಾಧಿ, ಇದ್ದಿಪಾದ ಮತ್ತು ಅಭಿಜ್ಞಗಳಲ್ಲಿ ಅವರು ಪರಿಪೂರ್ಣತೆ ಸಾಧಿಸಿ ಅತ್ಯಂತ ಪರಿಣಿತ ಮಾನಸಶಕ್ತಿ ಸಂಪನ್ನರಾಗಿದ್ದರು. ಹೀಗಾಗಿ ಅವರು ಪಾಪ ಮಾಡಿದವರ ಮುಂದಿನ ಗತಿ ತಿಳಿದುಕೊಂಡು ಜನರಿಗೆ ತಿಳಿಸಿ ಜನರು ಪಾಪ ಮಾಡದಂತೆ ತಡೆಯುತ್ತಿದ್ದರು. ಹಾಗೆಯೇ ದಾನ, ಶೀಲ ಆಚರಿಸಿದವರ ಸುಗತಿ ತಿಳಿದುಕೊಂಡು ಅವರ ಸುಗತಿಯ ಬಗ್ಗೆ ಜನರಿಗೆ ತಿಳಿಸಿ ಅವರನ್ನು ದಾನಿಗಳನ್ನಾಗಿ, ಶೀಲವಂತರನ್ನಾಗಿಸುತ್ತಿದ್ದರು. ಹಾಗೆಯೇ ಸಮಾಧಿವಂತರ ಬ್ರಹ್ಮಲೋಕ, ದಾನಿಗಳ, ಸ್ವರ್ಗಲೋಕ, ಪ್ರಜ್ಞಾರ ಲೋಕೋತ್ತರ ಫಲಗಳನ್ನು ತಿಳಿಸಿ ಅವರಲ್ಲಿ ಸ್ಫೂತರ್ಿ ತುಂಬಿಸುತ್ತಿದ್ದರು. ಇದರಿಂದಾಗಿ ಸರ್ವರು ಬುದ್ಧರ ಶರಣು ಪಡೆಯುತ್ತಿದ್ದರು, ಬೌದ್ಧ ಭಿಕ್ಷುಗಳಿಗೆ ಅತಿಯಾಗಿ ಸತ್ಕಾರ ಮಾಡುತ್ತಿದ್ದರು. ಹೀಗಾಗಿ ಅನ್ಯ ಮತಾವಲಂಬಿಗಳಿಗೆ ತೊಂದರೆಯಾಯಿತು. 

ಆಗ ನಗ್ನ ಸನ್ಯಾಸಿಗಳಾದ ನಿಗಂಠರಿಗೂ ತೊಂದರೆಯಾಯಿತು. ಆಗ ನಿಗಂಠ ಸನ್ಯಾಸಿಗಳು ಸಭೆ ಸೇರಿ ಹೀಗೆ ಚಚರ್ಿಸಿಕೊಂಡರು. ಸೋದರರೇ, ನಮಗೆ ಸತ್ಕಾರ ಕ್ಷೀಣವಾಗಿದೆ, ಕೇವಲ ಬೌದ್ಧ ಭಿಕ್ಷುಗಳಿಗೆ ಆದರ ಸತ್ಕಾರ ಗೌರವಗಳು ಹೇರಳವಾಗಿ ಸಿಗುತ್ತಿವೆ. ಇದಕ್ಕೆಲ್ಲಾ ಕಾರಣ ಯಾರೆಂದರೆ ಮೊಗ್ಗಲ್ಲಾನರವರೇ. ಏಕೆಂದರೆ ಅವರು ತಮ್ಮ ಅತೀಂದ್ರಿಯ ಶಕ್ತಿಯಿಂದ ನರಕಗಳಲ್ಲಿ, ಸ್ವರ್ಗಗಳಲ್ಲಿ, ಬ್ರಹ್ಮಲೋಕಗಳಲ್ಲಿ ಸಂಚರಿಸುವವರಾಗಿದ್ದಾರೆ. ಹೀಗಾಗಿ ಇಲ್ಲಿ ಬಂದು, ಇಂತಹ ವ್ಯಕ್ತಿ ಅಲ್ಲಿ ಹೇಗೆ ಜನಿಸಿದ್ದಾನೆ. ಇಂತಹ ಸುಖವನ್ನು ಅನುಭವಿಸುತ್ತಿದ್ದಾನೆ ಎಂದು ತಿಳಿಸುವವರಾಗಿದ್ದಾರೆ. ಆದ್ದರಿಂದಾಗಿ ಬೌದ್ಧ ಭಿಕ್ಷುಗಳಿಗೆ ಅಧಿಕ ಸತ್ಕಾರಗಳು ಸಿಗುತ್ತಿವೆ. ನಮಗೆ ನೋಡುವವರೇ ಇಲ್ಲವಾಗಿದ್ದಾರೆ. ನಮ್ಮ ದಾರಿಗೆ ಮುಳ್ಳಾಗಿರುವ ಈ ಮೊಗ್ಗಲ್ಲಾನರನ್ನು ಯಾವುದೇ ರೀತಿಯಲ್ಲಾಗಲೀ ಕೊಲ್ಲೋಣ ಅಥವಾ ಕೊಲ್ಲಿಸೋಣ. ಆಗ ಮಾತ್ರ ನಾವು ಸುಖವಾಗಿರಬಲ್ಲೆವು, ಏನೆನ್ನುವಿರಿ? ಎಲ್ಲರೂ ಇದಕ್ಕೆ ಒಪ್ಪಿಗೆ ಸೂಚಿಸಿದರು.

ನಂತರ ಅವರು ಅಲೆದಾಡುವ ಶ್ರಮಣಗುಪ್ತನೆಂಬ ಕಳ್ಳರಿಗೆ ಸಾವಿರ ಚಿನ್ನದ ನಾಣ್ಯಗಳನ್ನು ನೀಡಿ, ಮೊಗ್ಗಲ್ಲಾನರಿಗೆ ಮುಗಿಸಲು ಯೋಜನೆ ಮಾಡಿದರು. ಹೋಗಿ, ಮೊಗ್ಗಲ್ಲಾನರು ಕರಿಬಂಡೆಯ ಬಳಿ ವಾಸವಾಗಿದ್ದಾರೆ, ಅಲ್ಲಿಗೆ ಹೋಗಿ ಮುಗಿಸಿಬಿಡಿ ಎಂದು ಆಜ್ಞಾಪಿಸಿ ಕಳುಹಿಸಿದರು. 

ಆಗ ಮೊಗ್ಗಲ್ಲಾನರು ಕರಿಬಂಡೆ(ಕಾಲಾ ಶಿಲ)ಯ ಬಳಿಯಲ್ಲಿನ ವಾಸಸ್ಥಳದಲ್ಲಿ ಧ್ಯಾನಿಸುತ್ತಿದ್ದರು. ಕಳ್ಳರೆಲ್ಲರೂ ಸುತ್ತುವರೆದರು. ಆದರೆ ಮೊಗ್ಗಲ್ಲಾನರು ಬೀಗದ ಕೈ ಹಾಕುವ ಕಿಂಡಿಯಿಂದ ಸೂಕ್ಷ್ಮರೂಪ ಪಡೆದು ಅಲ್ಲಿಂದ ತಪ್ಪಿಸಿಕೊಂಡರು. ಮತ್ತೊಂದು ದಿನ ವಾಸಸ್ಥಳವನ್ನು ಸುತ್ತುವರೆದಾಗ, ಮೊಗ್ಗಲ್ಲಾನರು ಛಾವಣಿಯ ರಂಧ್ರದಿಂದ ಸೂಕ್ಷ್ಮ ರೂಪ ಪಡೆದು ಅಗೋಚರವಾಗಿ ಹಾರಿ ತಪ್ಪಿಸಿಕೊಂಡರು. ಇದೇರೀತಿಯಾಗಿ ಆರು ದಿನಗಳು ಅವರ ಕೈಗೆ ಸಿಗದೆ ಮೊಗ್ಗಲ್ಲಾನರು ಯಶಸ್ವಿಯಾದರು. ಅರಹಂತರಾದ ಅವರಿಗೆ ದೇಹವನ್ನು ರಕ್ಷಿಸಿಕೊಳ್ಳಬೇಕೆಂಬ ಆಸೆ ಏನೂ ಇರಲಿಲ್ಲ. ಅದರೆ ಅವರನ್ನು ಕೊಂದವರಿಗೆ ಭೀಕರ ದುರ್ಗತಿ ಸಿಗುವುದೆಂಬ ಕಾರಣಕ್ಕಾಗಿ , ಕೊಲೆಗಾರರ ಮೇಲಿನ ಕರುಣೆಯು ಅವರನ್ನು ಹೀಗೆ ತಪ್ಪಿಸಿಕೊಳ್ಳಲು  ಮುಖ್ಯ ಕಾರಣವಾಗಿತ್ತು.

ಆದರೆ ಯಾವಾಗ 7ನೆಯ ದಿನ ಬಂದಿತೋ, ಆಗ ಪೂಜ್ಯ ಮೊಗ್ಗಲ್ಲಾನರಿಗೆ ತಾವು ಕಲ್ಪಗಳ ಹಿಂದೆ ಮಾಡಿದ ಪಾಪದ ಕರ್ಮವು ನೆನಪಿಗೆ ಬಂದಿತು. ಅದು ಹೀಗಿತ್ತು.

      *******     *********     *********      ***********

   ಅತೀತ ಕಾಲದಲ್ಲಿ ಬಹು ಜನ್ಮಗಳ ಹಿಂದೆ, ಈ ಮೊಗ್ಗಲ್ಲಾನರು ಉತ್ತಮ ಕುಟುಂಬದಲ್ಲಿ ಜನಿಸಿದ್ದರು. ತಂದೆ ತಾಯಿಗಳ ಸೇವೆ ಮಾಡಿಕೊಂಡು ಚೆನ್ನಾಗಿಯೇ ಇದ್ದರು. ಆಗ ತಂದೆ ತಾಯಿಗಳು ಆತನಿಗೆ ವಿವಾಹಕ್ಕೆ ಬಲವಂತ ಮಾಡಿದಾಗ ಮೊದಮೊದಲು ವಿವಾಹಕ್ಕೆ ಆ ಯುವಕನು ನಿರಾಕರಿಸಿದನು: ಅದರ ಅವಶ್ಯಕತೆ ಏಕೆ, ನಾನೇ ನಿಮಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ, ಮುಂದೆ ಹಾಗೆಯೇ ಚೆನ್ನಾಗಿ ನೋಡಿಕೊಳ್ಳುವೆನು ಎನ್ನುತ್ತಿದ್ದರು. ಆದರೂ ತಾಯ್ತಂದೆಯರು ಆತನಿಗೆ ಚೆಂದದ ಸ್ತ್ರೀಯೊಂದಿಗೆ ವಿವಾಹ ಮಾಡಿಸಿದ್ದರು.

ಮೊದಮೊದಲು ಆ ಸೊಸೆಯು ಅತ್ತೆ-ಮಾವಂದಿರನ್ನು ಚೆನ್ನಾಗಿಯೇ ನೋಡಿಕೊಂಡಳು. ನಂತರ ಆಕೆಗೆ ಅವರನ್ನು ಕಂಡರೆ ಅಸಹ್ಯವಾಗತೊಡಗಿತು. ನಾನು ನಿಮ್ಮ ಅಂಧರಾಗಿರುವ ಮುದಿ ತಂದೆ-ತಾಯಿಗಳೊಂದಿಗೆ ಇರಲು ಸಾಧ್ಯವಿಲ್ಲ, ಹೀಗೆಯೇ ಒಂದೇ ಮನೆಯಲ್ಲಿ ಇರಲು ಸಾಧ್ಯವೇ ಇಲ್ಲ ಎಂದಳು. ಆದರೆ ಆ ಯುವಕನು ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳಲಿಲ್ಲ. ಇದರಿಂದ ಆಕೆಯು ಉಪಾಯವೊಂದನ್ನು ಮಾಡಿದಳು. ಅಕ್ಕಿಯ ಗಂಜಿಯನ್ನು ಅಲ್ಲಲ್ಲಿ ಸಿಂಪಡಿಸಿ, ಗಂಡನು ಮನೆಗೆ ಬಂದಾಗ ನೋಡಿ, ನಿಮ್ಮ ತಂದೆ-ತಾಯಿ ಮಾಡಿರುವುದನ್ನು, ಅವರು ಮನೆಯೆಲ್ಲಾ ಹೀಗೆ ಗಲೀಜು ಮಾಡುತ್ತಾರೆ, ದಿನಾ ನಾನೇ ಇದನ್ನೆಲ್ಲಾ ಶುಚಿಗೊಳಿಸಬೇಕು. ಅಬ್ಬಾ, ಇವರೊಂದಿಗೆ ನಾನು ಇನ್ನೂ ಒಟ್ಟಿಗೆ ಇರಲು ಸಾಧ್ಯವಿಲ್ಲ. ಎಂದಳು. ಹೀಗೆ ಆಕೆ ಪದೇ ಪದೇ ಅಸಹ್ಯ ತೋಡಿಕೊಂಡಾಗ, ಆತನಂತಹ ಶುದ್ಧ ಜೀವಿಯಲ್ಲೂ ಕಲುಶತೆ ಮೂಡಿತು. ಸರಿ ಅವರಿಗೆ ಏನಾದರೂ ವ್ಯವಸ್ಥೆ ಮಾಡುವೆನು ಎಂದನು.

ಮಾರನೆಯದಿನ ಆ ಯುವಕನು ತನ್ನ ತಂದೆ ತಾಯಿಗಳೊಂದಿಗೆ ಅಪ್ಪ-ಅಮ್ಮ, ಇಂತಹ ಊರಿನಲ್ಲಿ ನಿಮ್ಮ ಸಂಬಂಧಿಕರು ನಿಮಗೆ ನೋಡಲು ಹಾತೊರೆಯುತ್ತಿದ್ದಾರೆ, ನಿಮ್ಮನ್ನು ಕರೆತರಲು ಕೇಳಿಕೊಂಡಿದ್ದಾನೆ ಎಂದು ಹೇಳಿ ಬಂಡಿ ಸಿದ್ಧಪಡಿಸಿ ದಟ್ಟ ಅರಣ್ಯದೊಳಗೆ ಕರೆದೊಯ್ದನು. ನಂತರ ಒಂದೆಡೆ ನಿಲ್ಲಿಸಿ, ತನ್ನ ತಂದೆಗೆ ಬಂಡಿಯ ಎತ್ತುಗಳ ಹಗ್ಗವನ್ನು ನೀಡಿ, ಇಲ್ಲಿ ಕಳ್ಳರ ಕಾಟವೆಂದು ಹೇಳಿ ಅವರೇ ಮುಂದುವರೆಯುವಂತೆ ಹೇಳಿದನು. ನಂತರ ಕಳ್ಳರು ಆಕ್ರಮಣ ಮಾಡಿರುವ ಹಾಗೆ ಶಬ್ದಗಳನ್ನು ಮಾಡಿದನು. ಆ ಶಬ್ದಗಳನ್ನು ಕೇಳಿದ ತಾಯಿ-ತಂದೆಯರು ಮಗು, ನೀನು ಊರಿಗೆ ಸೇರಿಬಿಡು, ನೀನಿನ್ನೂ ಯುವಕ, ನಮಗೆ ವಯಸ್ಸಾಗಿದೆ, ನೀನು ಜೀವ ಉಳಿಸಿಕೋ ಹೋಗು ಎಂದರು. ಆದರೆ ಮನಸ್ಸನ್ನು ಕಲ್ಲು ಮಾಡಿಕೊಂಡಿದ್ದ ಆತನಿಗೆ ಅದರಿಂದ ಯಾವ ಪರಿಣಾಮವೂ ಆಗಲಿಲ್ಲ. ಆತನು ಕಳ್ಳರಂತೆ ಶಬ್ದಗಳನ್ನು ಮಾಡುತ್ತ ಅವರನ್ನು ಹಿಂಸಿಸಿ, ಕೊಂದು ಅರಣ್ಯದಲ್ಲಿ ಎಸೆದು ಊರಿಗೆ ಹಿಂತಿರುಗಿದನು. 

   *********          **********          *********        **********

ಇದರ ಪರಿಣಾಮವಾಗಿ ಆತನು ನರಕದಲ್ಲಿ ಸಾವಿರಾರು ವರ್ಷ ನೋವು ಅನುಭವಿಸಿದನು. ನಂತರ ನೂರಾರು ಜನ್ಮಗಳಲ್ಲಿ ಹೀಗೆಯೇ ಹಿಂಸೆಗೆ ಒಳಗಾಗಿ ಮರಣವನ್ನಪ್ಪಿದನು. ಆದ್ದರಿಂದಲೇ ಈ ಅಂತಿಮ ಜನ್ಮದಲ್ಲೂ ಹೀಗೆ ಭೀಕರವಾಗಿ ಚಿತ್ರಹಿಂಸೆಯುತ ನೋವನ್ನು ಅನುಭವಿಸಿದನು.

ಆ ಕರ್ಮಫಲದ ಪ್ರಬಲ ಶಕ್ತಿಯಿಂದಾಗಿ ಅವರ ಪವಾಡ ಶಕ್ತಿಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ನಂದೋಪನಂದರನ್ನು ದಮನ ಮಾಡಿದಂತಹ, ಅನೇಕ ನಾಗರನ್ನು ದಮನ ಮಾಡಿದ , ಇಂದ್ರನ ವೈಜಯಂತವನ್ನು ಅಲುಗಾಡಿಸಿದಂತಹ, ಇದ್ದಿ ಹಾಗೂ ಅಭಿಜ್ಞಾಗಳಲ್ಲಿ ಬುದ್ಧರ ನಂತರ ಇಡೀ ಲೋಕಗಳಿಗೆ  ದ್ವಿತೀಯರಾದಂತಹ ಮೊಗ್ಗಲಾನರು ಕಮ್ಮಫಲದ ಮುಂದೆ ಏನೂ ಇಲ್ಲದೆ ಹೋದರು. ಏಳಲು ಅಸಮರ್ಥರಾದರು, ತಪ್ಪಿಸಿಕೊಳ್ಳಲು ಅಸಮರ್ಥರಾದರು. ಅದೇ ಸಮಯಕ್ಕೆ ಕಳ್ಳರು ಅವರನ್ನು ಹಿಡಿದುಕೊಂಡರು. ಅಂಗಗಳನ್ನೆಲ್ಲಾ ಕತ್ತರಿಸಿ ಹಾಕಿದರು, ಮೂಳೆಗಳನ್ನೆಲ್ಲ ಪುಡಿ ಪುಡಿ ಮಾಡಿದರು. ಇವರು ಸತ್ತಿದ್ದಾರೆ ಎಂದು ಭಾವಿಸಿ ಅವರು ಮೊಗ್ಗಲ್ಲಾನರ ಅವಶೇಷಗಳನ್ನು ಪೊದೆಯಲ್ಲಿ ಬಿಸಾಡಿ ಹೊರಟರು.

ಅವರು ಹೊರಟ ನಂತರ ಮೊಗ್ಗಲ್ಲಾನರಿಗೆ ತಮ್ಮ ಅತೀಂದ್ರಿಯ ಶಕ್ತಿಯ ಚಾಲನಶಕ್ತಿ ಪುನಃ ಪೂರ್ಣವಾಗಿ ವಶಕ್ಕೆ ಬಂದಿತು. ಆಗ ಅವರು ಹೀಗೆ ಯೋಚಿಸಿದರು. ನನ್ನ ನಿಬ್ಬಾಣದ ಸಮಯ ಸನ್ನಿಹಿತವಾಯಿತು. ಪರಿನಿಬ್ಬಾಣಕ್ಕೆ ಮುನ್ನ ಭಗವಾನರಿಗೆ ಗೌರವಿಸುವುದು ಒಳ್ಳೆಯದು ಎಂದು ತಕ್ಷಣ ಅವರು ತಮ್ಮ ಅತೀಂದ್ರಿಯ ಶಕ್ತಿಯಿಂದಾಗಿ ಇಡೀ ದೇಹವನ್ನು ಪುನಃ ಒಂದಾಗಿಸಿ ಸರಿಪಡಿಸಿಕೊಂಡು ಗಾಳಿಯಲ್ಲಿ ಹಾರಿಕೊಂಡು ಭಗವಾನರ ಬಳಿಗೆ ಬಂದರು. ಅವರನ್ನು ಪೂಜಿಸಿ ಹೀಗೆ ಹೇಳಿದರು: ಭಗವಾನ್, ನನ್ನ ಆಯು ಸಂಖಾರ ಕ್ಷೀಣವಾಗಿದೆ. .ನಾನು ಪರಿನಿಬ್ಬಾಣ ಪಡೆಯಲು ನಿರ್ಧರಿಸಿದ್ದೇನೆ.

ಹೌದೆ? ಯಾವ ಸ್ಥಳವನ್ನು ಆಯ್ಕೆಮಾಡಿರುವೆ ?

ಕರಿಬಂಡೆಯ ಬಳಿ.

ಸರಿ ಮೊಗ್ಗಲ್ಲಾನ, ಅದಕ್ಕೆ ಮುನ್ನ ಧಮ್ಮ ಬೋಧನೆಯನ್ನು ಭಿಕ್ಷುಗಳಿಗೆ ಮಾಡುವವನಾಗು, ನಿನ್ನಂತಹ ಶ್ರೇಷ್ಠ ಶಿಷ್ಯ ಮುಂದೆ ಗೋಚರಿಸಲಾರ.

ಹಾಗೇ ಆಗಲಿ ಭಂತೆ ಎಂದು ನುಡಿದು ಗೌರವಿಸಿ, ಪ್ರದಕ್ಷಿಣೆ ಮಾಡಿದರು. ನಂತರ ಗಾಳಿಯಲ್ಲಿ ತೇಲಿಕೊಂಡು, ಎಲ್ಲಾ ಬಗೆಯ ಇದ್ಧಿಶಕ್ತಿಯ, ಅತೀಂದ್ರಿಯ ಪವಾಡಗಳನ್ನು ಪ್ರದಶರ್ಿಸಿದರು. ಅದು ಅತ್ಯದ್ಭುತ ದೃಶ್ಯವಾಗಿತ್ತು. ಏಕೆಂದರೆ ಬುದ್ಧರ ನಂತರ ಅಂತಹ ಶ್ರೇಷ್ಠತೆಯ ಮಾನಸಶಕ್ತಿಯಿಂದ ಮಾಡುವ ಅಚ್ಚರಿಗಳನ್ನು ಅವರು ಮಾತ್ರ ಮಾಡುವಂತಹದಾಗಿತ್ತು. ನಂತರ ಧಮ್ಮ ಬೋಧಿಸಿ ಕರಿಬಂಡೆಯ ಬಳಿ ಪರಿನಿಬ್ಬಾಣ ಪ್ರಾಪ್ತಿ ಮಾಡಿದರು.

ಕೂಡಲೇ ಎಲ್ಲಾ ಲೋಕಗಳಲ್ಲಿ  ಏಕಕಾಲದಲ್ಲಿ ನಮ್ಮ ಆಚಾರ್ಯರ ಪರಿನಿಬ್ಬಾಣವಾಯಿತು ಎಂದು ಆಕ್ರಂದನ ಉಂಟಾಯಿತು. ಬ್ರಹ್ಮರು ,ದೇವದೇವತೆಗಳು, ಮಾನವರು ದಿವ್ಯ ಸುಗಂಧಗಳಿಂದ, ವಿವಿಧ ಪುಷ್ಪಗಳ ಮಾಲೆಗಳಿಂದ, ಸುಗಂಧಿತ ಧೂಪಗಳಿಂದ, ಇತ್ಯಾದಿಗಳಿಂದ ಅವರ ಚಿತಾ ಸ್ಥಳವೂ ಸಿದ್ಧವಾಯಿತು. 99ರತ್ನಗಳಷ್ಟು ಎತ್ತರದ ಚಿತೆಯು ಸಿದ್ಧವಾಯಿತು. ಸ್ವತಃ ಭಗವಾನರೇ ಅವರ ಶರೀರವನ್ನು ಚಿತೆಯ ಮೇಲೆ ಇಟ್ಟರು. ಚಿತೆಯ ಸುತ್ತಲೂ ಒಂದು ಯೋಜನದಷ್ಟು ವಿಸ್ತಾರದಲ್ಲಿ ಅಂತರಿಕ್ಷದಿಂದ ಪುಷ್ಪವೃಷ್ಟಿಯಾಯಿತು. ದೇವತೆಗಳ ಮಧ್ಯೆ ಮಾನವರು, ಮಾನವರ ಮಧ್ಯೆ ದೇವತೆಗಳು ನಿಂತಿದ್ದರು. ಏಳು ದಿನಗಳವರೆಗೆ ಎಲ್ಲರೂ ಬಂದು ಪೂಜಿಸಿ ಸಾಧು ಕ್ರಿಯೆಗಳನ್ನು ಮಾಡುತ್ತಿದ್ದರು. ನಂತರ ವೇಲೂವನದ ದ್ವಾರದಲ್ಲಿ  ಭಗವಾನರ ಸಮ್ಮುಖದಲ್ಲಿ ಅವರ ಚೈತ್ಯ ನಿಮರ್ಾಣವಾಯಿತು.

(ಮೊಗ್ಗಲಾನರವರನ್ನು ಆಕ್ರಮಣ ಮಾಡಿದ ಸ್ಥಳವು ಈ ಮೇಲಿನ ಚಿತ್ರದಲ್ಲಿದೆ) 

ಅವರ ಮೇಲೆ ಮಾರಣಾಂತಿಕ ಹಲ್ಲೆ ಆದ ಸುದ್ದಿ  ತಕ್ಷಣ ಬೆಂಕಿಯಂತೆ ಹಬ್ಬಿತು. ರಾಜ ಅಜಾತಶತ್ರುವು ಎಲ್ಲೆಡೆ ಗೂಢಾಚಾರರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಹಚ್ಚಲು ತಕ್ಷಣ ನೇಮಿಸಿದನು. ಆಗ ಕೊಲೆಗಾರರು ಕುಡಿದ ಅಮಲಿನಲ್ಲಿ ಈ ವಿಷಯವನ್ನು ತಾವೆ ಮಾಡಿದ್ದು ಎಂದು ಬೀಗುವಾಗ, ಪತ್ತೆದಾರರು ತಕ್ಷಣ ಅವರನ್ನು ಬಂಧಿಸಿ ರಾಜನ ಮುಂದೆ ನಿಲ್ಲಿಸಿದರು. ರಾಜನು ಪ್ರಶ್ನಿಸಿದಾಗ, ತಾವೇ ಮಾಡಿರುವುದಾಗಿ ತಿಳಿಸಿದರು. ನಿಮಗೆ ಹೀಗೆ ಮಾಡಲು ಪ್ರೇರೇಪಣೆ ನೀಡಿದ್ದು ಯಾರು? ಎಂದು ರಾಜನು ಪ್ರಶ್ನಿಸಿದಾಗ, ನಿಗಂಠ ನಗ್ನ ಸನ್ಯಾಸಿಗಳು ಎಂದು ಉತ್ತರಿಸಿದರು. ಆಗ ರಾಜನಿಗೆ ಕೋಪವುಂಟಾಗಿ ಆ ಕಳ್ಳರಿಗೂ ಮತ್ತು ಕಾರಣಕರ್ತರಾದ 500 ನಗ್ನ ನಿಗಂಠರಿಗೂ ಬಂಧಿಸಿ ಅವರನ್ನೆಲ್ಲಾ ಸೊಂಟದವರೆಗೂ ಹೂತ ನಂತರ ಮೇಲ್ಭಾಗಕ್ಕೆ ಹುಲ್ಲುಗಳನ್ನು ಜೋಡಿಸಿ, ಅಗ್ನಿಗೆ ಆಹುತಿ ಮಾಡಿಸಿದನು. ನಂತರ ಉಳಿದ ಶವದ ಅವಶೇಷಗಳನ್ನು ಭೂಮಿಯಲ್ಲಿ ನೇಗಿಲಿನಿಂದ ಹೂಳಿಸಿದನು.

ಆ ಸಮಯದಲ್ಲಿ ಭಿಕ್ಷುಗಳು ಮೊಗ್ಗಲ್ಲಾನರವರ ಬಗ್ಗೆಯೇ ಚಚರ್ಿಸತೊಡಗಿದ್ದರು. ಆಗ ಅಲ್ಲಿಗೆ ಬಂದ ಭಗವಾನರು ಹೀಗೆ ಅವರನ್ನು ಕೇಳಿದರು: ಭಿಕ್ಷುಗಳೇ, ನೀವು ಮೊಗ್ಗಲ್ಲಾನರವರ ವರ್ತಮಾನದ ಬದುಕಿನ ಬಗ್ಗೆಯೇ ಪರಿಗಣನೆ ತೆಗೆದುಕೊಳ್ಳುವುದಾದರೆ, ಖಂಡಿತವಾಗಿ ಅವರು ಹಿಂಸೆಗೆ ಅರ್ಹರಾಗುತ್ತಿರಲಿಲ್ಲ. ಆದರೆ ವಾಸ್ತವವಾಗಿ ಹೇಳುವುದಾದರೆ ಅವರ ಇಂದಿನ ಅನಾಹುತಕ್ಕೆ ಅವರ ಹಿಂದಿನ ಜನ್ಮವೊಂದರ ಕೃತ್ಯವೇ ಕಾರಣವಾಗಿತ್ತು. 

ಆಗ ಭಿಕ್ಷುಗಳು ಭಗವಾನ್ ದಯವಿಟ್ಟು ಈ ವಿವರವನ್ನೆಲ್ಲಾ ಭಗವಾನರು ಹೇಳುವಂತಾಗಲಿ.

ಆಗ ಭಗವಾನರು ಆ ಹಿಂದಿನ ಜನ್ಮದ ಘಟನೆಯನ್ನು ತಿಳಿಸಿದರು. ಹಾಗೂ ಹೀಗೆ ನುಡಿದರು. ಇದರ ಪರಿಣಾಮವಾಗಿ ಆತನು ನರಕದಲ್ಲಿ ಸಾವಿರಾರು ವರ್ಷ ನೋವು ಅನುಭವಿಸಿದನು. ನಂತರ ನೂರಾರು ಜನ್ಮಗಳಲ್ಲಿ ಹೀಗೆಯೇ ಹಿಂಸೆಗೆ ಒಳಗಾಗಿ ಮರಣವನ್ನಪ್ಪಿದನು. ಆದ್ದರಿಂದಲೇ ಈ ಅಂತಿಮ ಜನ್ಮದಲ್ಲೂ ಹೀಗೆ ಭೀಕರವಾಗಿ ಚಿತ್ರಹಿಂಸೆಯುತ ನೋವನ್ನು ಅನುಭವಿಸಿದನು. ಆದರೆ ಪರಿನಿಬ್ಬಾಣ ಸಾಧಿಸಿದ್ದರಿಂದಾಗಿ ದುಃಖಪೂರಿತ ಸಂಸಾರದಿಂದ ಪೂರ್ಣವಿಮುಕ್ತಿ ಸಾಧಿಸಿದ್ದಾನೆ. ಆದ್ದರಿಂದಾಗಿ ಮಾತೃಹತ್ಯೆ ಮತ್ತು ಪಿತೃಹತ್ಯೆ ಯಾರೂ ಮಾಡಬಾರದು. ಅದು ಅತ್ಯಂತ ಭೀಕರ ಕರ್ಮಫಲ ನೀಡುತ್ತದೆ. ಹಾಗೆಯೇ ನಿರಪರಾಧಿಗಳ ಮೇಲೆ ಹಿಂಸೆ ಮಾಡುವವರು ಮುಂದೆ ವಿಕೋಪ ಸ್ಥಿತಿಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿ ಈ  ಗಾಥೆಗಳನ್ನು ನುಡಿದರು. 

ಯಾರು ಮುಗ್ಧರಾದ, ದಂಡಿಸಬಾರದವರನ್ನು ದಂಡಶಸ್ತ್ರಗಳಿಂದ ಹಿಂಸಿಸುವನೋ, ತಪ್ಪು ಮಾಡದವರನ್ನು ನೋಯಿಸುವನೋ, ಅಂತಹವನು ಶೀಘ್ರದಲ್ಲೇ ಈ ಹತ್ತು ಸ್ಥಿತಿಗಳಲ್ಲಿ ಒಂದನ್ನು ಪಡೆಯುತ್ತಾನೆ. (137)

ಆತನು ತೀಕ್ಷ್ಣವಾದ ನೋವು, ಮಹಾದುರಂತ, ಶಾರೀರಿಕ ತೀವ್ರಗಾಯ ಅಥವಾ ಕಡುಕಾಯಿಲೆ ಅಥವಾ ಚಿತ್ತ ನಿಯಂತ್ರಣ ತಪ್ಪಿ ಹುಚ್ಚನಾಗುವಿಕೆ, ಅಥವಾ ಸಕರ್ಾರದಿಂದ ರಾಜನಿಂದ ದಂಡನೆ ಅಥವಾ ಘೋರ ಆಪಾದನೆ ಅಥವಾ ಬಂಧು ಬಳಗದವರ ಸಾವು, ಐಶ್ವರ್ಯವೆಲ್ಲಾ ನಾಶವಾಗುವಿಕೆ ಅಥವಾ ಮಹಾ ಅಗ್ನಿಯ ಆಹುತತೆ ಹಾಗು ಸಾವಿನ ನಂತರ ಅಂತಹ ದುಪ್ರಜ್ಞನು ನಿರಯದಲ್ಲಿ 

ಹುಟ್ಟುತ್ತಾನೆ. (138, 139, 140 

10. ಮೊಗ್ಗಲಾನರ ಕೊನೆಯ ದಿನಗಳು

 10. ಮೊಗ್ಗಲಾನರ ಕೊನೆಯ ದಿನಗಳು



ಭಗವಾನರಿಗೆ ಆರೋಗ್ಯ ಅಸ್ವಸ್ಥತೆ ವೈಶಾಖ ಮಾಸದಲ್ಲಿ ಆರಂಭವಾಗುತ್ತದೆ .ಆದಾದ ಆರು ತಿಂಗಳಲ್ಲೇ ಸಾರಿಪುತ್ತ ಹಾಗೂ ಮೊಗ್ಲಾಲಾನ ಇಬ್ಬರು ಕಾತರ್ಿಕ ಮಾಸದಲ್ಲಿ ಪರಿನಿಬ್ಬಾಣವನ್ನು ಪಡೆಯುತ್ತಾರೆ.ಅಂದರೆ ಕಾತರ್ಿಕ ಹುಣ್ಣಿಮೆಯಂದು ತಮ್ಮ 84ನೇಯ ವಯಸ್ಸಿನಲ್ಲಿ ಸಾರಿಪುತ್ತರು ಹಾಗೂ ಕಾತರ್ಿಕ ಅಮವಾಸೆಯಂದು ಮೊಗ್ಗಲಾನರು ಪರಿನಿಬ್ಬಾಣವನ್ನು ಪಡೆಯುತ್ತಾರೆ. ಅದಾದ 6 ತಿಂಗಳಲ್ಲೆ ಭಗವಾನರು ವೈಶಾಖ ಶುದ್ಧ ಪೌರ್ಣಮಿಯಂದು ತಮ್ಮ 80ನೇಯ ವಯಸ್ಸಿನಲ್ಲಿ ಪರಿನಿಬ್ಬಾಣವನ್ನು ಪಡೆಯುತ್ತಾರೆ.  ಅದರಲ್ಲಿ ಸಾರಿಪುತ್ತರು ತಾವು ಜನಿಸಿದ ಮನೆಯಲ್ಲಿಯೇ ಪರಿನಿಬ್ಬಾಣ ಪಡೆದರೆ ಮೊಗ್ಗಲಾನರು ದುರಂತಕ್ಕೆ ಒಳಗಾಗಿ ನಂತರ ಭಗವಾನರ ಸಮ್ಮುಖದಲ್ಲಿ ಪರಿನಿಬ್ಬಾಣ ಪಡೆಯುತ್ತಾರೆ. ಜೀವನದಲ್ಲಿ ಅವರಿಬ್ಬರು ಅಗಲದೇ ಇದ್ದರೂ ಪರಿನಿಬ್ಬಾಣದ ಸಮಯ, ಪ್ರದೇಶ, ಭಿನ್ನವಾಗಿತ್ತು.

    ಸಾರಿಪುತ್ತರ ಪರಿನಿಬ್ಬಾಣದ ನಂತರ ಮೊಗ್ಗಲಾನರು  ಭಗ್ಗರ ನೆಲದಲ್ಲಿ, ಮೊಸಳೆಯ ಬೆಟ್ಟದ ಪಕ್ಕದಲ್ಲಿನ ಭೇಸಕಾಲ ಅರಣ್ಯದಲ್ಲಿನ ಮೃಗದಾವದಲ್ಲಿ (ಜಿಂಕೆಗಳ ಧಾಮ) ನಡಿಗೆಯ ಧ್ಯಾನದಲ್ಲಿ ತೊಡಗಿದ್ದರು. 

ಆ ಸಮಯದಲ್ಲಿ ಮಾರನು ಮೊಗ್ಗಲಾನರ ಹೊಟ್ಟೆಯಲ್ಲಿ ಪ್ರವೇಶಿಸಿದನು, ಇದು ಮೊಗ್ಗಲಾನರಿಗೆ ತಿಳಿದು ಆತನಿಗೆ ಹೊರಬರುವಂತೆ ಅಜ್ಞಾಪಿಸಿದರು. ಆತನಿಗೆ ಇದು ಆಶ್ಚರ್ಯವಾಯಿತು. ಏಕೆಂದರೆ ಸಾಧಾರಣ ಜನರಿಗೆ ಮಾರನು ಹೊಕ್ಕರೇ ತಿಳಿಯುತ್ತಿರಲಿಲ್ಲ.ನಂತರ ಆತನು ಅವರ ಬಾಯಿಯ ಬಳಿ ಬಂದು ನಿಂತನು ಆಗಲೂ ಸಹಾ ಮೊಗ್ಗಲಾನರು ಇದನ್ನು  ತಿಳಿದು ಆತನಿಗೆ ಹೊರಬರುವಂತೆ ಆಜ್ಞಾಪಿಸಿದರು. ಆಗ ಆತನು ಹೊರ ಬಂದು ಬಾಗಿಲ ಬಳಿ ನಿಂತನು. ಮೊಗ್ಗಲಾನರು ಆತನ ಮನಸ್ಸನ್ನು ಓದುವುದು ತಿಳಿದು ಆತನಿಗೆ ಆಶ್ಚರ್ಯವಾಯಿತು ಸಾಧಾರಣವಾಗಿ ಬೇರ್ಯಾರು ಆತನ ಮನಸ್ಸನ್ನು ಓದಲು ಆಗುತ್ತಿರಲಿಲ್ಲ. ಆಗ ಮೊಗ್ಗಲಾನರು ಆತನಿಗೆ ಹೀಗೆ ಹೇಳಿದರು. ಓ ಮಾರನೇ ಹಿಂದಿನ ಜನ್ಮಗಳ ಭಾಂಧವ್ಯದಲ್ಲಿ ನೀನು ನನ್ನ ತಂಗಿಯ ಮಗನಾಗಿರುವೇ. ನಾನು ನಿನ್ನ ತಾಯಿಯ ಅಣ್ಣ ದೂಸಿ ಮಾರನಾಗಿದ್ದೆನು ಎಂದು ಹೇಳಿ ತಮ್ಮ ಹಿಂದಿನ ಜನ್ಮದ ಚರಿತ್ರೆಯನ್ನು ವಿವರಿಸಿದರು. 

ಆ ಜನ್ಮವೂ ಕಕುಸಂಧ ಬುದ್ಧ ಭಗವಾನರ ಕಾಲದಾಗಿತ್ತು. ಆಗ ಮೊಗ್ಗಲಾನರೇ ಮಾರನಾಗಿದ್ದರು. ಆಗ ಅವರ ಹೆಸರು ದೂಸಿಮಾರನೆಂದು ಆಗಿತ್ತು. ಅವರ ತಂಗಿಯ ಹೆಸರು ಕಾಳಿ ಎಂದಾಗಿತ್ತು. ಆಕೆಯ ಮಗನೇ ಈಗಿನ ಮಾರನು. ಆ ಜನ್ಮದಲ್ಲಿ ದೂಸಿ ಮಾರನು ಸಂಘಕ್ಕೆ ಆಪಾರ ಕಿರುಕುಳ ನೀಡಿದ್ದನು. ಜನರಿಂದ ತೆಗಳಿಕೆ ಮಾಡಿಸುವುದು ಅಥವಾ ಹೊಗಳಿಕೆ ಮಾಡಿಸುವುದು ಇತ್ಯಾದಿ. ಅದರೆ ಭಗವಾನರ ಸಲಹೆಯಂತೆ ಮೆತ್ತ ಉಪೇಕ್ಖಗಳ ಪಾಲನೆಯಿಂದ ಸಂಘದಲ್ಲಿ ಎಲ್ಲ ಸರಿಹೋಯಿತು. ಆಗ ಕ್ರುದ್ಧನಾದ ದೂಸಿಮಾರನು ಒಮ್ಮೆ ಆಗಿನ ಅಗ್ರಶ್ರಾವಕರಾದ  ವಿಧುರರಿಗೆ ಹೊಡೆಯಲು ನಿರ್ಧರಿಸಿ ಒಬ್ಬ ಬಾಲಕನಲ್ಲಿ ಆವಾಹಿಸಿ ವಿಧುರರನ್ನು ಕಲ್ಲಿನಿಂದ ಅವರ ತಲೆಗೆ ಹೊಡೆದನು. ಅಗ್ರಶ್ರಾವಕರಾದ ವಿಧುರರ ತಲೆಗೆ ಗಾಯವಾಗಿ ರಕ್ತ ಹರಿಯಿತು. ಆಗ ಭಗವಾನರು ಹಿಂತಿರುಗಿ ಹೀಗೆ ಹೇಳಿದರು  ಈ ಮಾರನಿಗೆ ಮಿತಿಯೇ ತಿಳಿದಿಲ್ಲ. ಹಾಗೆ ನುಡಿದ ಕ್ಷಣವೇ ಮಾರನ ಅಸುರ ದೇಹವು ಕರಗಿ ಆ ಕ್ಷಣದಲ್ಲೆ ಆತನು ಭೀಕರವಾದ ನರಕದಲ್ಲಿ ಉತ್ಪನ್ನನಾದನು. ಆ ಒಂದು ನಿಮಿಷದ ಹಿಂದೆ ಆತನ ಅಡಿಯಲ್ಲಿ ಎಲ್ಲಾ ನರಕಗಳು ಸೇರುತ್ತಿದ್ದವು ಆತನು ಆ ಎಲ್ಲಾ ಕೀಳು ಲೋಕಗಳಿಗೆ ಅಧಿಪತಿಯಾಗಿದ್ದನು. ಅದರೆ ಈಗ ಅದೇ ನರಕದಲ್ಲಿ ಆತನು ಸಹಾ ಶಿಕ್ಷೆ ಅನುಭವಿಸುವವನಾದನು. ಹೀಗೆಯೇ ಸಹಸ್ರಾರು ವರ್ಷಗಳಷ್ಟು ಕಾಲ ಅತನು ಆ ನರಕದಲ್ಲಿದ್ದು ನಂತರ ಆತನು ದಶಸಹಸ್ರ ವರ್ಷಗಳ ಕಾಲ ಮಾನವಶರೀರ ಹಾಗೂ ಮೀನಿನ ಶಿರವುಳ್ಳವನಾಗಿ ಮತ್ತೆ ನರಕದ ದುಃಖಗಳನ್ನು ಅನುಭವಿಸಿದನು. 

ಹೀಗೆ ಅಗ್ರಶ್ರಾವಕರಿಗೆ ಕಿರುಕುಳ ನೀಡಿದರೆ ಏನಾಗುವುದು ಎಂದು ತಿಳಿಸಿ ಆತನಲ್ಲಿ ಭಯವನ್ನು ಹುಟ್ಟಿಸಿ ಕಳುಹಿಸಿದರು.


- ಂ0ಂ  

9. ಮೊಗ್ಗಲಾನರ ಅಗಾಧ ಜ್ಞಾನ

 9. ಮೊಗ್ಗಲಾನರ ಅಗಾಧ ಜ್ಞಾನ



9.1. ಮೊಗ್ಗಲ್ಲಾನ ಸುತ್ತ

ನಂತರ ಪರಿವ್ರಾಜಕ ವಚ್ಚಗೊತ್ತನು (ಗೊತ್ತ) ಪೂಜ್ಯ ಮೊಗ್ಗಲ್ಲಾನರ ಬಳಿಗೆ ಬಂದನು ಹಾಗು ಕುಶಲ ಕ್ಷೇಮಗಳ ವಿನಿಯಮ ಮಾಡಿಕೊಂಡನು. ನಂತರ ಒಂದಡೆ ಕುಳಿತು ಹೀಗೆ ಮಹಾಮೊಗ್ಗಲಾನರ ಬಳಿಯಲ್ಲಿ ಪ್ರಶ್ನಿಸಿದನು:

ಮಹಾ ಮೊಗ್ಗಲ್ಲಾನರೇ, ಇದು ಹೇಗೆ ಈ ಲೋಕವು ಶಾಶ್ವತವೇ? ವಚ್ಚ, ಭಗವಾನರು ಈ ಲೋಕವನ್ನು ಶಾಶ್ವತವೆಂದು ಘೋಷಿಸಿಲ್ಲ. ಹಾಗಾದರೆ ಮಹಾಮೊಗ್ಗಲಾನರೇ, ಈ ಲೋಕವು ಅಶಾಶ್ವತವೇ? ವಚ್ಚ, ಭಗವಾನರು ಈ ಲೋಕವನ್ನು ಅಶಾಶ್ವತವೆಂದು ಘೋಷಿಸಿಲ್ಲ. ಹಾಗಾದರೆ ಪೂಜ್ಯ ಮಹಾಮೊಗ್ಗಲಾನರೇ, ಈ ಲೋಕಕ್ಕೆ (ಅಂತ್ಯವಿದೆಯೇ) ಸೀಮಿತವಿದೆಯೇ? ವಚ್ಚ, ಭಗವಾನರು ಈ ಲೋಕವು ಸೀಮಿತವಾಗಿದೆ ಎಂದೂ ಘೋಷಿಸಿಲ್ಲ. ಹಾಗಾದರೆ ಪೂಜ್ಯ ಮಹಾಮೊಗ್ಗಲಾನರೇ, ಈ ಲೋಕವೂ ಅನಂತವೇ? ವಚ್ಚ, ಭಗವಾನರು ಈ ಲೋಕವನ್ನು ಅನಂತವೆಂದೂ ಘೋಷಿಸಿಲ್ಲ. ಸರಿ ಮಹಾಮೊಗ್ಗಲಾನರೇ, ಜೀವ (ಆತ್ಮ) ಹಾಗು ಶರೀರವೂ ಒಂದೆಯೇ? ವಚ್ಚ, ಭಗವಾನರು ಜೀವ ಹಾಗು ಶರೀರ ಒಂದೇ ಎಂದೂ ಘೋಷಿಸಿಲ್ಲ. ಸರಿ ಮಹಾಮೊಗ್ಗಲ್ಲಾನರೇ, ಹಾಗಾದರೆ ಜೀವ ಮತ್ತು ಶರೀರ ಬೇರೆ ಬೇರೆಯೇ? ವಚ್ಚ, ಭಗವಾನರು ಜೀವ ಹಾಗು ಶರೀರವು ಬೇರೆ ಬೇರೆ ಎಂದು ಘೋಷಿಸಿಲ್ಲ. ಸರಿ, ಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುವರೇ? ವಚ್ಚ, ಭಗವಾನರು ಮರಣದ ನಂತರ ತಥಾಗತರು ಇರುವರೆಂದು ಘೋಷಿಸಿಲ್ಲ. ಸರಿ ಮಹಾಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುವುದಿಲ್ಲವೇ? ವಚ್ಚ, ತಥಾಗತರು ಮರಣದ ನಂತರ ಇರುವುದಿಲ್ಲವೆಂದು ಸಹಾ ಘೋಷಿಸಿಲ್ಲ. ಸರಿ ಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುತ್ತಾರೆ ಹಾಗು ಇರುವುದಿಲ್ಲ ಇದು ಸತ್ಯವೇ? ವಚ್ಚ, ಭಗವಾನರು ಮರಣದ ನಂತರ ಇರುತ್ತಾರೆ ಹಾಗು ಇರುವುದಿಲ್ಲವೆಂದು ಸಹಾ ಘೋಷಿಸಿಲ್ಲ. ಸರಿ ಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುವುದಿಲ್ಲ ಮತ್ತು ಇಲ್ಲದೆಯೂ ಹೋಗುವುದಿಲ್ಲ ಎಂಬುದು ಸರಿಯೇ? ವಚ್ಚ, ತಥಾಗತರು ಮರಣದ ನಂತರ ಇರುವುದಿಲ್ಲ, ಇಲ್ಲದೆಯೂ ಹೋಗುವುದಿಲ್ಲ ಎಂದು ಸಹಾ ಘೋಷಿಸಿಲ್ಲ.

ಮತ್ತೆ ಮಹಾಮೊಗ್ಗಲಾನರೇ, ಯಾವ ಕಾರಣದಿಂದಾಗಿ ಹಾಗು ಯಾವ ಉದ್ದೇಶದಿಂದಾಗಿ ಯಾವಾಗ ಪರಪಂಗಡದವರು ಕೇಳಿದ ಪ್ರಶ್ನೆಗಳಿಗೆ ಉದಾಹರಿಸುವುದಾದರೆ, ಲೋಕವು ಶಾಶ್ವತ ಅಥವಾ ಅಶಾಶ್ವತ ಅಥವಾ ಅಂತ ಅಥವಾ ಅನಂತವೆಂದೂ ಅಥವಾ ಜೀವ ಶರೀರವೊಂದೇ ಅಥವಾ ಬೇರೆ ಬೇರೆ ಅಥವಾ ತಥಾಗತರು ಮರಣದ ನಂತರ ಇರುತ್ತಾರೆ/ಇರುವುದಿಲ್ಲ/ಇರುತ್ತಾರೆ ಮತ್ತು ಇರುವುದಿಲ್ಲ/ಇರುವುದಿಲ್ಲ ಇಲ್ಲದೇಯೂ ಇಲ್ಲ ಇಂತಹ ಪ್ರಶ್ನೆಗಳಿಗೆ ಏತಕ್ಕಾಗಿ ಸಮಣ ಗೋತಮರು ಉತ್ತರಿಸುತ್ತಿಲ್ಲ. ಯಾವ ಕಾರಣದಿಂದಾಗಿ ಯಾವ ಉದ್ದೇಶದಿಂದಾಗಿ ಹೀಗೆ ಅಘೋಷಿತವಾಗಿದ್ದಾರೆ?

ವಚ್ಚ, ಬುದ್ಧರ ಹೊರತು ಪರ ಪಂಗಡದವರ ಕಣ್ಣಿಗೆ ಹೀಗೆ ಅಭಿಪ್ರಾಯರಾಗುತ್ತಾರೆ. ಇದು ನನ್ನದು, ಇದೇ ನಾನು ಮತ್ತು ಇದೇ ನನ್ನ ಆತ್ಮ. ಹಾಗೆಯೇ ಕಿವಿಗೆ... ನಾಲಿಗೆಗೆ... ಮೂಗಿಗೆ... ಶರೀರಕ್ಕೆ... ಮನಸ್ಸಿಗೆ ಇದು ನನ್ನದು, ಇದೇ ನಾನು ಮತ್ತು ಇದೇ ನನ್ನ ಆತ್ಮವೆಂದು ಪರಿಗಣಿಸುತ್ತಾರೆ. ಆದ್ದರಿಂದಲೇ ಅನ್ಯ ಪಂಗಡದವರು ಈ ಬಗೆಯ ಪ್ರಶ್ನೆಗಳನ್ನು ಕೇಳುತ್ತಾರೆ... ಆದರೆ ವಚ್ಚ, ಯಾವಾಗ ತಥಾಗತರು ಅರಹಂತರು ಹಾಗು ಸಮ್ಮಾಸಂಬುದ್ಧರು ಕಣ್ಣಿನ ಬಗ್ಗೆ ಕಿವಿಗೆ ಮನಸ್ಸಿನ ಬಗ್ಗೆ ಅಭಿಪ್ರಾಯ ತಾಳುತ್ತಾರೆ. ಹೇಗೆಂದರೆ, ಇದು ನಾನಲ್ಲ, ಇದು ನನ್ನದಲ್ಲ ಹಾಗು ಇದು ನನ್ನ ಆತ್ಮವಲ್ಲ. ಆದ್ದರಿಂದಲೇ ತಥಾಗತರಿಗೆ ಈ ಬಗೆಯ ಪ್ರಶ್ನೆಗಳನ್ನು ಕೇಳಿದಾಗ ಅವರು ಉತ್ತರಿಸಲಾರರು.

ಆಗ ಪರಿವ್ರಾಜಕ ವಚ್ಚಗೊತ್ತನು ತನ್ನ ಆಸನದಿಂದೆದ್ದು ಅಲ್ಲಿಂದ ಹೊರಟು ಭಗವಾನರ ಬಳಿಗೆ ಬಂದನು. ಅಲ್ಲಿ ಪರಸ್ಪರ ಕುಶಲ ಕ್ಷೇಮ ವಿನಿಮಯ ಮಾಡಿಕೊಂಡು ಭಗವಾನರೊಂದಿಗೆ ಹೀಗೆ ಕೇಳಿದನು: ಇದು ಹೇಗೆ ಗೋತಮರೇ, ಈ ಲೋಕವು ಶಾಶ್ವತವೇ? (ಇಲ್ಲಿ ಬರುವ ಸಂಭಾಷಣೆಯೆಲ್ಲವೂ ಮೊಗ್ಗಲಾನ ಹಾಗು ವಚ್ಚರೊಂದಿಗೆ ನಡೆದ ಸಂಭಾಷಣೆಯಂತೆಯೇ ಇರುತ್ತದೆ).

ವಚ್ಚ, ನಾನು ತಥಾಗತರು ಇರುವುದಿಲ್ಲ ಹಾಗೆಯೇ ಇಲ್ಲದೆಯೂ ಇಲ್ಲ ಎಂದು ಘೋಷಿಸಲಾರೆನು. ಏತಕ್ಕಾಗಿ ಗೋತಮಶಾಸ್ತ್ರರೇ, ಯಾವ ಕಾರಣಕ್ಕಾಗಿ ಹಾಗು ಯಾವ ಉದ್ದೇಶಕ್ಕಾಗಿ, ಯಾವಾಗ ಪರಪಂಗಡದವರು ಕೇಳಿದ ಪ್ರಶ್ನೆಗಳಿಗೆ ತಾವು ಉತ್ತರಿಸುವುದಿಲ್ಲ. ಉದಾಹರಿಸುವುದಾದರೆ ಈ ಲೋಕವು ಶಾಶ್ವತವೇ / ಅಶಾಶ್ವತವೇ? ಇತ್ಯಾದಿ... ವಚ್ಚ, ಪರಪಂಗಡದವರು ಕಣ್ಣನ್ನು... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು... ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮವೆಂದು ಪರಿಗಣಿಸುತ್ತಾರೆ. ಆದ್ದರಿಂದಲೇ ಅವರಲ್ಲಿ ಅಂತಹ ಪ್ರಶ್ನೆಗಳಿರುತ್ತದೆ. ಹಾಗೆಯೇ ಅಂತಹುದು ಉತ್ತರಗಳು ಅವರಲ್ಲಿರುತ್ತದೆ. ಉದಾಹರಿಸುವುದಾದರೆ, ಈ ಲೋಕವು ಶಾಶ್ವತ, ಈ ಲೋಕವು ಅಶಾಶ್ವತ ಇತ್ಯಾದಿ. ಆದರೆ ವಚ್ಚ ತಥಾಗತರು ಸಮ್ಮಾಸಂಬುದ್ದರು ಅರಹಂತರಾಗಿರುವ ಅವರು ಕಣ್ಣನ್ನು... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು... ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪರಿಗಣಿಸುತ್ತಾರೆ. ಆದ್ದರಿಂದಲೇ ತಥಾಗತರಲ್ಲಿ ಅಂತಹ ಪ್ರಶ್ನೆಗಳಾಗಲಿ ಅಥವಾ ಅಂತಹ ಉತ್ತರಗಳಾಗಿ ಉದಯಿಸುವುದಿಲ್ಲ.

ಆಶ್ಚರ್ಯಕರ ಗೋತಮ ಶಾಸ್ತ್ರರೇ, ಅದ್ಭುತಮಯ ಗೋತಮರೇ, ತಮ್ಮ ಶಿಷ್ಯನ ಹಾಗು ತಮ್ಮ ಹೇಳಿಕೆಯಲ್ಲಿ ಅರ್ಥದಲ್ಲಿಯಾಗಲಿ, ವ್ಯಂಜನದಲ್ಲಿಯಾಗಲಿ, ವಾಕ್ಯರಚನೆಯಲ್ಲಾಗಲಿ ಸ್ವಲ್ಪವೂ ವ್ಯತ್ಯಾಸವಿಲ್ಲ. ಹೇಗೆ ಅದ್ಭುತವಾದ ಗುರುವೋ ಹಾಗೆಯೇ ಪರಮಕುಶಲಿ ಶಿಷ್ಯನೂ ಸಹಾ. ತಮ್ಮಿಬ್ಬರಲ್ಲಿ ಯಾವುದೇ ಬೇಧವಿಲ್ಲದೆ ಒಂದೇರೀತಿಯಲ್ಲಿಯೇ ನುಡಿದಿದ್ದೀರಿ. ಈಗ ತಾನೇ ಗೋತಮರೆ, ನಾನು ಸಮಣ ಮಹಾಮೊಗ್ಗಲಾನರಲ್ಲಿಗೆ ಹೋಗಿದ್ದೆನು. ಅವರಲ್ಲಿಯೂ ಇದೇ ಪ್ರಶ್ನೆಗಳನ್ನು ಕೇಳಿದಾಗ ಅವರು ತಮ್ಮಂತೆಯೇ ಅಕ್ಷರ, ವಾಕ್ಯ, ಅರ್ಥ ವ್ಯತ್ಯಾಸವಿಲ್ಲದೆ ಇದೇ ರೀತಿಯಲ್ಲಿಯೇ ಉತ್ತರಿಸಿದ್ದರು. ಇದು ಆಶ್ಚರ್ಯಕರ, ಅದ್ಭುತಮಯ. ಹೇಗೆ ಅದ್ಭುತವಾದ ಶಾಸ್ತ್ರರೋ ಹಾಗೆಯೇ ಕುಶಲಿಯಾದ ಶಿಷ್ಯನೂ ಸಹಾ ಇದ್ದಾನೆ. ಯಾವುದೇ ರೀತಿಯಲ್ಲಿಯೂ ವಿರೋದಾಭಾಸವಿಲ್ಲದೆ ತಮ್ಮಂತೆಯೇ ತದ್ರೂಪಿಯಾಗಿ ಉತ್ತರಿಸಿದ್ದರು. ನಂತರ ವಚ್ಚನು ಅಲ್ಲಿಂದ ಹೊರಟನು.

9.2 ಅಸಾತ್ವಿಕರಿಗೆ ಉಪದೇಶ ಅಪ್ರಿಯವಾಗಿರುತ್ತದೆ

ಭಿಕ್ಖು ಅಸ್ಸಜಿ ಮತ್ತು ಪುನಭಾನುಕ ಮತ್ತು ಅವರ ಶಿಷ್ಯರು ಕಿಟಾಗಿರಿಯಲ್ಲಿ ತಂಗಿದ್ದರು. ಅವರು ಅಲ್ಲಿದ್ದಾಗ ಸ್ವಾರ್ಥಕ್ಕಾಗಿ ಹಣ್ಣಿನ ಗಿಡಗಳನ್ನು ನೆಟ್ಟರು. ಅಷ್ಟೇ ಅಲ್ಲ, ಭಿಕ್ಷುವಿನ  ಎಷ್ಟೋ ನಿಯಮಗಳನ್ನು ಅವರು ಮುರಿದರು. ಹೀಗೆ ಅವರು ವಿಹಾರವನ್ನು ಗದ್ದಲಮಯ ಮಾಡಿ ಬೇರೆ ಭಿಕ್ಷುಗಳಿಗೆ ಅಶಾಂತಿ ತಂದರು.

ಈ ಭಿಕ್ಷುಗಳ ಬಗ್ಗೆ ಕೇಳಿದ ಭಗವಾನರು ಸಾರಿಪುತ್ತ ಮತ್ತು ಮೊಗ್ಗಲಾನರವರಿಗೆ ಅವರನ್ನು ಸರಿಹಾದಿಗೆ ತರಲು ಕಳುಹಿಸಿದರು. ಸಾರಿಪುತ್ತ ಮತ್ತು ಮೊಗ್ಗಲಾನರವರ ಬುದ್ಧಿವಾದ ಕೇಳಿದ ಬಹಳಷ್ಟು ಭಿಕ್ಷುಗಳು ಬದಲಾವಣೆ ಹೊಂದಿ ಶುದ್ಧ ಭಿಕ್ಷುಗಳಾದರು. ಕೆಲವು ತಮ್ಮಿಂದಾಗದು ಎಂದು ಪುನಃ ಗೃಹಸ್ಥರಾದರು. ಉಳಿದವರನ್ನು ಬಹಿಷ್ಕಾರ ಹಾಕಲಾಯಿತು. ಆ ಸಂದರ್ಭದಲ್ಲಿ ಭಗವಾನರು ಈ ಗಾಥೆಯನ್ನು ಹೇಳಿದರು. 

ಬೋಧಿಸುವವನು ಬುದ್ಧಿ ಹೇಳಿ ಎಚ್ಚರಿಸುವವನು, ಅಸಭ್ಯತೆಗಳ ನಿವಾರಿಸುವವನು (ತಡೆಗಟ್ಟುವವನು) ಸಾತ್ವಿಕರಿಗೆ ಪ್ರಿಯನಾಗುವನು, ಅಸಾತ್ವಿಕರಿಗೆ ಅಪ್ರಿಯನಾಗುವನು

9.3 ಮಹಾ ಗೋಸಿಂಗ ಸುತ್ತ (ಸಂಕ್ಷಿಪ್ತವಾಗಿದೆ)

ಒಮ್ಮೆ ಭಗವಾನರು ಗೋಸಿಂಗನ ಸಾಲಾ ವೃಕ್ಷಗಳ ಉಧ್ಯಾನವನದಲ್ಲಿ ನೆಲೆಸಿದ್ದರು. ಆಗ ಅಲ್ಲಿ ಅಗ್ರ ಶ್ರಾವಕರಾದ ಸಾರಿಪುತ್ತ ಹಾಗೂ ಮೊಗ್ಗಲಾನರು ಮತ್ತು ಮಹಾಶಿಷ್ಯರಾದ ಮಹಾಕಸ್ಸಪನವರು , ಅನುರುದ್ಧರವರು, ರೇವತರವರು, ಆನಂದರವರು ಮತ್ತು ಇತರರು ಅಲ್ಲಿ ನೆಲಸಿದ್ದರು. ಆಗ ಈ ಮಹಾಶಿಷ್ಯರು ಮೊಗ್ಗಲಾನರ ಸಹಿತವಾಗಿ ಸಾರಿಪುತ್ತರ ಬಳಿಗೆ ಧಮ್ಮವನ್ನು ಆಲಿಸಲು ಬಂದರು. ಆಗ ಸಾರಿಪುತ್ತರು ಹೀಗೆ ನುಡಿದರು : ಮಿತ್ರರೇ ಈ ಗೋಸಿಂಗನ ಸಾಲಾ ವೃಕ್ಷಗಳ ಉಧ್ಯಾನವನವು ಅತ್ಯಂತ ರಮಣಿಯವಾಗಿದೆ, ಈ ಬೆಳದಿಂಗಳ ಬೆಳಕಿನಲ್ಲಿ ಸಾಲಾ ವೃಕ್ಷಗಳು ಅತಿ ಸುಂದರವಾಗಿ ಅರಳಿವೆ, ಸ್ವಗರ್ೀಯ ಸುಗಂಧವು ಎಲ್ಲೆಡೆ ಪ್ರಸರಿಸಿದೆ, ಇಲ್ಲಿ ಯಾವ ರೀತಿಯ ಭಿಕ್ಖುವು ಸಾಲಾ ವೃಕ್ಷಗಳ ಈ ಉಧ್ಯಾನವನಕ್ಕೇ ಹೊಂಬೆಳಗಿಸುವವನಾಗಿರುವನು ? ಈ ಪ್ರಶ್ನೆಗೆ ಎಲ್ಲರೂ ತಮ್ಮ ತಮ್ಮ ಪ್ರತಿಭೆ ಹಾಗೂ ಪ್ರಜ್ಞೆಗೆ ತಕ್ಕಂತೆ ಉತ್ತರ ನೀಡಿದರು. ನಂತರ ಮೊಗ್ಗಲಾನರ ಸರತಿಯು ಬಂದಾಗ ಅವರು ಈ ರೀತಿಯಲ್ಲಿ ಉತ್ತರಿಸಿದರು : ಪೂಜ್ಯ ಸಾರಿಪುತ್ತರೇ ಇಬ್ಬರು ಭಿಕ್ಖುಗಳು ಧಾಮ್ಮಿಕ ಚಚರ್ೆಯಲ್ಲಿ ತೊಡಗುತ್ತ ಪರಸ್ಪರ ಪ್ರಶ್ನಿಸುತ್ತ ಹಾಗೂ ಪರಸ್ಪರ ಉತ್ತರಿಸುತ್ತ ಇರುತ್ತಾರೆ. ಹೀಗೆ ಅವರ ಚಚರ್ೆಯು ಸಾಗುತ್ತಿರುತ್ತದೆ. ಈ ಬಗೆಯ ಭಿಕ್ಖುಗಳು ಈ ಉಧ್ಯಾನವನಕ್ಕೆ ಹೊಂಬೆಳಗಿಸುವವನಾಗಿರುವನು. ಎಂದು ಮೊಗ್ಗಲಾನರು ಉತ್ತರಿಸಿದರು.

9.4 ಅನುಮಾನ ಸುತ್ತ (ಪರಿಶೀಲನೆಯ  ಸುತ್ತ)(ಸಂಕ್ಷಿಪ್ತವಾಗಿದೆ)

ಆ ಸಮಯದಲ್ಲಿ ಮಹಾಮೊಗ್ಗಲಾನರು ಭಗ್ಗರ ನಾಡಿನಲ್ಲಿ ಮೋಸಳೆಗಳ ಬೆಟ್ಟದ ಸಮೀಪದ ಬೇಸಕಾಲದ ಅರಣ್ಯದ ಜಿಂಕೆಗಳ ವನದಲ್ಲಿ ನೆಲಸಿದ್ದರು. ಆಗ ಅವರು ಭಿಕ್ಖುಗಳೊಂದಿಗೆ ಹೀಗೆ ಸಂಭೊಧಿಸಿದರು : ಆಯುಷ್ಮಂತರೇ.

ಪ್ರತಿಯಾಗಿ ಆ ಭಿಕ್ಖುಗಳು ಸಹಾ ಆಯುಷ್ಮಂತರೇ ಎಂದರು.

ಈಗ ಭಿಕ್ಖುಗಳು ಇನ್ನೊಬ್ಬ ಭಿಕ್ಖುವಿಗೆ ಬೋಧಿಸಲು ಅಹ್ವಾನಿಸುತ್ತಾರೆ. ಅದರೆ ಅವರಿಗೆ ಬೋಧಿಸಲು ಅತಿಕಠಿಣವಾಗಿರುತ್ತದೆ. ಯಾವ ಕಾರಣಕ್ಕಾಗಿ ಅವರಿಗೆ ಬೋಧಿಸಲು ಕಷ್ಟಕರವಾಗಿರುತ್ತದೆ. ?ಏಕೆಂದರೇ ಅವರು ಅಸಹéಿಷ್ಣುಗಳಾಗಿರುತ್ತಾರೆ.ಅವರು ಬೋಧನೆಗಳನ್ನು ಗೌರವದಿಂದ ಸ್ವೀಕರಿಸುವುದಿಲ್ಲ. ಹೀಗಾಗಿ ಆತನ ಪರಮಾರ್ಥ ಸಂಗಾತಿಗಳು ಆತನಿಗೆ ಬೋಧಿಸುವುದು ಅರ್ಹವೆಂದು ಭಾವಿಸುವುದಿಲ್ಲ.

     ಅವರಲ್ಲಿನ ಯಾವ ಗುಣಗಳು ಅವರಿಗೆ ಭೋಧಿಸಲು ಅಡ್ಡಿಯಾಗುತ್ತದೆ. ಅವೆಂದರೇ ಮೊದಲಿಗೆ ಅವರಲ್ಲಿನ ಕೆಟ್ಟ ಬಯಕೆಗಳು. ಇದರಿಂದಾಗಿ ಅವರಿಗೆ ಬೋಧಿಸುವುದು ಅರ್ಹವೆಂದು ಭಾವಿಸುವುದಿಲ್ಲ .ಹಾಗೇಯೇ ಅವರಲ್ಲಿನ ಇತರ ದುಗರ್ುಣಗಳೆಂದರೇ ತಮ್ಮನ್ನು ಪ್ರಶಂಸಿಸಿಕೊಳ್ಳುವುದು ಹಾಗೂ ಇತರರನ್ನು ತೆಗಳುವುದು...... ಹಾಗೆಯೇ ಅವರು ಸ್ವಲ್ಪ ಸ್ವಲ್ಪಕ್ಕೂ ರೇಗುವ ಸ್ವಭಾವ ಹೊಂದಿರುತ್ತಾರೆ. ಅವರು ಕೋಪದಿಂದಿರುತ್ತಾರೆ.......ಕೋಪದಿಂದಾಗಿ ಹಠವಾದಿಗಳಾಗುತ್ತಾರೆ........ಹೀಗಾಗಿ ಕಟುನುಡಿಗಳನ್ನು ಆಡುವವರು ಆಗಿರುತ್ತಾರೆ.........ನಿಂದಿಸುತ್ತಾರೆ......ಅವರು ಪ್ರತಿಯಾಗಿ ನಿಂದಿಸುತ್ತಾರೆ......ವಾದವಿವಾದಗಳಾಗುತ್ತವೆ....ಅವರಿಗೆ ವಾದ ಮಾಡಲು ಅಸಮರ್ಥರಾಗಿ ಜಾರಲು ಯತ್ನಿಸುತ್ತಾರೆ...ಕೋಪವನ್ನು, ದ್ವéೇಷವನ್ನು ,ಕಹಿತನವನ್ನು ತೋರುತ್ತಾರೆ...ಅವರ ಮೇಲೆ ಆರೋಪ ಬಂದಾಗ ಅವರು ಸ್ವೀಕರಿಸುವುದಿಲ್ಲ......ಅವರು ಆಕ್ರಮಣಕಾರಿಯಾಗುತ್ತಾರೆ ಪರರನ್ನು ಕಡೆಗಣಿಸುವವರಾಗುತ್ತಾರೆ.....ಅಸೂಯೆ ಪಡುವವರು ಆಗುತ್ತಾರೆ......ಸ್ವಾಥರ್ಿಗಳಾಗುತ್ತಾರೆ.......ಹೀಗಾಗಿ ಅವರು ಮೋಸ ಮಾಡಲು ಹಿಂಜರಿಯುವುದಿಲ್ಲ........ಹಠವಾದಿಗಳಾಗಿ ಟೊಳ್ಳುತನ ಹೊಂದುತ್ತಾರೆ.....ಅವರು ತಮ್ಮ ಎಲ್ಲಾ ದೃಷ್ಟಿಕೋನಗಳಿಗೆ ಅಂಟಿಕೊಂಡು ಅದನ್ನು ಬಿಡಲು ಸಿದ್ಧರಿರುವುದಿಲ್ಲ,.... ಹೀಗಾಗಿ ಅವರನ್ನು ಭೋಧಿಸಿ ಸರಿದಾರಿಗೆ ತರುವುದು ಸುಲಭವಾಗಿರುವುದಿಲ್ಲ

ಇಲ್ಲಿ ಭಿಕ್ಖುಗಳು ಪರ ಭಿಕ್ಖುಗಳನ್ನು ತಿದ್ದಲು ಆಹ್ವಾನಿಸುವುದಿಲ್ಲ. ಆದರೂ ಅವರು ತಿದ್ದಿಕೊಳ್ಳಲು ಸುಲಭವಾಗಿರುತ್ತಾರೆ(ಸಿದ್ಧರಾಗಿರುತ್ತಾರೆ). ಅವರು ಪರರ ಯೋಗ್ಯ ಸಲಹೆಗಳನ್ನು ಸ್ವೀಕಾರ ಮಾಡುತ್ತಾರೆ. ಹಾಗೂ ಅವರ ಹಿತವಚನಗಳನ್ನು ಗೌರವದಿಂದ ತೆಗೆದುಕೊಳ್ಳುತ್ತಾರೆ. ಹೀಗಾಗಿ ಅವರ ಪಾರಮಾರ್ಥ ಸಂಗಾತಿಗಳು ಅವರಿಗೆ ಬೋಧಿಸಲು ತಿದ್ದಲು ಅರ್ಹವೆಂದು ಬಾವಿಸುತ್ತಾರೆ, ಹಾಗೂ ಆ ಮನುಷ್ಯನು ನಂಬಿಕೆಯನ್ನು ಹಾಗೂ ಪುಣ್ಯವನ್ನು ಗಳಿಸುತ್ತಾನೆ.

ಅವರಲ್ಲಿನ ಯಾವ ಗುಣಗಳು ಅವರಿಗೆ ಬೋಧಿಸಲು ಸುಲಭವಾಗಿರುತ್ತದೆ. ಅವೆಂದರೇ ಮೊದಲಿಗೆ ಅವರಲ್ಲಿ ಕೆಟ್ಟ ಬಯಕೆಗಳು ಇರುವುದಿಲ್ಲ. ಇದರಿಂದಾಗಿ ಅವರಿಗೆ ಬೋಧಿಸುವುದು ಅರ್ಹವೆಂದು ಭಾವಿಸುತ್ತಾರೆ .ಹಾಗೇಯೇ ಅವರಲ್ಲಿನ ಇತರ ಗುಣಗಳೆಂದರೆ ತಮ್ಮನ್ನು ಪ್ರಶಂಸಿಸಿಕೊಳ್ಳುವುದಿಲ್ಲ ಹಾಗೂ ಇತರರನ್ನು ತೆಗಳುವುದು ಇಲ್ಲ...... ಹಾಗೆಯೇ ಅವರು ಸ್ವಲ್ಪ ಸ್ವಲ್ಪಕ್ಕೂ ರೇಗುವ ಸ್ವಭಾವ ಹೊಂದಿರುವುದಿಲ್ಲ............ ಅವರು ತಮ್ಮ  ಎಲ್ಲಾ ದೃಷ್ಟಿಕೋನಗಳಿಗೆ ಅಂಟಿಕೊಂಡಿರುವುದಿಲ್ಲ  ಮತ್ತು ಅವು ಅಕುಶಲವಾದರೇ ಅವನ್ನು ಬಿಡಲು ಸಿದ್ಧರಾಗಿರುತ್ತಾರೆ.... ಹೀಗಾಗಿ ಅವರನ್ನು ಭೋಧಿಸಿ ಸರಿದಾರಿಗೆ ತರುವುದು ಸುಲಭವಾಗಿರುತ್ತದೆ.

ಇಂತಹ ಪರಿಸ್ಥಿತಿಗಳಲ್ಲಿ ಭಿಕ್ಖುವು ತನ್ನನ್ನು ಪರರಿಗೆ ಹೋಲಿಸುತ್ತ ಈ ರೀತಿಯಲ್ಲಿ ಅಳತೆ ಮಾಡಿಕೊಳ್ಳುತ್ತಾನೆ ಈ ವ್ಯಕ್ತಿಯು ಕೆಟ್ಟ ಬಯಕೆಗಳಿಂದ ಕೂಡಿದ್ದಾನೆ. ಅದರಿಂದಲೇ ಜಾರಿಬಿದ್ದಿದ್ದಾನೆ. ಮತ್ತು ನಾನೂ ಸಹಾ ಈ ವ್ಯಕ್ತಿಯನ್ನು ಒಪ್ಪಲು ಸಿಧ್ಧನಿಲ್ಲ. ಒಂದು ವೇಳೆ ನಾನು ಏನಾದರೂ ಕೆಟ್ಟಬಯಕೆಗಳಲ್ಲಿ ಬಿದ್ದರೆ ಪರರು ನನ್ನನ್ನು ಸಹಾ ಒಪ್ಪುವುದಿಲ್ಲ. ಹೀಗಾಗಿ ನಾನು ಕೆಟ್ಟ ಬಯಕೆಗಳಿಗೆ ವಶನಾಗುವುದಿಲ್ಲ..............

..........ಅದೇ ರೀತಿಯಲ್ಲಿ ಇತರರ ಎಲ್ಲಾ ದುಗರ್ುಣಗಳನ್ನು ಒಪ್ಪಲು ಸಿಧ್ದನಿಲ್ಲ ಒಂದು ವೇಳೆ ನಾನು ದುಗರ್ುಣಗಳಲ್ಲಿ ಬಿದ್ದರೆ ಪರರು ನನ್ನನ್ನು ಸಹಾ ಒಪ್ಪುವುದಿಲ್ಲ. ಹೀಗಾಗಿ ನಾನು ದುಗರ್ುಣಗಳಿಗೆ ವಶನಾಗುವುದಿಲ್ಲ..............

.......ಅದೇ ರೀತಿಯಲ್ಲಿ ತನ್ನನ್ನು ಈ ರೀತಿ ಪರಿಶೀಲನೆ ಮಾಡುತ್ತಾನೆ.

ಈ ವ್ಯಕ್ತಿಯು ತನ್ನ ದೃಷ್ಟಿಕೊನಗಳಿಗೆ ಅಂಟಿಕೊಂಡಿದ್ದಾನೆ. ಅವುಗಳನ್ನು ಬಿಗಿಯಾಗಿ ಹಿಡಿದುಕೊಂಡು ಬಿಡುವುದಕ್ಕೆ ನಿರಾಕರಿಸುತ್ತಿದ್ದಾನೆ. ಮತ್ತು ನಾನು ಇಂತಹ ವ್ಯಕ್ತಿಯನ್ನು ಸಮ್ಮತಿಸುವುದಿಲ್ಲ ಹಾಗೂ ಇಷ್ಟಪಡುವುದಿಲ್ಲ. ಮತ್ತು ನಾನೂ ಏನಾದರೂ ಒಂದು ವೇಳೆ ಇದೇ ರೀತಿ ದೃಷ್ಟಿಕೋನಗಳಿಗೆ ಅಂಟಿಕೊಂಡರೆ ಅವುಗಳಿಗೆ ಬಿಗಿಯಾಗಿ ಹಿಡಿದುಕೊಂಡರೆ ಪರರೂ ಸಹಾ ನನಗೆ ಇಷ್ಟಪಡಲಾರರು ಹಾಗೂ ಸಮ್ಮತಿಸಲಾರರು. ಹೀಗೆ ಯೋಚಿಸುವ ಬಿಕ್ಖುವು ಈ ಬಗೆಯ ತಿಮರ್ಾನ ತೆಗೆದುಕೊಳ್ಳುತ್ತಾನೆ ;ನಾನು ನನ್ನ ದೃಷ್ಟಿಕೋನಗಳಿಗೆ ಅಂಟುವುದಿಲ್ಲ ಅವುಗಳನ್ನು ಬಿಗಿಯಾಗಿ ಹಿಡಿಯುವುದಿಲ್ಲ ಬದಲಾಗಿ ಬಿಟ್ಟುಬಿಡುತ್ತೇನೆ.

ಅಂತಹ ವೇಳೆಯಲ್ಲಿ ಭಿಕ್ಖುವು ಈ ಬಗೆಯಲ್ಲಿ ತನ್ನ ಪರಿಶೀಲನೆ ಮಾಡಿಕೊಳ್ಳುತ್ತಾನೆ.: ನಾನು ದುಷ್ಟ ಬಯಕೆಗಳಿಂದ ಕೂಡಿದ್ದೇನೆಯೇ ನಾನು ದುಷ್ಟಬಯಕೆಗಳ ಜಾಲದಲ್ಲಿ ಬಿದ್ದಿರುವೆನೇ ? ಪರೀಶೀಲನೆಯ ನಂತರ ತಾನು ದುಷ್ಟಬಯಕೆಗಳಿಂದ ಕೂಡಿದ್ದೇನೆ ಎಂದು ಅರಿವಾಗುತ್ತದೆ. ನಂತರ ಆ ಪ್ರಜ್ಞಾವಂತ ಭಿಕ್ಖುಗಳು ಅವುಗಳನ್ನು ತೊರೆಯಲು ಯತ್ನಿಸುತ್ತಾರೆ.ಹಾಗೂ ಯಶಸ್ವಿಗಳಾಗುತ್ತಾರೆ. ಅಥವಾ ಅವರು ಪರಿಶೀಲನೆಯ ನಂತರ ಅವರು ದುಷ್ಟಬಯಕೆಗಳಿಂದ ಕೂಡಿಲ್ಲ ಎಂದು ಅರಿವಾದಾಗ ಆಗ ಅವರು ಆನಂದಭರಿತರಾಗುತ್ತಾರೆ. ಅಂತಹವರು ರಾತ್ರಿಯಲ್ಲಿ ಆಗಲಿ ಅಥವಾ ಹಗಲಿನಲ್ಲಿಯೇ ಆಗಲಿ ಆನಂದದಿಂದ ಧ್ಯಾನದಲ್ಲಿ ತೊಡಗಿ ಕುಶಲಗುಣಗಳನ್ನು ವೃದ್ಧಿಸುತ್ತಾರೆ...........

...............ಅಂತಹ ವೇಳೆಯಲ್ಲಿ ಭಿಕ್ಖುವು ಈ ಬಗೆಯಲ್ಲಿ ತನ್ನ ಪರಿಶೀಲನೆ ಮಾಡಿಕೊಳ್ಳುತ್ತಾನೆ ನಾನು ದೃಷ್ಟಿಕೋನಗಳಿಗೆ ಅಂಟಿರುವೆನೇ ಹಾಗೂ ಬಿಗಿಯಾಗಿ ಹಿಡಿದುಕೊಂಡಿರುವನೇ ? ಪರೀಶೀಲನೆಯ ನಂತರ ತಾನು  ದೃಷ್ಟಿಕೋನಗಳಿಗೆ ಅಂಟಿರುವೆನು ಎಂದು ಅರಿವಾಗುತ್ತದೆ. ನಂತರ ಆ ಪ್ರಜ್ಞಾವಂತ ಭಿಕ್ಖುಗಳು ಅವುಗಳನ್ನು ತೊರೆಯಲು ಯತ್ನಿಸುತ್ತಾರೆ.ಹಾಗೂ ಯಶಸ್ವಿಗಳಾಗುತ್ತಾರೆ. ಅಥವಾ ಅವರು ಪರಿಶೀಲನೆಯ ನಂತರ ಅವರು ದೃಷ್ಟಿಕೋನಗಳಿಗೆ ಅಂಟಿಕೊಂಡಿಲ್ಲ ಎಂದು ಅರಿವಾದಾಗ ಆಗ ಅವರು ಆನಂದಭರಿತರಾಗುತ್ತಾರೆ. ಅಂತಹವರು ರಾತ್ರಿಯಲ್ಲಿ ಆಗಲಿ ಅಥವಾ ಹಗಲಿನಲ್ಲಿಯೇ ಆಗಲಿ ಆನಂದದಿಂದ ಧ್ಯಾನದಲ್ಲಿ ತೊಡಗಿ ಕುಶಲಗುಣಗಳನ್ನು ವೃದ್ಧಿಸುತ್ತಾರೆ.

ಊಹಿಸಿರಿ ಒಬ್ಬ ತರುಣ ಅಥವಾ ತರುಣಿಯೊಬ್ಬಳು ಅಲಂಕಾರದಲ್ಲಿ ಆನಂದಿಸುವವರಾಗಿದ್ದು ಅವರು ಸ್ವಚ್ಚ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಿದಾಗ ಅವರಿಗೆ ಮುಖದಲ್ಲಿ ಯಾವುಧೇ ಕಲೆಗಳಾಗಲಿ ಮಸಿಯಾಗಲಿ ಕಂಡುಬಂದರೆ ಅವರು ಕೂಡಲೇ ಅದನ್ನು ತೆಗೆಯಲು ಮುಂದಾಗುತ್ತಾರೆ ಒಂದು ವೇಳೆ ಅವರಿಗೆ ಯಾವುದೇ ಕಲೆಗಳಾಗಲಿ ಅಥವಾ ಮಸಿಯಾಗಲಿ ಕಂಡಿಲ್ಲವಾದರೇ ಆವರು ಆನಂದಗೊಳ್ಳುತ್ತಾರೆ ಒಹ್ ನಾನೇಷ್ಟು ಧನ್ಯ ಶುಚಿಯಾಗಿದ್ದೇನೆ ಶುಭ್ರವಾಗಿದ್ದೇನೆ ಎಂದು ಆನಂದಿಸುತ್ತಾರೆ.

ಅದೇ ರೀತಿಯಲ್ಲಿ ಅಂತಹ ವೇಳೆಯಲ್ಲಿ ಭಿಕ್ಖುವು ಈ ಬಗೆಯಲ್ಲಿ ತನ್ನ ಪರಿಶೀಲನೆ ಮಾಡಿಕೊಳ್ಳುತ್ತಾನೆ.: ನಾನು ಅಕುಶಲಗುಣಗಳಿಂದ ಕೂಡಿದ್ದೇನೆಯೇ ನಾನು ಅಕುಶಲಗುಣಗಳ ಜಾಲದಲ್ಲಿ ಬಿದ್ದಿರುವೆನೇ ? ಪರೀಶೀಲನೆಯ ನಂತರ ತಾನು ಅಕುಶಲಗುಣಗಳಿಂದ  ಕೂಡಿದ್ದೇನೆ ಎಂದು ಅರಿವಾಗುತ್ತದೆ. ನಂತರ ಆ ಪ್ರಜ್ಞಾವಂತ ಭಿಕ್ಖುಗಳು ಅವುಗಳನ್ನು ತೊರೆಯಲು ಯತ್ನಿಸುತ್ತಾರೆ.ಹಾಗೂ ಯಶಸ್ವಿಗಳಾಗುತ್ತಾರೆ. ಅಥವಾ ಅವರು ಪರಿಶೀಲನೆಯ ನಂತರ ಅವರು ಅಕುಶಲಗುಣಗಳಿಂದ  ಕೂಡಿಲ್ಲ ಎಂದು ಅರಿವಾದಾಗ ಆಗ ಅವರು ಆನಂದಭರಿತರಾಗುತ್ತಾರೆ. ಅಂತಹವರು ರಾತ್ರಿಯಲ್ಲಿ ಆಗಲಿ ಅಥವಾ ಹಗಲಿನಲ್ಲಿಯೇ ಆಗಲಿ ಆನಂದದಿಂದ ಧ್ಯಾನದಲ್ಲಿ ತೊಡಗಿ ಕುಶಲಗುಣಗಳನ್ನು ವೃದ್ಧಿಸುತ್ತಾರೆ 

ಹೀಗೇ ಮೊಗ್ಗಲಾನರು ಬೋಧಿಸಿದಾಗ ಅದನ್ನು ಆಲಿಸಿದಂತಹ ಭಿಕ್ಖುಗಳು ಆನಂದಿತರಾದರು ಹಾಗು ಸಂತೃಪ್ತರಾದರು. 

ಮೊಗ್ಗಲಾನರ ಗಾಥೆಗಳು (ಥೇರ ಗಾಥ)

(ಕಾಡಿನಲ್ಲಿ ಭಿಕ್ಖು ಜೀವನದ ವೇಳೆಯ ಗಾಥೆಗಳು)

ಕಾಡಿನಲ್ಲಿ ವಾಸಿಸುತ್ತ ಭಿಕ್ಷಾನ್ನವನ್ನೇ ಸೇವಿಸುತ್ತ,

ಪಿಂಡಪಾತ್ರೆಗೆ ಏನೇ ಬೀಳಲಿ ಸುಖಿಯಾಗಿದ್ದು,

ಅದರೆ ಆಂತರ್ಯ ಮಾತ್ರ ಪ್ರಶಾಂತವಾಗಿದ್ದು 

ಮಾರನ ಸೇನೆಯನ್ನು ಧ್ವಂಸಮಾಡೋಣ      

ಕಾಡಿನಲ್ಲಿ ವಾಸಿಸುತ್ತ ಭಿಕ್ಷಾನ್ನವನ್ನೇ ಸೇವಿಸುತ್ತ,

ಪಿಂಡಪಾತ್ರೆಗೆ ಏನೇ ಬೀಳಲಿ ಸುಖಿಯಾಗಿದ್ದು,

ಆನೆಯು ಜೊಂಡಿನ ಕುಟೀರವನ್ನು ನಾಶಮಾಡುವಂತೆ

ಮಾರನ ಸೇನೆಯನ್ನು ಧ್ವಂಸಮಾಡೋಣ       

ಮರದ ಬುಡದಲಿ ವಾಸಿಸುತ್ತ ಸತತ ಯತ್ನಶಾಲಿಯಾಗಿ,

ಪಿಂಡಪಾತ್ರೆಗೆ ಏನೇ ಬೀಳಲಿ ಸುಖಿಯಾಗಿದ್ದು,

ಅದರೆ ಆಂತರ್ಯದಲ್ಲಿ ಮಾತ್ರ ಪ್ರಶಾಂತವಾಗಿದ್ದು , 

ಮಾರನ ಸೇನೆಯನ್ನು ಧ್ವಂಸಮಾಡೋಣ        

ಮರದ ಬುಡದಲಿ ವಾಸಿಸುತ್ತ ಸತತ ಯತ್ನಶಾಲಿಯಾಗಿ,

ಪಿಂಡಪಾತ್ರೆಗೆ ಏನೇ ಬೀಳಲಿ ಸುಖಿಯಾಗಿದ್ದು,

ಆನೆಯು ಜೊಂಡಿನ ಕುಟೀರವನ್ನು ನಾಶಮಾಡುವಂತೆ

ಮಾರನ ಸೇನೆಯನ್ನು ಧ್ವಂಸಮಾಡೋಣ.

ಗುಡಿಸಲಿನಂತೆ ಅಸ್ತಿಪಂಜರವಿದ್ದು

ಮಾಂಸ ನರಗಳಿಂದಾಗಿ ಹೆಣೆಯಲ್ಪಟ್ಟಿರುವ

ಹಾಳು ದುನರ್ಾತದ ಈ ಶರೀರ

ಪರರ ದೇಹಗಳನ್ನು ಸಲಹುತ್ತದೆ.                       

ಚರ್ಮದ ಗೋಣಿಚೀಲದ ಒಳಗಿನ ತೊಪ್ಪೆಯೇ

ಎದೆಯಲ್ಲಿ ಕೊಂಬುಗಳಿರುವ ಸತ್ವವೇ

ನಿನ್ನ ದೇಹವು ಒಂಬತ್ತು ತೊರೆಗಳಿಂದ

ನಿರಂತರವಾಗಿ ಹರಿಯುತ್ತಲೇ ಇರುತ್ತದೆ.      

ಈ ಒಂಬತ್ತು ತೊರೆಗಳಿಂದ 

ನಿನ್ನ ದೇಹವು ದುನರ್ಾತ ಮಲಭರಿತ

ಯಾವ ಭಿಕ್ಖುವು ವಿಶುಧ್ಧಿ ಬಯಸುವನೊ

ಈ ಶರೀರವನ್ನು ಕಶ್ಮಲದಂತೆ ತಡೆಯಲಿ     

ಅವರು ನನ್ನಂತೆ ನಿನಗೆ

ನೋಡಿದರೆ

ಮಳೆಗಾಲದ ಗೊಬ್ಬರದ ಗುಂಡಿಯಂತೆ

ದೂರವಾಗುವರು.                         

(ವೇಶ್ಯೆಯೊಬ್ಬಳು ಪ್ರಲೋಭನೆ ಮಾಡಿದಾಗ ಈ ಗಾಥೆಗಳನ್ನು ಹೇಳಿದರು)

ಇದು ಹೀಗೆ ಇದೇ ಮಹಾವೀರನೇ!

ನೀ ಹೇಳಿದಂತೆಯೇ ತಾಪಸಿಯೇ

ಅದರೆ ಕೆಲವರು ಮುದಿ ವೃಷಭದ

ಯಾರು ಇದನು ಹೊಂಬಣ್ಣದ 

ಆಥವಾ ಬೇರೆ ಬಣ್ಣದ ರೀತಿಯ

ಆಕಾಶವೆಂದು ಯೋಚಿಸುವರೋ

ಅವರು ಕೇವಲ ತಮ್ಮ ಸಮಸ್ಯೆಗಳಿಗೆ ಕಾರಣರಾಗುತಿಹರು.     

ಈ ಮನವು ಗಗನದಂತೆ

ಪ್ರಶಾಂತವು ಆಂತರ್ಯದಲಿ

ಓ ಮಾರನೇ ಚಿಟ್ಟೆಯು ಬೆಂಕಿಗೆ

ಬೀಳುವಂತೆ ಮೇಲೆ ಬೀಳಬೇಡ

ನೋಡು ಈ ಅಲಂಕೃತ ಸೂತ್ರದ ಗೊಂಬೆಯ

ಹುಣ್ಣುಗಳ ರಾಶಿಯೇ ಇದೆ ಈ ಶರೀರದಲಿ,

ಈ ರೋಗಕಾರಿಗೆ ಗೀಳು ಹೊಂದಿ

ಶಾಶ್ವತವಾದ ಸ್ಥಿರತೆ ಇನ್ನಿಲ್ಲವಾಗುವುದು.

ನೋಡು ಈ ಅಲಂಕೃತ ಆಕಾರಗಳನು

ಹರಳುಗಳು ಹಾಗೂ ಕಿವಿಯುಂಗರಗಳನು

ಇಲ್ಲಿ ಕೇವಲ ಚರ್ಮವು ಹೊದಿಕೆಯಾಗಿದೆ ಮೂಳೆಗಳಿಗೆ

ಇದು  ವಸ್ತ್ರಗಳಿಂದ ಮಾತ್ರ ಸೋಗಸಾಗಿದೆ

ಕೋಮಲವಾದ ಪಾದಗಳು

ಪುಡಿಯಿಂದಾದ ಬಿಳಪು ಮೊಗವು

ಇಷ್ಟೇ ಸಾಕು ಮೂರ್ಖನಿಗೆ ಮರಳುಮಾಡಲು

ಅದರೆ ಆ ತೀರದ ಅನ್ವéೇಷಿಗನಿಗಲ್ಲ.

ಕೂದಲು ಎಂಟು ಜಡೆಗಳಾಗಿ

ಮತ್ತು ಕಾಡಿಗೆಯ ಲೇಪನ 

ಇಷ್ಟೇ ಸಾಕು ಮೂರ್ಖನಿಗೆ ಮರಳುಮಾಡಲು

ಅದರೆ ಆ ತೀರದ ಅನ್ವéೇಷಿಗನಿಗಲ್ಲ.

ಹೊಸದಾದ ಸೌಂದರ್ಯವರ್ಧಕ ಡಬ್ಬಿಯು

ಸಿಂಗರಿಸಿಕೊಂಡ ಅಸಹ್ಯಕರ ದೇಹವು

ಇಷ್ಟೇ ಸಾಕು ಮೂರ್ಖನಿಗೆ ಮರಳುಮಾಡಲು

ಅದರೆ ಆ ತೀರದ ಅನ್ವéೇಷಿಗನಿಗಲ್ಲ.

ಬೇಟೆಗಾರನು ತನ್ನ ಬಲೆಯನ್ನು ಹಾಕಿದ್ದಾನೆ.

ಅದರೆ ಜಿಂಕೆಯು ಉರುಲಿಗೆ ಸಿಕ್ಕಿಕೊಂಡಿಲ್ಲ

ಜಿಂಕೆಯ ಬೇಟೆಗಾರನನ್ನು ಪ್ರಲಾಪಿಸಲು ಬಿಟ್ಟು

ಗಾಳದ ಆಹಾರ ಸೇವಿಸಿ ನಾವು ಹೊರಡುವೆವು

ಬೇಟೆಗಾರನ ಬಲೆಯು ಹರಿದುಹೋಗಿದೆ

ಜಿಂಕೆಯು ಉರುಳಿಗೆ ಬಿದ್ದಿಲ್ಲ

ಜಿಂಕೆಯ ಬೇಟೆಗಾರನನ್ನು ಪ್ರಲಾಪಿಸಲು ಬಿಟ್ಟು

ಗಾಳದ ಆಹಾರ ಸೇವಿಸಿ ನಾವು ಹೊರಡುವೆವು

(ಸಾರಿಪುತ್ತರ ಪರಿನಿಬ್ಬಾಣ ವೇಳೆ ನುಡಿದ ಗಾಥೆಗಳು)

ನಂತರ ಅಲ್ಲೊಂದು ಭೀಕರ

ಸಕಲ ಸಧ್ಗುಣ ಸಂಪನ್ನ 

ಸಾರಿಪುತ್ತರ ಪರಿನಿಬ್ಬಾಣದ 

ನಂತರ ಅವರಿಗೆ ರೋಮಂಚಕಾರಿ ಭಯ

ಸರ್ವ ಸಂಖಾರಗಳು ಅನಿತ್ಯ

ಏಳು ಬೀಳುವಿಕೆಯ ಸ್ವಭಾವದ್ದು

ಅವು ಏಳುವವು ಹಾಗೇಯೇ ಬೀಳುವವು

ಅವುಗಳ ನಿರೋಧವೇ ಪರಮಸುಖ

ಯಾರು ಪಂಚ ಸ್ಕಂಧಗಳನ್ನು ಹಾಗೂ 

ಬೇರೆಯವನ್ನು ಸ್ವಯಂ ಎಂದು ಕಾಣುವುದಿಲ್ಲವೋ

ಅಂತಹವರು ಕೂದಲನ್ನು ಬಾಣದಿಂದ ಸೀಳುವ ಹಾಗೆ

ಪರಮಸೂಕ್ಷ್ಮತೆಯನ್ನು ಅರಿಯುವರು.

ಯಾರು ಎಲ್ಲಾ ಸ್ಥಿತಿಗಳನ್ನು  ಹಾಗೂ

ಬೇರೆಯವನ್ನು ಆತ್ಮವೆಂದು ಕಾಣುವುದಿಲ್ಲವೋ

ಅಂತಹವರು ಕೂದಲನ್ನು ಬಾಣದಿಂದ ಭೇಧಿಸುವ ಹಾಗೆ

ಪರಮಸೂಕ್ಷ್ಮತೆಯನ್ನು ಅರಿಯುವರು.

ಖಡ್ಗಗಳ ಹೊಡೆತಕ್ಕೆ ಸಿಲುಕಿರುವಂತೆ

ತಲೆಗೆ ಬೆಂಕಿ ಬಿದ್ದಿರುವಂತೆ

ಜಾಗಾರೂಕ ಭಿಕ್ಖುವು ಇಂದ್ರಿಯ ಸುಖಗಳನ್ನು

ಪರಿತ್ಯಾಗ ಮಾಡಿ ಮುಂದೆ ಹೋಗುವನು

ಖಡ್ಗಗಳ ಹೊಡೆತಕ್ಕೆ ಸಿಲುಕಿರುವಂತೆ

ತಲೆಗೆ ಬೆಂಕಿ ಬಿದ್ದಿರುವಂತೆ

ಜಾಗಾರೂಕ ಭಿಕ್ಖುವು ಭವತನ್ಹವನ್ನು

ಪರಿತ್ಯಾಗ ಮಾಡಿ ಮುಂದೆ ಹೋಗುವನು

(ಮಿಗಾರ ಪ್ರಸಾಧ ಕಂಪನ ಮಾಡಿದಾಗ ನುಡಿದ ಗಾಥೆಗಳು)

ಅಂತಿಮ ದೇಹಧಾರಿಯಾದ 

ಸುಗತರ ಪ್ರೋತ್ಸಾಹದಿಂದ 

ನಾ ಮಿಗಾರ ಮಾತೆಯ ಭವನವನ್ನು 

ಕೇವಲ ಕಾಲಿನ ಹೆಬ್ಬರಿಳಿನಿಂದ ಗಡಗಡ ಕಂಪಿಸಿಬಿಟ್ಟೆನು

ಸಡಿಲತೆಯಿಂದ ನೀ ಹಲವು ಪಡೆಯುವುದಲ್ಲ

ಅಲ್ಪಶ್ರಮದಿಂದ ನೀ ಹಲವು ಪಡೆಯುವುದಲ್ಲ

ನಿಬ್ಬಾಣದ ಸಾಕ್ಷಾತ್ಕಾರವು 

ಸರ್ವ ಅಂಟುವಿಕೆಯ ಮುಕ್ತಿಯಿಂದಾಗುವುದು

ಈ ನವಯುವಕ ಭಿಕ್ಖು

ಮಾನವರಲ್ಲಿ ಅತ್ಯುತ್ತಮ

ಅಂತಿಮ ದೇಹದಾರಿಯಾದ

ಆವರು ಮಾರನ ಹಾಗೂ ಆತನ ಸೇನೆಯ ಸೋಲಿಸಿದವರು

(ಈ ಗಾಥೆಗಳನ್ನು ಅವರು ಏಕಾಂತದಲ್ಲಿ ಸಾಧನೆ ಮಾಡುವಾಗ ನುಡಿದದ್ದು ಆಗಿದೆ)

ವೆಭವ ಹಾಗೂ ಪಾಂಡವ ಪರ್ವತದ ಮೇಲೆ

ಮಿಂಚಿನ ಧಾರೆಗಳು ಉದುರಿದವು

ಅದರೆ ಪರ್ವತದ ಬಿರುಕಿನಲ್ಲಿ ಅಸಮಾನರ ಪುತ್ರನು

ಝಾನದಲ್ಲಿ ಲೀನವಾಗಿ ಹಾರಾಡಿದನು

(ಈ ಗಾಥೆಗಳನ್ನು ಕಸ್ಸಪರಿಗೆ ಗೌರವಿಸದ ಬ್ರಾಹ್ಮಣನಿಗೆ ನುಡಿದರು)

ಶಾಂತನು ಮತ್ತು ಪ್ರಶಾಂತನು

ಏಕಾಂತ ವಿಹಾರಿಯಾಗಿ ಋಷಿಯು

ಅನನ್ಯ ಬುದ್ಧರ ವಂಶಜನಾಗಿ

ಬ್ರಹ್ಮನಿಂದಲೂ ಗೌರವ ಪಡೆದನು.

ಶಾಂತನು ಮತ್ತು ಪ್ರಶಾಂತನು

ಏಕಾಂತ ವಿಹಾರಿಯಾಗಿ ಋಷಿಯು

ಅನನ್ಯ ಬುದ್ಧರ ವಂಶಜನಾಗಿದ್ದಾನೆ

ಬ್ರಾಹ್ಮಣ ನೀ ಕಸ್ಸಪರವರಿಗೆ ಗೌರವಿಸು.

ಒಬ್ಬನು ನಿರಂತರವಾಗಿ ನೂರು

ಜನ್ಮಗಳನ್ನು ಮಾನವನಾಗಿ

ಬ್ರಾಹ್ಮಣನಾಗಿ ಹುಟ್ಟಿ

ವೇದಗಳೆಲ್ಲವನ್ನು ನೆನಪಲ್ಲಿಟ್ಟರೂ

ಆತನು ಗುರುವಾಗಿದ್ದರೂ

ತ್ರಿವೇದದ ಪ್ರಾವಿಣ್ಯನಾಗಿದ್ದರೂ

ಅಂತಹವರಿಗೇ ಗೌರವಿಸುವುದರಿಂದ

ಸಿಗುವ ಲಾಭವು ಅತ್ಯಲ್ಪ

ಅದರೆ ಯಾರು ಅಷ್ಟಸಮಾಪತ್ತಿಗಳ

ಅಧಿಪತಿಯೋ ಯಾರು ಅವುಗಳಲ್ಲಿ ಮುನ್ನುಗ್ಗುವನೋ

ಹಾಗೂ ಹಿಂಬರುವನೋ ನಂತರ ಆಹಾರಕ್ಕೆ ಹೋಗುವನೋ

ಅಂತಹವನಿಗೇ ನೀಡುವ ಫಲವೂ ಹಿಂದಿನಗಿಂತ 

ಹದಿನಾರು ಪಟ್ಟುಗಿಂತಲೂ ಹೆಚ್ಚಿನದು

ಅಂತಹ ಭಿಕ್ಖುವಿಗೆ ನೀ ಹೊಡೆಯಲು ಹೋಗಬೇಡ

ನಿನ್ನನ್ನು ನೀನೂ ನಾಶಗೋಳಿಸಿಕೊಳ್ಳುವೆ ಬ್ರಾಹ್ಮಣ

ಅರಹಂತರಲ್ಲಿ ಶ್ರದ್ಧೆಯಿಡು ಶ್ರಧ್ಧಾಂಜಲಿ ಪೂರ್ವಕ ಪೂಜಿಸು

ಹಾಗಲ್ಲದೆ ನಿನ್ನ ತಲೆಯನ್ನು ನುಚ್ಚುನೂರಾಗಿಸಬೇಡ

ನೀ ಪುನರ್ಜನ್ಮ ಪ್ರಮುಖವೆಂದು ಭಾವಿಸಿದರೆ

ನೀ ಧಮ್ಮವನ್ನು ಸರಿಯಾಗಿ ನೋಡಿಲ್ಲ

ನೀ ವಕ್ರ ಮಾರ್ಗವ ಸಾಗುತಿಹೆ 

ಕುಮಾರ್ಗವು ನಿನಗೆ ಕೆಳಗೆ ದಬ್ಬುವುದು.


(ಟೊಳ್ಳು ಪೊತ್ತಿಲನಿಗೆ ನುಡಿದದು)

 ಹೇಗೆ ಜಂತುವು ಸಗಣಿಯಿಂದ ಲೇಪಿತವಾಗಿಯೋ

ಹಾಗೆಯೇ ಆತನು ಪರಿಸ್ಥಿತಿಗಳಿಂದ ಮತ್ತಿನಲ್ಲಿನರುತ್ತಾನೆ

ಲಾಭ ಸತ್ಕಾರಗಳಿಂದ ಮುಳುಗಿರುತ್ತಾನೆ.

ಟೊಳ್ಳು ಪೊತ್ಥಿಲ ಮುಂದುವರಿ

(ಸಾರಿಪುತ್ತರ ಬಗ್ಗೆ ನುಡಿದ ಗಾಥೆಗಳು)

ನೋಡು ಸಾರಿಪುತ್ತನು ಬರುತ್ತಿರುವನು

ಆತನ ದರ್ಶನವು ಸಾಧುವಾದುದು

ಉಭಯ ರೀತಿಯಲ್ಲಿಯು ವಿಮುಕ್ತನವನು

ಅಂತರ್ಯದಲ್ಲಿ ಸದಾ ಪ್ರಶಾಂತನು.

ಆತನ ಶಲ್ಯವು ತೆಗೆದುಹಾಕಲ್ಫಟ್ಟಿದೆ ಮತ್ತು ಬಂಧನಗಳು ಕತ್ತರಿಸಲ್ಪಟ್ಟಿವೆ

ತ್ರಿವಿಧ್ಯಾಧರನು ಮಾರನಾಶಿಯು

ಆತಿಥ್ಯಗಳಿಗೆ ಅರ್ಹನು

ಲೋಕದ ಜನರಿಗೆ ಸರಿಸಾಟಿಯಿಲ್ಲದ ಪುಣ್ಯಕ್ಷೇತ್ರನು

(ಈ ಗಾಥೆಗಳನ್ನು ಸಾರಿಪುತ್ತರು ಹೇಳಿದದು)

 ಆ ಸುಖ್ಯಾತಿಯ ದಶಸಹಸ್ರ ದೇವತೆಗಳು 

ಇದ್ಧಿಸಂಪನ್ನರು ಸಹಾ

ಅವರೆಲ್ಲಾ ಬ್ರಹ್ಮನಿಗೆಮಂತ್ರಿಗಳು

ಅದರೂ ಮೊಗ್ಗಲಾನನಿಗೆ ಅಂಜಲೀಬದ್ಧರಾಗಿ ವಂದಿಸುವರು.

ಮನುಜರಲ್ಲಿ ಶ್ರೇಷ್ಟ ಅಶ್ವನೇ ವಂದನೆ ನಿಮಗೆ

ನರರಲ್ಲಿ ಶ್ರೇಷ್ಟನೇ ವಂದನೆ ನಿಮಗೆ

ಕಲ್ಮಶಗಳ ಅಂತ್ಯಮಾಡಿದ ಸ್ವಾಮಿ

ನೀವೇ ಆತಿಥ್ಯಗಳಿಗೆ ಅರ್ಹರು.

ದೇವ ಮನುಷ್ಯರಿಂದ ಪೂಜಿತರೇ

ಉದಯಿಸಿದವರೇ ಮೃತ್ಯಂಜಯರೇ

ನೀರಿನಿಂದ ಕಮಲದಂತೆ

ಪರಿಸ್ಥಿತಿಗಳಿಂದ ಮಲಿನವಾಗದವರೇ

ಬ್ರಹ್ಮಸಹಿತ ಸಹಸ್ರವಿಧದ ಲೋಕಗಳನ್ನು

ಗಳಿಗೆಯಲ್ಲಿ ನೋಡುವವರೆ

ಇದ್ಧಿಸಂಪನ್ನರೇ ಜೀವಿಗಳ ಚ್ಯುತಿ ಹಾಗೂ ಪುನರ್ಭವಗಳನ್ನು

ಹಾಗೂ ದೇವತೆಗಳನ್ನು ಸಕಾಲದಲ್ಲಿ ನೋಡುವವರೇ.

(ಮೊಗ್ಗಲಾನರ ಗಾಥೆ)

ದಾಟಿರುವಂತಹ ಭಿಕ್ಖುವಾದ ಸಾರಿಪುತ್ತ

ಪರಮ ಉತ್ಕೃಷ್ಟ

ಅದು ಶೀಲದಿಂದಾಗಿ ಪ್ರಜ್ಞಾದಿಂದಾಗಿ

ಹಾಗೂ ಶಾಂತಿಯಿಂದಾಗಿ.

(ಅರಹಂತ ಪ್ರಾಪ್ತಿ ವೇಳೆ ನುಡಿದ ಮೊಗ್ಗಲಾನರ ಗಾಥೆಗಳು)

ಕ್ಷಣಮಾತ್ರದಲ್ಲಿ ನಾನೂ ನನ್ನಂತಿರುವ

ಲಕ್ಷ ಜನರನ್ನು ದಶಲಕ್ಷ ಬಾರಿ ಸೃಷ್ಟಿಸಬಲ್ಲೆನು

ರೂಪ ಪರಿವರ್ತನೆಯಲ್ಲಿ ನಾನು ಮಹಾಕುಶಲನು

ಇದ್ಧಿ ಸಂಪನ್ನತೆಯಲ್ಲಿ ಪ್ರಾವಿಣ್ಯನು 

ಸಮಾಧಿ ಹಾಗೂ ವಿಧ್ಯೆಗಳಲ್ಲಿ ಪರಿಪೂರ್ಣತೆ ಸಾಧಿಸಿದ

ಮೊಗ್ಗಲಾನ ಗೊತ್ರದ ಅಂಟದಿರುವಿಕೆಯ ಶಾಸನದಲ್ಲಿ ಪ್ರಾಜ್ಞನಾದ

ಧೀರನು ಹೇಗೆ ಆನೆಯು ಪೂತಿಲತೆಗಳ ಬಂಧನಗಳನ್ನು ಮುರಿದು ಹಾಕುವುದೋ

ಹಾಗೆಯೇ ಸಮಾಹಿತದ ಇಂದ್ರಿಯದ ಮೂಲಕ ಧ್ವಂಸ ಮಾಡುವನು.

ಶಾಸ್ತರ ಸೇವೆಯನ್ನು ಮಾಡಿರುವೆ

ಬುದ್ಧಶಾಶನದ ಎಲ್ಲವನ್ನು ಪರಿಪಾಲಿಸಿಹೆ

ಭಾರವಾದ ಹೊರೆಯನ್ನು ಇಳಿಸಿರುವೆ

ಭವವನ್ನು ತರಿಸುವ ಸಮೂಹ ಎಲ್ಲದರಲ್ಲಿಯು ಅಂಟದೇ ಹೋಗಿದ್ದೇನೆ.

ಯಾವುದಕ್ಕಾಗಿ ಪಬ್ಬಜಿತರು 

ಮನೆ ಬಿಟ್ಟು ಅನಿಕೇತನರಾಗುವರೋ

ಅಂತಹ ಗುರಿಯನ್ನು ಸಿದ್ಧಿಸಿಹೆನು

ಸರ್ವಸಂಯೋಜನಗಳನ್ನು ಕ್ಷಯಿಸಿರುವೆನು.

(ಮಾರನೊಂದಿಗೆ ಸಂಭಾಷಣೆಯ ವೇಳೆ ನುಡಿದ ಗಾಥೆಗಳು)

ಯಾವ ರೀತಿಯ ನರಕವದು

ಅಲ್ಲಿ ದುಸ್ಸಿ ಬೆಂದು ಹೋಗಿದ್ದನು

ಕುಕುಸಂಧ ಬ್ರಾಹ್ಮಣರ ವಿಧುರ ಅಗ್ರ ಶಾವಕನಿಗೆ

ನೀಡಿದ ಕಿರುಕುಳಕ್ಕೆ ಕಮ್ಮವಿಪಾಕವದು

ಅಲ್ಲಿ ಏಕಕಾಲದಲ್ಲಿ ಶತ ಕತ್ತಿಗಳು ತಿವಿಯಲ್ಪಟ್ಟು

ಅಪಾರ ವೇದನೆಗಳು ಅಸಹನೀಯ ಅಲ್ಲಿ ದುಸ್ಸಿ ಬೆಂದು ಹೋಗಿದ್ದನು

ಕುಕುಸಂಧ ಬ್ರಾಹ್ಮಣರ ವಿಧುರ ಅಗ್ರ ಶಾವಕನಿಗೆ

ನೀಡಿದ ಕಿರುಕುಳಕ್ಕೆ ಕಮ್ಮವಿಪಾಕವದು

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಅದ್ದರಿಂದ ಕಣ್ಹನೇ

ನೀ ಬಿಕ್ಖುಗಳಿಗೆ ನೀಡಬೇಡ ತೊಂದರೆ.

ಸರೋವರದ ಮಧ್ಯೆ ನಿಂತಿರುವ ವಿಮಾನವು 

ಕಲ್ಪ ಕಾಲದಷ್ಟು ಇರುವದು 

ನೀಲ ವರ್ಣದ ಸ್ಪಟಿಕದ ಪ್ರಭಾಯುತ ಭವನವದು

ನಾನ ವರ್ಣಗಳ ಅಪ್ಸರೆಯರು ಅಲ್ಲಿ ನೃತ್ಯವಾಡುವರು.

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಆದ್ದರಿಂದ ಕಣ್ಹನೇ

ನೀ ಭಿಕ್ಖುಗಳಿಗೆ ನೀಡಬೇಡ ತೊಂದರೆ.

ಬುದ್ಧರಿಂದಲೇ ಸೂಚನೆಗೆ ಒಳಗಾಗಿ

ಭಿಕ್ಖುಸಂಘವನ್ನು ನೋಡಿಕೊಳ್ಳುತ್ತಿದ್ದ ನಾನೂ

ಮಿಗಾರ ಮಾತೆಯ ಭವನವನ್ನು ಕೇವಲ

ಪಾದದ ಅಂಗುಷ್ಟದಿಂದಲೇ ಕಂಪಿಸುವಂತೆ ಮಾಡಿದೆನು.

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಅದ್ದರಿಂದ ಕಣ್ಹನೇ

ನೀ ಬಿಕ್ಖುಗಳಿಗೆ ನೀಡಬೇಡ ತೊಂದರೆ.

ಯಾರು ವೈಜಯಂತ ಪ್ರಸಾದವನ್ನು 

ಪಾದದ ಅಂಗುಷ್ಟದಿಂದಲೇ ಕಂಪನವನ್ನುಂಟು ಮಾಡಿದರೋ

ಇದ್ಧಿಬಲಗಳಲ್ಲಿ ಪ್ರತಿಷ್ಟಿತರೊ

ಅಂತಹವರು ದೇವತೆಗಳಲ್ಲಿಯೂ ಸ್ಪೂತರ್ಿದಾಯಕರು

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಆದ್ದರಿಂದ ಕಣ್ಹನೇ

ನೀ ಭಿಕ್ಖುಗಳಿಗೆ ನೀಡಬೇಡ ತೊಂದರೆ.

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಅದ್ದರಿಂದ ಕಣ್ಹನೇ

ನೀ ಬಿಕ್ಖುಗಳಿಗೆ ನೀಡಬೇಡ ತೊಂದರೆ.

ಯಾರು ವೈಜಯಂತ ಪ್ರಸಾದದಲ್ಲಿ 

ಸಕ್ಕನಿಗೆಯೇ ಹೀಗೆ ಪ್ರಶ್ನಿಸಿದರೋ:

ಅಯುಷ್ಮಂತನೇ ತಣ್ಹಕ್ಷಯದಿಂದಾಗುವ ವಿಮುಕ್ತಿಯು

ನಿನಗೆ ತಿಳಿದಿದೆಯೇ? ಅದಕ್ಕೆ ಸಕ್ಕರು ಯಥಾತಥಾವಾಗಿಯೇ ಉತ್ತರಿಸಿದರು.

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಆದ್ದರಿಂದ ಕಣ್ಹನೇ

ನೀ ಭಿಕ್ಖುಗಳಿಗೆ ನೀಡಬೇಡ ತೊಂದರೆ.

ಯಾರು ಬ್ರಹ್ಮನ ಸುಧಮ್ಮ ಸಭಾಂಗಣದಲ್ಲಿ ಹೀಗೆ

ಪ್ರಶ್ನಿಸಿದರೊ ; ಓ ಆಯುಷ್ಮಂತನೇ ಈ ಹಿಂದೆ ಇದ್ದಂತಹ 

ದಿಟ್ಟಿಯು ಈಗಲೂ ಇದೆಯೇ ಅಥವಾ ಬ್ರಹ್ಮಲೋಕದ ಪ್ರಭೆಯು 

ಆರಿಹೋಗುವುದು ಕಂಡಿರುವಿರಾ ?

ಅದಕ್ಕೆ ಬ್ರಹ್ಮರು 

ಯಥಾತಥಾವಾಗಿಯೇ ಉತ್ತರಿಸಿದರು :

ಅಯುಷ್ಮಂತನೇ ಈ ಹಿಂದೆ 

ಇದ್ದಂತಹ ದಿಟ್ಟಿಯು ಈಗಿಲ್ಲವಾಗಿದೆ.

ಕಾಣುತ್ತಿದ್ದೇನೆ ಬ್ರಹ್ಮಲೋಕದ ಪ್ರಭೆಯು

ಮರೆಯಾಗುವುದನ್ನು ಹೀಗಾಗಿ ಹೇಗೆ ತಾನೇ

ನಾನು ನಿತ್ಯನೆಂದು ಶಾಶ್ವತನೆಂದು ಹೇಳಲಿ

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಆದ್ದರಿಂದ ಕಣ್ಹನೇ

ನೀ ಭಿಕ್ಖುಗಳಿಗೆ ನೀಡಬೇಡ ತೊಂದರೆ.

ಜನರು ವಾಸಿಸುವ ಪೂರ್ವವಿದೇಹದ ವನಗಳಲ್ಲಿರುವ 

ಮಹಾನೇರು ಪರ್ವತದ ತುದಿಯನ್ನು

ತನ್ನ ವಿಮೋಕ್ಖತೆಯಿಂದ ಸ್ಪಶರ್ಿಸಿದರೋ

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಆದ್ದರಿಂದ ಕಣ್ಹನೇ

ನೀ ಭಿಕ್ಖುಗಳಿಗೆ ನೀಡಬೇಡ ತೊಂದರೆ.

ನಾನು ಮೂರ್ಖನನ್ನು ದಹಿಸುವೆ 

ಎಂದು ಅಗ್ನಿಯು ಸಂಕಲ್ಪಿಸದು,

ಅದರೂ ಸಹಾ ಮೂರ್ಖನು ಅಗ್ನಿಯ 

ಸಮೀಪ ಬಂದರೆ ಸುಟ್ಟುಹೋಗುವನು.

ಅದೇ ರೀತಿಯಾಗಿ ಮಾರ

ತಥಾಗಥರಿಗೇ ಆಕ್ರಮಣ ಮಾಡಿದರೇ

ಹೇಗೇ ಮೂರ್ಖನು ಸುಟ್ಟು ಹೋಗುವನೋ

ಹಾಗೇ ದಹಿಸಿ ಹೋಗುವೇ

ತಥಾಗತರಿಗೆ ಆಕ್ರಮಣ ಮಾಡಿದರೆ

ಮಾರನೇ ಪಾಪವನ್ನು ಹೇರಳವಾಗಿ ಪಡೆಯುವನು

ನನ್ನ ದುಷ್ಟತನವು ಫಲಕಾರಿಯಾಗದು

ಎಂದೆಣಿಸಬೇಡ ಹಾಗೇ ಕಲ್ಪಿಸಬೇಡ ದುಷ್ಟನೇ

ಬಹು ಕಾಲದಿಂದ ನೀನೇ ಸೃಷ್ಟಿಸಿರುವ 

ದುಷ್ಟತನದ ಕುಪ್ಪೆಯನ್ನು ಸಂಗ್ರಹಿಸಿರುವೆ

ಓ ಮಾರ ಬುದ್ಧರಿಂದ ದೂರ ನಿಲ್ಲು

ಭಿಕ್ಖುಗಳನ್ನು ವಂಚಿಸುವ ಭರವಸೆಯನ್ನು ಬಿಟ್ಟುಬಿಡು.

ಈ ರೀತಿಯಾಗಿ ಭೇಸಕಾಲಾ ತೋಪಿನಲ್ಲಿ

ಭಿಕ್ಖುವು ಮಾರನನ್ನು ಹೆದರಿಸಿ ಗದರಿಸಿದರು

ಆ ಯಕ್ಖನು ಕೆಳಮುಖ ಮಾಡಿ

ತಕ್ಷಣ ಅಲ್ಲಿಂದ ಅದೃಶ್ಯನಾದನು.

(ಥೇರ ಗಾಥ 1150 ರಿಂದ 1218)

9.5 ಸಾರಿಪುತ್ತ ಹಾಗು ಮೊಗ್ಗಲಾನರಿಂದ ಸಂಘವು ಒಂದಾಯಿತು

ದೇವದತ್ತನು ಬುದ್ಧರೊಂದಿಗೆ ಕೋಸಂಬಿಯಲ್ಲಿ ವಾಸವಾಗಿದ್ದನು. ಆಗ ಆತನಿಗೆ ಬುದ್ಧರಿಗೆ ಸಿಗುವ ಗೌರವ, ಸತ್ಕಾರ, ಕೀತರ್ಿ, ಎಲ್ಲವನ್ನು ಕಂಡು ಅಸೂಯೆಯುಂಟಾಯಿತು. ಆತನೇ ಭಿಕ್ಷು ಸಂಘಕ್ಕೆ ನಾಯಕನಾಗಲು ಲೋಭಪಟ್ಟನು. ಒಂದುದಿನ ಭಗವಾನರು ರಾಜಗೃಹದ ವೇಲುವನದ ವಿಹಾರದಲ್ಲಿ ಬೋಧಿಸುತ್ತಿರುವಾಗ ಬುದ್ಧರಲ್ಲಿಗೆ ದೇವದತ್ತನು ಬಂದು ಭಗವಾನರಿಗೆ ವಯಸ್ಸಾಯಿತು, ಆದ್ದರಿಂದ ನನಗೆ ಸಂಘದ ನೇತೃತ್ವ ನೀಡಿ ಎಂದು ಕೇಳಿದನು. ಆತನು ಅತ್ಯಂತ ಅನರ್ಹನಾಗಿದ್ದನು. ಕೊನೇ ಪಕ್ಷ ಶೀಲವಂತನೂ ಸಹಾ ಆಗಿರಲಿಲ್ಲ. ಸಂಘದಲ್ಲಿ ಅಸಂಖ್ಯಾತ ಖೀಣಾಸವ ಅರಹಂತರು ಇದ್ದರು. ಅವರಿಗೂ ಸಹಾ ಬುದ್ಧರ ಧಮ್ಮದ ಆಳ್ವಿಕೆ ಸಾಧ್ಯವಿರಲಿಲ್ಲ. ಆದ್ದರಿಂದಾಗಿ ಭಗವಾನರು ಆತನ ಕೋರಿಕೆ ನಿರಾಕರಿಸಿದರು ಮತ್ತು ಆತನ ಮೋಹವನ್ನು ಖಂಡಿಸಿದರು.

ದೇವದತ್ತನು ಇದರಿಂದಾಗಿ ದ್ವೇಷದಿಂದ ಸೇಡಿನಿಂದ ತುಂಬಿಹೋದನು. ಆತನು ಬುದ್ಧರನ್ನು 3 ಬಾರಿ ಕೊಲ್ಲಲು ಪ್ರಯತ್ನಿಸಿದನು. ಮೊದಲಿಗೆ ಹಲವು ಧನುರ್ಧರರನ್ನು ಕೊಲ್ಲಲು ನೇಮಿಸಿದನು. ಆದರೆ ಬುದ್ಧ ಭಗವಾನರ ಅಸೀಮ ಮೈತ್ರಿಯಿಂದ ಮತ್ತು ಪ್ರಜ್ಞಾಶೀಲತೆಯಿಂದಾಗಿ ಅವರೆಲ್ಲರೂ ಬುದ್ಧಭಗವಾನರ ಶಿಷ್ಯರಾದರು. ನಂತರ ಗಿಜ್ಜಕೂಟ ಬೆಟ್ಟದ ಮೇಲೇರಿ ಅಲ್ಲಿಯ ದೊಡ್ಡ ಬಂಡೆಯನ್ನು ಬುದ್ಧರ ಮೇಲೆ ಉರುಳಿಸಿದನು. ಆದರೆ ಭಗವಾನರು ಪವಾಡಶಕ್ತಿಯಿಂದ ಪಾರಾದರು. ಆದರೂ ಹಿಂದಿನ ಕರ್ಮಫಲದ ಪರಿಣಾಮದಿಂದ ಕೇವಲ ಕಾಲಿನ ಹೆಬ್ಬೆರಳಿಗೆ ಗಾಯವಾಯಿತು. ನಂತರ ನಾಲಾಗಿರಿ ಆನೆಯನ್ನು ಉನ್ಮಾದಿಸಿ ಬುದ್ಧರ ಮೇಲೆ ಬಿಟ್ಟನು. ಆದರೆ ಭಗವಾನರ ಮೈತ್ರಿಯ ಪ್ರಬಲಶಕ್ತಿಯಿಂದಾಗಿ ಆನೆಯು ಸಹಾ ಪಳಗಿ ಶಾಂತವಾಗಿ ವಂದಿಸಿತು. ಆಗ ಈ ಪ್ರಯತ್ನಗಳು ವಿಫಲವಾದಾಗ ದೇವದತ್ತನು ಸಂಘಭೇದ ಮಾಡಲು, ಸಂಘವನ್ನು ಮುರಿಯಲು ಪ್ರಯತ್ನಿಸಿದನು. 

9.6 ಸಂಘ ಭೇದದ ಪ್ರಕರಣ

ಒಮ್ಮೆ ಭಗವಾನರು ವೇಲುವನದಲ್ಲಿ ಬೋಧಿಸುತ್ತಿದ್ದರು. ಆಗ ಅಲ್ಲಿಗೆ ದೇವದತ್ತನು ಬಂದನು. ಭಗವಾನರಿಗೆ ಸಲಹೆಯೊಂದನ್ನು ನೀಡಿದನು. ಅದೇನೆಂದರೆ ಭಗವಾನರು ವೃದ್ಧರಾಗುತ್ತಿರುವುದರಿಂದಾಗಿ ಸಂಘದ ಆಳ್ವಿಕೆಯನ್ನು ದೇವದತ್ತನಿಗೆ ಒಪ್ಪಿಸುವುದು ಎಂದು. ಆದರೆ ಭಗವಾನರು ಇದಕ್ಕೆ ಒಪ್ಪಲಿಲ್ಲ. (ಸಂಘದ ಹೊಣೆಗಾರಿಕೆ ಅತ್ಯುನ್ನತ ಮಟ್ಟದ್ದಾಗಿರುವುದರಿಂದಾಗಿ, ಅದರ ಹೊಣೆಯನ್ನು ಸಾರಿಪುತ್ತ ಮತ್ತು ಮೊಗ್ಗಲ್ಲಾನರಿಗೂ ವಹಿಸಲು ಸಾಧ್ಯವಿರಲಿಲ್ಲ, ಇನ್ನು ದೇವದತ್ತನಿಗೆ ವಹಿಸಲು ಸಾಧ್ಯವೇ?) ಇದರಿಂದಾಗಿ ದೇವದತ್ತನು ಅಪಮಾನವಾದಂತೆ ಭಾಸವಾಗಿ, ಬುದ್ಧರನ್ನು ದ್ವೇಷಿಸಲು ಆರಂಭಿಸಿದನು. ಹೀಗಾಗಿ ಆತನು ಭಗವಾನರನ್ನು ಕೊಲ್ಲಲು ಮೂರುಬಾರಿ ಪ್ರಯತ್ನಿಸಿ ವಿಫಲನಾದನು. ಆಗ ಮತ್ತೊಂದು ಅಪಾಯಕಾರಿ ಉಪಾಯ ಹುಡುಕಿದನು. ಆ ಉಪಾಯದಿಂದ ಆತನು ಭಗವಾನರಲ್ಲಿಗೆ ಬಂದು ತಾನು ಐದು ವಿನಯ ನಿಯಮಗಳನ್ನು ಕಂಡುಹಿಡಿದಿರುವುದಾಗಿ ಅದು ಸಂಯಮಕ್ಕೆ ಅನುಕೂಲವಿರುವುದರಿಂದಾಗಿ ಅದರ ಜಾರಿಗೆ ಅನುಮತಿ ಕೇಳಿದನು. ಅದೇನೆಂದರೆ: 1) ಕಾಡಿನಲ್ಲಿಯೇ ಭಿಕ್ಷುಗಳ ವಾಸ 2) ಭಿಕ್ಷಾಟನೆಯಿಂದಲೇ ಆಹಾರ 3) ಕಸದ ಬಟ್ಟೆಯಿಂದಲೇ ವಸ್ತ್ರ 4) ಮರದ ಬುಡದಲ್ಲಿಯೇ ವಾಸ ಮತ್ತು 5) ಮಾಂಸ ಮತ್ತು ಮತ್ಸ್ಯದ ತಿರಸ್ಕಾರ.ಆದರೆ ಭಗವಾನರಿಗೆ ದೂರದೃಷ್ಟಿಯಿರುವುದರಿಂದಾಗಿ ಆ ನಿಯಮಗಳು ಸಾಮಾಜಿಕ ಹಿತಕ್ಕೆ ಅಡ್ಡಿಯಷ್ಟೇ ಅಲ್ಲದೆ ಭಿಕ್ಷುಗಳಿಗೆ ವಿನಾಕಾರಣ ದೇಹದಂಡಿಸಿದಂತಾಗುತ್ತದೆ ಎಂದರಿತ ಭಗವಾನರು ಅವನ್ನು ತಿರಸ್ಕರಿಸಿದರು. 

ಈ ಅವಕಾಶಕ್ಕಾಗಿಯೇ ಕಾಯುತ್ತಿದ್ದ ದೇವದತ್ತನು ತನ್ನ ಈ ನಿಯಮಗಳು ಇರುವ ನಿಯಮಗಳಿಗಿಂತ ಉತ್ತಮ ಎಂದು ದಡ್ಡ ಭಿಕ್ಷುಗಳಿಗೆ ನಂಬಿಸಿ ತನ್ನ ಹಿಂಬಾಲಕರನ್ನಾಗಿ ಮಾಡಿಕೊಂಡನು. 

ಆಗ ಭಗವಾನರು ಆತನಿಗೆ ದೇವದತ್ತ ನೀನು ಸಂಘಭೇದ ಮಾಡುತ್ತಿರುವೆಯಾ?

ಹೌದು.

ಓಹ್, ಇದು ಮಹಾಪಾಪ. ಪಂಚಮಹಾಪಾತಕಗಳಲ್ಲಿ ಒಂದಾಗಿದೆ. ಇದರ ಪರಿಣಾಮವಾಗಿ ಅವೀಚಿ ನರಕದಲ್ಲಿ ಹುಟ್ಟಬೇಕಾಗುತ್ತದೆ, ಇವೆಲ್ಲಾ ಬಿಟ್ಟುಬಿಡು.

ಅಂಥದೇನೂ ಆಗೋಲ್ಲ ಎಂದು ನಿರ್ಲಕ್ಷ ವಹಿಸಿದನು. ಅಷ್ಟೇ ಅಲ್ಲದೆ ಆತನದೆ ಮಾರ್ಗದಲ್ಲಿ ಉಪೋಸಥ ಸಭೆ ಮತ್ತು ಆಚರಣೆ ಆರಂಭಿಸಿದನು.

ಈ ವಿಷಯವನ್ನು ಪರಮಪೂಜ್ಯ ಆನಂದರವರು ಭಗವಾನರಿಗೆ ತಿಳಿಸಿದಾಗ ಭಗವಾನರು ಈ ಗಾಥೆ ನುಡಿದರು.

ಅಸಾಧುವು (ಕೆಟ್ಟದ್ದು) ಮತ್ತು ಅಹಿತವಾದುದನ್ನು ಮಾಡಿಕೊಳ್ಳುವುದು ಸುಲಭ. ಆದರೆ ಸಾಧುವು (ಒಳ್ಳೆಯದು) ಮತ್ತು ಹಿತವಾದುದನ್ನು ಮಾಡಿಕೊಳ್ಳುವುದು ಪರಮ ದುಷ್ಕರವಾದುದು. (ಧ.ಪ. 163)

ಒಳ್ಳೆಯವರಿಗೆ ಹಿತ ಮತ್ತು ಸಾಧುಕಾರ್ಯ ಸುಲಭ, ಆದರೆ ಕೆಟ್ಟವರಿಗೆ ಅದು ಪರಮ ದುಷ್ಕರ. ಅದೇ ಕೆಟ್ಟವರಿಗೆ ಅಹಿತ ಮಾಡಿಕೊಳ್ಳುವಂತಹ ಪಾಪಕಾರ್ಯ ಸುಲಭ. ಆದರೆ ಒಳ್ಳೆಯವರಿಗೆ ಅದು ಅಸಾಧ್ಯ ಎಂದರು.

ನಂತರ ಉಪೋಸಥ ದಿನದಂದು 500 ವಜ್ಜಿಗಳ ಭಿಕ್ಷು ಗುಂಪು ದೇವದತ್ತನ ಮಾತಿಗೆ ಮರುಳಾಗಿ ಆತನ ಸಂಘ ಸೇರಿತು. ಆದರೆ ಭಗವಾನರ ಅನುಕಂಪ ಮತ್ತು ಸಾರಿಪುತ್ತ ಮತ್ತು ಮೊಗ್ಗಲ್ಲಾನರ ಹಿತವಚನದಿಂದಾಗಿ ಮರಳಿ ಭಗವಾನರ ಸಂಘಕ್ಕೆ ಹಿಂತಿರುಗಿದರು. 


- ಂ0ಂ  

8. ಭಗವಾನರು ಮೊಗ್ಗಲಾನರ ರೋಗವನ್ನು ಗುಣಪಡಿಸಿದ್ದು

 8. ಭಗವಾನರು ಮೊಗ್ಗಲಾನರ ರೋಗವನ್ನು ಗುಣಪಡಿಸಿದ್ದು 

(ಮಹಾಮೊಗ್ಗಲಾನ ಥೇರ ಭೊಜ್ಜಾಂಗ ಸುತ್ತ)     



ನಾನು ಹೀಗೆ ಕೇಳಿದ್ದೇನೆ : ಒಮ್ಮೆ ಭಗವಾನರು ರಾಜಗೃಹದ ವೇಲುವನದ ಕಲಂದಕನಿವಾಪದಲ್ಲಿ ನೆಲಸಿದ್ದರು.ಆ ಸಮಯದಲ್ಲಿ ಮೊಗ್ಗಲಾನರು ಗಿಜ್ಜಕೂಟದಲ್ಲಿ (ಗಿಡಗಗಳ ಬೆಟ್ಟದಲ್ಲಿ) ಇದ್ದರು ಅದರೆ ಅವರು  ಆ ಸಮಯದಲ್ಲಿ ತೀವ್ರವಾಗಿ ಅಸ್ವಸ್ಥರಾಗಿದ್ದರು. ಅಗ ಭಗವಾನರು ತಮ್ಮ ಏಕಾಂತದಿಂದ ಎದ್ದು ಮಹಾಮೊಗ್ಗಲಾನರು ಇರುವಲ್ಲಿಗೆ ಬಂದರು. ಅಲ್ಲಿ ಪಕ್ಕದಲ್ಲಿ ಕುಳಿತು ಹೀಗೆ ನುಡಿದರು. :

ಮೊಗ್ಗಲಾನ ಹೇಗಿರುವೆ ?ನೀನು ನಿನ್ನ ನೋವುಗಳನ್ನು ಸಹಿಸುತ್ತಿರುವೆಯಾ ? ನಿನ್ನ ನೋವುಗಳು ಕಡಿಮೆಯಾಗುತ್ತಿದೆಯೇ ? ಇದಕ್ಕೆ ಸಂಬಂದಿಸಿದ ಲಕ್ಷಣಗಳು ಕಡಿಮೆ ಯಾಗುತ್ತಿದೆಯಲ್ಲವೆ?

ಇಲ್ಲ ಭಂತೆ, ನನ್ನಿಂದ ಸಹಿಸಲಾಗುತ್ತಿಲ್ಲ, ನೋವಿನ ವೇದನೆಗಳು ಅತಿ ತೀಕ್ಷ್ಣವಾಗಿವೆ, ಈ ನೋವಿನ ಹಾಗೂ ಅಸ್ವಸ್ಥತೆಯ ಲಕ್ಷಣಗಳು ಕಡಿಮೆಯಾಗುತ್ತಿಲ್ಲ.

ಮೊಗ್ಗಲಾನ ಸಪ್ತಭೋಧಿ ಅಂಗಗಳು ನನ್ನಿಂದ ಚೆನ್ನಾಗಿ ವಿವರಿಸಲ್ಪಟ್ಟಿದೆ, ಹಾಗೂ ನನ್ನಲ್ಲಿ ಚೆನ್ನಾಗಿ ಸ್ಥಾಪಿಸಲ್ಪಟ್ಟಿದೆ. ಅವು ಪರಿಪೂರ್ಣ ಅರಿವಿಗೆ, ಅಭಿಜ್ಞೆಗೆ, ಸಂಬೋಧಿಗೆ, ಮತ್ತು ನಿಬ್ಬಾಣಕ್ಕೆ ಕರೆದೂಯ್ಯುವುದು.

ಯಾವುವವು ಸಪ್ತಭೋಧಿ ಅಂಗಗಳು ನನ್ನಿಂದ ಚೆನ್ನಾಗಿ ವಿವರಿಸಲ್ಪಟ್ಟಿರುವ  ಹಾಗೂ ನನ್ನಲ್ಲಿ ಚೆನ್ನಾಗಿ ಸ್ಥಾಪಿಸಲ್ಪಟ್ಟಿದೆ ಪರಿಪೂರ್ಣ ಅರಿವಿಗೆ, ಅಭಿಜ್ಞೆಗೆ, ಸಂಬೋಧಿಗೆ, ಮತ್ತು ನಿಬ್ಬಾಣಕ್ಕೆ ಕರೆದೂಯ್ಯುವ ಆ ಸಪ್ತಬೋಧಿ ಅಂಗಗಳು ಯಾವುವು ?

ಅವೆಂದರೆ :

1. ಸತಿ (ಎಚ್ಚರಿಕೆಯ) ಸಂಬೋಧಿ ಅಂಗ

2 ಧಮ್ಮ ವಿಚಯ(ಧಮ್ಮದ ಶೋಧನೆಯ) ಸಂಬೋಧಿ ಅಂಗ

3. ವಿರಿಯಾ (ಸತತ ಪ್ರಯತ್ನಶೀಲತೆ) ಸಂಬೋಧಿ ಅಂಗ

4. ಪೀತಿ(ಆನಂದ) ಸಂಬೋಧಿ ಅಂಗ

5. ಪಸ್ಸಧಿ(ಪ್ರಶಾಂತತೆಯ) ಸಂಬೋಧಿ ಅಂಗ

6. ಸಮಾಧಿ  ಸಂಬೋಧಿ ಅಂಗ

7. ಉಪೇಕ್ಖ (ಸಮಚಿತ್ತತೆಯ) ಸಂಬೋಧಿ ಅಂಗ.

ಈ ಸಪ್ತಭೋಧಿ ಅಂಗಗಳು ನನ್ನಿಂದ ಚೆನ್ನಾಗಿ ವಿವರಿಸಲ್ಪಟ್ಟಿದೆ, ಹಾಗೂ ನನ್ನಲ್ಲಿ ಚೆನ್ನಾಗಿ ಸ್ಥಾಪಿಸಲ್ಪಟ್ಟಿದೆ. ಅವು ಪರಿಪೂರ್ಣ ಅರಿವಿಗೆ, ಅಭಿಜ್ಞೆಗೆ, ಸಂಬೋಧಿಗೆ, ಮತ್ತು ನಿಬ್ಬಾಣಕ್ಕೆ ಕರೆದೂಯ್ಯುವುದು.

ಹೀಗೆ ಭಗವಾನರು ಸಪ್ತ ಬೋಧಿಯ ಅಂಗಗಳ ಬಗ್ಗೆ ವಿವರಿಸಿದಾಗ ಮೊಗ್ಗಲಾನರು ಅವುಗಳ ಗಹನವಾನ ಆಳ ಅರ್ಥವನ್ನು ಅರಿತರು. ಹಾಗೂ ಅತ್ಯಂತ ಆನಂದವುಳ್ಳವರಾಗಿ ಹೀಗೆ ನುಡಿದರು :

ಖಂಡಿತವಾಗಿಯು ಭಗವಾನ್ ಇವು ಭೋಧಿ ಅಂಗಗಳೇ ಆಗಿವೆ. ಖಂಡಿತವಾಗಿಯು ಸುಗತರೇ ಇವು ಬೋಧಿಯ ಅಂಗಗಳೆ ಆಗಿವೆ. ಹಾಗು ಮೊಗ್ಗಲಾನರ ರೋಗವು ಪೂರ್ಣವಾಗಿ ಅದೃಷ್ಯವಾಯಿತು.

ಏತೇನ ಸಚ್ಚ ವಜ್ಜೆನ ರೋಗ ವೂಪ ಸಮೇತು ಮೆ/ತೆ 

ಏತೇನ ಸಚ್ಚ ವಜ್ಜೆನ ರೋಗ ವೂಪ ಸಮೇತು ಮೆ/ತೆ 

ಏತೇನ ಸಚ್ಚ ವಜ್ಜೆನ ರೋಗ ವೂಪ ಸಮೇತು ಮೆ/ತೆ 

ಈ ಸತ್ಯವಚನದಿಂದಾಗಿ ನಾನೂ/ನೀನು/ಅವರು ರೋಗದಿಂದ ಮುಕ್ತನಾಗಲಿ(ರಾಗಲಿ)

ಈ ಸತ್ಯವಚನದಿಂದಾಗಿ ನಾನೂ/ನೀನು/ಅವರು ರೋಗದಿಂದ ಮುಕ್ತನಾಗಲಿ(ರಾಗಲಿ)

ಈ ಸತ್ಯವಚನದಿಂದಾಗಿ ನಾನೂ/ನೀನು/ಅವರು ರೋಗದಿಂದ ಮುಕ್ತನಾಗಲಿ(ರಾಗಲಿ 

7. ಮೊಗ್ಗಲಾನರ ಹಿಂದಿನ ಜನ್ಮಗಳು

 7. ಮೊಗ್ಗಲಾನರ ಹಿಂದಿನ ಜನ್ಮಗಳು


     

ಜಾತಕ ಕಥೆಗಳ ಅನುಸಾರವಾಗಿ ಮೊಗ್ಗಲಾನರು ಭಗವಾನರಿಗೆ 31 ಜನ್ಮಗಳಿಂದ ಪರಿಚಿತರಾಗಿದ್ದರು ಅದರಲ್ಲಿ 30 ಜನ್ಮಗಳಲ್ಲಿ ಸಾರಿಪುತ್ತರೊಡನೆ ಮಿತ್ರುತ್ವವಿತ್ತು. ಅದರೆ ಜಾತಕ ಕಥೆಗಳ ಪ್ರಕಾರ ಅವರಿಗೆ ಬೋಧಿಸತ್ವರೊಡನೆ ಅತಿನಿಕಟ ಸ್ನೇಹವಿರುವುದು ಸ್ಪಷ್ಟವಾಗಿದೆ.

ಕೆಲವು ಜಾತಕದಲ್ಲಿ ಅವರು ಸೋದರರಾಗಿದ್ದರು.(488,509,543) ಕೆಲವು ಜಾತಕದಲ್ಲಿ ಮಿತ್ರರಾಗಿದ್ದರು.(326), ಕೆಲವು ಜಾತಕದಲ್ಲಿ ಮಂತ್ರಿಯು,(401), ಕೆಲವು ಜಾತಕಗಳಲ್ಲಿ ಶಿಷ್ಯರು(432,522) ಅದರೆ ಕೆಲವು ಜಾತಕಗಳಲ್ಲಿ ಗುರುಗಳು ಸಹಾ ಆಗಿದ್ದರು.(539), ಕೆಲವೊಮ್ಮೆ ಸೇನಾಧಿಪತಿ(525)ಹಾಗೆಯೇ ಸಹ ದೇವತೆಗಳು ಆಗಿದ್ದರು.(450)

      ಇನ್ನೂ ಸಾರಿಪುತ್ತರೊಡನೆ ಅವರ ಸಂಬಂಧ ಹೇಳುವುದಾದರೆ ಇಬ್ಬರೂ ಸಂಸಾರದ ಆಳ ಹಾಗೂ ಅಗಲಕ್ಕೂ ಜೊತೆಗೂಡಿ ಸಂಸಾರವನ್ನು ಕಂಡವರು. ಅವರು ಪ್ರಾಣಿಗಳಾಗಿ ಹುಟ್ಟಿರುವಾಗ ಸಾಧಾರಣವಾಗಿ ಸಮಾನವಾಗಿ ಇದ್ದರು. (160,187,215,476) ಹಾಗೇಯೇ ಸಾರಿಪುತ್ತರವರು ಅತಿ ಉನ್ನತ ಪ್ರಾಣಿಯಾಗಿರುವ ಸಂಧರ್ಭವೇ ಹೆಚ್ಚು.  ಹೇಳುವುದಾದರೇ ಹಾವೂ ಮತ್ತು ಹೆಗ್ಗಣ(37), ಮನುಷ್ಯ ಮತ್ತು ನರಿ(490), ಹಾವು ಮತ್ತು ನರಿ (315), ಹಾಗೇಯೇ ಮಾನವರಾಗಿ ಹುಟ್ಟಿರುವಾಗಲೂ ಸಾರಿಪುತ್ತರವರೇ ಸ್ವಲ್ಪ ಹೆಚ್ಚಿನ ಸ್ಥಾನದಲ್ಲಿದ್ದುದು ಕಂಡು ಬರುವುದು. ಉದಾಹರಿಸುವುದಾದರೆ ರಾಜಕುಮಾರ ಮತ್ತು ಮಂತ್ರಿ(525), ಮಂತ್ರಿ ಮತ್ತು ಗುಲಾಮನ ಮಗ(544), ಬೋಧಿಸತ್ವರ ಸಾರಥಿ ಹಾಗೂ ಆನಂದರ ಸಾರಥಿ(151), ಒಮ್ಮೆ ಮೊಗ್ಗಲಾನರು ದೇವನಾಗಿದ್ದರೆ ಸಾರಿಪುತ್ತರು ತಾಪಸಿ ನಾರದ ಆಗಿದ್ದರು(535), ಅದರೇ ತಾಪಸಿಗಳಾಗಿರುವಾಗ ಅಥವಾ ದೇವತೆಗಳಾಗಿರುವಾಗ ಅವರು ಸಮಾನರಾಗಿರುವುದು ಕಂಡು ಬರುತ್ತದೆ(450,545) ಕೇವಲ ಒಂದು ಬಾರಿ ಮಾತ್ರ ಮೊಗ್ಗಲಾನರು ಸಾರಿಪುತ್ತರ ಹೊರತಾಗಿ ಕಾಣಿಸಿಕೊಳ್ಳುತ್ತಾರೆ. 73ರ ಜಾತಕದಲ್ಲಿ ಅವರಿಬ್ಬರೂ ಜಿಪುಣರಾಗಿದ್ದು ಸಾವಿನ ನಂತರ ಆ ಐಶ್ವರ್ಯದ ಬಳಿಯಲ್ಲಿಯೇ ಹಾವು ಹಾಗೂ ಹೆಗ್ಗಣವಾಗಿ ಹುಟ್ಟುವರು.. ಅದರೆ ಜಾತಕ 78ರಲ್ಲಿ ಮೊಗ್ಗಲಾನರು ಸಕ್ಕರಾಗಿದ್ದು ತಮ್ಮ ವಂಶಜನಿಗೆ ಕಾಣಿಸಿಕೊಂಡು ಜಿಪುಣತನ ವಜರ್ಿಸಿ ದಾನಿಯಾಗಿರುವಂತೆ ಪ್ರೋತ್ಸಾಹಿಸುತ್ತಾರೆ. ಹಾಗೆಯೇ ಜಾತಕ 490 ರಲ್ಲಿ ದುರಾಸೆಯುತ ನರಿಯಾಗಿದ್ದು  ಆಹಾರಕ್ಕಾಗಿ ಆನೆಯ ಶವದಲ್ಲಿ ಹೊಕ್ಕು ಈಚೆಗೆ ಬಾರದೆ ಪರದಾಡುತ್ತದೆ. ಆಗ ಆಸೆಯ ಭೀಕರತೆ ಅರಿಯುತ್ತದೆ.

ಹಾಗೆಯೇ ಪ್ರಸಿದ್ಧವಾದ ಕುರುಧಮ್ಮ ಜಾತಕದಲ್ಲಿ ಮೊಗ್ಗಲಾನರು ಉಗ್ರಾಣದ ನಿರ್ವಹಕರಾಗಿದ್ದು ಸಾರಿಪುತ್ತರು ವ್ಯಾಪಾರಿಯಾಗಿರುತ್ತಾರೆ. ಅವರಿಬ್ಬರು ಯಾವುದೇ ರೀತಿಯ ಕಳ್ಳತನ, ಮೋಸಗಳಿಗೆ ಬಲಿಯಾಗದೇ ಅತ್ಯಂತ ಪ್ರಾಮಾಣಿಕರಾಗಿರುತ್ತಾರೆ.

  ಸಸ ಜಾತಕದಲ್ಲಿ ಬೋಧಿಸತ್ವರು ಮೊಲವಾಗಿದ್ದಾಗ ಮೊಗ್ಗಲಾನರು ನರಿಯಾಗಿದ್ದರು ಹಾಗೂ ಅವರು ಸಹಾ ಬೋಧಿಸತ್ವರನ್ನು ಕಂಡು ಉಪೂಸಥ ವ್ರತವನ್ನು ಆಚರಿಸುತ್ತಾರೆ.

ಹಾಗೂ ಕಕ್ಕಾರು ಜಾತಕದಲ್ಲಿ ಮೊಗ್ಗಲಾನರು ದೇವಪುತ್ರರಾಗಿರುತ್ತಾರೆ. 

 ಇಂದ್ರಿಯ ಜಾತಕದಲ್ಲಿ ಕಿಸವಚ್ಚರಾಗಿದ್ದರು. ಇಲ್ಲಿಸ ಜಾತಕದಲ್ಲಿ ಸಕ್ರನಾಗಿಯೂ, ಕುರುಂಗಮಿಗ ಹಾಗೂ ಮಹಾಉಕ್ಕುಸ ಜಾತಕದಲ್ಲಿ ಆಮೆಯಾಗಿಯೂ, ಖಂದಹಾಲ  ಜಾತಕದಲ್ಲಿ ಚಂದಸೇನನಾಗಿಯು, ಚೂಲಸುತಸೋಮ ಜಾತಕದಲ್ಲಿ ಸೇನಾಪತಿಯಾಗಿಯು, ಜವನಹಂಸ ಜಾತಕದಲ್ಲಿ ಪಕ್ಷಿಯಾಗಿಯೂ , ತಿತ್ತಿರ ಜಾತಕದಲ್ಲಿ ಆನೆಯಾಗಿಯೂ, ವಣ್ಣರೋಭ , ವ್ಯಾಘ್ಘ ಹಾಗೂ ಇನ್ನುಂದು ತಿತ್ತಿರ ಜತಕದಲ್ಲಿ ಹುಲಿಯಾಗಿಯೂ, ದಸಕಣ್ಣ ಜಾತಕದಲ್ಲಿ ಆಯುರನಾಗಿಯು, ಭೂರಿದತ್ತ ಜಾತಕದಲ್ಲಿ ಸುಭಾಗನಾಗಿಯು, ಮಹಾಜನಕ ಜಾತಕದಲ್ಲಿ ಮಿಗಜಿನನಾಗಿಯು, ಮಹಾ ನಾರದ ಕಸ್ಸಪ ಜಾತಕದಲ್ಲಿ ಬಿಜಕನಾಗಿಯು, ರಾಜೋವಾದ ಜಾತಕದಲ್ಲಿ ಸಾರಥಿಯಾಗಿಯು, ವಿದುರ ಪಂಡಿತ ಜಾತಕದಲ್ಲಿ ಗರುಲ ರಾಜನಾಗಿಯು, ಹತ್ಥಿಪಾಲ ಜಾತಕದಲ್ಲಿ ಗೋಪಾಲನಾಗಿಯು ಮತ್ತು ಶುಧಭೋಜನ ಜಾತಕದಲ್ಲಿ ಚಂದನಾಗಿಯು ಆವರು ಜನ್ಮ ತಾಳಿದ್ದರು.

- ಂ0ಂ  

6. ಇದ್ದಿ ಶಕ್ತಿಗಳಿಂದ ಪರರ ಕ್ಲೇಶಗಳ ದಮನ

 6. ಇದ್ದಿ ಶಕ್ತಿಗಳಿಂದ ಪರರ ಕ್ಲೇಶಗಳ ದಮನ



6.1 ಪರಪಂಥದ ನಾಯಕ ಅಗ್ಗಿದತ್ತನ ಮೋಹ ದಮನ 

ಕೋಸಲ ರಾಜ್ಯದಲ್ಲಿ ಅಗ್ಗಿದತ್ತನೆಂಬ ರಾಜಪುರೋಹಿತನಿದ್ದನು. ಕೋಸಲದ ದೊರೆ ಮಹಾಕೋಸಲನು ನಿಧನನಾದಾಗ, ಪಸೇನದಿಯು ಮಹಾರಾಜನಾದನು. ತಂದೆಯ ಮೇಲಿನ ಗೌರವದಿಂದಾಗಿ ಆತನು ಅಗ್ಗಿದತ್ತನಿಗೆ ಪುನಃ ರಾಜಪುರೋಹಿತನನ್ನಾಗಿಸಿದನು. ರಾಜನು ಅಗ್ಗಿದತ್ತನಿಗೆ ಅಪಾರ ಗೌರವ ನೀಡುತ್ತಿದ್ದನು. ಗುರುಗಳೇ ಬನ್ನಿ, ಕುಳಿತುಕೊಳ್ಳಿ ಎಂದೆಲ್ಲಾ ಸಂಬೋಧಿಸಿ ಗೌರವ ನೀಡುತ್ತಿದ್ದನು. ಕೆಲದಿನಗಳ ನಂತರ ಅಗ್ಗಿದತ್ತ ಈ ರೀತಿ ಚಿಂತಿಸಿದನು. ಈ ರಾಜನು ನನಗೆ ಅಪಾರ ಗೌರವ ನೀಡುತ್ತಿರುವನು. ಆದರೆ ಇದೇರೀತಿಯಲ್ಲಿ ರಾಜರ ಕೃಪೆಯಲ್ಲಿ ಉಳಿಯುವುದು ಅಸಾಧ್ಯದ ವಿಷಯವಾಗಿದೆ. ರಾಜನ ಕೃಪೆಯಿಂದಾಗಿ ಗೃಹಸ್ಥ ಜೀವನವು ಸುಮಧುರ. ಆದರೆ ಅದು ಯುವಕನಾಗಿದ್ದರೆ ಮಾತ್ರ, ಸಮಾನ ವಯಸ್ಕನಾಗಿದ್ದರೆ ಮಾತ್ರ ಸಮಂಜಸವಾದುದು, ನಾನಾದರೂ ವೃದ್ಧನಾಗಿದ್ದೇನೆ. ಆದ್ದರಿಂದ ನಾನು ಸಾಧುವಾಗಿ ಬಿಡುತ್ತೇನೆ ಎಂದು ಆತನು ರಾಜನಲ್ಲಿ ಅಪ್ಪಣೆ ಪಡೆದು, ತನ್ನ ಐಶ್ವರ್ಯವನ್ನು ಒಂದುವಾರ ಕಾಲ ದಾನಮಾಡಿ, ಆತನು ಲೌಕಿಕ ಜೀವನದಿಂದ ನಿವೃತ್ತನಾದನು, ಸಮಣನಾದನು. ಆತನಿಗೂ ಅಪಾರ ಶಿಷ್ಯರು ಸಿಕ್ಕಿದರು. 

ಅಗ್ಗಿದತ್ತನು ಅಂಗ, ಮಗಧ, ಕುರು ರಾಜ್ಯಗಳ ಗಡಿಪ್ರದೇಶದಲ್ಲಿ ವಾಸವಾಗಿದ್ದನು. ಆತನ ವಾಸಸ್ಥಳವು ಈ ಮೂರು ರಾಜ್ಯಗಳನ್ನು ಸೇರಿತ್ತು. ಆತನು ತನ್ನ ಅನುಯಾಯಿಗಳಿಗೆ ಈ ರೀತಿ ಬೋಧನೆ ಮಾಡಿದನು: ಮಿತ್ರರೇ, ನಿಮ್ಮಲ್ಲಿ ಕಾಮಯುತ ಯೋಚನೆಯಾಗಲಿ, ದುರಾಸೆಯುತ ಯೋಚನೆಯಾಗಲಿ, ಕ್ರೂರಯುತ ಯೋಚನೆಯಾಗಲಿ, ದ್ವೇಷಯುತ ಯೋಚನೆಗಳು ಉಂಟಾದರೆ ನೀವು ನದಿಯ ಮಣ್ಣನ್ನು ಹೂಜಿಯಲ್ಲಿ ತುಂಬಿ, ಇಲ್ಲಿ ಚೆಲ್ಲಿ ಅವನ್ನು ಬರಿದು ಮಾಡಬೇಕು ಎಂದು ಆಜ್ಞಾಪಿಸಿದರು. ಆ ಮೂಢರು ಅದರಂತೆ ತಮ್ಮಲ್ಲಿ ಕೆಟ್ಟ ಆಲೋಚನೆ ಹೊಮ್ಮಿದಂತೆಲ್ಲಾ ನದಿಯಿಂದ ಮಣ್ಣನ್ನು ತಂದು ತಂದು ಆತನಿರುವ ಸ್ಥಳದಲ್ಲಿ ಸುರಿಯುತ್ತಿದ್ದರು. ಹೀಗಾಗಿ ಅಲ್ಲಿ ಒಂದು ಸಣ್ಣ ಗುಡ್ಡವೇ ನಿಮರ್ಾಣವಾಗಿತ್ತು. ಆತನ ಈ ಕೃತ್ಯದಿಂದ ಉತ್ತೇಜಿತರಾದ ಭಕ್ತಾಧಿಗಳು ಆತನಿಗೆ ಅಪಾರ ಕಾಣಿಕೆಗಳನ್ನು ನೀಡಲು ಆರಂಭಿಸಿದರು. 

ಆಗ ಆತನು ಅವರಿಗೆ ಇನ್ನೊಂದು ಶಿಕ್ಷಣ ನೀಡಲು ನಿರ್ಧರಿಸಿದನು. ಆತನು ತನ್ನ ಹಿಂಬಾಲಕರಿಗೆ ಹೀಗೆ ಆಜ್ಞಾಪಿಸಿದನು: ನೀವುಗಳೆಲ್ಲಾ ಪರ್ವತಗಳಿಗೆ, ಬೆಟ್ಟಗಳಿಗೆ ಶರಣು ಹೋಗಿರಿ, ಕಾಡಿಗೆ ಶರಣು ಹೋಗಿ, ತೋಪಿಗೆ ಶರಣು ಹೋಗಿ, ವೃಕ್ಷಗಳಿಗೆ ಶರಣುಹೋಗಿ, ಆಗ ನೀವು ಎಲ್ಲಾ ದುಃಖಗಳಿಂದ ಮುಕ್ತರಾಗುವಿರಿ. ಆತನ ದಡ್ಡ ಶಿಷ್ಯರು ಅದರಂತೆಯೇ ಆಚರಿಸತೊಡಗಿದರು. ಒಂದುದಿನ ಮುಂಜಾನೆ ಭಗವಾನರು ಮಹಾಕರುಣಾ ಸಮಾಪತ್ತಿಯಲ್ಲಿ ಅರಹಂತರಾಗಲು ಅರ್ಹತೆಯಿರುವ ವ್ಯಕ್ತಿಗಳನ್ನು ಹುಡುಕುವಾಗ ಅವರಿಗೆ ಅಗ್ಗಿದತ್ತ ಮತ್ತು ಆತನ ಶಿಷ್ಯರು ಕಾಣಿಸಿಕೊಂಡರು. ಆಗ ಅವರು ಪೂಜ್ಯ ಮೊಗ್ಗಲ್ಲಾನರವರಿಗೆ ಕರೆಸಿ ಹೀಗೆ ಹೇಳಿದರು: ಮೊಗ್ಗಲ್ಲಾನ, ಈ ಅಗ್ಗಿದತ್ತ ಬೃಹತ್ ಸಮೂಹಕ್ಕೆ ದಾರಿ ತಪ್ಪಿಸುತ್ತಿದ್ದಾನೆ ಹೊರತು ಯೋಗ್ಯ ಪಥಕ್ಕೆ ಕರೆದೊಯ್ಯುತ್ತಿಲ್ಲ. ಆತನಿಗೆ ಜ್ಞಾನೋದಯವನ್ನುಂಟು ಮಾಡು. ಆಗ ಮೊಗ್ಗಲ್ಲಾನರು ಹೀಗೆ ಹೇಳಿದರು: ಭಗವಾನ್, ಆತನಿಗೆ ಇಲ್ಲಿ ಅಪಾರ ಅನುಯಾಯಿಗಳಿದ್ದಾರೆ, ನಾನು ಒಬ್ಬನೇ ಹೋದರೆ ಅವರು ಅವಿಧೇಯರಾಗಿ ಅನಾಹುತ ಮಾಡಬಹುದೆಂದು ಭಾವಿಸುತ್ತೇನೆ. ಆದರೆ ನೀವು ಹೋದರೆ ಅವರೆಲ್ಲಾ ವಿಧೇಯರಾಗಬಹುದು.

ಮೊಗ್ಗಲ್ಲಾನ ನಾನೂ ಬರುವೆ, ಆದರೆ ಮೊದಲು ನೀನೇ ಹೋಗುವವನಾಗು.

ದಾರಿಯಲ್ಲಿ ಮೊಗ್ಗಲ್ಲಾನರು ಹೀಗೆ ಚಿಂತನೆ ಮಾಡಿದರು: ಈತನಿಗೆ ಇಲ್ಲಿ ಆಪಾರ ಶಿಷ್ಯರಿದ್ದಾರೆ. ಅವರಿಗೆ ಅಪ್ರಿಯವಾಗಿ ಒಂದು ಪದವನ್ನು ಹೇಳಿದರೂ ಸಹಾ, ಅವರು ನನ್ನ ಮೇಲೆ ಸೈನ್ಯದಂತೆ ಬೀಳುತ್ತಾರೆ. ಆದ್ದರಿಂದ ನಾನು ಅತೀಂದ್ರಿಯ ಶಕ್ತಿಯಿಂದ ಭಾರಿ ಮಳೆಯನ್ನೇ ಸೃಷ್ಟಿಸುವೆ ಎಂದು ಮಹಾಮೊಗ್ಗಲ್ಲಾನರು ಹಿಂಸೆ, ವಾದವಿವಾದ ಇಷ್ಟವಿಲ್ಲದೆ ಭಾರಿ ಮಳೆಯನ್ನು ಸುರಿಸಿದರು. ಆಗ ಅಗ್ಗಿದತ್ತನ ಅನುಯಾಯಿಗಳೆಲ್ಲಾ ಒಬ್ಬೊಬ್ಬರಂತೆ ತಮ್ಮ ಕುಟೀರವನ್ನು ಸೇರಿದರು. ಆಗ ಪರಮಪೂಜ್ಯ ಮಹಾಮೊಗ್ಗಲ್ಲಾನರು ಅಗ್ಗಿದತ್ತನ ಬಾಗಿಲಿನ ಬಳಿ ನಿಂತುಕೊಂಡು ಅಗ್ಗಿದತ್ತ ಎಂದು ಕೂಗಿದರು. ಆಗ ಅಗ್ಗಿದತ್ತನಿಗೆ ಆಶ್ಚರ್ಯವಾಯಿತು. ಆತನಿಗೆ ಈವರೆಗೆ ಯಾರು ಸಹಾ ಹೀಗೆ ಹೆಸರಿಡಿದು ಕೂಗಿರಲಿಲ್ಲ. ಆತನ ಅಹಂಕಾರ ಕೆರಳಿದಂತಾಗಿ ಯಾರದು? ಎಂದನು. 

ನಾನು ಬ್ರಾಹ್ಮಣ.

ಏತಕ್ಕಾಗಿ ಕರೆದಿದ್ದು.

ನನಗೆ ರಾತ್ರಿ ಕಳೆಯುವುದಕ್ಕಾಗಿ ದಯವಿಟ್ಟು ಸ್ಥಳವನ್ನು ತೋರಿಸಿ.

ಇಲ್ಲಿ ಉಳಿಯುವುದಕ್ಕಾಗಿ ಸ್ಥಳವಿಲ್ಲ, ಕೇವಲ ಸಮಣನಿಗಾಗಿ ಒಂದೇ ಕುಟೀರವಿದೆ.

ಅಗ್ಗಿದತ್ತ, ಮಾನವ ಮಾನವರ ಮನೆಗೆ ಹೋಗುತ್ತಾನೆ, ದನಗಳು ದನಗಳ ಕೊಟ್ಟಿಗೆಗೆ ಹೋಗುತ್ತವೆ. ಸಮಣರು ಸಮಣರ ಕುಟೀರಕ್ಕೆ ಹೋಗುವರು. ಆದ್ದರಿಂದ ನಿರಾಕರಿಸದೆ ಇರಲು ಸ್ಥಳವನ್ನು ನೀಡುವವನಾಗು.

ನೀನು ಸಮಣನೇ?

ಹೌದು.

ಹಾಗಾದರೆ ನಿಮ್ಮ ಪಿಂಡಪಾತ್ರೆ ಎಲ್ಲಿ ?

ನನ್ನಲ್ಲಿ ಪಿಂಡಪಾತ್ರೆ ಇದೆ, ಆದರೆ ಪ್ರಯಾಣದಲ್ಲಿ ತೊಂದರೆಯಾಗುವುದೆಂದು ಬಿಟ್ಟು ಬಂದಿದ್ದೇನೆ. ಅಗ್ಗಿದತ್ತ ಕೋಪಗೊಳ್ಳಬೇಡ, ನಾನು ರಾತ್ರಿ ಕಳೆಯುವುದಕ್ಕಾಗಿ ಸ್ಥಳವನ್ನು ತೋರಿಸು.

ಇಲ್ಲಿ ಯಾವ ಸ್ಥಳವೂ ಮಲಗಲಿಕ್ಕಾಗಿ ಇಲ್ಲ.

ಸರಿ, ಆ ಮರಳಿನ ರಾಶಿಯಲ್ಲಿ ಯಾರು ಜೀವಿಸುತ್ತಿದ್ದಾರೆ.

ಅಲ್ಲಿ ನಾಗರಾಜನು (ದಿವ್ಯಸರ್ಪ) ವಾಸಿಸುತ್ತಿದ್ದಾನೆ.

ನನಗೆ ಆ ಮರಳಲ್ಲಿ ನೆಲೆ ನೀಡಬಲ್ಲಿರಾ?

ನಾನು ಆ ಮರಳನ್ನು ನೀಡಲಾರೆ, ಅದು ಆ ನಾಗರಾಜನಿಗೆ ಭಾರಿ ಅಪಮಾನ ಮಾಡಿದಂತೆ ಆಗುವುದು.

ಪರವಾಗಿಲ್ಲ, ನನಗೆ ನೀಡಿ.

ಸರಿ ನಿಮಗೆ ಗೊತ್ತಾಗುವುದು ಎಂದನು ಅಗ್ಗಿದತ್ತ.

ಆಗ ಪರಮಪೂಜ್ಯ ಮೊಗ್ಗಲ್ಲಾನರು ಆ ಮರಳಿನ ರಾಶಿಯೆಡೆಗೆ ನಡೆಯಲು ಆರಂಭಿಸಿದರು. ಆಗ ನಾಗರಾಜನಿಗೆ ಮೊಗ್ಗಲ್ಲಾನರು ತನ್ನಡೆಗೆ ಬರುತ್ತಿರುವುದು ಕಾಣಿಸಿತು. ಆಗ ನಾಗರಾಜನು ಹೀಗೆ ಯೊಚಿಸಿದನು: ಈ ಭಿಕ್ಷುವು ಇಲ್ಲಿಗೆ ಸಮೀಪಿಸುತ್ತಿದ್ದಾನೆ, ಆತನಿಗೆ ನಾನಿರುವುದು ತಿಳಿದಿಲ್ಲ, ನಾನು ಆತನಿಗೆ ಬೆಂಕಿ ಉಗುಳಿ ಕೊಲ್ಲುತ್ತೇನೆ. ಆಗ ಮೊಗ್ಗಲ್ಲಾನರು ಆ ನಾಗರಾಜನ ಚಿತ್ತವನ್ನು ಓದಿ, ಅರಿತುಕೊಂಡು ಆತನಂತೆಯೇ ಅವರು ಬೆಂಕಿ ಉಗುಳಿದರು. ಇಬ್ಬರೂ ಪರಸ್ಪರ ಬೆಂಕಿ ಮತ್ತು ಹೊಗೆ ಉಗುಳಿದರು. ಆ ಬೆಂಕಿ ಮತ್ತು ಹೊಗೆಯಿಂದ ಮೊಗ್ಗಲ್ಲಾನರವರಿಗೆ ಏನೂ ಆಗಲಿಲ್ಲ. ಆದರೆ ಮೊಗ್ಗಲ್ಲಾನರ ಬೆಂಕಿ ಮತ್ತು ಹೊಗೆಯನ್ನು ನಾಗರಾಜನು ತಡೆದುಕೊಳ್ಳಲಾಗಲಿಲ್ಲ. ಏಕೆಂದರೆ ಮಹಾಮೊಗ್ಗಲ್ಲಾನರು ತೇಜೋ ಕಸಿಣಾ ಧ್ಯಾನವನ್ನು ಸಿದ್ಧಿಪಡೆದಿದ್ದರು. ಹೀಗಾಗಿ ಅವರು ಬೆಂಕಿ ಉಗುಳಿದರೆ ಅದು ಬ್ರಹ್ಮಲೋಕದವರೆಗೂ ವ್ಯಾಪಿಸುತ್ತಿತ್ತು. ಅವರು ತೇಜೋಕಸಿನಾ ಧ್ಯಾನದಲ್ಲಿ ಕ್ಷಣದಲ್ಲಿ ಚತುರ್ಥಧ್ಯಾನ ತಲುಪಿ ನಂತರ ತೀಕ್ಷ್ಣವಾಗಿ ಅಗ್ನಿಯನ್ನು ಉಗುಳುತ್ತಿದ್ದರು. ಆಗ ಅವರ ಶರೀರವಿಡೀ ಬೆಂಕಿಯಿಂದ ಆವೃತವಾಗಿರುವಂತೆ ಕಾಣಿಸುತ್ತಿತ್ತು. ಆಗ ಅಗ್ಗಿದತ್ತ ಮತ್ತು ಆತನ ಅನುಯಾಯಿಗಳು ಮೊಗ್ಗಲ್ಲಾನರನ್ನು ಆ ನಾಗರಾಜನು ಸುಡುತ್ತಿದ್ದಾನೆ ಎಂದು ಭಾವಿಸಿದರು. ನಮ್ಮ ಮಾತು ಕೇಳದೆ ಆತನು ನಾಶವಾದನಲ್ಲ ಎಂದು ವ್ಯಥೆಪಟ್ಟರು. ಆದರೆ ಅವರು ಭಯದಿಂದ ಹೊರಬರಲಿಲ್ಲ. ಆದರೆ ಮೊಗ್ಗಲ್ಲಾನರವರು ನಾಗರಾಜನನ್ನು ದಮಿಸಿಬಿಟ್ಟರು. ಆತನು ಶರಣಾಗತನಾದನು. ತಾನು ಮಾಡುತ್ತಿದ್ದ ಕುಕಾರ್ಯ ನಿಲ್ಲಿಸಿ ಶರಣು ಹೊಂದಿದನು. ಈಗ ಮೊಗ್ಗಲ್ಲಾನರವರು ಮರಳುರಾಶಿಯ ಮೇಲೆ ಕುಳಿತರು. ನಂತರ ನಾಗರಾಜನು ಅವರಿಗೆ ತಿಂಡಿ ತಿನಿಸು ಮುಂದಿಟ್ಟು, ನಂತರ ಅವರಿಗೆ ಛತ್ರಿ ಹಿಡಿಯುವಂತೆ ತನ್ನ ವಿಶಾಲವಾದ ಹೆಡೆಯನ್ನು ವಿಕಸಿಸಿ, ಪೂಜ್ಯ ಮೊಗ್ಗಲ್ಲಾನರವರ ತಲೆಯ ಮೇಲೆ ನೆರಳು ನೀಡುವಂತೆ ಚಾಚಿದನು.

ಮುಂಜಾನೆ ಅಗ್ಗಿದತ್ತ ಮತ್ತು ಇನ್ನಿತರ ಋಷಿಗಳು ಮೊಗ್ಗಲ್ಲಾನರವರು ಬದುಕಿರುವರೋ ಅಥವಾ ಇಲ್ಲವೋ ಎಂದು ಪರೀಕ್ಷಿಸಲು ಬಂದರು. ಆದರೆ ಅವರಿಗೆ ಆಶ್ಚರ್ಯವಾಯಿತು. ಮೊಗ್ಗಲ್ಲಾನರು ಕುಳಿತೇ ಇದ್ದರು ಮತ್ತು ನಾಗರಾಜನು ಅವರ ತಲೆಯ ಮೇಲೆ ಹಡೆಯಾಡಿಸುತ್ತ ಅವರಿಗೆ ನೆರಳು ನೀಡುತ್ತಾ ಇದ್ದನು. ಓಹ್! ಈ ಭಿಕ್ಷುವು ಪ್ರಬಲವಾದ ನಾಗರಾಜನನ್ನೇ ಜಯಿಸಿದ್ದಾನೆ ಎಂದು ಆತನನ್ನು ಅಭಿನಂದಿಸುತ್ತಾ ಆತನ ಸುತ್ತಲೂ ನಿಂತರು.

ಅದೇ ಸಮಯದಲ್ಲಿ ಭಗವಾನರು ಅತ್ತಲಿಂದ ಬರುತ್ತಿದ್ದರು. ತಕ್ಷಣ ಮೊಗ್ಗಲ್ಲಾನರು ಅವರಿಗೆ ವಂದಿಸಿದರು. ಇವರು ನಿಮಗಿಂತ ಶ್ರೇಷ್ಠರೇ? ಎಂದು ಅಗ್ಗಿದತ್ತ ಕೇಳಿದಾಗ, ಇವರೇ ಮಹಾಮಹೀಮರಾದ ಬುದ್ಧರು, ಸಮ್ಮಾಸಂಬೋಧಿ ಪಡೆದವರು, ನಿಬ್ಬಾಣಕ್ಕೆ ಮಾರ್ಗದಶರ್ಿಯೂ. ನಾನು ಕೇವಲ ಅವರ ಶಿಷ್ಯನಷ್ಟೇ ಆಗಿದ್ದೇನೆ. ನಂತರ ಭಗವಾನರು ಆಸನದಲ್ಲಿ ಕುಳಿತರು. ಆಗ ಅಗ್ಗಿದತ್ತ ಮತ್ತು ಇತರ ಋಷಿಗಳು ಹೀಗೆ ಮಾತನಾಡಿಕೊಂಡರು. ಕೇವಲ ಶಿಷ್ಯನ ಅತೀಂದ್ರಿಯ ಸಾಮಥ್ರ್ಯ ಹೀಗಿರಬೇಕಾದರೆ ಅವರ ಗುರುಗಳಾದ ಬುದ್ಧರ ಸಾಮಥ್ರ್ಯ ಹೇಗಿರಬೇಕು! ಎಂದು ಯೋಚಿಸಿ ಶ್ರದ್ಧೆಯುಳ್ಳವರಾದರು. ಭಗವಾನರಿಗೆ ವಂದಿಸಿದರು. ಆಗ ಭಗವಾನರು ಅಗ್ಗಿದತ್ತನಿಗೆ ನಿನ್ನ ಶಿಷ್ಯರಿಗೆ ಏನೆಂದು ಉಪದೇಶ ನೀಡುವೆ ಎಂದು ವಿಚಾರಿಸಿದಾಗ, ಆತನು ಬೆಟ್ಟ, ಮರ, ಮಂದಿರಗಳಿಗೆ ಶರಣು ಹೋದರೆ ಒಬ್ಬನು ದುಃಖದಿಂದ ಮುಕ್ತರಾಗುವರು ಎಂದು ಹೇಳಿದ್ದೇನೆ ಎಂದನು.

ಯಾವಾಗ ಭಯವು ಪೀಡಿಸುವುದೋ ಆಗ ಬಹಳಷ್ಟು ಮಾನವನು ಬೆಟ್ಟಗಳಿಗೆ, ಕಾಡುಗಳಿಗೆ, ಮರಗಳಿಗೆ, ಮಂದಿರಗಳಿಗೆ, (ಪೂಜಾ ಸ್ಥಳಗಳಿಗೆ) ಶರಣು ಹೋಗುತ್ತಾರೆ. (188)

ಆದರೆ ಅಂತಹ ಯಾವ ಶರಣು ಕ್ಷೇಮಕರವಲ್ಲ ಮತ್ತು ಅಂತಹ ಯಾವುದೂ ಉತ್ತಮ ಶರಣು ಅಲ್ಲ! ಅಂತಹ ಶರಣುವಿನಿಂದ ಯಾರೊಬ್ಬರೂ ದುಃಖಗಳಿಂದ ಮುಕ್ತರಾಗಲು ಸಾಧ್ಯವಿಲ್ಲ. (189)

ಆದರೆ ಯಾರು ಬುದ್ಧರಲ್ಲಿ, ಧಮ್ಮದಲ್ಲಿ ಮತ್ತು ಸಂಘದಲ್ಲಿ ಶರಣು ಹೋಗುವರೋ ಅಂತಹವರು ಮಾತ್ರ ಸಮ್ಮಾ ಪ್ರಜ್ಞಾದಿಂದಾಗಿ ನಾಲ್ಕು ಆರ್ಯಸತ್ಯಗಳನ್ನು ಅರಿಯುತ್ತಾರೆ.   (190)

ಅದೆಂದರೆ ದುಃಖ ಸತ್ಯ, ದುಃಖ ಸಮುದಾಯ ಸತ್ಯ (ಕಾರಣ) ದುಃಖ ನಿರೋಧ ಸತ್ಯ ಮತ್ತು ಆರ್ಯ ಅಷ್ಠಾಂಗಿಕ ಮಾರ್ಗ ಸತ್ಯ, ಇವುಗಳನ್ನು ಅರಿಯುತ್ತಾರೆ. (191)

ಇಂತಹ ಶರಣು ಕ್ಷೇಮಕರವಾಗಿದೆ, ಇಂತಹ ಶರಣು ಉತ್ತಮೋತ್ತಮವಾಗಿದೆ, ಇಂತಹ ಶರಣುವಿನಲ್ಲಿ ಶರಣು ಹೋದಾಗ ದುಃಖವೆಲ್ಲದರಿಂದ ಮುಕ್ತರಾಗಬಹುದು. (192)

ಆಗ ಭಗವಾನರು ಆತನಿಗೆ ಈ ಮೇಲಿನ ಗಾಥೆಗಳನ್ನು ನುಡಿದು ತಿದ್ದಿದರು. ನಂತರದ ಸುತ್ತದ ಅಂತ್ಯದಲ್ಲಿ ಅವರೆಲ್ಲಾ ಅರಹಂತರಾದರು. ಜೊತೆಗೆ ಅತೀಂದ್ರಿಯ ಶಕ್ತಿಗಳನ್ನು ಹೊಂದಿದರು. ನಂತರ ಭಿಕ್ಷುಗಳಾಗಿ, ಭಗವಾನರನ್ನು ಹಿಂಬಾಲಿಸಿ ಬರುತ್ತಿದ್ದರು. ಆಗ ಇವರನ್ನು ಕಂಡ ಜನರಲ್ಲಿ ಗೊಂದಲ ಉಂಟಾಯಿತು. ಏನೆಂದರೆ: ಅಗ್ಗಿದತ್ತ ಋಷಿಯು ಶ್ರೇಷ್ಠನೋ ಅಥವಾ ಬುದ್ಧ ಭಗವಾನರು ಶ್ರೇಷ್ಠರೋ? ಎಂದು.

ಆಗ ಭಗವಾನರಿಗೆ ಅವರ ಗೊಂದಲು ಅರ್ಥವಾಯಿತು. ಅವರು ಅಗ್ಗಿದತ್ತನಿಗೆ ಅಗ್ಗಿದತ್ತ, ನಿನ್ನ ಶಿಷ್ಯರ ಸಂದೇಹ ನಿವಾರಿಸು ಎಂದರು. ಆಗ ಅವರಿಗೂ ಪರಿಸ್ಥಿತಿ ಅರ್ಥವಾಗಿ ಆತನೂ ತನ್ನ ಅತೀಂದ್ರಿಯ ಶಕ್ತಿಯಿಂದಾಗಿ ಏಳುಬಾರಿ ಆಕಾಶಕ್ಕೆ ಹಾರಿ ನಂತರ ಭಗವಾನರ ಪಾದದಡಿ ಶಿರಬಾಗಿ ವಂದಿಸಿ ಇವರೇ ನನ್ನ ಗುರುಗಳು, ನಾನು ಇವರ ಶಿಷ್ಯ ಮಾತ್ರನಾಗಿದ್ದೇನೆ, ಇವರಿಂದಲೇ ನಾನು ಸಮ್ಮಾದೃಷ್ಟಿ ಪಡೆದಿದ್ದೇನೆ, ಮಿಥ್ಯ ಶರಣುಗಳನ್ನು ತೊರೆದಿದ್ದೇನೆ, ಅವರ ಅನುಗ್ರಹದಿಂದಲೇ ಅರಹಂತನು, ಅತೀಂದ್ರಿಯ ಶಕ್ತಿವಂತನು ಆಗಿದ್ದೇನೆ ಎಂದು.

6.2 ಜಿಪುಣಾಗ್ರೇಸನ ಲೋಭ ದಮನ

ಒಂದು ದಿನ ಭಗವಾನರು ಮುಂಜಾನೆ ಮಹಾಕರುಣಾ ಸಮಾಪತ್ತಿಯಲ್ಲಿ ಇಂದು ಯಾರು ಜ್ಞಾನೋದಯವನ್ನು ಪಡೆಯುವರು ಎಂದು ವೀಕ್ಷಿಸುವಾಗ ಅವರಿಗೆ ರಾಜಗೃಹದ ಬೆಲ್ಲವೆಂಬ ಪಟ್ಟಣದ ಶ್ರೇಷ್ಟಿಯು ಕಂಡು ಬಂದನು. ಆತನು ಮಹಾ ಜಿಪುಣನಾಗಿದ್ದನು. ಆತನು ಕೇವಲ ಬೋಧನೆಯಿಂದ ಬದಲಾಗುವುದಿಲ್ಲ ಜೊತೆಗೆ ಇದ್ದಿಶಕ್ತಿಯು ಅವಶ್ಯಕ ಎಂದು ಅವರಿಗೆ ತಿಳಿಯಿತು. ಹೀಗಾಗಿ ಇದಕ್ಕೆ ಬಹು ಸಮರ್ಥ ಕೇವಲ ಮೊಗ್ಗಲಾನರೇ ಸರಿ ಎಂದು ನಿರ್ಧರಿಸಿ ಅವರು ಮೊಗ್ಗಲಾನರವರಿಗೆ ಕರೆಸಿ  ಆ ದಿನವೇ  ಶ್ರೇಷ್ಟಿಯನ್ನು ಪರಿವತರ್ಿಸಿ ಆತನಿಂದ ದಾನವನ್ನು ಬುಧ್ಧರ ಸಹಿತ ಭಿಕ್ಖುಸಂಘಕ್ಕೆ ನೀಡುವಂತೆ ಮಾಡಬೇಕೆಂದು ಹೇಳಿದರು. ಇದರಿಂದಾಗಿ ಶ್ರೇಷ್ಟಿಗೆ ಆಪಾರ ಪುಣ್ಯವು ಸಿಗುವುದೆಂದು ಹಾಗೇ ಲೋಕೋತ್ತರ ಫಲಪ್ರಾಪ್ತಿಗೂ ಸಹಾಯವಾಗುವುದು ಎಂದು ಅವರು ಹಾಗೇ ನುಡಿದರು. ಹಾಗೆ ಮಾಡಲು ಮೊಗ್ಗಲಾನರು ಒಪ್ಪಿದರು.  

ಆ ದಿನ ಬೆಳಿಗ್ಗೆ ಶ್ರೇಷ್ಟಿಯು ದಾರಿಯಲ್ಲಿ ಒಬ್ಬ ಹಳ್ಳಿಯವನು ಕಜ್ಜಾಯದಂತಹ ಸಿಹಿ ತಿಂಡಿಯನ್ನು ತಿನ್ನುವುದನ್ನು ಕಂಡನು. ಆತನಲ್ಲಿ ರಸತೃಷ್ಣೆಯು ಆರಂಭವಾಯಿತು.. ಹೀಗಾಗಿ ಆತನಿಗೆ ಬೇರೆ ಯಾವ ವಿಷಯದಲ್ಲೂ ಆಸಕ್ತಿಯು ಇಲ್ಲದಂತಾಯಿತು. ಅದರೆ ಅದನ್ನು ಮನೆಯಲ್ಲಿ ಮಾಡಿಸಿದರೆ ಪರರಿಗೂ ಕೊಡಬೇಕಾಗುತ್ತದೆ. ಇದರಿಂದ ಹಣವು ನಷ್ಟವಾಗುತ್ತದೆ ಎಂದು ಆತನು ಯಾರಿಗೂ ಹೇಳಲಾರದೆ ಹಾಗೆಯೇ ಆಸೆಯನ್ನು ಬಿಡಲಾರದೇ ಕ್ಷೊಭೆಯನ್ನು ಅನುಭವಿಸಿದನು. 

ಈತನ ಪರಿಸ್ಥಿತಿಯನ್ನು ಕಂಡು ಆತನ ಹೆಂಡತಿಯು ಉಪಾಯವಾಗಿ ಮಾತಾನಾಡಿಸಿ ವಿಷಯವನ್ನು ಹೊರಹಾಕಿಸಿದಳು. ಹಾಗೂ ಇಷ್ಟೆನಾ ಮನೆಯಲ್ಲಿ ಮಾಡಿದರಾಯಿತು ಎಂದು ಹೇಳಲು ಆತನು ಒಪ್ಪಲಿಲ್ಲ ಕೇವಲ ತನಗಾಗಿಯೇ ಮಾಡಬೇಕೆಂದು ಕರಾರು ಹಾಕಿದನು. ಅದಕ್ಕೆ ಒಪ್ಪಿದ ಆತನ ಹೆಂಡತಿಯು ಆತನನ್ನು  ಮಹಡಿಯ ಮೇಲಕ್ಕೆ ಕರೆದೂಯ್ದು ಎಲ್ಲಾ ಚಿಲಕವನ್ನು ಹಾಕಿ ಅಲ್ಲಿ ಅಡುಗೆಯನ್ನು ಆರಂಭಿಸಿದಳು. 

ಇನ್ನೇನು ತಟ್ಟೆಗೆ ಹಾಕಬೇಕು ಎನ್ನುವಷ್ಟರಲ್ಲಿ ಅಲ್ಲಿ ಆಕಾಶದಲ್ಲಿ ಮೊಗ್ಗಲಾನರು ಪ್ರತ್ಯಕ್ಷರಾದರು. ಅವರನ್ನು ಕಂಡ ಶ್ರೇಷ್ಟಿಯು ಗಾಬರಿಯಾದನು ,ಇಂತಹವರಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದರೇ ಇಲ್ಲು ಸಹಾ ನಿರಾಳವಿಲ್ಲವಲ್ಲ ಎಂದು ಭಾವಿಸಿ ಆತನು ಮೊಗ್ಗಲಾನರಿಗೆ ಹೀಗೆ ಹೇಳೀದನು ಓ ಸಮಣನೇ ಆಕಾಶದಲ್ಲಿ ನಿಂತ ಮಾತ್ರಕ್ಕೆ ನಿಮಗೆ ಆಹಾರ ಸಿಗುವುದು ಎಂದು ಭಾವಿಸಿದಿರಾ, ಆ ಆಕಾಶದಲ್ಲೇ ನಡೆದಾಡಿದರೂ ಸಹಾ ಈ ಕಜ್ಜಾಯಗಳು ನಿಮಗೆ ಸಿಗಲಾರದು ಅದನ್ನು ಆಲಿಸಿದ ಮೊಗ್ಗಲಾನರು ಆಕಾಶದಲ್ಲೆ ನಡೆದಾಡಿದರು. ಅದನ್ನು ನೋಡಿದಂತಹ ಶ್ರೇಷ್ಟಿಯು ಹೀಗೆ ನುಡಿದನು,ಕೇವಲ ಆಕಾಶದಲ್ಲಿ ನಡೆದಾಡಿದ ಮಾತ್ರಕ್ಕೆ ಕಜ್ಜಾಯ ಸಿಗುವುದು ಎಂದು ಭಾವಿಸಿದಿರಾ, ಆಕಾಶದಲ್ಲೇ ಪದ್ಮಾಸನ ಹಾಕಿ ಕುಳಿತರೂ ಸಹಾ ಈ ಕಜ್ಜಾಯಗಳು ನಿಮಗೆ ದೊರೆಯಲಾರವು ಎಂದನು. ಇದನ್ನು ಆಲಿಸಿದ ಮೊಗ್ಗಲಾನರು ಆಕಾಶದಲ್ಲೆ ಪದ್ಮಾಸನದಲ್ಲಿ ಕುಳಿತರು. ಅದನ್ನು ನೋಡಿದಂತಹ ಶ್ರೇಷ್ಟಿಯು ಹೀಗೆ ನುಡಿದನು,ಕೇವಲ ಆಕಾಶದಲ್ಲೇ ಪದ್ಮಾಸನ ಹಾಕಿ ಕುಳಿತ ಮಾತ್ರಕ್ಕೆ ಕಜ್ಜಾಯ ಸಿಗುವುದು ಎಂದು ಭಾವಿಸಿದಿರಾ, ಈ ಕಿಟಕಿಯ ಬಳಿ ಬಂದು ನಿಂತರೂ ಸಹಾ ಈ ಕಜ್ಜಾಯಗಳು ನಿಮಗೆ ದೊರೆಯಲಾರವು ಎಂದನು. ಇದನ್ನು ಆಲಿಸಿ ಮೊಗ್ಗಲಾನರು ಹಾಗೆಯೇ ಕಿಟಕಿಯ ಬಳಿ ಬಂದು ನಿಂತರು. ಕೇವಲ ಈ ಕಿಟಕಿಯ ಬಳಿ ಬಂದು ನಿಂತ ಮಾತ್ರಕ್ಕೆ ಕಜ್ಜಾಯ ಸಿಗುವುದು ಎಂದು ಭಾವಿಸಿದಿರಾ, ಇಲ್ಲಿ ಭಾರಿ ಹೊಗೆ ಎಬ್ಬಿಸಿದರೂ ಸಹಾ ಈ ಕಜ್ಜಾಯಗಳು ನಿಮಗೆ ದೊರೆಯಲಾರವು ಎಂದನು. ಇದನ್ನು ಕೇಳಿದ ಮೊಗ್ಗಲಾನರು ಭಾರಿ ಹೊಗೆಯನ್ನು ಸೃಷ್ಟಿಸಿಬಿಟ್ಟರು. ಇದರಿಂದ ಆ ಮಹಡಿಯ ಮೇಲ್ಭಾಗವೆಲ್ಲಾ ಹೊಗೆಯಿಂದ ಆವೃತವಾಯಿತು. ಇದರಿಂದ ಶ್ರೇಷ್ಟಿಗೂ ದಿಕ್ಕೇ ತೋಚದಂತಾಯಿತು. 

ಆಗ ಆತನ ಮನಸ್ಸಿನಲ್ಲಿ ಈ ಬಗೆಯ ಯೋಚನೆಯುಂಟಾಯಿತು.ಕೇವಲ ಹೊಗೆ ಎಬ್ಬಿಸಿದ ಮಾತ್ರಕ್ಕೆ ಕಜ್ಜಾಯ ಸಿಗುವುದು ಎಂದು ಭಾವಿಸಿದಿರಾ, ಇಲ್ಲಿ ಭಾರಿ ಬೆಂಕಿ ಸೃಷ್ಟಿಸಿದರೂ ಸಹಾ ಈ ಕಜ್ಜಾಯಗಳು ನಿಮಗೆ ದೊರೆಯಲಾರವು ಅದರೆ ಅದನ್ನು ಹೇಳಲು ಹೆದರಿದನು ಏಕೆಂದರೇ ಮೊಗ್ಗಲಾನರು ಹಾಗೇಯೇ ಮಾಡುವರೆಂಬ ಭಯವಿತ್ತು. ಆಗ ಶ್ರೇಷ್ಟಿಯು ಹೀಗೂ ಯೋಚಿಸಿದನು ಈ ಸಮಣನು ಹಠವಾದಿಯಂತೆ ಕಾಣುವನು ಈತನು ಬರಿಗೈಯಲ್ಲಿ ಹೋಗುವವನಂತೆ ಕಾಣುತ್ತಿಲ್ಲ. ನಾನು ಈತನಿಗೆ ಒಂದು ಕಜ್ಜಾಯ ಕೊಟ್ಟು ಕಳುಹಿಸಬೇಕು. 

ಪತ್ನಿಯೇ ಈತನಿಗೆ ಒಂದು ಚಿಕ್ಕ ಕಜ್ಜಾಯ ಕೊಟ್ಟು ಕಳುಹಿಸು. ಎಂದನು. ಆಗ ಆಕೆಯು ಬಾಣಲಿಯಲ್ಲಿನ ಎಣ್ಣೆಗೆ  ಸ್ವಲ್ಪ ಹಿಟ್ಟನ್ನು ಹಾಕಿದಳು. ಅದರೆ ಅದು ಇಡೀ ಬಾಣಲೆಯನ್ನು ಆಕ್ರಮಿಸಿತು. ಒಹ್ ನೀನೂ ತಂಬಾ ಹಾಕಿರುವೆ ಎಂದು ಬಯ್ದು ತಾನೇ ಚಮಚದಿಂದ ಸ್ವಲ್ಪ ತಗೆದುಕೊಂಡು ಹಾಕಿದನು. ಅದರೆ ಅದು ಮೊದಲಗಿಂತ ದೊಡ್ಡದಾಗಿಬಿಟ್ಟಿತು. ಆಗ ಚಕಿದನಾದ ಆತನು ಇನ್ನೊಂದು, ಮತ್ತೊಂದು, ನಂತರ ಮಗದೊಂದು ಹಾಕಿದನು ಅದರೆ ಅವೆಲ್ಲವೂ ಹಾಗೆ ಆದವು. 

ಇದರಿಂದ ದಣಿದ ಆತನು ಹೀಗೆ ಹೇಳಿದನು.ಪತ್ನಿಯೇ ಇತನಿಗೆ ನೀನೇ ಒಂದು ಕಜ್ಜಾಯವನ್ನು ನೀಡಿಬಿಡು ಆಗ ಆಕೆಯು ಆತನ ಅಜ್ಞೆಯಂತೆ ಒಂದು  ಕಜ್ಜಾಯವನ್ನು ನೀಡಲು  ಹೋದರೆ ಅವೆಲ್ಲವೂ ಅಂಟಿಕೊಂಡಿದ್ದವು. ಹಾಗೂ ಅವನ್ನು ಆಕೆಯಿಂದ ಬೇಪರ್ಾಡು ಮಾಡಲು ಆಗಲಿಲ್ಲ. ಆಗ ಕೆಂಗೆಟ್ಟ ಆತನು ತಾನೇ ಅವನ್ನು ಬಿಡಿಸಲು ಹೋದನು. ಅದರೆ ಸಾಧ್ಯವಾಗಲಿಲ್ಲ. ನಂತರ ಪತಿ, ಪತ್ನಿ ಇಬ್ಬರೂ ಸೇರಿ ಬೇರೆ ಮಾಡಲು ಯತ್ನಿಸಿದರು.. ಅವರ ಶತಾಯಾಗತಾಯ ಪ್ರಯತ್ನವೂ ಫಲಕಾರಿಯಾಗಲಿಲ್ಲ. ಇಬ್ಬರಿಗೂ ಬೆವರು ಹರಿದಿತ್ತು, ಶರೀರವೂ ಅಪಾರ ದಣಿಯಿತು. ಅದರೆ ಅವನ್ನು ಬೇರೆ ಮಾಡಲು ಸಾಧ್ಯವಾಗಲೇ ಇಲ್ಲ.

ಇಷ್ಟರ ಹೊತ್ತಿಗೆ ಆತನ ಬಯಕೆಯು ನಿರಾಸೆಯಾಗಿ ಕೊನೆಗೆ ಆ ತಿಂಡಿಯಿಂದಲೇ  ಆತನಿಗೆ ವಿರಕ್ತಿ ಉಂಟಾಯಿತು. ಆಗ ಆತನು ಪತ್ನಿಗೆ ಹೀಗೆ ಹೇಳಿದನು. ಪತ್ನಿಯೇ ನನಗೆ ಈ ಕಜ್ಜಾಯಗಳು ಬೇಡ ಎಲ್ಲವೂ ಆತನಿಗೆ ಕೊಟ್ಟುಬಿಡು ಎಂದನು. ಆಗ ಆಕೆಯು ಮೊಗ್ಗಲಾನರಿಗೆ ಬುಟ್ಟಿ ತುಂಬಾ ಕಜ್ಜಾಯವನ್ನು ನೀಡಲು ಬಂದಳು. ಆಗ ಮೊಗ್ಗಲಾನರು ಅವರಿರ್ವರಿಗೂ ಬೋಧನೆ ನೀಡಿದರು. ದಾನದ ಮಹತ್ವ, ತಿಸರಣದ ಉತ್ಕೃಷ್ಟತೆ, ತ್ಯಾಗದ ಪರಮ ಲಾಭಗಳು, ಶೀಲದ ಮಹೋನ್ನತೆ ಇತ್ಯಾದಿಗಳನ್ನು ತಿಳಿಸಿದರು. ಇದರಿಂದಾಗಿ ಅವರಿರ್ವರು ಪ್ರಭಾವಿತರಾದರು.  ಬನ್ನಿ ಭಂತೆ ಈ ವೈಭವಯುತ ಪೀಠದಲ್ಲಿ ಕುಳಿತು ಈ ಕಜ್ಜಾಯಗಳನ್ನು ತಿನ್ನಿರಿ. ಎಂದರು..

ಆಗ ಮೊಗ್ಗಲಾನರು ಹೀಗೆ ನುಡಿದರು. ಭಗವಾನರು ಹಾಗೂ 500 ಭಿಕ್ಖುಗಳು ಅಲ್ಲಿ ನಿಮಗಾಗಿ ಕಾಯುತ್ತಿದ್ದಾರೆ. ನಾವು ಈ ಕಜ್ಜಾಯಗಳ ಸಮೇತ ಅಲ್ಲಿಗೆ ಹೋಗೋಣ ನಿಮ್ಮ ಕೈಯಾರೇ ದಾನ ನೀಡುವಿರಂತೆ .

ಭಗವಾನರು ಈಗ ಎಲ್ಲಿಹರು?.

ಇಲ್ಲಿಂದ 45 ಯೋಜನ ದೂರದ ಜೇತವನದಲ್ಲಿ 

ಅಷ್ಟು ದೂರದಲ್ಲಿ ಹೋಗುವುದು ಹೇಗೆಂದು ಅವರು ಗೊಂದಲದಲ್ಲಿ ಇದ್ದಾಗ, ಮೊಗ್ಗಲಾನರು ತಮ್ಮ ಅತಿಮಾನಸ ಶಕ್ತಿಯಿಂದ ಕರೆದೊಯ್ಯುವೆ ಎಂದು ನುಡಿದರು. ನಂತರ ಮೊಗ್ಗಲಾನರು ತಾವು ಶ್ರೇಷ್ಟಿಗಳ ಹಾಗೂ ಕಜ್ಜಾಯಗಳ ಸಮೇತ ಜೇತವನದ ಹೆಬ್ಬಾಗಿಲಿನಲ್ಲಿ ಇರುವಂತಾಗಲಿ ಎಂದು ಸಂಕಲ್ಪಿಸಿದರು..ಅದರಂತೆಯೇ ಅವರೆಲ್ಲರೂ ಕ್ಷಣದಲ್ಲಿ ಜೇತವನದಲ್ಲಿದ್ದರು. ನಂತರ ಅಲ್ಲಿ ಅವರು ತಮ್ಮ ಕೈಯಾರೆ ದಾನ ಮಾಡಿದರು. ಅದರೂ ಆ ಕಜ್ಜಾಯಗಳು ಮುಗಿಯಲಿಲ್ಲ. ನಂತರ ಅವರಿಗೆ ಭಗವಾನರು ಧಮ್ಮ ಬೋಧಿಸಿದಾಗ ಅವರಿರ್ವರು ಸೋತಪತ್ತಿ ಫಲ ಪಡೆದರು. ನಂತರ ಮೊಗ್ಗಲಾನರ ಇಚ್ಚೆಯಂತೆ ಅವರು ಪುನಃ ತಮ್ಮ ಮನೆಯಲ್ಲಿದ್ದರು. ನಂತರ ಅವರು ತಮ್ಮ ಐಶ್ವರ್ಯವನ್ನು ಸಂಘಕ್ಕೆ ಮೀಸಲಾಗಿಟ್ಟರು.

6.3 ನಂದೋಪನಂದನ ರೋಷ ದಮನ

ಒಂದು ದಿನ ಶ್ರಾವಸ್ಥಿಯ ಕೋಟ್ಯಾಧಿಶರಾದ ಆನಾಥಪಿಂಡಿಕರು ಜೇತವನಕ್ಕೆ ಭಗವಾನರ ಬಳಿಗೆ ಬಂದರು. ಹಾಗೂ ಮಾರನೆಯ ದಿನ 500 ಭಿಕ್ಷುಗಳೊಂದಿಗೆ ಭಗವಾನರಿಗೆ ಔತಣಕ್ಕೆ ಆಹ್ವಾನ ನೀಡಿದರು. ಭಗವಾನರು ಮೌನದಿಂದ ಒಪ್ಪಿಗೆ ನೀಡಿದರು.

   ಮಾರನೆಯ ದಿನ ಭಗವಾನರು ಮುಂಜಾನೆ ಕರುಣಾ ಸಮಾಪತ್ತಿಯಲ್ಲಿರುವಾಗ ಇಂದು ಯಾರಿಗೆ ಜ್ಞಾನೋದಯವನ್ನುಂಟು ಮಾಡಲಿ ಎಂದು ವೀಕ್ಷಿಸಿದಾಗ ಅವರಿಗೆ ನಂದೋಪನಂದನು ಕಾಣಿಸಿಕೊಂಡನು.

ನಂದೋಪನಂದನು ದಿವ್ಯ ನಾಗನಾಗಿದ್ದನು. ನಾಗರಲ್ಲಿ 3 ವಿಧ, ಅಂಡಜ ಅಂದರೆ ಮೊಟ್ಟೆಯಿಂದ ಜನಿಸುವವರು, ಗರ್ಭಜ ಗರ್ಭದಿಂದ ಜನಿಸುವವರು, ಮತ್ತು ಓಪಪಾತಿಕ ಅಂದರೆ ದೇವ ಹಾಗೂ ಪೇತಗಳಂತೆ ಮಾನವರಿಂದ ನೇರವಾಗಿ ಆ ನಿದರ್ಿಷ್ಟ ರೂಪ ಪಡೆಯುವುದು. ನಂದೋಪನಂದನು ಒಪಪಾತಿಕ ನಾಗನಾಗಿದ್ದನು. ಈ ನಂದೋಪನಂದನು ಆಪಾರ ದಿವ್ಯ ಶಕ್ತಿಗಳಿಂದ ಕೂಡಿದ್ದನು. ಅದರೆ ಆತನಲ್ಲಿ ಅಹಂನಿಂದಾಗಿ ಆತನಿಗೆ ಧಮ್ಮವು ಅರ್ಥವಾಗಲೂ ಪ್ರಧಾನ ಅಡ್ಡಿಯಾಗಿತ್ತು. ಆತನ ಗರ್ವಭಂಗ ಕೇವಲ ಮೊಗ್ಗಲಾನರಿಂದ ಸಾಧ್ಯ ಎಂದು ಭಗವಾನರಿಗೆ ತಿಳಿದಿತ್ತು.. ಹೀಗಾಗಿ ಆತನಿಂದಲೇ ನಂದೊಪನಂದನ ದಮನ ಮಾಡಲು ಭಗವಾನರು ನಿರ್ಧರಿಸಿದರು. ನಂತರ ಭಗವಾನರು ಆನಂದರವರನ್ನು ಕರೆದು 500 ಭಿಕ್ಖುಗಳೊಂದಿಗೆ ದಿವ್ಯಲೋಕಗಳಿಗೆ ಭೇಟಿ ನೀಡಲು ಬೇಕಾದ ಸಿದ್ಧತೆ ಆರಂಭಿಸು ಎಂದರು.

ನಂದೋಪನಂದನು ದಿವ್ಯವಾಧ ವೈಭವದಿಂದ ಕೂಡಿದ್ದನು. ಈ ನಂದೋಪನಂದನ ವಾಸಸ್ಥಳದ ಮೇಲ್ಭಾಗದಲ್ಲೇ ತಾವತಿಂಸ ಲೋಕವಿತ್ತು. ಹೀಗಾಗಿ ಭಗವಾನರು ಭಿಕ್ಖುಗಳನ್ನು ಕರೆದುಕೊಂಡು ಆತನ ವಾಸಸ್ಥಳದ ಮೇಲ್ಭಾಗದಿಂದ ಹಾರಿಹೋಗುತ್ತಿದ್ದರು. ಅವರ ಪಾದದ ಧೂಳು ನಾಗರ ಮೇಲೆ ಬೀಳಲಾರಂಬಿಸಿತು. ಇದರಿಂದಾಗಿ ನಂದೋಪನಂದನು ಕೆರಳಿಹೋದನು. ನಾನು ಹೀಗೆ ಹೋಗಲೂ ಬಿಡಲಾರೆ ಎಂದು ಸಂಕಲ್ಪ ಮಾಡಿದನು. ನಂತರ ನಂದೋಪನಂದನು ಬೃಹತ್ ಆಕಾರವನ್ನು ತಾಳಿ ಮೇರು ಪರ್ವತವನ್ನು 7 ಸುತ್ತು ಸುತ್ತುವರೆದು ತನ್ನ ಬೃಹತ್ ಹೆಡೆಯನ್ನು ತಾವತಿಂಸ ಲೋಕಕ್ಕೆ ಅಡ್ಡವಾಗಿರಿಸಿದನು. ನಂತರ ಅಪಾರವಾದ ಕತ್ತಲೆಯನ್ನು ಸೃಷ್ಟಿಸಿ ಕತ್ತಲೆಯನ್ನುಂಟು ಮಾಡಿದನು..

    ಈ ತಕ್ಷಣದ ಕತ್ತಲೆ ಕಂಡು ಪೂಜ್ಯ ಅರಹಂತ ರತ್ನಪಾಲರು ಹೀಗೆ ಹೇಳಿದರು :  ಭಗವಾನ್ ನಾವು ಯಾವಾಗಲೇ ಆಗಲಿ ಈ ಮಾರ್ಗದಲ್ಲಿ ಸಾಗಬೇಕಾದರೆ ಸುನೇರು ಪರ್ವತವು ಕಾಣಿಸುತ್ತಿತ್ತು ಹಾಗೆಯೇ ಮೇಲೆ ತಾವತಿಂಸವು ಹಾಗೂ ಅಲ್ಲಿನ ವೈಜಯಂತ ವಿಮಾನ ಅರಮನೆಯು ಮತ್ತು ಅದರ ದಿವ್ಯ ಧ್ವಜವೂ ಕಾಣುತ್ತಿತ್ತು. ಈಗ ಅವೆಲ್ಲ ಏಕೆ ಕಾಣುತ್ತಿಲ್ಲ. ?

ರತ್ನಪಾಲ ನಂದೋಪನಂದ ನಾಗನು ಕೋಪಾರೋಷದಿಂದಾಗಿ ಬೃಹದಾಕಾರ ತಾಳಿ ಸುಮೇರುವನ್ನು ಸುತ್ತುವರೆದು ತನ್ನ ಹೆಡೆಯಿಂದ ತಾವತಿಂಸವನ್ನು ಅಡಗಿಸಿ, ತನ್ನ ದಿವ್ಯಶಕ್ತಿಯಿಂದ ಕತ್ತಲೆಯನ್ನುಂಟು ಮಾಡಿದ್ದಾನೆ. ಎಂದು ಭಗವಾನರು ಉತ್ತರಿಸಿದರು.

ಆಗ ರತ್ನಪಾಲರು ಹೀಗೆ ಕೇಳಿದರು ;ಭಂತೆ ನಾನು ಆತನ ದಮನ ಮಾಡಲೇ?

ಅದರೆ ಭಗವಾನರು ನಿರಾಕರಿಸಿದರು. ನಂತರ ಭಂತೆ ಭದ್ಧಿಯಾ, ಭಂತೆ ರಾಹುಲ, ಮತ್ತು ಇತರರು ನಂದೋಪನಂದನನ್ನು ದಮಿಸಲು ಅಪ್ಪಣೆ ಕೇಳಿದರು . ಅದರೆ ಭಗವಾನರು ಎಲ್ಲರನ್ನೂ ನಿರಾಕರಿಸಿದರು.

ನಂತರ ಪೂಜ್ಯ ಮಹಾಮೊಗ್ಗಲಾನರು ಭಗವಾನ್ ನಾನು ಆತನನ್ನು ದಮಿಸಲೇ?

ಆಗ ಭಗವಾನರು ಮೊಗ್ಗಲಾನ ದಮಿಸು ಎಂದರು.

ತಕ್ಷಣ ಮೊಗ್ಗಲಾನರು ನಂದೊಪನಂದನಿಗಿಂತ ಬೃಹತಾಕಾರ ತಾಳಿ ಆತನನ್ನೆ 14 ಬಾರಿ ಸುತ್ತುವರೆದು ಆತನ ಹೆಡೆಯ ಮೇಲೇ ಬೃಹತ್ ಹೆಡೆ ಆವರಿಸಿ ಆತನಿಗೆ ಅದುಮತೊಡಗಿದರು. ಆಗ ನಾಗನು ಹೊಗೆಯನ್ನು ಬಿಡಲಾರಂಬಿಸಿದನು. ಆ ಹೊಗೆಯು ಮೊಗ್ಗಲಾನರಿಗೆ ಏನೂ ಮಾಡಲಿಲ್ಲ. ಈಗ ಮೊಗ್ಗಲಾನರು ಇನ್ನಷ್ಟು ತೀಕ್ಷ್ಣವಾದ ಹೊಗೆಯನ್ನು ಬಿಟ್ಟರು. ಅದು ನಾಗನಿಗೆ ಕ್ಷೊಭೆಯನ್ನುಂಟು ಮಾಡಿತು. ನಂತರ ನಾಗನು ಬೆಂಕಿಯನ್ನು ಉಗುಳತೊಡಗಿದನು. ಅದು ಮೊಗ್ಗಲಾನರಿಗೆ ಏನೂ ಹಾನಿ ಮಾಡಲಿಲ್ಲ. ಆಗ ಮೊಗ್ಗಲಾನರು ತಾವು ಬೆಂಕಿಯನ್ನು ಉಗುಳಲಾರಂಬಿಸಿದರು. ಅದು ನಾಗನಿಗೆ ಉರಿಯನ್ನುಂಟು ಮಾಡಿತು. ಮೊದಲೆ ಪರ್ವತಕ್ಕೆ ಅಮುಕಿಕೊಂಡು ನಂತರ ಹೊಗೆ ಬೆಂಕಿಗಳಿಂದ ತೀವ್ರ ಒತ್ತಡಕ್ಕೆ ಗುರಿ ಮಾಡಿದಾಗ ತಲ್ಲಣಿಸಿದ ನಾಗನು ಮೊಗ್ಗಲಾನರಿಗೆ ಹೀಗೆ ಕೇಳಿದನು : ಪೂಜ್ಯರೇ ತಾವು ಯಾರು?

ನಾನು ಮೊಗ್ಗಲಾನ

ದಯವಿಟ್ಟು ತಮ್ಮ ಭಿಕ್ಷುರೂಪವನ್ನು ಪ್ರಕಟಪಡಿಸಿ.

ಆಗ ಮೊಗ್ಗಲಾನರು ತಮ್ಮ ಭಿಕ್ಷು ರೂಪದಲ್ಲಿ ಕಾಣಿಸಿದರು. ತಕ್ಷಣ ನಾಗನು ಅವರ ಬಲಕಿವಿಯಿಂದ ನುಗ್ಗಿ ಎಡ ಕಿವಿಯಿಂದ ಹೊರಗೆ ಬಂದನು. ನಂತರ ಎಡ ಕಿವಿಯಿಂದ ನುಗ್ಗಿ ಬಲಕಿವಿಯಿಂದ ಹೊರಗೆ ಬಂದನು. ಅದೇ ರೀತಿಯುಲ್ಲಿ ಬಲ ಮೂಗಿನ ಹೊಳ್ಳೆಯಲ್ಲಿ ನುಗ್ಗಿ ಎಡ ಹೊಳ್ಳೆಯಿಂದ ಹೊರ ಬಂದನು , ನಂತರ ಎಡ ಮೂಗಿನ ಹೊಳ್ಳೆಯಲ್ಲಿ ನುಗ್ಗಿ ಬಲ ಮೂಗಿನ ಹೊಳ್ಳೆಯಿಂದ ಹೊರಗೆ ಬಂದನು. ಆಗ ತಕ್ಷಣ ಮೊಗ್ಗಲಾನರು ಕಿರಿಯ ರೂಪ ತಾಳಿ ಆತನ ಬಾಯಿಯ ಮೂಲಕ ಪ್ರವೇಶಿಸಿ ಆತನ ಹೊಟ್ಟೆಯಲ್ಲಿ ಚಂಕ್ರಮಣ ನಡಿಗೆಯನ್ನು ಆರಂಭಿಸಿದರು. ಆಗ ತಕ್ಷಣ ಭಗವಾನರು ಈ ರೀತಿಯಲ್ಲಿ ಎಚ್ಚರಿಸಿದರು ಎಚ್ಚರ ಮೊಗ್ಗಲಾನ ಈತನು ಪ್ರಬಲ ನಾಗ ಎಂದರು.

ಭಗವಾನ್ ನಾಲ್ಕು ಇದ್ಧಿಪಾದಗಳು ನನ್ನಲ್ಲಿ ಚೆನ್ನಾಗಿ ಅಭಿವೃದ್ಧಿಯಾಗಿವೆ ಹಾಗೂ ನಿರಂತರ ಪುನಾರಾವತರ್ಿತವಾಗಿವೆ. ಆಭ್ಯಸಿತವಾಗಿವೆ,  ವಾಹನದಂತೆ ನಿಮರ್ಿತವಾಗಿವೆ, ಸುಸ್ಥಾಪಿತವಾಗಿದೆ, ಮತ್ತು ಚೆನ್ನಾಗಿ ನೆಲೆಯೂರಿದೆ, ಏಕತ್ರಗೂಡಿ ಘನಿಕೃತವಾಗಿದೆ, ಸರಿಯಾಗಿ ಸಾಧಿಸಲ್ಪಟ್ಟಿದೆ, ನಾನೂ ಇಂತಹ ಲಕ್ಷ ನಂದೂಪನಂದರನ್ನು ದಮಿಸಬಲ್ಲೆ ಈ ಒಬ್ಬ ನಂದೋಪನಂದ ಯಾವ ಮಹಾ ಎಂದರು.

  ಆಗ ನಾಗನು ಈ ರೀತಿಯ ಕುತಂತ್ರವನ್ನು ಯೋಚಿಸಿದನು. : ಈ ಭಿಕ್ಖುವು ಒಳ ಹೋಗಿದ್ದೇ ನನಗೆ ತಿಳಿಯಲಿಲ್ಲ ಅದರೆ ಆತನನ್ನು ಹೊರಗೆ ಕರೆಸಿಕೊಂಡು ಹೊರ ಬರುವಾಗ ಆತನನ್ನು ಹಲ್ಲುಗಳಲ್ಲಿ ಸಿಕ್ಕಿಸಿಕೊಂಡು ತಿಂದು ಬಿಡುವೆನು..ಹೀಗೆ ಯೋಜನೆಯನ್ನು ಹಾಕಿ ಆತನು ಅವರಿಗೆ ಹೀಗೆ ಮಾತಾನಾಡಿಸಿದನು.ಭಂತೆ ದಯವಿಟ್ಟು ಹೊರ ಬನ್ನಿ ನನ್ನ ಹೊಟ್ಟೆಯಲ್ಲಿ ನಡೆದಾಡುತ್ತಾ ತೊಂದರೆ ನೀಡಬೇಡಿ .ಆತನ ಮಾತನ್ನು ನಂಬಿ ಮೊಗ್ಗಲಾನರು ಹೊರ ಬಂದು ಆತನ ಮುಂದೆ ನಿಂತರು.ಅವರನ್ನು ನೋಡಿ ಒಹ್ ಇದು ಇವರ ಕೆಲಸವೇ ಎಂದು ಕೋಪೊದ್ರೇಕನಾಗಿ ತಕ್ಷಣ ನಾಗನು ಅವರ ಮೇಲೆ ವಿಷವಾಯುವನ್ನು ತನ್ನ ಮೂಗಿನಿಂದ ಬಿಟ್ಟನು. ತಕ್ಷಣ ಮೊಗ್ಗಲಾನರು ಚತುರ್ಥ ಸಮಾಧಿಗೆ ಪ್ರವೇಶಿಸಿದರು. ಈ ರೀತಿಯಾಗಿ ಮೊಗ್ಗಲಾನರು ತಮ್ಮ ಮೇಲಿನ ಆಪಾಯವನ್ನು ತಪ್ಪಿಸಿಕೊಂಡರು. ಚತುರ್ಥ ಸಮಾಧಿಯಲ್ಲಿರುವಾಗ ಒಬ್ಬನನ್ನು ಯಾರು ನಾಷವಾಗಲಿ ಗಾಯವನ್ನು ಸಹಾ ಉಂಟುಮಾಡಲಾರರು. ಅವರ ಕೂದಲಿಗೂ ಸಹಾ ಯಾವುದೇ ಹಾನಿಯಾಗಲಿಲ್ಲ. ಇದೇ ಕಾರಣಕ್ಕಾಗಿ ಭಗವಾನರು ಬೇರೆ ಯಾರನ್ನು ಸಹಾ ಆಯ್ಕೆ ಮಾಡಲಿಲ್ಲ. ಅಷ್ಟು ಕ್ಷಿಪ್ರವಾಗಿ ಚತುರ್ಥ ಸಮಾಧಿಗೆ ತಲುಪುವವರು ಬುದ್ಧರನ್ನು ಬಿಟ್ಟರೆ ಅದು ಮಹಾಮೊಗ್ಗಲಾನರೇ ಆಗಿದ್ದರು. ಈ ರೀತಿಯಾಗಿ ಮೊಗ್ಗಲಾನರು ವಿಷವನ್ನು ತಟಸ್ಥಗೊಳಿಸಿದರು.. ಅವರು ಅರಾಮವಾಗಿರುವುದನ್ನು ಕಂಡು ನಾಗನಿಗೂ ಆಶ್ಚರ್ಯವಾಯಿತು. ಅವರ ಕೂದಲಿಗೂ ಹಾನಿಯಾಗಲಿಲ್ಲವಲ್ಲ ಎಂದು ಆತನು ವಿಸ್ಮಯಗೊಂಡನು.

ಈಗ ಮೊಗ್ಗಲಾನರು ಬೃಹತ್ ಸುಪಣ್ಣದ(ಗರುಡ) ರೂಪತಾಳಿದರು. ಸುಪರ್ಣವು ನಾಗರ ಶತ್ರುವೆಂದೆ ಖ್ಯಾತಿ. ಈಗ ಸುಪಣ್ಣವು ನಂದೊಪನಂದರನ್ನು ಬೆನ್ನಟ್ಟಿತು. ಮುಂದಿನ ಭೀಕರತೆ ಅರಿತು ನಾಗನು ಯುವಕನ ರೂಪ ತಾಳಿ ಮೊಗ್ಗಲಾನರ ಪಾದಕ್ಕೆ ಬಿದ್ದನು. ಭಂತೆ ನಾನು ತಮ್ಮಲ್ಲಿ ಶರಣು ಹೋಗುತ್ತೇನೆ ಎಂದನು. ಹಾಗೂ ಅವರ ಪೂಜೆ ಮಾಡಿದನು.

ಆಗ ಮೊಗ್ಗಲಾನರು ಹೀಗೆಂದರು : ನಂದ ಭಗವಾನರು ಇಲ್ಲೆ ಇದ್ದಾರೆ ಅವರಲ್ಲಿಗೆ ಹೋಗೋಣ ಎಂದರು. ಹಾಗೂ ಭಗವಾನರಲ್ಲಿಗೆ ಕರೆದೂಯ್ದರು. ಆಗ ನಾಗನು ಭಗವಾನರಿಗೂ ವಂದಿಸಿ ಅವರ ಶರಣು ಹೋದನು..  ನಾಗರಾಜ ನೀನು ಸುಖಿಯಾಗಿರು ಎಂದು ಭಗವಾನರು ಆತನಿಗೆ ಆಶಿವರ್ಾದ ಮಾಡಿದರು. ಹಾಗೂ ಆತನಿಗೆ ಶೀಲದಲ್ಲಿ ಪ್ರತಿಷ್ಠಾಪನೆ ಮಾಡಿದರು. ನಂತರ ಭಗವಾನರು ಹಾಗೂ ಭಿಕ್ಖುಗಳು ಅಲ್ಲಿಂದ ಆನಾಥಪಿಂಡಿಕನ ಮನೆಗೆ ಹೋದರು.

ಅಲ್ಲಿ ಆನಾಥಪಿಂಡಿಕರು ಕುಶಲ ವಿಚಾರಿಸಿ ಇಂದು ತಡವೇಕೆ ಎಂದು ವಿಚಾರಿಸಿದಾಗ ಮೊಗ್ಗಲಾನರಿಗೂ ಹಾಗೂ ನಂದೊಪನಂದರಿಗೂ ಅತಿಮಾನಸ ಸ್ಪಧರ್ೆಯಿತ್ತು.

ಯಾರು ಗೆದ್ದರು?

ಮೊಗ್ಗಲಾನರು ಗೆದ್ದರು ಮತ್ತು ನಂದನು ಸೋತನು.

ಇದರಿಂದ ಆನಂದಿತನಾದ ಆನಾಥಪಿಂಡಿಕನು ಭಗವಾನರ ಸಹಿತ ಭಿಕ್ಖುಗಣಕ್ಕೆ ಮತ್ತೆ ಏಳು ದಿನ ದಾನಕ್ಕೆ ಆಹ್ವಾನ ನೀಡಿದನು.

6.4 ಅಗ್ರಶ್ರಾವಕರ ಬಗ್ಗೆ ಎಂದಿಗೂ ದ್ವೇಷ ಬೇಡ

(ಅಗ್ರಶ್ರಾವಕ ಆಯುಷ್ಮಂತ ಸಾರಿಪುತ್ತ ಮತ್ತು ಆಯುಷ್ಮಂತ ಮೊಗ್ಗಲ್ಲಾನರಿಗೆ ನಿಂದಿಸಿ ಕೋಕಾಲಿಕನು ನರಕದಲ್ಲಿ ಹುಟ್ಟಿದನು. ಸಂತರನ್ನು ನಿಂದಿಸುವುದು ಮಹಾ ಪಾಪವಾಗಿದೆ.)

ಕೋಕಾಲಿಕನು ದುಶ್ಶೀಲ ಭಿಕ್ಷು ದೇವದತ್ತನ ಶಿಷ್ಯನಾಗಿದ್ದನು. ಇವರಿಬ್ಬರು ಪರಸ್ಪರ ಹೊಗಳಿಕೊಳ್ಳುತ್ತಾ ಭಿಕ್ಷೆಯಲ್ಲಿ ಲಾಭವನ್ನು ಪಡೆಯುತ್ತಿದ್ದರು. ಒಮ್ಮೆ ಕೋಕಾಲಿಕನು ಧಮ್ಮೋಪದೇಶ ಮಾಡಲು ಹೋಗಿ ಅಸಮರ್ಥನಾಗಿ ಅಪಮಾನಿತನಾಗಿದ್ದನು.

ಈ ಕೋಕಾಲಿಕನು ಇರುವೆಡೆ ಒಮ್ಮೆ ಸಾರಿಪುತ್ರ ಮತ್ತು ಮೊಗ್ಗಲ್ಲಾನರು ಮೂರು ತಿಂಗಳ ಕಾಲ ವರ್ಷವಾಸ ಕಳೆದರು. ನಂತರ ಅಲ್ಲಿದ್ದ ಜನರು ಅಗ್ರಶ್ರಾವಕರಾದ ಸಾರಿಪುತ್ರ ಮತ್ತು ಮೊಗ್ಗಲ್ಲಾನರಿಗೆ ಸತ್ಕಾರ, ದಾನಗಳೆಲ್ಲಾ ಮಾಡಲು ಬಂದಿದ್ದರು, ಆದರೆ ಸಂತೃಪ್ತರಾದ ಅವರು ಏನನ್ನೂ ಸ್ವೀರಿಸಲಿಲ್ಲ. ಹಾಗೆಯೇ ಅವರು ಕೋಕಾಲಿಕನಿಗೂ ಏನನ್ನೂ ಕೊಡಿಸಲಿಲ್ಲ. ಇದರಿಂದ ಕ್ರುದ್ಧನಾದ ಕೋಕಾಲಿಕನು ಹೀಗೆ ಯೋಚಿಸಿದನು: ಈ ಥೇರರು ತಾವು ಸ್ವೀಕರಿಸಲಿಲ್ಲ, ನನಗೂ ಕೊಡಿಸಲಿಲ್ಲ. ಹಾಗೆಯೇ ಅಸೂಯಪರ ವರ್ತನೆ ಮಾಡಲಾರಂಭಿಸಿದಾಗ ಅವರು ಅಲ್ಲಿಂದ ಹೊರಟರು. ಇದು ಜನರಿಗೆ ಗೊತ್ತಾಗಿ ಅವರು ಕೋಕಾಲಿಕನಿಗೂ ದೂರ ಅಟ್ಟಿದರು. 

ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಅನಾಥಪಿಂಡಿಕನ ಜೇತವನ ಆರಾಮದಲ್ಲಿ ತಂಗಿದ್ದರು. ಆಗ ಕೋಕಾಲಿಕನು ಭಗವಾನರು ಇರುವೆಡೆಗೆ ಬಂದನು. ಭಗವಾನರಿಗೆ ವಂದಿಸಿ ಒಂದುಕಡೆ ಕುಳಿತನು. ಒಂದುಕಡೆ ಕುಳಿತ ಕೋಕಾಲಿಕನು ಭಗವಾನರಿಗೆ ಹೀಗೆ ಹೇಳಿದನು- ಭಂತೆ, ಸಾರಿಪುತ್ತ ಹಾಗು ಮೊಗ್ಗಲ್ಲಾನರು ಕೆಟ್ಟ ವಿಚಾರವುಳ್ಳವರಾಗಿದ್ದಾರೆ, ಕೆಟ್ಟ ಇಚ್ಛೆಗಳಿಗೆ ವಶಿಯಾಗಿದ್ದಾರೆ.

ಹೀಗೆ ಹೇಳಿದ ಕೋಕಾಲಿಕ ಭಿಕ್ಷುವಿಗೆ ಭಗವಾನರು ಈ ರೀತಿ ಹೇಳಿದರು- ಕೋಕಾಲಿಕ, ಹೀಗೆ ಹೇಳದಿರು, ಹೀಗೆ ಹೇಳದಿರು, ಕೋಕಾಲಿಕ, ಸಾರಿಪುತ್ತ ಹಾಗು ಮೊಗ್ಗಲ್ಲಾನರಲ್ಲಿ ನಿನ್ನ ಚಿತ್ತವನ್ನು ಪ್ರಸನ್ನವಾಗಿಡು, ಸಾರಿಪುತ್ತ ಹಾಗು ಮೊಗ್ಗಲ್ಲಾನರು ಅತ್ಯಂತ ಉತ್ತಮರಾಗಿದ್ದಾರೆ.

ಎರಡನೆಯ ಬಾರಿಯೂ ಮತ್ತು ಮೂರನೆಯ ಬಾರಿಯೂ ಕೋಕಾಲಿಕ ಭಿಕ್ಷುವು ಭಗವಾನರಿಗೆ ಈ ರೀತಿ ಹೇಳಿದನು: ಭಂತೆ! ಯಾದಾಪಿ ನಾನು ಭಗವಾನರಲ್ಲಿ ಶ್ರದ್ಧೆ ಇಡುವೆನು ಹಾಗು ಪ್ರಸನ್ನನಾಗಿರುವೆನು. ಆದರೂ ಸಹಾ ಸಾರಿಪುತ್ತ ಹಾಗು ಮೊಗ್ಗಲ್ಲಾನರು ಕೆಟ್ಟ ವಿಚಾರವುಳ್ಳವರು, ಕೆಟ್ಟ ಇಚ್ಛೆಗಳಿಗೆ ವಶಿಯಾಗಿದ್ದಾರೆ. ಮೂರನೆಯ ಬಾರಿಯೂ ಸಹಾ ಭಗವಾನರು ಕೋಕಾಲಿಕನಿಗೆ ಈ ರೀತಿ ಹೇಳಿದರು- ಕೋಕಾಲಿಕ, ಹೀಗೆ ಹೇಳದಿರು, ಹೀಗೆ ಹೇಳದಿರು, ಕೋಕಾಲಿಕ, ಸಾರಿಪುತ್ತ ಹಾಗು ಮೊಗ್ಗಲ್ಲಾನರಲ್ಲಿ ನಿನ್ನ ಚಿತ್ತವನ್ನು ಪ್ರಸನ್ನವಾಗಿಡು, ಸಾರಿಪುತ್ತ ಹಾಗು ಮೊಗ್ಗಲ್ಲಾನರು ಅತ್ಯಂತ ಅತ್ಯುತ್ತಮರಾಗಿದ್ದಾರೆ.

ಆಗ ಕೋಕಾಲಿಕ ಭಿಕ್ಷು ಆಸನದಿಂದ ಎದ್ದು ಭಗವಾನರಿಗೆ ಪ್ರಣಾಮ ಮಾಡಿ ಪ್ರದಕ್ಷಿಣೆ ಹಾಕಿ ಹೊರಟನು. ಕೋಕಾಲಿಕ ಭಿಕ್ಷು ಹೋದ ಅಲ್ಪಕಾಲದಲ್ಲೇ ಆತನ ಶರೀರದಲ್ಲೆಲ್ಲಾ ಸಾಸುವೆ ಕಾಳಿನಷ್ಟು ಗುಳ್ಳೆಗಳು ಎದ್ದವು. ಸಾಸುವೆ ಕಾಳಿನಿಂದ ಆ ಗುಳ್ಳೆಗಳ ಆಕಾರ ಹೆಸರುಕಾಳಿನಷ್ಟಾದವು. ಹೆಸರುಕಾಳಿನಿಂದ ಅದರ ಗಾತ್ರವು ಬಟಾಣಿಕಾಳಿನಷ್ಟಾಯಿತು. ಬಟಾಣಿ ಕಾಳಿನಿಂದ ಆ ಗುಳ್ಳೆಗಳ ಗಾತ್ರವು ಗೊರಟಿನಷ್ಟಾಯಿತು. ಗೊರಟಿಯ ಗಾತ್ರದಿಂದ ಆ ಗುಳ್ಳೆಗಳು ಬೊರೆಹಣ್ಣಿನಷ್ಟಾಯಿತು. ಬೋರೆ ಹಣ್ಣಿನ ಗಾತ್ರದಿಂದ ಆ ಗುಳ್ಳೆಗಳು ನಲ್ಲಿಕಾಯಿಯಷ್ಟು ದಪ್ಪಗಾದವು. ನಲ್ಲಿಕಾಯಿ ಗಾತ್ರದಿಂದ ಆ ಗುಳ್ಳೆಗಳು ಬೇಲದಹಣ್ಣಿನಷ್ಟಾಯಿತು. ಬೇಲದಹಣ್ಣಿನಷ್ಟು ಆದಮೇಲೆ ಗುಳ್ಳೆಗಳು ಹಿಗ್ಗಿ ಒಡೆದುಹೋದವು. ಕೀವು ಹಾಗು ರಕ್ತವು ಹರಿಯಿತು. ನಂತರ ಕೋಕಾಲಿಕನು ಅದೇ ರೋಗದಿಂದ ಮರಣಿಸಿದನು. ಸಾರಿಪುತ್ತ ಹಾಗು ಮೊಗ್ಗಲ್ಲಾನರ ದ್ವೇಷಚಿತ್ತದ ಪರಿಣಾಮವಾಗಿ ಆತನು ಪದ್ಮನರಕದಲ್ಲಿ ಉದ್ಭವಿಸಿದನು.

ಆಗ ಸಹಂಪತಿ ಬ್ರಹ್ಮನು ರಾತ್ರಿ ಕಳೆಯುತ್ತಿದ್ದಂತೆ ತನ್ನ ಕಾಂತಿಯಿಂದ ಸಂಪೂರ್ಣ ಜೇತವನವನ್ನು ಪ್ರಕಾಶಗೊಳಿಸುತ್ತಾ ಭಗವಾನರು ಇರುವಲ್ಲಿಗೆ ಬಂದನು. ಭಗವಾನರ ಬಳಿಗೆ ಬಂದು ವಂದಿಸಿ ಒಂದುಕಡೆ ನಿಂತುಕೊಂಡನು. ಒಂದುಕಡೆ ನಿಂತ ಸಹಂಪತಿ ಬ್ರಹ್ಮನು ಭಗವಾನರಿಗೆ ಈ ರೀತಿ ಹೇಳಿದನು- ಭಂತೆ, ಕೋಕಾಲಿಕ ಭಿಕ್ಷುವು ಮೃತ್ಯು ಹೊಂದಿದ್ದಾನೆ, ಸತ್ತ ಕೋಕಾಲಿಕ ಭಿಕ್ಷುವು ಸಾರಿಪುತ್ತ ಹಾಗು ಮೊಗ್ಗಲ್ಲಾನರ ಬಗ್ಗೆ ದ್ವೇಷಚಿತ್ತವುಳ್ಳ ಕಾರಣದಿಂದ ಪದ್ಮ ನರಕದಲ್ಲಿ ಉತ್ಪನ್ನನಾಗಿದ್ದಾನೆ. ಹೀಗೆ ಹೇಳಿ ಭಗವಾನರಿಗೆ ವಂದಿಸಿ, ಪ್ರದಕ್ಷಿಣೆ ಮಾಡಿ ಅಲ್ಲಿಯೇ ಅಂತದರ್ಾನನಾದನು.

ಆಗ ಭಗವಾನರು ಆ ರಾತ್ರಿ ಕಳೆದನಂತರ ಭಿಕ್ಷುಗಳಿಗೆ ಆಮಂತ್ರಿಸಿದರು. ನಂತರ ಹೀಗೆ ನುಡಿದರು- ಭಿಕ್ಷುಗಳೇ, ಇಂದು ರಾತ್ರಿ ಸಹಂಪತಿ ಬ್ರಹ್ಮನು ಈ ರೀತಿ ಹೇಳಿದನು- ಭಂತೆ, ಕೋಕಾಲಿಕ ಭಿಕ್ಷುವು ಮೃತ್ಯು ಹೊಂದಿದ್ದಾನೆ, ಸತ್ತ ಕೋಕಾಲಿಕ ಭಿಕ್ಷುವು ಸಾರಿಪುತ್ತ ಹಾಗು ಮೊಗ್ಗಲ್ಲಾನರ ಬಗ್ಗೆ ದ್ವೇಷಚಿತ್ತವುಳ್ಳ ಕಾರಣದಿಂದ ಪದ್ಮ ನರಕದಲ್ಲಿ ಉತ್ಪನ್ನನಾಗಿದ್ದಾನೆ. ಹೀಗೆ ಹೇಳಿ ನಂತರ ನನಗೆ ವಂದಿಸಿ, ಪ್ರದಕ್ಷಿಣೆ ಮಾಡಿ ಅಲ್ಲಿಯೇ ಅಂತದರ್ಾನನಾದನು.

ಹೀಗೆ ನುಡಿದ ನಂತರ ಓರ್ವ ಭಿಕ್ಷುವು ಭಗವಾನರೊಡನೆ ಹೀಗೆ ಕೇಳಿದನು- ಭಂತೆ, ಪದ್ಮ ನರಕದ ಆಯುವು ಎಷ್ಟು ದೀರ್ಘವಾಗಿರುತ್ತದೆ?

ಭಿಕ್ಷು, ಪದ್ಮ ನರಕದ ಆಯುವು ದೀರ್ಘವಾಗಿರುತ್ತದೆ. ಅದರ ಗಣಿಕೆ ಇಷ್ಟು ಸಹಜವಾಗಿಲ್ಲ. ಅದು ಇಷ್ಟು ವರ್ಷ, ನೂರು ವರ್ಷ ಅಥವಾ ಇಷ್ಟು ಲಕ್ಷ ವರ್ಷವೆಂದು ಸೀಮಿತವಾಗಿಲ್ಲ?

ಭಂತೆ, ಉಪಮೆ ನೀಡಬಲ್ಲಿರಾ?

ಭಿಕ್ಷು, ನೀಡಬಹುದು ಎಂದು ಭಗವಾನರು ಹೀಗೆ ನುಡಿದರು- ಭಿಕ್ಷು ಹೇಗೆ ಇಪ್ಪತ್ತು ಖಾರಿ (1 ಖಾರಿ=4 ಮಣ) ಎಳ್ಳನ್ನು ಕೊಂಡೊಯ್ಯುತ್ತಿರುವ ಕೋಸಲದ ಯಾವ ಬಂಡಿಯಿದೆಯೋ ಅದರಿಂದ ಒಬ್ಬ ಪುರುಷನು ಸಾವಿರ ವರ್ಷದ ನಂತರ ಒಂದು ಎಳ್ಳುಕಾಳನ್ನು ತೆಗೆದರೆ, ಇದೇ ಕ್ರಮದಲ್ಲಿ ಕಾಲಾಂತರದಲ್ಲಿ ಇಪ್ಪತ್ತು ಖಾರಿ ಎಳ್ಳನ್ನು ತೆಗೆಯುತ್ತಾ ಮುಗಿಸಿದರೂ ಅದು ಅಬರ್ುದ ನರಕದ ಆಯುವಿನ 20 ಜೀವನಕ್ಕೆ ಸಮನಾಗಿದೆ ಹಾಗು ನಿರಬರ್ುದ ನರಕದ ಒಂದು ಜೀವನ ಕಾಲಕ್ಕೆ ಸಮನಾಗಿದೆ. ಭಿಕ್ಷು ಅಬಬ ನರಕದ 20 ಜೀವನಗಳಿಗೆ ಸಮನಾಗಿ ಅಹಹದ ನರಕದ ಒಂದು ಜೀವನ ಸಮವಾಗಿದೆ. ಭಿಕ್ಷು ಅಹಹ ನರಕದ 20 ಜೀವನಕ್ಕೆ ಸಮವಾದುದು ಅಟಟ ನರಕದ ಒಂದು ಜೀವನ ಕಾಲ. ಅಟಟ ನರಕದ 20 ಜೀವನಗಳಿಗೆ ಸಮನಾದುದು ಕುಮುದ ನರಕದ ಒಂದು ಜೀವನ. ಭಿಕ್ಷು ಕುಮುದ ನರಕದ 20 ಜೀವನಗಳಿಗೆ ಸಮನಾದುದು ಸೌಗಂಧಿಕಾ ನರಕದ ಒಂದು ಜೀವನಕಾಲ. ಭಿಕ್ಷು ಸೌಗಂಧಿಕಾ ನರಕದ 20 ಜೀವನಕ್ಕೆ ಸಮನಾದುದು ಉತ್ಪಲ ನರಕದ ಒಂದು ಜೀವನಕಾಲ. ಉತ್ಪಲ ನರಕದ 20 ಜೀವನಕ್ಕೆ ಸಮನಾದುದು ಪುಂಡರಿಕ ನರಕದ ಒಂದು ಜೀವನ ಕಾಲ. ಪುಂಡರಿಕ ನರಕದ 20 ಜೀವನ ಕಾಲಕ್ಕೆ ಸಮನಾದುದು ಪದ್ಮ ನರಕದ ಒಂದು ಜೀವನಕಾಲ. ಭಿಕ್ಷು ಸಾರಿಪುತ್ತ ಹಾಗು ಮೊಗ್ಗಲ್ಲಾನರ ಪ್ರತಿ ದ್ವೇಷಚಿತ್ತ ಮಾಡಿ ಕೋಕಾಲಿಕನು ಪದ್ಮ ನರಕದಲ್ಲಿ ಉತ್ಪತ್ತಿಯಾಗಿದ್ದಾನೆ. ಹೀಗೆ ಹೇಳಿ ಸುಗತರಾದ ಶಾಸ್ತರು ಹೀಗೆ ಹೇಳಿದರು-

1. ಅಲ್ಲಿ ಉತ್ಪನ್ನವಾಗುವ ಪುರುಷರ ಮುಖದಲ್ಲಿ ಕೊಡಲಿಯು ಉದ್ಭವಿಸುತ್ತದೆ. ಮೂರ್ಖ ಕೆಟ್ಟ ಮಾತು ಆಡುತ್ತಾ ಅದರಿಂದಲೇ ಕತ್ತರಿಸಲ್ಪಡುತ್ತಾನೆ.

2. ಯಾರು ನಿಂದನೀಯನ ಪ್ರಶಂಸೆ ಮಾಡುವನೋ ಅಥವಾ ಪ್ರಶಂಸನೀಯರ ನಿಂದೆ ಮಾಡುತ್ತಾನೋ ಆ ಮೂರ್ಖನು ಪಾಪ ಮಾಡುತ್ತಾನೆ ಮತ್ತು ಆ ಪಾಪದ ಕಾರಣದಿಂದ ಆತನು ಸುಖವನ್ನು ಪ್ರಾಪ್ತಿಮಾಡುವುದಿಲ್ಲ. 

3. ಯಾರು ಜೂಜಿನಲ್ಲಿ ತನ್ನ ಸರ್ವಸ್ವ ಧನವನ್ನು ಕಳೆದುಕೊಳ್ಳುವನೋ ಅದು ಅಲ್ಪಹಾನಿಯೇ ಆಗಿದೆ. ಆದರೆ ಎಲ್ಲಕ್ಕಿಂತ ದೊಡ್ಡ ಹಾನಿ ಯಾವುದೆಂದರೆ ತಥಾಗತರ ಬಗ್ಗೆ ಮನವನ್ನು ದೂಷಿತ ಮಾಡುವುದಾಗಿದೆ.

4. ಆರ್ಯ ಪುರುಷರ ನಿಂದೆ ಮಾಡುವವನು ತನ್ನ ಮನ ಮತ್ತು ವಚನವನ್ನು ಪಾಪದಲ್ಲಿ ಹಾಕಿ ನರಕದಲ್ಲಿ ಉದ್ಭವಿಸುತ್ತಾನೆ. ಅಲ್ಲಿನ ಆಯು ಒಂದು ಲಕ್ಷ ನಿರಬರ್ುದ ಹಾಗು 41 ಅಬರ್ುದವಾಗಿದೆ.

5. ಅಸತ್ಯವಾದಿಯು ನರಕಕ್ಕೆ ಹೋಗುವನು ಮತ್ತು ಯಾರು ಮಾಡಿರುವುದನ್ನು ಇಲ್ಲವೆನ್ನುತ್ತಾನೋ ಆತನು ಸಹಾ ಹೀನಕರ್ಮ ಮಾಡುವ ಈ ಇಬ್ಬರು ಪರಲೋಕದಲ್ಲಿ ಸಮಾನರಾಗುತ್ತಾರೆ.

6. ಯಾರು ದೋಷರಹಿತರಾದ ಶುದ್ಧ, ನಿರ್ಮಲ, ಪುರುಷರಿಗೆ ದೋಷಿಸುತ್ತಾರೋ ಅವರ ಪಾಪ ಎದುರು ದಿಕ್ಕಿನಲ್ಲಿ ಬರುತ್ತಿರುವ ಗಾಳಿಗೆ ಧೂಳನ್ನು ಎಸೆದಂತೆ ಅದೇ ಮೂರ್ಖನ ಮೇಲೆ ಬೀಳುತ್ತದೆ.

7. ಯಾರು ಶ್ರದ್ಧಾರಹಿತನೋ, ಯಾರು ಬೇರೆಯವರು ದಾನ ಮಾಡುತ್ತಿದ್ದರೆ ಸಹಿಸಲಾರನೋ, ಯಾರ ಮಾತನ್ನು ಕೇಳುವುದಿಲ್ಲವೋ, ಜಿಪುಣನೋ, ಚಾಡಿತನದಲ್ಲಿ ತಲ್ಲೀನನೋ, ಲೋಭದಲ್ಲಿ ಬಿದ್ದಿರುವನೋ, ಅವನು ವಚನದಿಂದ ಪರರನ್ನು ನಿಂದಿಸುವನು.

8. ದುರ್ವಚನಿಯು, ಸುಳ್ಳುಗಾರನು, ಅನಾರ್ಯನೂ ಬುದ್ಧಿನಾಶಕನೂ, ಪಾಪಿಯು, ಕೆಟ್ಟಕರ್ಮನೂ, ಅಧಮ ಪುರುಷನು ಮತ್ತು ಕೆಳನರಕದಲ್ಲಿ ಹೋಗುವಂತಹ ನೀನು ಇಲ್ಲಿ ಹೆಚ್ಚು ಮಾತು ಆಡದಿರು.

9. ನೀನು ಪಾಪಿ ಆಗಿದ್ದೂ ಅಲ್ಲದೆ, ನಂತರ ನಿಂದೆಮಾಡಿ ನಿನ್ನ ಅಹಿತವನ್ನು ಮಾಡಿಕೊಳ್ಳುತ್ತಿದ್ದೀಯೆ. ಅನೇಕ ಪಾಪಮಾಡಿ ಬಹುಕಾಲ ಹಳ್ಳದಲ್ಲಿ ಬೀಳುವೆ.

10. ಯಾರ ಕರ್ಮವು ನಷ್ಟವಾಗುವುದಿಲ್ಲ, ಮಾಡುವವನು ಅದರ ಫಲ ಪ್ರಾಪ್ತಿಮಾಡುತ್ತಾನೆ. ಪಾಪಕಾರಿ ಮೂರ್ಖನು ತಾನಾಗಿಯೇ ಪರಲೋಕದಲ್ಲಿ ದುಃಖದಲ್ಲಿ ಬೀಳುತ್ತಾನೆ.

11. ಆತನು ಮುಳ್ಳುಗಳಿಂದ ಹಾಗು ತೀಕ್ಷ್ಣ ಅಗ್ರವುಳ್ಳ ಲೋಹದ ಭಜರ್ಿಗಳಿಂದ ಆವೃತವಾದ ನರಕದಲ್ಲಿ ಬೀಳುತ್ತಾನೆ. ಅಲ್ಲಿ ಕಾದ ಲೋಹದ ಗುಂಡುಗಳೇ ಅವನ ಭೋಜನವಾಗಿರುತ್ತದೆ.

12. ನರಕವಾಸಿಗಳಾದ ಯಾರು ಅಲ್ಲಿ ಪ್ರಿಯವಚನ ನುಡಿಯಲಾರರು. ಪ್ರಸನ್ನ ಮುಖದವರು ಹಾಗು ರಕ್ಷಕರೂ ಅಲ್ಲಿ ದೊರೆಯಲಾರದ ಬೆಂಕಿಯಿಂದ ಆವೃತರಾದ ಅವರು ಬೆಂಕಿಯ ಹಾಸಿಗೆಯಲ್ಲಿ ಮಲಗುತ್ತಾರೆ. ಪ್ರಜ್ವಲಿಸುತ್ತಿರುವ ಬೆಂಕಿಯಲ್ಲೇ ಪ್ರವೇಶಿಸಬೇಕಾಗುತ್ತದೆ.

13. ನರಕವಾಸಿಗಳು ಜಾಲಗಳಲ್ಲಿ ಬಂಧಿತರಾಗಿ ಸುತ್ತಿಗೆಗಳಿಂದ ಹೊಡೆದಾಡಿಕೊಳ್ಳುವರು (ಹೊಡೆಯುವರು). ಅವರು ಬಹು ಘೋರ ಅಂಧಕಾರದಲ್ಲಿ ಬೀಳುವರು ಹಾಗು ಅದು ಉನ್ನತ ಪೃಥ್ವಿಯ ರೀತಿ ಹರಡಿರುತ್ತದೆ.

14. ಬೆಂಕಿಯ ಸಮಾನವಾದ ಲೋಹದ ದೊಡ್ಡ ಪಾತ್ರೆಯಲ್ಲಿ ಬೀಳುವರು ಮತ್ತು ಬೆಂಕಿಯ ರೀತಿ ಅದರಲ್ಲಿ ಚಿರಕಾಲ ಮೇಲೆ-ಕೆಳಗೆ ಬಂದು ಹೋಗುತ್ತಾ ಬೇಯುವರು.

15. ಆಗ ಕೀವು ಹಾಗು ರಕ್ತದಿಂದ ಆ ಪಾಪಕಾರಿಯು ಒದ್ದಾಡುತ್ತಾ ಬೇಯುತ್ತಾನೆ. ಯಾವರೀತಿ ಎಂದರೆ ಎಲ್ಲೆಲ್ಲಿ ಒದ್ದಾಡುತ್ತಾನೋ ಅಲ್ಲೆಲ್ಲಾ ಕೀವುರಕ್ತದಿಂದ ಸ್ರವಿಸಿ ಮಲಿನವಾಗುತ್ತಾನೆ.

16. ಪಾಪಿಯು ಮಲಿನವಾದ ನೀರಿನಲ್ಲಿ ಈ ರೀತಿಯಾಗಿ ಬೇಯುತ್ತಾನೆ. ಹೇಗೆಂದರೆ ಆತನು ಈಜಲಾರ. ಏಕೆಂದರೆ ನಾಲ್ಕು ಕಡೆಯೂ ಕಡಾಯಿಗಳಿರುತ್ತವೆ.

17. ಗಾಯಗೊಂಡ ಶರೀರದಿಂದ ಆತನು ತೀಕ್ಷ್ಣವಾದ ಅಸಿಪತ್ರ ವನದಲ್ಲಿ ಪ್ರವೇಶಿಸುತ್ತಾನೆ. ನರಕವಾಸಿಗಳು ಆತನ ನಾಲಿಗೆಯನ್ನು ಹಿಡಿದು ಮುಳ್ಳುಗಳಿಂದ ವಧಿಸುತ್ತಾರೆ.

18. ಆಗ ಆತನ ತೀಕ್ಷ್ಣಧಾರೆಯ ಕತ್ತಿಗೆ ಸಮಾನವಾದ ತೀಕ್ಷ್ಣ ಧಾರೆಯುಳ್ಳ ದುಸ್ತರವಾದ ವೈತರಿಣಿ ನದಿಯಲ್ಲಿ ಬೀಳುತ್ತಾನೆ. ಪಾಪಿಯಾಗಿರುವ ಮೂರ್ಖನು ಅದರಲ್ಲೇ ಬೀಳುತ್ತಾನೆ.

19. ಅಲ್ಲಿ ಕಪ್ಪಾದ ಮತ್ತು ಬಣ್ಣಗಳ ಕಾಗೆಯು ಅವರನ್ನು ತಿನ್ನುತ್ತದೆ. ನಾಯಿಗಳು, ನರಿಗಳು, ವ್ಯಾಘ್ರ, ಹದ್ದುಗಳು ಮತ್ತು ಕಾಗೆಗಳು ಅವರನ್ನು ತಿನ್ನುತ್ತವೆ.

20. ಪಾಪಕಾರಿ ಮಾನವ ನರಕದಲ್ಲಿ ಯಾವ ಜೀವನದ ಅನುಭವ ಪಡೆಯುವನೋ,  ಅದು ದುಃಖಕರವಾಗಿದೆ. ಆದ್ದರಿಂದ ಮನುಷ್ಯನು ಪ್ರಮಾದರಹಿತನಾಗಿ ತನ್ನ ಉಳಿದ ಜೀವನವನ್ನು ಒಳ್ಳೆಯ ಕರ್ಮದಿಂದ ಜೀವಿಸಲಿ.

21. ಪದ್ಮ ನರಕವು ಉತ್ಪನ್ನವಾಗುವವರ ಆಯುವು ಪಂಡಿತರ ಗಣಕದಿಂದ ಎಳ್ಳನ್ನು ಒಂದೊಂದಾಗಿ ಎಣಿಸುವಷ್ಟು ದೀರ್ಘಯುತವಾಗಿದೆ. ಅದು 4 ನರಕ ಕೋಟಿ ಮತ್ತು 1200 ಕೋಟಿಗೆ ಸಮನಾಗಿದೆ.

22. ಇಲ್ಲಿ ಎಷ್ಟೆಲ್ಲವೂ ದುಃಖವನ್ನು ನೀಡಲಾಗಿದೆಯೋ, ಅದೆಲ್ಲವನ್ನು ಅವರು ಅನುಭವಿಸಬೇಕಾಗಿದೆ. ಆದ್ದರಿಂದ ಪವಿತ್ರ ಉತ್ತಮ ಸಾಧುಗಳಲ್ಲಿ ಪ್ರತಿ ತಮ್ಮ ಮನಸ್ಸನ್ನು ಹಾಗು ವಚನವನ್ನು ಸದಾ ಸಂಯಮವಾಗಿಡಿ.

ಒಮ್ಮೆ ಭಿಕ್ಷುಗಳು ಆತನ ಬಗ್ಗೆ ಚಚರ್ಿಸುತ್ತಿರುವಾಗ ಅಲ್ಲಿಗೆ ಬಂದಂತಹ ಭಗವಾನರು ಹೀಗೆ ಹೇಳಿದರು: ಭಿಕ್ಷುಗಳೇ, ಕೋಕಾಲಿಕನು ಈಗ ಮಾತ್ರವಲ್ಲ, ಹಿಂದಿನ ಜನ್ಮದಲ್ಲಿಯೂ ಸಹಾ ತನ್ನ ನಾಲಿಗೆಯ ನಿಯಂತ್ರಣ ತಪ್ಪಿ ಸಾವನ್ನು ಅಪ್ಪಿದ್ದಾನೆ ಎಂದರು. ನಂತರ ಭಿಕ್ಷುಗಳ ಕೋರಿಕೆಯಂತೆ ಆತನ ಹಿಂದಿನ ಜನ್ಮವನ್ನು ತಿಳಿಸಿದರು.

ಒಮ್ಮೆ ಹಿಮಾಲಯದ ಸರೋವರದಲ್ಲಿ ಆಮೆಯೊಂದು ಇರುತ್ತಿತ್ತು. ಒಂದುದಿನ ಎರಡು ಯುವ ಹಂಸಗಳು ಆಹಾರವನ್ನು ಅನ್ವೇಷಿಸುವಾಗ ಆತನೊಂದಿಗೆ ಪರಿಚಯ ಬೆಳೆಸಿದವು. ಅಲ್ಪಕಾಲದಲ್ಲೇ ಅವರೆಲ್ಲಾ ಮಿತ್ರರಾದರು. ಒಂದುದಿನ ಹಂಸವು ಆಮೆಗೆ ಹೀಗೆ ಹೇಳಿತು: ಮಿತ್ರ ಹಿಮಾಲಯದಲ್ಲಿ ಚಿತ್ರಕೂಟ ಪರ್ವತವೆಂಬುದೊಂದಿದೆ. ಅದು ಸುವರ್ಣ ವರ್ಣದ್ದು. ಅದು ವಾಸಿಸಲು ಅತ್ಯಂತ ಮಧುರವಾದುದು, ನಮ್ಮೊಂದಿಗೆ ಅಲ್ಲಿ ಬರಲು ಇಚ್ಛಿಸುವೆಯಾ?

ನನಗೆ ಅಂತಹ ಆಸೆಯಿದೆ, ಆದರೆ ನಾನು ಅಲ್ಲಿಗೆ ಹೇಗೆತಾನೇ ಬರಬಲ್ಲೆ.

ನೀನು ಪೂರ್ಣವಾಗಿ ಬಾಯಲ್ಲಿ ನಿಯಂತ್ರಣವಿರಿಸಿದ್ದೇ ಆದರೆ ನಾವು ಕರೆದೊಯ್ಯಬಲ್ಲೆವು.

ಅದಕ್ಕೆ ಆಮೆ ಒಪ್ಪಿತು. ಆಗ ಹಂಸಗಳು ಗಟ್ಟಿಯಾದ ಕೋಲೊಂದನ್ನು ತೆಗೆದುಕೊಂಡು ಬಂದವು. ಆಮೆಗೆ ನಡುವೆ ಕಚ್ಚಿಕೊಂಡು ಬಾಯ್ಬಿಡದೆ ಹಾಗೇ ಇರಲು ಸೂಚಿಸಿ, ತಾವು ಎರಡು ಬದಿಯಲ್ಲಿ ಕಚ್ಚಿಕೊಂಡು ಆಕಾಶದಲ್ಲಿ ಹಾರಿದವು. 

ಹಾಗೆ ಅವು ಆಕಾಶದಲ್ಲಿ ಹಾರುತ್ತಿರುವಾಗ, ಭೂಮಿಯಲ್ಲಿದ್ದ ಕೆಲ ಹುಡುಗರು ನೋಡಲ್ಲಿ, ಹೇಗೆ ಆ ಹಂಸಗಳು ಆಮೆಯನ್ನು ತೆಗೆದುಕೊಂಡು ಹೋಗುತ್ತಿವೆ ಎಂದರು. ಅದು ಕೇಳಿದ ಆಮೆಗೆ ಕೋಪವುಂಟಾಗಿ ಇದರಿಂದ ನಿಮಗೇನು? ಎಂದು ಹೇಳಲು ಬಾಯಿಬಿಟ್ಟಿತು. ತಕ್ಷಣ ಅಕಾಶದಿಂದ ವಾರಣಾಸಿಯ ನಗರದ ಅರಮನೆಯ ಭೂಮಿಗೆ ಬಿದ್ದು ಎರಡು ತುಂಡಾಗಿ ಸತ್ತಿತು. 

ಹೀಗೆ ಕೋಕಾಲಿಕನ ಹಿಂದಿನ ಜನ್ಮದ ವಿವರ ತಿಳಿಸಿ, ಈ ಗಾಥೆಯನ್ನು ತಿಳಿಸಿದರು.

ಯಾವ ಭಿಕ್ಷುವು ನಾಲಿಗೆಯಲ್ಲಿ ಸಂಯಮದಿಂದಿರುವನೋ, ಪ್ರಾಜ್ಞನಂತೆ ಮಾತನಾಡಬಲ್ಲನೋ, ಯಾರು ಅಹಂಕಾರಿಯಲ್ಲದೆ ನಮ್ರನೋ, ಯಾರು ಧಮ್ಮವನ್ನು ಅಕ್ಷರ ಹಾಗು ಅರ್ಥವೊಂದರಲ್ಲಿಯೇ ವಿವರಿಸಬಲ್ಲನೋ, ಅಂತಹವನ ನುಡಿಗಳು ಅತ್ಯಂತ ಮಧುರವಾಗಿರುತ್ತದೆ.

- ಂ0ಂ  

12. ಪರಿನಿಬ್ಬಾಣದ ನಂತರ

 12. ಪರಿನಿಬ್ಬಾಣದ ನಂತರ  12.1 ಉಕ್ಕಚೆಲಾ ಸುತ್ತ: ಆಗ ಭಗವಾನರು ವಜ್ಜಿಗಳ ರಾಜ್ಯದಲ್ಲಿ ವಿಹರಿಸುತ್ತಿದ್ದರು. ಗಂಗಾನದಿಯ ತೀರದ ಉಕ್ಕಚೆಲಾದಲ್ಲಿ ಇದ್ದರು. ಆಗಷ್ಟೇ ಸಾರ...